ಪಪುವಾ ನ್ಯೂಗಿನಿಯಾ ಭೂಕುಸಿತ: 2,000ಕ್ಕೂ ಅಧಿಕ ಮಂದಿ ಜೀವಂತ ಸಮಾಧಿ

Date:

ಇಂಡೋನೇಷ್ಯಾದ ಪಶ್ಚಿಮ ಭಾಗದಲ್ಲಿರುವ ಪಪುವಾ ನ್ಯೂಗಿನಿಯಾದಲ್ಲಿ ಸಂಭವಿಸಿದ ಭಾರಿ ಭೂಕುಸಿತದಿಂದ 2,000ಕ್ಕೂ ಹೆಚ್ಚು ಜನರು ಜೀವಂತ ಸಮಾಧಿ ಆಗಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ಕೇಂದ್ರ ಸೋಮವಾರ ಹೇಳಿದೆ. ಭೂಕುಸಿತವಾದ ಪ್ರದೇಶಕ್ಕೆ ತಲುಪಲು ಆಗುತ್ತಿರುವ ಸಮಸ್ಯೆಯಿಂದಾಗಿ ಕೆಲವೇ ಕೆಲವು ಮಂದಿಯನ್ನು ಕಾಪಾಡಲು ಮಾತ್ರ ಸಾಧ್ಯವಾಗಬಹುದು ಎಂದು ವರದಿಯಾಗಿದೆ.

ಭೂಕುಸಿತದಿಂದಾಗಿ ಜೀವಂತ ಸಮಾಧಿಯಾದವರ ಸಂಖ್ಯೆಯು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಭಾನುವಾರದ ವೇಳೆ ಯುಎನ್ ಏಜೆನ್ಸಿಯು ಸುಮಾರು 670ಕ್ಕೂ ಅಧಿಕ ಮಂದಿ ಸಾವನ್ನಪ್ಪಿರಬಹುದು ಎಂದು ಅಂದಾಜಿಸಿದೆ.

2,000ಕ್ಕೂ ಅಧಿಕ ಮಂದಿ ಜೀವಂತ ಸಮಾಧಿಯಾಗಿದ್ದಾರೆ ಎಂದು ಸೋಮವಾರ ರಾಷ್ಟ್ರೀಯ ವಿಪತ್ತು ಕೇಂದ್ರ ತಿಳಿಸಿದೆ. ಈ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದನ್ನು ಓದಿದ್ದೀರಾ?  ಪಪುವಾ ನ್ಯೂಗಿನಿಯಾದಲ್ಲಿ ಭೂಕುಸಿತ: 670ಕ್ಕೂ ಹೆಚ್ಚು ಸಾವು

ಭೂಕುಸಿತದಿಂದಾಗಿ ಕಟ್ಟಡಗಳು ಮತ್ತು ತೋಟ ಮೊದಲಾದವುಗಳು ಸಂಪೂರ್ಣವಾಗಿ ನೆಲಸಮವಾಗಿದೆ. ರಕ್ಷಣಾ ತಂಡಗಳು ಮತ್ತು ಬದುಕುಳಿದವರಿಗೆ ಅಪಾಯವನ್ನುಂಟು ಮಾಡಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಇನ್ನು ಈ ಭೂ ಕುಸಿತವಾದ ಪ್ರದೇಶದಲ್ಲಿ ಸುಮಾರು 4,000 ಜನರು ವಾಸಿಸುತ್ತಿದ್ದಾರೆ ಎಂದು ಕೇರ್‌ ಇಂಟರ್‌ನ್ಯಾಷನಲ್ ಪಿಎನ್‌ಜಿಯ ನಿರ್ದೇಶಕ ಜಸ್ಟಿನ್ ಮೆಕ್ ಮಹೊನ್ ಸೋಮವಾರ ಎಬಿಸಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಇನ್ನು ಈ ಸ್ಥಳದ ಜನಗಣತಿಯು 2000 ಇಸವಿಯಲ್ಲಿ ನಡೆದ ಕಾರಣದಿಂದಾಗಿ ಜನಸಂಖ್ಯೆಯ ನಿಖರವಾದ ಅಂದಾಜು ಮಾಡಲು ಸಾಧ್ಯವಾಗಿಲ್ಲ. ಅನೇಕ ಜನರು ದೂರದ ಪರ್ವತ ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ. 2024ರಲ್ಲಿ ಜನಗಣತಿ ನಡೆಸಲಾಗುವುದು ಎಂದು ದೇಶವು ಇತ್ತೀಚೆಗೆ ಘೋಷಿಸಿತು.

