ಅಗರ್ತಲಾ ರೈಲು ನಿಲ್ದಾಣದಲ್ಲಿ 13 ಪುರುಷರು ಮತ್ತು 3 ಮಹಿಳೆಯರು ಸೇರಿದಂತೆ ಕನಿಷ್ಠ 16 ಬಾಂಗ್ಲಾದೇಶದ ಪ್ರಜೆಗಳನ್ನು ಬಂಧಿಸಲಾಗಿದೆ. ಮಂಗಳವಾರ ಸಂಜೆ ಈ ಘಟನೆ ನಡೆದಿದೆ.
ಬಂಧಿತರ ಪೈಕಿ ಮೂವರು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಬಾಂಗ್ಲಾದೇಶಿಗಳೆಂದು ಗುರುತಿಸಲಾಗಿದೆ. ಸ್ಥಳೀಯ ಅಧಿಕಾರಿಗಳು ಬಂಧಿಸಿದ್ದು ಅಗರ್ತಲಾ ಸರ್ಕಾರಿ ರೈಲ್ವೆ ಪೊಲೀಸ್ ಠಾಣೆಯಲ್ಲಿ (ಜಿಆರ್‌ಪಿಎಸ್) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಂಧಿತರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಬಂಧಿತರನ್ನು ಮಿಜನೂರ್ ರಹಮಾನ್ (26), ಸಫಿಕುಲ್ ಇಸ್ಲಾಂ (30), ಎಂಡಿ ಅಲಮಿನ್ ಅಲಿ (23), ಎಂಡಿ ಮಿಲನ್ (38), ಸಹಾಬುಲ್ (30) ಸರಿಫುಲ್ ಶೇಕ್ (30), ಕಬೀರ್ ಶೇಕ್ (34), ಲಿಜಾ ಖಾತುನ್ (26), ತಾನಿಯಾ ಖಾನ್ (24), ಎಥಿ ಶೇಕ್ (39), ಬೃಂದಾಬನ್ ಮಂಡಲ್ (21), ಅಬ್ದುಲ್ ಹಕೀಮ್ (25), ಎಂಡಿ ಇದುಲ್ (27), ಎಂಡಿ ಅಬ್ದುರ್ ರಹಮಾನ್ (20), ಎಂಡಿ ಅಯೂಬ್ ಅಲಿ ( 30) ಮತ್ತು ಎಂಡಿ ಜಿಯಾರುಲ್ (20) ಎಂದು ಗುರುತಿಸಲಾಗಿದೆ.
ಇದನ್ನು ಓದಿದ್ದೀರಾ? ಬಾಂಗ್ಲಾದೇಶ | ಪ್ರತಿಭಟನಾಕಾರರ ಬೆದರಿಕೆ; ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಾಜೀನಾಮೆ
ಈ ಬಾಂಗ್ಲಾದೇಶಿ ಪ್ರಜೆಗಳು ಯಾವುದಾದರೂ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಇನ್ನು ಗಡಿ ಭದ್ರತಾ ಪಡೆ, ಮಾನವ ಕಳ್ಳಸಾಗಣೆ ವಿರೋಧಿ ತಂಡ ಮತ್ತು ಗುಪ್ತಚರ ಘಟಕವು ನಕಲಿ ಆಧಾರ್ ಕಾರ್ಡ್‌ಗಳನ್ನು ತಯಾರಿಸಿ ತಮ್ಮ ಗುರುತನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದ ಒಟ್ಟು 10 ಬಾಂಗ್ಲಾದೇಶಿ ಪ್ರಜೆಗಳನ್ನು ಮಂಗಳವಾರ ಬಂಧಿಸಿದೆ.
ಬಾಂಗ್ಲಾದೇಶದಲ್ಲಿ ಮೀಸಲಾತಿ ವಿಚಾರದಲ್ಲಿ ಆರಂಭವಾದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು 200ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಬಾಂಗ್ಲಾದೇಶದಿಂದ ಪರಾರಿಯಾಗಿ ಭಾರತಕ್ಕೆ ಬಂದಿದ್ದಾರೆ. ರಾಜೀನಾಮೆಯನ್ನು ನೀಡಿದ್ದಾರೆ ಎಂದು ಸೇನೆ ಹೇಳಿದೆ. ಈ ಎಲ್ಲ ಬೆಳವಣಿಗೆ ನಡುವೆ ಬಾಂಗ್ಲಾದೇಶದಿಂದ ಭಾರತಕ್ಕೆ ಅಕ್ರಮವಾಗಿ ಬರುವವರ ಪ್ರಮಾಣ ಇನ್ನಷ್ಟು ಹೆಚ್ಚಾಗಿದೆ.
16 Bangladeshi nationals arrested at Agartala Railway Station
— ANI Digital (@ani_digital) August 14, 2024
Read @ANI Story | https://t.co/5y8EwvwJW8#Bangladesh #Agartala #BangladeshiNationals pic.twitter.com/lLuxyrSApo