ಮುಂದಿನ ತಿಂಗಳು ನಡೆಯಲಿರುವ ಲಿಬರಲ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಚುನಾವಣೆಯಲ್ಲಿ ತಾನು ಸ್ಪರ್ಧಿಸುವುದಿಲ್ಲ. ಸೆಪ್ಟೆಂಬರ್‌ನಲ್ಲಿ ರಾಜೀನಾಮೆ ನೀಡುತ್ತೇನೆ ಎಂದು ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ಬುಧವಾರ ಘೋಷಿಸಿದ್ದಾರೆ.
ಟೋಕಿಯೊದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಿಶಿದಾ, “ಎಲ್‌ಡಿಪಿಯ ಚುಕ್ಕಾಣಿ ಹಿಡಿಯಲು ಇದು ಹೊಸ ಮುಖಕ್ಕೆ ಕೊಡಬೇಕಾದ ಸಮಯವಾಗಿದೆ. ನಾನು ಹೊಸ ನಾಯಕತ್ವವನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ” ಎಂದು ಹೇಳಿದರು.
“ಈ ಚುನಾವಣೆಯಲ್ಲಿ, ಎಲ್‌ಡಿಪಿ ಬದಲಾಗುತ್ತಿದೆ. ಪಕ್ಷವು ಹೊಸ ಎಲ್‌ಡಿಪಿ ಎಂದು ಜನರಿಗೆ ತೋರಿಸುವುದು ಅವಶ್ಯಕ” ಎಂದು ಕಿಶಿದಾ ಸುದ್ದಿಗಾರರಿಗೆ ತಿಳಿಸಿದರು.
ಇದನ್ನು ಓದಿದ್ದೀರಾ? ಚೀನಾ ಆತಂಕದ ನಡುವೆ ಒಂದಾದ ಸಾಂಪ್ರದಾಯಿಕ ಶತ್ರುಗಳು; ಜಪಾನ್ ಪ್ರಧಾನಿ ಫ್ಯುಮಿಯೋ ಕಿಶಿಡಾ ದಕ್ಷಿಣ ಕೊರಿಯಾ ಭೇಟಿ
“ಇದಕ್ಕಾಗಿ, ಪಾರದರ್ಶಕ ಮತ್ತು ಮುಕ್ತ ಚುನಾವಣೆಗಳು, ಮುಕ್ತ ಮತ್ತು ಹುರುಪಿನ ಚರ್ಚೆ ಮುಖ್ಯವಾಗಿದೆ. ಎಲ್‌ಡಿಪಿ ಬದಲಾಗುತ್ತದೆ ಎಂದು ತೋರಿಸಲು ಅತ್ಯಂತ ಸ್ಪಷ್ಟವಾದ ಮೊದಲ ಹೆಜ್ಜೆ ನಾನು ಬದಿಗೆ ಸರಿಯುವುದು. ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ” ಎಂದು ಘೋಷಿಸಿದ್ದಾರೆ.
ಕಿಶಿದಾ ಅವರು ಮೂರು ವರ್ಷಗಳ ಅವಧಿಗೆ ಸೆಪ್ಟೆಂಬರ್ 2021ರಲ್ಲಿ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದರು. ಸ್ವಲ್ಪ ಸಮಯದ ನಂತರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದರು.
Japan’s Prime Minister Fumio Kishida says he will step down in September https://t.co/YaTXXEuHED
— Al Jazeera English (@AJEnglish) August 14, 2024