ಅಮೆರಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆಗೆ ಭಾರಿ ಹೊಡೆತ; ಜೋರ್ಡಾನ್‌ನಲ್ಲಿ $30 ಕೋಟಿ ಮೌಲ್ಯದ THAAD ವ್ಯವಸ್ಥೆ ಧ್ವಂಸಗೈದ ಇರಾನ್

Date:

ಇರಾನ್‌ ಮೇಲೆ ಅಮೆರಿಕ-ಇಸ್ರೆಲ್‌ ಜಂಟಿ ದಾಳಿ ನಡೆಸಿದ ಬಳಿಕ, ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಭುಗಿಲೆದ್ದಿದೆ. ಕೊಲ್ಲಿ ರಾಷ್ಟ್ರಗಳಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ಪ್ರತಿದಾಳಿ ನಡೆಸಿದೆ. ಒಂದು ವಾರದ ಘರ್ಷಣೆಯಲ್ಲಿ ಅಮೆರಿಕದ ಲಕ್ಷಾಂತರ ಡಾಲರ್ ಮೌಲ್ಯದ ರಾಡಾರ್ ರಕ್ಷಣಾ ವ್ಯವಸ್ಥೆಯು ನಾಶವಾಗಿದೆ ಎಂದು ಸುದ್ದಿ ಸಂಸ್ಥೆ ಬ್ಲೂಮ್‌ಬರ್ಗ್ ವರದಿ ಮಾಡಿದೆ.

- Advertisement -

ಅಮೆರಿಕದ ಥಾಡ್ (THAAD) ರಕ್ಷಣಾ ವ್ಯವಸ್ಥೆಯಲ್ಲಿ ಆರ್‌ಟಿಎಕ್ಸ್ ಕಾರ್ಪೊರೇಷನ್‌ನ (RTX Corp.) AN/TPY-2 ರಾಡಾರ್ ಮತ್ತು ಪೂರಕ ಉಪಕರಣಗಳು ಬಳಸಲಾಗುತ್ತದೆ. ಇವು ಅಮೆರಿಕದ ಕ್ಷಿಪಣಿ ರಕ್ಷಣಾ ಬ್ಯಾಟರಿಗಳನ್ನು ನಿರ್ದೇಶಿಸುವಲ್ಲಿ ನಿರ್ಣಾಯಕವಾಗಿವೆ. ಜೋರ್ಡಾನ್‌ನಲ್ಲಿರುವ ಅಮೆರಿಕದ ಥಾಡ್ ರಕ್ಷಣಾ ವ್ಯವಸ್ಥೆಯ ಮೇಲೆ ಫೆಬ್ರವರಿ 28 ಮತ್ತು ಮಾರ್ಚ್ 3 ರಂದು ಇರಾನ್ ದಾಳಿಗಳನ್ನು ನಡೆಸಿದೆ. ಇದರಿಂದ, ಸುಮಾರು 30 ಕೋಟಿ ಡಾಲರ್‌ ಮೌಲ್ಯದ ರಕ್ಷಣಾ ವ್ಯವಸ್ಥೆಯು ಧ್ವಂಸಗೊಂಡಿದೆ ಎಂದು ವರದಿ ಹೇಳಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಯೂರೋಪ್‌ | ಇಂಧನ ಬೆಲೆಯೇರಿಕೆ–ಬದುಕು ದುರ್ಭರ: ಜನಾಕ್ರೋಶಕ್ಕೆ ನಡುಗುತ್ತಿವೆ...

ಇಂಧನ ಬೆಲೆ ಏರಿಕೆ, ಕೈಗೆಟುಕದ ಮನೆಬಾಡಿಗೆ, ಕಡಿಮೆ ವೇತನ, ನಿರುದ್ಯೋಗದ ಆತಂಕ ಹಾಗೂ ಜನಕಲ್ಯಾಣ ಯೋಜನೆಗಳಿಗೆ ಅನುದಾನ ಕಡಿತದ ವಿರುದ್ಧ ಯೂರೋಪಿನ ಹಲವು ದೇಶಗಳಲ್ಲಿ ಜನಾಕ್ರೋಶ ಭುಗಿಲೆದ್ದಿದೆ. ಫ್ರಾನ್ಸ್‌ನಿಂದ ಇಟಲಿ, ಬೆಲ್ಜಿಯಂ, ಸ್ಪೇನ್...

ಬೆಳಗಾವಿ | ಅಲೆಮಾರಿಗಳಿಗೆ ಆಧಾರ್ ಕಾರ್ಡ್ ಸಮಸ್ಯೆ; ʼಈದಿನʼದ...

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಸುಮಾರು 25ರಿಂದ 30 ವರ್ಷಗಳಿಂದ ವಾಸಿಸುತ್ತಿರುವ ಅಲೆಮಾರಿ ಸಮುದಾಯದವರ ಬದುಕಿನ ಕಥೆ ಕೇಳಿದರೆ ಎಂಥವರಿಗೂ ಕನಿಕರ ಬರುತ್ತದೆ. ಆಧಾರ್ ಕಾರ್ಡ್, ಪಡಿತರ ಚೀಟಿ ಸೇರಿದಂತೆ ಮೂಲಭೂತ ಸೌಲಭ್ಯಗಳಿಲ್ಲದೆ...

ಶಿವಮೊಗ್ಗ | ಜಿ.ಪಂ., ತಾ.ಪಂ. ಚುನಾವಣೆ: ಗ್ರಾಮೀಣ ರಾಜಕೀಯದಲ್ಲಿ...

ಶಿವಮೊಗ್ಗ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಜಿಲ್ಲಾ ಪಂಚಾಯತಿ (ಜಿ.ಪಂ.) ಹಾಗೂ ತಾಲೂಕು ಪಂಚಾಯತಿ (ತಾ.ಪಂ.) ಚುನಾವಣೆಗಳ ಕುರಿತು ರಾಜಕೀಯ ಚರ್ಚೆಗಳು ಮತ್ತು ನಿರೀಕ್ಷೆಗಳು ಹೆಚ್ಚುತ್ತಿವೆ. ದೀರ್ಘಕಾಲದಿಂದ ಚುನಾಯಿತ ಪ್ರತಿನಿಧಿಗಳಿಲ್ಲದೆ ಆಡಳಿತ ನಡೆಯುತ್ತಿರುವ ಹಿನ್ನೆಲೆಯಲ್ಲಿ,...

“ಜೋರ್ಡಾನ್‌ನ ಥಾಡ್ ರಾಡಾರ್ ಮೇಲಿನ ದಾಳಿಯು ಇರಾನ್‌ ನಡೆಸಿರುವ ಈವರೆಗಿನ ದಾಳಿಗಳಲ್ಲಿ ಅತ್ಯಂತ ಯಶಸ್ವಿ ದಾಳಿಗಳಲ್ಲಿ ಒಂದಾಗಲಿದೆ,” ಎಂದು ಥಿಂಕ್ ಟ್ಯಾಂಕ್‌ನ ಮಿಲಿಟರಿ ಮತ್ತು ಪೊಲಿಟಿಕಲ್ ಪವರ್ ಕೇಂದ್ರದ ಉಪ ನಿರ್ದೇಶಕ ರಿಯಾನ್ ಬ್ರಾಬ್ಸ್ಟ್ ಹೇಳಿದ್ದಾರೆ.