ಶುಕ್ರವಾರ ಮುಂಜಾನೆ ಪಿಎನ್‌ಜಿಯ ಎಂಗಾ ಪ್ರಾಂತ್ಯದಲ್ಲಿ ಸಂಭವಿಸಿದ ಭೂಕುಸಿತದಿಂದ ಸುಮಾರು 1,250 ಜನರು ಸ್ಥಳಾಂತರಗೊಂಡಿದ್ದಾರೆ. 150ಕ್ಕೂ ಹೆಚ್ಚು ಮನೆಗಳು ಸಮಾಧಿಯಾಗಿದ್ದು, ಸುಮಾರು 250 ಮನೆಗಳನ್ನು ತೊರೆದು ಜನರು ಬೇರೆಡೆ ಸಾಗಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೆಕ್ಕಾಗೆ ಹಜ್ ಯಾತ್ರೆಗೆ ತೆರಳಿದ್ದ 550 ಯಾರ್ತಾರ್ಥಿಗಳು ಬಿಸಿಲಾಘಾತದಿಂದ ಸಾವು

ಮೆಕ್ಕಾಗೆ ಈ ವರ್ಷ ಹಜ್‌ ಯಾತ್ರೆಗೆ ತೆರಳಿದ್ದ 550 ಯಾರ್ತಾರ್ಥಿಗಳು ತೀವ್ರ...

ನಿಜ್ಜಾರ್ ಸಾವಿಗೆ ಕೆನಡಾ ಸಂಸತ್‌ನಲ್ಲಿ ಮೌನಾಚರಣೆ: ಭಾರತ ಆಕ್ರೋಶ

ಖಲಿಸ್ತಾನಿ ಉಗ್ರಗಾಮಿ ಹರ್‌ದೀಪ್‌ ಸಿಂಗ್‌ ನಿಜ್ಜರ್ ಸಾವಿನ ಮೊದಲ ವರ್ಷದ ನೆನಪಿಗಾಗಿ...

ಮಾಲ್ಡೀವ್ಸ್‌| ಸೇತುವೆ ದುರಸ್ತಿ ವೇಳೆ ಭಾರತೀಯ ಕಾರ್ಮಿಕ ಸಾವು; ಎರಡು ತಿಂಗಳಲ್ಲಿ 2ನೇ ಪ್ರಕರಣ

ಮಾಲ್ಡೀವ್ಸ್‌ನ ರಾಜಧಾನಿಯಲ್ಲಿನ ಪ್ರಮುಖ ಸೇತುವೆ ದುರಸ್ತಿ ಸಮಯದಲ್ಲಿ ಕುಸಿದುಬಿದ್ದ ಭಾರತೀಯ ಕಾರ್ಮಿಕರೊಬ್ಬರು...

ಹ್ಯಾಕ್ ಆಗುವ ಸಾಧ್ಯತೆ; ವಿದ್ಯುನ್ಮಾನ ಮತಯಂತ್ರವನ್ನು ನಿಷೇಧಿಸಬೇಕು ಎಂದ ಎಲಾನ್‌ ಮಸ್ಕ್‌

ಸಾಮಾಜಿಕ ಮಾಧ್ಯಮ ‘ಎಕ್ಸ್‌’ನ ಮಾಲೀಕ ಎಲಾನ್‌ ಮಸ್ಕ್‌, ಕೃತಕ ಬುದ್ಧಿಮತ್ತೆ(ಎಐ) ಅಥವಾ...