2023ರ ಅಕ್ಟೋಬರ್ ತಿಂಗಳಿನಿಂದ ಇಸ್ರೇಲ್ ಹಾಗೂ ಹಮಾಸ್ ನಡುವೆ ನಡೆಯುತ್ತಿರುವ ಸಂಘರ್ಷಕ್ಕೆ ವಿರಾಮ ಹಾಕಲು ಹಮಾಸ್ ಬಯಸಿರುವುದಾಗಿ ‘ಅಲ್-ಜಝೀರಾ’ ವರದಿ ಮಾಡಿದೆ.
ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಅವರು ಕತಾರ್ ಮತ್ತು ಈಜಿಪ್ಟ್ ಮಧ್ಯ ಪ್ರವೇಶದ ಬಳಿಕ ಕದನ ವಿರಾಮದ ಪ್ರಸ್ತಾಪವನ್ನು ಒಪ್ಪಿಕೊಂಡಿರುವುದಾಗಿ ವರದಿಯಾಗಿದೆ.
ಕದನ ವಿರಾಮಕ್ಕೆ ಇಸ್ರೇಲ್ ಒಪ್ಪಿಗೆ ಸೂಚಿಸಿದರೆ, ತಮ್ಮ ಬಳಿಯಲ್ಲಿರುವ ಎಲ್ಲ ಒತ್ತೆಯಾಳು ಇಸ್ರೇಲ್ ಪ್ರಜೆಗಳನ್ನು ಬಿಡುಗಡೆಗೊಳಿಸುವುದಾಗಿಯೂ ಕೂಡ ತಿಳಿಸಿದೆ.
“ಆಕ್ರಮಣ ಸನ್ನಿಹಿತವಾಗಿದೆ, ತಕ್ಷಣ ಹೊರಡಿ” ಎಂದು ರಫಾ ನಿವಾಸಿಗಳಿಗೆ ಇಸ್ರೇಲ್ ಸೇನೆ ಸೂಚನೆ ನೀಡಿದ ನಡುವೆಯೇ ಈ ಬೆಳವಣಿಗೆ ನಡೆದಿದೆ.
🚨BREAKING: NOW OFFICIAL HAMAS ACCEPTS CEASEFIRE DEAL!
Hamas statement:
—
“In the name of Allah, the Most Gracious, the Most MercifulThe fighter brother Ismail Haniyeh, head of the political bureau of the Hamas movement, had a phone call with the Qatari Prime Minister, Sheikh… pic.twitter.com/9GQJiyvNBQ
— Suppressed News. (@SuppressedNws) May 6, 2024
ಹಮಾಸ್ ಕದನ ವಿರಾಮಕ್ಕೆ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ.
ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವಂತೆ ಇಸ್ರೇಲ್‌ನಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಸಲಾಗುತ್ತಿದೆ. ಈ ನಡುವೆಯೇ ಹಮಾಸ್ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿರುವ ವಿಚಾರ ತಿಳಿಯುತ್ತಿದ್ದಂತೆಯೇ, ನೂರಾರು ಮಂದಿ ಪ್ರತಿಭಟನೆಗೆ ಸೇರಿಕೊಂಡಿದ್ದು, ಇಸ್ರೇಲ್ ಕೂಡ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸುವಂತೆ ಒತ್ತಾಯಿಸುತ್ತಿದ್ದಾರೆ.
