ಹೊಸ ನಿಯಮದ ಕಾರಣದಿಂದಾಗಿ ಭಾರತೀಯರಿಗೆ ದುಬೈನ ಪ್ರವಾಸಿ ವೀಸಾ ಪಡೆಯುವುದು ಸವಾಲಾಗಿದೆ. ಪ್ರವಾಸಿ ವೀಸಾಗಳಿಗೆ ಸಂಬಂಧಿಸಿದಂತೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಜಾರಿಗೊಳಿಸಿದ ಕಟ್ಟುನಿಟ್ಟಾದ ನಿಯಮಗಳಿಂದಾಗಿ ಈಗ ಭಾರತೀಯರು ದುಬೈ ಪ್ರವಾಸಿ ವೀಸಾ ಪಡೆಯುವುದು ಕಷ್ಟವಾಗಿದೆ.
ಮಾಹಿತಿ ಪ್ರಕಾರ ಈ ಹಿಂದೆ ಪ್ರವಾಸಿ ವೀಸಾಕ್ಕೆ ಸಲ್ಲಿಸಲಾದ ಅರ್ಜಿಯಲ್ಲಿ ಸುಮಾರು ಶೇಕಡ 99ರಷ್ಟು ಅರ್ಜಿಗಳನ್ನು ಅನುಮೋದಿಸಲಾಗುತ್ತಿತ್ತು. ಆದರೆ ಈಗ ಹೊಸ ಮಾನದಂಡಗಳನ್ನು ಜಾರಿಗೊಳಿಸಿದ ಬಳಿಕ ವೀಸಾ ನಿರಾಕರಣೆ ಪ್ರಮಾಣ ದಾಖಲೆ ಮಟ್ಟದಲ್ಲಿ ಹೆಚ್ಚಾಗಿದೆ, ವೀಸಾ ಅನುಮೋದನೆ ಪ್ರಮಾಣ ಕಡಿಮೆಯಾಗಿದೆ.
ಇದನ್ನು ಓದಿದ್ದೀರಾ?ದುಬೈ | ಬ್ಯಾರೀಸ್ ಚೇಂಬರ್ ಯುಎಇ ವತಿಯಿಂದ ಫೆಬ್ರವರಿ 9ರಂದು ಅದ್ದೂರಿಯ ಬ್ಯಾರಿ ಮೇಳ
ಯುನೈಟೆಡ್ ಅರಬ್ ಎಮಿರೇಟ್ಸ್ ಪ್ರಸ್ತುತ ವೀಸಾ ನೀಡಲು ಹೆಚ್ಚಿನ ದಾಖಲೆ, ಪುರಾವೆಗಳನ್ನು ನೀಡುತ್ತದೆ. ಖಾತರಿಯಾದ ರಿಟರ್ನ್ ಟಿಕೆಟ್, ತಂಗುವ ಹೊಟೇಲ್‌ನ ಪುರಾವೆ, ತಮ್ಮನ್ನು ಕರೆಸಿಕೊಳ್ಳುವವರ ಮನೆಯ/ಆಸ್ತಿಯ ಬಾಡಿಗೆ ಒಪ್ಪಂದ, ಎಮಿರೇಟ್ಸ್ ಐಡಿ ಮತ್ತು ಕುಟುಂಬದೊಂದಿಗೆ ಇದ್ದರೆ ರೆಸಿಡೆಂಟ್ ವೀಸಾದಂತಹ ಪೇಪರ್‌ಗಳನ್ನು ನೀಡಬೇಕಾಗುತ್ತದೆ. ಹೋಟೆಲ್‌ನಲ್ಲಿ ತಂಗಿದ್ದರೆ ಪ್ರವಾಸಿಗರು ತಮ್ಮ ಪ್ಯಾನ್ ಕಾರ್ಡ್ ಮತ್ತು ಕಳೆದ ಮೂರು ತಿಂಗಳುಗಳ ಬ್ಯಾಂಕ್ ವಹಿವಾಟಿನ ಪ್ರತಿ, ಬ್ಯಾಂಕ್‌ನಲ್ಲಿ ಕನಿಷ್ಠ 50 ಸಾವಿರ ರೂಪಾಯಿ ಇರುವ ದಾಖಲೆ ನೀಡಬೇಕಾಗುತ್ತದೆ.
ಟ್ರಾವೆಲ್ ಏಜೆಂಟ್‌ಗಳ ಪ್ರಕಾರ ಭಾರತೀಯ ಪ್ರವಾಸಿ ವೀಸಾ ಅರ್ಜಿಗಳ ನಿರಾಕರಣೆ ದರವು ಪ್ರತಿದಿನ ಶೇಕಡ 1-2ರಿಂದ ಶೇಕಡ 5-6ಕ್ಕೆ ಏರಿದೆ. ಇನ್ನು ಅಗತ್ಯವಿರುವ ಎಲ್ಲ ದಾಖಲೆಗಳಿದ್ದರೂ ಕೂಡಾ ಕೆಲವು ಅರ್ಜಿಗಳು ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಇದರಿಂದಾಗಿ ಪ್ರವಾಸಿಗರಿಗೆ ಭಾರೀ ಪ್ರಮಾಣದಲ್ಲಿ ಹಣಕಾಸು ನಷ್ಟ ಉಂಟಾಗಿದೆ. ವಿಮಾನ ಟಿಕೆಟ್ ಮೊತ್ತ, ವೀಸಾಕ್ಕಾಗಿ ಅರ್ಜಿ ಸಲ್ಲಿಸಿದ ಶುಲ್ಕ ನಷ್ಟವಾಗುತ್ತಿದೆ ಎಂದು ಹೇಳಲಾಗಿದೆ.
ವಸತಿ ಮೊದಲಾದ ವಸತಿ ಸೌಕರ್ಯಗಳ ದಾಖಲೆ ನೀಡಬೇಕಾದ ಕಾರಣ ಮೊದಲೇ ಹೊಟೇಲ್‌ಗಳನ್ನು ಬುಕ್ ಮಾಡಬೇಕಾಗುತ್ತದೆ. ಆದರೆ ವೀಸಾ ರದ್ದಾದ ಕಾರಣ ಮುಂಗಡ ಪಾವತಿ ಮೊತ್ತ ವಾಪಸ್ ಸಿಗುವುದಿಲ್ಲ. ಇದು ಪ್ರವಾಸಿಗರಿಗೆ ಆರ್ಥಿಕ ನಷ್ಟ ಉಂಟು ಮಾಡುತ್ತದೆ ಎಂಬ ಆರೋಪಗಳಿವೆ. ಜೊತೆಗೆ ದುಬೈ ಪ್ರವಾಸಕ್ಕೆ ಹೊರಟ ಭಾರತೀಯರ ಆರ್ಥಿಕ ಹೊರೆ ಹೆಚ್ಚಾಗಿದೆ.

Boycott middle east country