ನೇಪಾಳ ದಲ್ಲಿ ಇಂದು ಭೂಕುಸಿತವುಂಟಾಗಿ ಎರಡು ಬಸ್ಸುಗಳು ನದಿಗೆ ಉರುಳಿದ ಪರಿಣಾಮ ಪ್ರವಾಸಕ್ಕೆಂದು ತೆರಳಿದ 7 ಭಾರತೀಯರು ಮೃತಪಟ್ಟಿದ್ದಾರೆ.
ಚಿತ್ವಾನ್ ಜಿಲ್ಲೆಯ ನಾರಾಯಣ್ ಘಾಟ್ – ಮುಗ್‌ಲಿಂಗ್ ರಸ್ತೆಯಲ್ಲಿ ಭೂಕುಸಿತವುಂಟಾಗಿದೆ. ಇದೇ ಸಂದರ್ಭದಲ್ಲಿ 7 ಮಂದಿ ಭಾರತೀಯರು ಸೇರಿದಂತೆ 65 ಪ್ರಯಾಣಿಕರು ಎರಡು ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದರು. ಭೂಕುಸಿತವು ಬಸ್ಸನ್ನು ಕೊಚ್ಚಿಕೊಂಡು ತ್ರಿಶೂಲಿ ನದಿಗೆ ತಳ್ಳಿದೆ. ಈ ಘಟನೆಯಿಂದ ಎಲ್ಲ 65 ಮಂದಿ ನಾಪತ್ತೆಯಾಗಿದ್ದಾರೆ ಎಂದು ನೇಪಾಳ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.
ಇವೆರೆಡರ ಒಂದು ಬಸ್ಸಿನಲ್ಲಿ 7 ಮಂದಿ ಭಾರತದ ಪ್ರವಾಸಿಗರು ಬಿರ್‌ಜುಂಗನಿಂದ ಕಠ್ಮಂಡುವಿಗೆ ತೆರಳುತ್ತಿದ್ದರು.
ಈ ಸುದ್ದಿ ಓದಿದ್ದೀರಾ? ಪ್ರಧಾನಿ ಮೋದಿ ರಷ್ಯಾ ಭೇಟಿ: ನ್ಯಾಟೋ ಶೃಂಗಸಭೆಯಲ್ಲಿ ಅಮೆರಿಕ ಆಕ್ರೋಶ
ನಿರಂತರ ಮಳೆಯಿಂದ ಭೂಕುಸಿತ ಉಂಟಾದ ಪರಿಣಾಮ ನಾರಾಯಣ್ ಘಾಟ್ – ಕಠ್ಮಂಡು ರಸ್ತೆಯನ್ನು 15 ದಿನಗಳವರೆಗೆ ಬಂದ್ ಮಾಡಲಾಗಿದೆ ಎಂದು ರಸ್ತೆ ಅಭಿವೃದ್ಧಿ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ನೇಪಾಳದಲ್ಲಿ ಬಾರಿ ಮಳೆ ಸುರಿಯುತ್ತಿದ್ದು, ಹಲವು ಕಡೆ ಭೂಕುಸಿತ ಉಂಟಾಗಿ ಹಲವಾರು ರಸ್ತೆಗಳು ಹಾಗೂ ಹೆದ್ದಾರಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಘಟನಾ ಪ್ರದೇಶದಲ್ಲಿ ಹೆಚ್ಚು ಮಳೆ ಬೀಳುತ್ತಿರುವ ಕಾರಣದಿಂದ ಪರಿಹಾರ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಭೂಕುಸಿತದಿಂದ ಕಲ್ಲುಮಣ್ಣುಗಳ ಅವಶೇಷಗಳು ರಸ್ತೆಯುದ್ದಕ್ಕೂ ಹರಡಿರುವುದರಿಂದ ನಾರಾಯಣ್ ಘಾಟ್ – ಮುಗ್‌ಲಿಂಗ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ.