ಕೋವಿಡ್-19 ಇನ್ನು ಮುಂದೆ ಜಾಗತಿಕ ಆರೋಗ್ಯ ತುರ್ತುಸ್ಥಿತಿ ಅಲ್ಲ : ವಿಶ್ವ ಆರೋಗ್ಯ ಸಂಸ್ಥೆ

Date:

ಕೋವಿಡ್‌–19 ಈಗ ಜಾಗತಿಕ ಆರೋಗ್ಯ ತುರ್ತು ಸ್ಥಿತಿಯಾಗಿ ಉಳಿದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಹೇಳಿದೆ.

ಜಗತ್ತಿನಾದ್ಯಂತ 70 ಲಕ್ಷ ಜನರ ಪ್ರಾಣ ತೆಗೆದಿದ್ದ ಕೋವಿಡ್, ಲಾಕ್‌ಡೌನ್‌, ಕರ್ಫ್ಯೂ ಎಂದು ವಿಶ್ವದ ಎಲ್ಲ ದೇಶಗಳನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿತ್ತು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್‌ ಅವರು ತಿಳಿಸಿದರು.

ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಆರೋಗ್ಯ ನಿಯಮಾವಳಿ (2005) ತುರ್ತು ಸಮಿತಿಯು ಗುರುವಾರ 15ನೇ ಬಾರಿಗೆ ಸಭೆ ಸೇರಿತ್ತು. ಈ ಸಭೆಯಲ್ಲಿ ಈ ಶಿಫಾರಸು ಮಾಡಲಾಗಿದೆ. 2020ರ ನಂತರ ವಿಶ್ವದಾದ್ಯಂತ ಕೋವಿಡ್​ನಿಂದ ಅಧಿಕ ಮಂದಿ ಮೃತಪಡುತ್ತಿದ್ದರು. 2023ರ ಏಪ್ರಿಲ್ 24ರ ವೇಳೆಗೆ ವಾರಕ್ಕೆ ಕೇವಲ 3,500ಕ್ಕೆ ಇಳಿಕೆಯಾಗಿದೆ ಎಂದು ಟೆಡ್ರೊಸ್ ಅಧಾನೊಮ್ ಹೇಳಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ನಾನು ಕೋವಿಡ್-19 ಅನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿಯಾಗಿ ಕೊನೆಗೊಂಡಿದೆ ಎಂದು ಘೋಷಿಸುತ್ತೇನೆ. ಕೋವಿಡ್‌–19 ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂಬ ಪರಿಗಣನೆಯನ್ನು ಈಗ ಕೈಬಿಡಲಾಗಿದೆ. ಆದರೆ, ಇದರ ಅರ್ಥ ಈ ಪಿಡುಗು ಅಂತ್ಯಗೊಂಡಿದೆ ಎಂದಲ್ಲ” ಎಂದರು.

ಕೋವಿಡ್‌–19ರಿಂದ ಮೃತಪಡುತ್ತಿರುವವರ ಸಂಖ್ಯೆಯಲ್ಲಿ ದಿನೇ ದಿನೇ ಕ್ರಮೇಣ ಇಳಿಕೆ ಕಾಣುತ್ತಿದೆ. ಕೊರೊನಾ ಸೋಂಕಿನ ಕಾರಣ ಆಸ್ಪತ್ರೆಗೆ ದಾಖಲಾಗುತ್ತಿರುವವರು ಹಾಗೂ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆಯೂ ಕಡಿಮೆಯಾಗಿದೆ. ಎರಡೆರಡು ಲಸಿಕೆಗಳನ್ನು ಸಹ ಜನರು ಪಡೆಯುತ್ತಿದ್ದಾರೆ. ಜನರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುವುದನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಈ ಸುದ್ದಿ ಓದಿದ್ದೀರಾ? 60 ಲಕ್ಷ ಶಿಶುಗಳಿಗೆ ಕ್ಯಾಲರಿಯುಕ್ತ ಆಹಾರವಿಲ್ಲ ಎಂದ ‘ದಿ ಲ್ಯಾನ್ಸೆಟ್’ ವರದಿ

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊರೋನಾ | ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ಅಗತ್ಯವಿಲ್ಲ: ಡಾ.ಶರಣ್ ಪ್ರಕಾಶ್ ಪಾಟೀಲ್

ಹೊಸದಾಗಿ ಕಾಣಿಸಿಕೊಂಡಿರುವ ರೂಪಾಂತರ ಜೆಎನ್- 1 ಸೋಂಕು ರಾಜ್ಯದಲ್ಲಿ ಕಾಣಿಸಿಕೊಂಡಿದ್ದರೂ ಜನತೆ...

ಕೋವಿಡ್‌ | ಹೊಸ ವರ್ಷಾಚರಣೆಗೆ ನಿರ್ಬಂಧ ಹೇರುತ್ತಿಲ್ಲ, ಭಯ ಬೇಡ: ದಿನೇಶ್‌ ಗುಂಡೂರಾವ್‌

ಇಂದಿನ ಸಭೆಯಲ್ಲಿ ಸಮಿತಿಯ ತಜ್ಞರೊಂದಿಗೂ ಚರ್ಚಿಸಿ ಮುಂದಿನ ಕ್ರಮದ ಬಗ್ಗೆ...

ಡಿ.25ರಂದು 125 ಮಂದಿಗೆ ಕೊರೋನಾ ಸೋಂಕು ದೃಢ : ಮೂವರು ಸಾವು

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಡಿ.25 ರಂದು...

ಕರ್ನಾಟಕಕ್ಕೆ ಲಗ್ಗೆಯಿಟ್ಟ ಜೆಎನ್‌ 1 : ಎಂಟು ಜನರಲ್ಲಿ ಪಾಸಿಟಿವ್

ಮಾರಿ ಕೊರೋನಾ ವೈರಸ್​ನ ರೂಪಾಂತರಿ ಜೆಎನ್‌ 1 ಮೊದಲ ಪ್ರಕರಣ ಕೇರಳದಲ್ಲಿ...