⚡️Families of Israeli detainees in Gaza: Hamas agreed to the deal. The government must agree now, otherwise we will burn the country. pic.twitter.com/Ydbxhu49BS
— War Monitor (@WarMonitors) May 6, 2024
“ಒಂದು ವೇಳೆ ಬೆಂಜಮಿನ್ ನೆತನ್ಯಾಹು ಸರ್ಕಾರವು ಒಪ್ಪಿಗೆ ಸೂಚಿಸದೆ ಯುದ್ಧ ಮುಂದುವರಿಸಿದರೆ, ನಮ್ಮವರ ಪ್ರಾಣ ಹೋದಲ್ಲಿ ನೀವೇ ಜವಾಬ್ದಾರರು. ಒಂದು ವೇಳೆ ಆ ರೀತಿ ನಡೆದಲ್ಲಿ ದೇಶದಲ್ಲಿ ಹೋರಾಟ ಮತ್ತಷ್ಟು ಹೆಚ್ಚಲಿದ್ದು, ಕಿಚ್ಚು ಹಚ್ಚಲಿದ್ದೇವೆ” ಎಂದು ಇಸ್ರೇಲ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
“ಹಮಾಸ್ ಕದನ ವಿರಾಮ ಪ್ರಸ್ತಾಪಕ್ಕೆ ಈವರೆಗೆ ಇಸ್ರೇಲ್ ಯಾವುದೇ ತೀರ್ಮಾನ ಪ್ರಕಟಿಸಿಲ್ಲ. ಆದರೆ ಈ ಬಗ್ಗೆ ತುರ್ತು ಸಭೆ ನಡೆಸಿ, ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ” ಎಂದು ಇಸ್ರೇಲ್‌ನ ಚಾನೆಲ್ 12 ವರದಿ ಮಾಡಿದ್ದನ್ನು ಅಲ್-ಜಝೀರಾ ಉಲ್ಲೇಖಿಸಿದೆ. ಈ ನಡುವೆ ಹಮಾಸ್, “ಚೆಂಡು ನಿಮ್ಮ ಅಂಗಳದಲ್ಲಿದೆ. ನಿಮ್ಮ ತೀರ್ಮಾನ ಪ್ರಕಟಿಸಿ” ಎಂದು ಇಸ್ರೇಲ್‌ಗೆ ತಿಳಿಸಿದೆ.
Spontaneous cheers erupt in Gaza on hearing the news that Hamas has told Qatar and Egypt they will accept their ceasefire proposal.
Israel has not formally replied, at this stage ⤵️ pic.twitter.com/14LM81wIfz
— Al Jazeera English (@AJEnglish) May 6, 2024
ಗಾಝಾದಲ್ಲಿ ಜನರಿಂದ ಸಂಭ್ರಮಾಚರಣೆ
ಹಮಾಸ್ ಕದನ ವಿರಾಮಕ್ಕೆ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಗಾಝಾ ಹಾಗೂ ರಫಾ ಗಡಿಗಳಲ್ಲಿ ಜನರು ರಸ್ತೆಗೆ ಇಳಿದಿದ್ದು, ಸಂಭ್ರಮಾಚರಣೆ ಮಾಡುತ್ತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.
PEOPLE IN #GAZA CELEBRATING HAMAS AGREEMENT ON TRUCE! 😭 pic.twitter.com/sNsAjHbVUb
— The Palestinian (@InsiderWorld_1) May 6, 2024
2023ರ ಅಕ್ಟೋಬರ್ 7ರಂದು ಹಮಾಸ್ ಇಸ್ರೇಲ್‌ನ ಮೇಲೆ ಅನಿರೀಕ್ಷಿತ ರಾಕೆಟ್ ದಾಳಿ ನಡೆಸಿದ ನಂತರ ಹಮಾಸ್ ವಿರುದ್ಧ ಇಸ್ರೇಲ್‌ನ ಬೆಂಜಮಿನ್ ನೆತನ್ಯಾಹು ಸರ್ಕಾರವು ಯುದ್ಧ ಘೋಷಣೆ ಮಾಡಿತ್ತು. ಈ ಯುದ್ಧದಲ್ಲಿ ಈವರೆಗೆ ಲಕ್ಷಾಂತರ ಮಂದಿ ನೆಲೆ ಕಳೆದುಕೊಂಡಿದ್ದು, ಲಕ್ಷಗಟ್ಟಲೆ ಜನ ಪ್ರಾಣ ಕಳೆದುಕೊಂಡಿದ್ದಾರೆ.
