ವಿಶ್ವದಲ್ಲಿ ಆರು ಜನರಲ್ಲಿ ಒಬ್ಬರು ಒಂಟಿತನದಿಂದ ಬಳಲುತ್ತಿದ್ದು, ಪ್ರತಿ ವಾರ ಗಂಟೆಗೆ ಅಂದಾಜು 100 ಮಂದಿ ಸಾವನ್ನಪ್ಪುತ್ತಿದ್ದಾರೆ. ಅಂದರೆ ವರ್ಷಕ್ಕೆ 8,71,000ಕ್ಕೂ ಅಧಿಕ ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ಸೋಮವಾರ ವಿಶ್ವ ಆರೋಗ್ಯ ಸಂಸ್ಥೆ (WHO) ಬಿಡುಗಡೆಗೊಳಿಸಿದ ವರದಿ ತಿಳಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಸಾಮಾಜಿಕ ಸಂಪರ್ಕ ಆಯೋಗವು ತನ್ನ ಜಾಗತಿಕ ವರದಿಯನ್ನು ಬಿಡುಗಡೆ ಮಾಡಿದೆ. ಉತ್ತಮ ಸಾಮಾಜಿಕ ಸಂಪರ್ಕವು ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕೆ ಕಾರಣವಾಗಬಹುದು ಎಂದು ಹೇಳಿದೆ.
ಇದನ್ನು ಓದಿದ್ದೀರಾ? ಕೋವಿಡ್-19 ಇನ್ನು ಮುಂದೆ ಜಾಗತಿಕ ಆರೋಗ್ಯ ತುರ್ತುಸ್ಥಿತಿ ಅಲ್ಲ : ವಿಶ್ವ ಆರೋಗ್ಯ ಸಂಸ್ಥೆ
ಒಂಟಿತನವು ಎಲ್ಲಾ ವಯಸ್ಸಿನ ಜನರ ಮೇಲೆ ಪರಿಣಾಮ ಬೀರುತ್ತದೆ, ಆದರೆ ವಿಶೇಷವಾಗಿ ಯುವಕರ ಮೇಲೆ ಹೆಚ್ಚು ಪ್ರಭಾವಿಸುತ್ತದೆ. ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿ ವಾಸಿಸುವ ಜನರಿಗೆ ಒಂಟಿತನ ಹೆಚ್ಚಾಗಿ ಕಾಡುತ್ತದೆ. ಮೂವರು ಹಿರಿಯ ವಯಸ್ಕರ ಪೈಕಿ ಒಬ್ಬರಿಗೆ ಮತ್ತು ನಾಲ್ವರು ವಯಸ್ಕರ ಪೈಕಿ ಒಬ್ಬರಿಗೆ ಒಂಟಿತನ ಕಾಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ಉಲ್ಲೇಖಿಸಿದೆ.
13–29 ವರ್ಷ ವಯಸ್ಸಿನ ಜನರ ಪೈಕಿ ಶೇಕಡ 17ರಿಂದ 21ರಷ್ಟು ಜನರು ಒಂಟಿತನವನ್ನು ಅನುಭವಿಸುತ್ತಿದ್ದಾರೆ. ಹದಿಹರೆಯದವರಲ್ಲಿ ಹೆಚ್ಚಾಗಿ ಒಂಟಿತನ ಕಂಡುಬರುತ್ತದೆ. ಕಡಿಮೆ-ಆದಾಯದ ದೇಶಗಳಲ್ಲಿ ಸುಮಾರು ಶೇಕಡ 24 ಜನರು ಒಂಟಿತನವನ್ನು ಅನುಭವಿಸುತ್ತಿದ್ದಾರೆ. ಹೆಚ್ಚಿನ ಆದಾಯದ ದೇಶಗಳಲ್ಲಿನ ಸುಮಾರು ಶೇಕಡ 11ರಷ್ಟು ಜನರು ಒಂಟಿತನಕ್ಕೆ ಒಳಗಾಗಿದ್ದಾರೆ.
Feeling lonely, disconnected, or unsupported?
— World Health Organization (WHO) (@WHO) June 30, 2025
You’re not alone—and you don’t have to face it alone. 1 in 6 people on this planet feels lonely.
Read WHO’s new report to learn why social connection is important: https://t.co/M8FtEse9kO pic.twitter.com/r8XTvnyc7g
ಅದರಲ್ಲೂ ಮುಖ್ಯವಾಗಿ ಅಂಗವೈಕ್ಯಲ್ಯ ಹೊಂದಿರುವವರು, ನಿರಾಶ್ರಿತರು ಅಥವಾ ವಲಸಿಗರು, LGBTQA+ ಸಮುದಾಯಕ್ಕೆ ಸೇರಿದವರು, ಜನಾಂಗೀಯ ಅಲ್ಪಸಂಖ್ಯಾತರು ಹೆಚ್ಚಾಗಿ ತಾರತಮ್ಯ, ಸಾಮಾಜಿ ಅಡೆತಡೆಗಳಿಂದಾಗಿ ಒಂಟಿತನಕ್ಕೆ ಒಳಗಾಗುತ್ತಿದ್ದಾರೆ.
ಇದನ್ನು ಓದಿದ್ದೀರಾ? ಭಾರತದಲ್ಲಿ ಮಾನವರಿಗೆ ಹಕ್ಕಿ ಜ್ವರ ಪ್ರಕರಣ: ದೃಢೀಕರಿಸಿದ ವಿಶ್ವ ಆರೋಗ್ಯ ಸಂಸ್ಥೆ
“ಸಂಪರ್ಕಕ್ಕೆ ಹಲವು ವಿಧಾನಗಳು ಇದ್ದರೂ ಜನರು ಹೆಚ್ಚು ಒಂಟಿಯಾಗಿದ್ದಾರೆ. ಒಂಟಿತನ ಮತ್ತು ಸಾಮಾಜಿಕ ಪ್ರತ್ಯೇಕತೆಯಿಂದಾಗಿ ಆಗುವ ಹಾನಿಯನ್ನು ಗಮನಹರಿಸದೆ ಬಿಟ್ಟರೆ ಆರೋಗ್ಯ, ರಕ್ಷಣೆ, ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಶತಕೋಟಿಗಳಷ್ಟು ವೆಚ್ಚವಾಗುತ್ತದೆ” ಎಂದು ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮ ಹೆಚ್ಚಾಗಿ ಬಳಕೆಯಲ್ಲಿರುವ ಈ ಕಾಲದಲ್ಲೂ ಏಕಾಂಗಿತನ ಹೆಚ್ಚಾಗಿ ಜನರನ್ನು ಕಾಡುತ್ತಿದೆ. ಕೆಲವರು ಒಂಟಿಯಾಗಿ ಜೀವಿಸುವುದನ್ನು ಇಷ್ಟಪಟ್ಟರೆ, ಕೆಲವರು ಒಂಟಿಯಾಗಿರಲು ಸಾಧ್ಯವಾಗದೆ ಮಾನಸಿಕವಾಗಿ ಬಳಲುತ್ತಿದ್ದಾರೆ.
