ಮಿ. ಕುಮಾರಸ್ವಾಮಿಯವ್ರೇ, ಈ 3 ಪ್ರಶ್ನೆಗೆ ಆತ್ಮಸಾಕ್ಷಿಯಿಂದ ಉತ್ತರ ಕೊಡ್ತೀರಾ?
ಕೇಂದ್ರ ಸಚಿವ HD ಕುಮಾರಸ್ವಾಮಿಯವರು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಏಕವಚನದಲ್ಲಿ ಮಾತನಾಡಿದ್ದನ್ನು ಅವರು ತೀವ್ರವಾಗಿ ಖಂಡಿಸಿರುವ ಸಾಮಾಜಿಕ ವಿಶ್ಲೇಷಕ ಡಾ. ಬಿ ಸಿ ಬಸವರಾಜು ಅವರು, ದಲಿತ ನಾಯಕರು ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ಕುಮಾರಸ್ವಾಮಿ ಆಡಿದ ಮಾತುಗಳು ಅವರೊಳಗಿನ ಜಾತೀಯ ಅಹಂಕಾರ ಮತ್ತು ಫ್ಯೂಡಲ್ (feudal) ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ. ತಮ್ಮ ಪಕ್ಷದಲ್ಲಿ ತಮ್ಮ ಕುಟುಂಬವನ್ನು ಹೊರತುಪಡಿಸಿ ಎಷ್ಟು ಜನ ಒಕ್ಕಲಿಗ ನಾಯಕರನ್ನು ಬೆಳೆಸಿದ್ದೀರಿ ಎಂದು ಕುಮಾರಸ್ವಾಮಿಯವರಿಗೆ 3ನೇ ನೇರ ಪ್ರಶ್ನೆಯಾಗಿ ಕೇಳಿದ್ದಾರೆ.



