ಇಸ್ರೇಲ್ ಹಮಾಸ್ ಯುದ್ಧ ಆರಂಭವಾಗಿ ಸುಮಾರು ಎಂಟು ತಿಂಗಳುಗಳಾಗಿದ್ದು ಇನ್ನೂ ಕೂಡಾ ನಿಂತಿಲ್ಲ. ಈಗಾಗಲೇ ಸಾವಿರಾರು ಜೀವಗಳನ್ನು ಬಲಿ ಪಡೆದುಕೊಂಡ ಈ ಯುದ್ಧದಲ್ಲಿ ಮತ್ತೆ 35 ಮಂದಿ ಸಾವನ್ನಪ್ಪಿದ್ದಾರೆ.
ಪ್ಯಾಲೇಸ್ತಿನ್‌ನ ರಫಾದಲ್ಲಿ ಇಸ್ರೇಲ್ ದಾಳಿಗೆ 35 ಮಂದಿ ಬಲಿಯಾಗಿದ್ದು 12ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ಮತ್ತು ಗಾಯಾಳುಗಳಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳಾಗಿದ್ದಾರೆ ಎಂದು ಪ್ಯಾಲೇಸ್ತಿನ್ ಆರೋಗ್ಯ ಸಚಿವಾಲಯ ತಿಳಿಸಿರುವುದಾಗಿ ವರದಿಯಾಗಿದೆ.
At least 35 people killed in Israeli strikes in Rafah: Palestinian Health Ministry
Read @ANI Story | https://t.co/xVFnusDfRg
#Palestine #Gaza #Rafah #IsraelHamaswar #IDF pic.twitter.com/O5WbsmsOg9— ANI Digital (@ani_digital) May 27, 2024
2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಗಾಜಾದಿಂದ ಹಮಾಸ್ 5000 ರಾಕೆಟ್‌ಗಳ ಪ್ರಯೋಗ ಮಾಡಿದ ಬಳಿಕ ಇಸ್ರೇಲ್ ಪ್ಯಾಲೇಸ್ತಿನ್ ಸಂಘರ್ಷವು ಇಸ್ರೇಲ್ ಹಮಾಸ್ ಯುದ್ಧವಾಗಿ ಮಾರ್ಪಟ್ಟಿದೆ. ಇತರ ದೇಶಗಳು ಮತ್ತು ಯುಎನ್ ಸಂಸ್ಥೆಗಳು ಮಧ್ಯಸ್ಥಿಕೆ ವಹಿಸಲು ಎಷ್ಟು ಪ್ರಯತ್ನ ಮಾಡಿದರೂ ಕೂಡಾ ಈ ಯುದ್ಧ ಇನ್ನೂ ನಿಂತಿಲ್ಲ, ಶೀಘ್ರವೇ ಶಾಂತಿ ಮಾತುಕತೆ ಸಫಲವಾಗುವ ನಿರೀಕ್ಷೆಯೂ ಇಲ್ಲ.
ಇದನ್ನು ಓದಿದ್ದೀರಾ? ಇಸ್ರೇಲ್ ವಿರುದ್ಧದ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ ಹಮಾಸ್: ನೆತನ್ಯಾಹು ಸರ್ಕಾರದ ಮೇಲೆ ಒತ್ತಡ
ಇನ್ನು “35 ಮಂದಿ ಈಗಾಗಲೇ ಸಾವನ್ನಪ್ಪಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡುವಷ್ಟು ಸಾಮರ್ಥ್ಯವಿರುವ ಯಾವುದೇ ಆಸ್ಪತ್ರೆ ರಾಫಾದಲ್ಲಿಲ್ಲ. ಈ ಗಾಯಾಳುಗಳನ್ನು ಎಲ್ಲಿಗೆ ವರ್ಗಾಯಿಸುವುದು ಎಂಬ ಗೊಂದಲ ಆಂಬ್ಯುಲೆನ್ಸ್ ತಂಡಕ್ಕಿದೆ” ಎಂದು ಪ್ಯಾಲೇಸ್ತಿನ್ ಆರೋಗ್ಯ ಸಚಿವಾಲಯ ತಿಳಿಸಿದೆ.