ಆದಾಗ್ಯೂ, ಅಮೆರಿಕದ ಮಿಲಿಟರಿ ಮತ್ತು ಅದರ ಪಾಲುದಾರರು ವಾಯು ಮತ್ತು ಕ್ಷಿಪಣಿ ರಕ್ಷಣಾ ಕವರೇಜ್ ಅನ್ನು ಕಾಯ್ದುಕೊಳ್ಳಲು ಸಮರ್ಥವಾಗಿರುವ ಇತರ ರಾಡಾರ್‌ಗಳನ್ನು ನಿರ್ವಹಿಸುತ್ತಿವೆ. ಯಾವುದೇ ಒಂದು ವ್ಯವಸ್ಥೆಯನ್ನು ಕಳೆದುಕೊಳ್ಳುವುದರಿಂದ ಗಂಭೀರ ಪರಿಣಾಮವಾಗುವುದಿಲ್ಲ ಎಂದೂ ಅವರು ವಿವರಿಸಿದ್ದಾರೆ.

thaad1

ಅಮೆರಿಕದ ಟರ್ಮಿನಲ್ ಹೈ ಆಲ್ಟಿಟ್ಯೂಡ್ ಏರಿಯಾ ಡಿಫೆನ್ಸ್ (THAAD) ವ್ಯವಸ್ಥೆಯನ್ನು ತನ್ನ ವ್ಯಾಪ್ತಿಯ ಕಟ್ಟಕಡೆಯ ತುದಿಯಲ್ಲಿಯೇ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ನಾಶಪಡಿಸಲು ವಿನ್ಯಾಸಗೊಳಿಸಲಾಗಿದೆ. ಇದು ಕಡಿಮೆ ವ್ಯಾಪ್ತಿಯ ಪೇಟ್ರಿಯಾಟ್ ಕ್ಷಿಪಣಿ ವ್ಯವಸ್ಥೆಯ ಬ್ಯಾಟರಿಗಳಿಗಿಂತ ಹೆಚ್ಚು ಸಂಕೀರ್ಣವಾದ ಬೆದರಿಕೆಗಳನ್ನು ತಡೆಯಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದ್ದಾರೆ.

ಈ ಲೇಖನ ಓದಿದ್ದೀರಾ?: ಅಮೆರಿಕ ಕೈಯಿಟ್ಟ ಕಡೆಯೆಲ್ಲ ವಿನಾಶವೇ ಎಂಬುದು ಚಾರಿತ್ರಿಕ ಸತ್ಯ!

ದಕ್ಷಿಣ ಕೊರಿಯಾ ಮತ್ತು ಗುವಾಮ್ ಸೇರಿದಂತೆ ವಿಶ್ವದಾದ್ಯಂತ ಅಮೆರಿಕ ಎಂಟು THAAD ವ್ಯವಸ್ಥೆಗಳನ್ನು ನಿರ್ವಹಿಸುತ್ತಿದೆ.

ಸೆಂಟರ್ ಫಾರ್ ಸ್ಟ್ರಾಟೆಜಿಕ್ ಅಂಡ್ ಇಂಟರ್ನ್ಯಾಷನಲ್ ಸ್ಟಡೀಸ್ ಪ್ರಕಾರ, ಥಾಡ್‌ ವ್ಯವಸ್ಥೆಯಲ್ಲಿ ಬಳಸಲಾಗುವ ಪ್ರತಿ ಬ್ಯಾಟರಿಯ ವೆಚ್ಚ ಸುಮಾರು 1 ಶತಕೋಟಿ ಡಾಲರ್ ಆಗಿದ್ದು, ರಾಡಾರ್ ಒಂದಕ್ಕೇ ಸರಿಸುಮಾರು 30 ಕೋಟಿ ಡಾಲರ್ ವೆಚ್ಚವಾಗುತ್ತದೆ. ಇವುಗಳು ವಿರಳವಾದ ಕಾರ್ಯತಂತ್ರದ ಸಂಪನ್ಮೂಲಗಳಾಗಿದ್ದು, ಇವನ್ನು ಕಳೆದುಕೊಳ್ಳುವುದು ದೊಡ್ಡ ಹೊಡೆತವಾಗಿದೆ.

