ಐರ್ಲೆಂಡ್ ದೇಶವು ಪ್ಯಾಲಿಸ್ಟೀನ್‌ಗೆ ಅಧಿಕೃತ ದೇಶದ ಸ್ಥಾನಮಾನವನ್ನು ನೀಡಿದ್ದು, ಸರ್ಕಾರದ ನಿರ್ಧಾರವನ್ನು ಧಿಕ್ಕರಿಸಿದ ಇಸ್ರೇಲ್ ನೀತಿಯನ್ನು ಇದೇ ಸಂದರ್ಭದಲ್ಲಿ ಖಂಡಿಸಲಾಗಿದೆ.
ಇಂದು ಬೆಳಿಗ್ಗೆ ಐರ್ಲೆಂಡ್ ಸಂಪುಟ ಸಭೆಯಲ್ಲಿ ದೇಶದ ಸ್ಥಾನಮಾನವನ್ನು ನೀಡಿ ಅನುಮೋದಿಸಲಾಗಿದೆ.
“ಸರ್ಕಾರವು ಪ್ಯಾಲಿಸ್ಟೇನ್‌ಅನ್ನು ಸಾರ್ವಭೌಮ ಹಾಗೂ ಸ್ವತಂತ್ರ ದೇಶವಾಗಿ ಮಾನ್ಯತೆ ನೀಡಿದೆ ಹಾಗೂ ಡಬ್ಲಿನ್ ಹಾಗೂ ರಾಮಲ್ಲಾ ನಡುವೆ ಸಂಪೂರ್ಣ ರಾಜತಾಂತ್ರಿಕ ಸಂಬಂಧಗಳ ರಚನೆಗೆ ಒಪ್ಪಿಗೆ ನೀಡಲಾಗಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
“ಪ್ಯಾಲಿಸ್ಟೇನ್ ದೇಶದಲ್ಲಿ ರಾಯಭಾರಿ ಕಚೇರಿಯೊಂದಿಗೆ ಐರ್ಲೆಂಡ್ ದೇಶದ ರಾಯಭಾರಿಯನ್ನು ನೇಮಿಸಲಾಗುತ್ತದೆ. ಐರ್ಲೆಂಡ್‌ನ ಈ ನಿರ್ಧಾರವು ಭರವಸೆಯನ್ನು ಜೀವಂತವಾಗಿಡುತ್ತದೆ. ಶಾಂತಿ ಹಾಗೂ ಭದ್ರತೆಯಿಂದ ಮಾತ್ರ ಇಸ್ರೇಲ್ ಹಾಗೂ ಪ್ಯಾಲಿಸ್ಟೇನ್ ಎರಡೂ ದೇಶಗಳಲ್ಲಿ ಪರಿಹಾರ ಕಂಡುಕೊಳ್ಳಬಹುದು” ಎಂದು ಐರ್ಲೆಂಡ್ ಪ್ರಧಾನಿ ಸೈಮನ್ ಹ್ಯಾರಿಸ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಶಿಕ್ಷಣ ಕ್ಷೇತ್ರವನ್ನು ಖಾಸಗಿಯವರ ಸುಪರ್ದಿಗೊಪ್ಪಿಸುತ್ತಿದೆಯೇ ಸರಕಾರ?
“ವಿಶ್ವದ ಮಾತನ್ನು ಕೇಳಿ ಗಾಜಾದಲ್ಲಿ ನಾವು ನೋಡುತ್ತಿರುವ ಮಾನವೀಯ ದುರಂತವನ್ನು ನಿಲ್ಲಿಸುವಂತೆ ನಾನು ಮತ್ತೆ ಇಸ್ರೇಲ್ ಪ್ರಧಾನಿ ನೇತಾನ್ಯಾಹು ಅವರಿಗೆ ಕರೆ ನೀಡುತ್ತೇನೆ” ಎಂದು ಸೈಮನ್ ಹ್ಯಾರಿಸ್ ತಿಳಿಸಿದ್ದಾರೆ.
ಇಸ್ರೇಲ್ ಹಾಗೂ ಹಮಾಸ್ ಹೋರಾಟಗಾರರ ಸಂಘರ್ಷದಿಂದ ಇಲ್ಲಿಯವರೆಗೂ 37 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ 35 ಸಾವಿರ ಪ್ಯಾಲಿಸ್ಟೇನ್ ನಾಗರಿಕರಿದ್ದಾರೆ. ಗಾಜಾದಲ್ಲಿ ಇಸ್ರೇಲ್ ಸೇನೆ ಅಮಾಯಕ ಮಕ್ಕಳು ಹಾಗೂ ಮಹಿಳೆಯರ ಮೇಲೆ ನಡೆಸುತ್ತಿರುವ ದಾಳಿಯನ್ನು ಇಡೀ ವಿಶ್ವವೇ ಖಂಡಿಸುತ್ತಿದೆ.
