ಇಂಡೋನೇಷ್ಯಾದ ಪಶ್ಚಿಮ ಭಾಗದಲ್ಲಿರುವ ಪಪುವಾ ನ್ಯೂಗಿನಿಯಾದಲ್ಲಿ ಸಂಭವಿಸಿದ ಭಾರಿ ಭೂಕುಸಿತದಿಂದ 2,000ಕ್ಕೂ ಹೆಚ್ಚು ಜನರು ಜೀವಂತ ಸಮಾಧಿ ಆಗಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ಕೇಂದ್ರ ಸೋಮವಾರ ಹೇಳಿದೆ. ಭೂಕುಸಿತವಾದ ಪ್ರದೇಶಕ್ಕೆ ತಲುಪಲು ಆಗುತ್ತಿರುವ ಸಮಸ್ಯೆಯಿಂದಾಗಿ ಕೆಲವೇ ಕೆಲವು ಮಂದಿಯನ್ನು ಕಾಪಾಡಲು ಮಾತ್ರ ಸಾಧ್ಯವಾಗಬಹುದು ಎಂದು ವರದಿಯಾಗಿದೆ.
ಭೂಕುಸಿತದಿಂದಾಗಿ ಜೀವಂತ ಸಮಾಧಿಯಾದವರ ಸಂಖ್ಯೆಯು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಭಾನುವಾರದ ವೇಳೆ ಯುಎನ್ ಏಜೆನ್ಸಿಯು ಸುಮಾರು 670ಕ್ಕೂ ಅಧಿಕ ಮಂದಿ ಸಾವನ್ನಪ್ಪಿರಬಹುದು ಎಂದು ಅಂದಾಜಿಸಿದೆ.
2,000ಕ್ಕೂ ಅಧಿಕ ಮಂದಿ ಜೀವಂತ ಸಮಾಧಿಯಾಗಿದ್ದಾರೆ ಎಂದು ಸೋಮವಾರ ರಾಷ್ಟ್ರೀಯ ವಿಪತ್ತು ಕೇಂದ್ರ ತಿಳಿಸಿದೆ. ಈ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ.
ಇದನ್ನು ಓದಿದ್ದೀರಾ? ಪಪುವಾ ನ್ಯೂಗಿನಿಯಾದಲ್ಲಿ ಭೂಕುಸಿತ: 670ಕ್ಕೂ ಹೆಚ್ಚು ಸಾವು
ಭೂಕುಸಿತದಿಂದಾಗಿ ಕಟ್ಟಡಗಳು ಮತ್ತು ತೋಟ ಮೊದಲಾದವುಗಳು ಸಂಪೂರ್ಣವಾಗಿ ನೆಲಸಮವಾಗಿದೆ. ರಕ್ಷಣಾ ತಂಡಗಳು ಮತ್ತು ಬದುಕುಳಿದವರಿಗೆ ಅಪಾಯವನ್ನುಂಟು ಮಾಡಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
Update: At least 670 people have died in Papua New Guinea’s massive landslide, the UN estimated. Aid workers and villagers are searching for survivors amid dangerous conditions. pic.twitter.com/4wER0vnUVQ
— DW News (@dwnews) May 26, 2024
ಇನ್ನು ಈ ಭೂ ಕುಸಿತವಾದ ಪ್ರದೇಶದಲ್ಲಿ ಸುಮಾರು 4,000 ಜನರು ವಾಸಿಸುತ್ತಿದ್ದಾರೆ ಎಂದು ಕೇರ್ ಇಂಟರ್‌ನ್ಯಾಷನಲ್ ಪಿಎನ್‌ಜಿಯ ನಿರ್ದೇಶಕ ಜಸ್ಟಿನ್ ಮೆಕ್ ಮಹೊನ್ ಸೋಮವಾರ ಎಬಿಸಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇನ್ನು ಈ ಸ್ಥಳದ ಜನಗಣತಿಯು 2000 ಇಸವಿಯಲ್ಲಿ ನಡೆದ ಕಾರಣದಿಂದಾಗಿ ಜನಸಂಖ್ಯೆಯ ನಿಖರವಾದ ಅಂದಾಜು ಮಾಡಲು ಸಾಧ್ಯವಾಗಿಲ್ಲ. ಅನೇಕ ಜನರು ದೂರದ ಪರ್ವತ ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ. 2024ರಲ್ಲಿ ಜನಗಣತಿ ನಡೆಸಲಾಗುವುದು ಎಂದು ದೇಶವು ಇತ್ತೀಚೆಗೆ ಘೋಷಿಸಿತು.
NOW- New estimates put the death toll above 670 people from the landslide that happened in northern Papua New Guinea on Friday pic.twitter.com/IBT2rM9jr0
— Overton (@OvertonLive) May 27, 2024
ಶುಕ್ರವಾರ ಮುಂಜಾನೆ ಪಿಎನ್‌ಜಿಯ ಎಂಗಾ ಪ್ರಾಂತ್ಯದಲ್ಲಿ ಸಂಭವಿಸಿದ ಭೂಕುಸಿತದಿಂದ ಸುಮಾರು 1,250 ಜನರು ಸ್ಥಳಾಂತರಗೊಂಡಿದ್ದಾರೆ. 150ಕ್ಕೂ ಹೆಚ್ಚು ಮನೆಗಳು ಸಮಾಧಿಯಾಗಿದ್ದು, ಸುಮಾರು 250 ಮನೆಗಳನ್ನು ತೊರೆದು ಜನರು ಬೇರೆಡೆ ಸಾಗಿದ್ದಾರೆ.