ಒಂದು ವಿಶಿಷ್ಟವಾದ THAAD ಬ್ಯಾಟರಿಯು 90 ಸೈನಿಕರು, ಟ್ರಕ್-ಮೌಂಟೆಡ್ ಒಂಬತ್ತು ಲಾಂಚರ್‌ಗಳು, 48 ಇಂಟರ್‌ಸೆಪ್ಟರ್ ಕ್ಷಿಪಣಿಗಳು, ಒಂದು TPY-2 ರಾಡಾರ್, ಒಂದು ಯುದ್ಧತಾಂತ್ರಿಕ ಅಗ್ನಿ-ನಿಯಂತ್ರಣ ಮತ್ತು ಸಂವಹನ ಘಟಕ ಹಾಗೂ ಲಾಕ್ಹೀಡ್ ಮಾರ್ಟಿನ್‌ಅನ್ನು ಹೊಂದಿರುತ್ತದೆ.  

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಮೆರಿಕನ್ನರಿಗೆ ಉದ್ಯೋಗ ವಂಚನೆ: ಕ್ಲೌಡೆರಾ ಕಂಪನಿಗೆ ಭಾರಿ ದಂಡ, ಗ್ರೀನ್ ಕಾರ್ಡ್ ಪ್ರೋಗ್ರಾಂನಿಂದ ನಿಷೇಧ

ಅಮೆರಿಕ ಸರ್ಕಾರವು ಸ್ಥಳೀಯ ಕಾರ್ಮಿಕರಿಗೆ ತಾರತಮ್ಯ ಮಾಡಿದ ಆರೋಪದ ಹಿನ್ನೆಲೆಯಲ್ಲಿ 'ಕ್ಲೌಡೆರಾ'...

ವನ್ಯಜೀವಿಗಳ ಸಂಖ್ಯೆಯಲ್ಲಿ ಶೇ. 73ರಷ್ಟು ಭಾರಿ ಕುಸಿತ; ಭೂಮಿಯ ಉಳಿವಿಗೀಗ ‘ಭರವಸೆಯ ವಿಜ್ಞಾನ’ವೇ ದಾರಿ

​"ನಮ್ಮ ಕಣ್ಣೆದುರೇ ಪ್ರಕೃತಿಯ ಉಸಿರು ಕ್ಷೀಣಿಸುತ್ತಿದೆ. ಕೇವಲ ಐದು ದಶಕಗಳಲ್ಲಿ ಶೇ....

ಅಮೆರಿಕದ ಸರ್ಕಾರಿ ಐಟಿ ವ್ಯವಸ್ಥೆಗಳಲ್ಲಿ ಚೀನಾದ ಎಐ ‘ಡೀಪ್‌ಸೀಕ್’ ಬಳಕೆಗೆ ನಿಷೇಧ

ಅಮೆರಿಕದ ನಾಗರಿಕ ಸರ್ಕಾರಿ ಏಜೆನ್ಸಿಗಳ ಐಟಿ ವ್ಯವಸ್ಥೆಗಳಿಂದ ಚೀನಾ ಮೂಲದ ಕೃತಕ...

ಫ್ರಾನ್ಸ್‌ | ಭುಗಿಲೆದ್ದ ಪ್ರತಿಭಟನೆ: 2,400ಕ್ಕೂ ಅಧಿಕ ಮಂದಿ ಬಂಧನ, ಸಾವಿರಕ್ಕೂ ಹೆಚ್ಚು ಪೊಲೀಸರಿಗೆ ಗಾಯ

ಯುರೋಪಿನ ಪ್ರಮುಖ ರಾಷ್ಟ್ರಗಳಲ್ಲಿ ಒಂದಾದ ಫ್ರಾನ್ಸ್‌ನಲ್ಲಿ ಜೀವನ ವೆಚ್ಚದ ಏರಿಕೆ, ಸಾರ್ವಜನಿಕ...