ಹೊಸ ನಿಯಮ | ಭಾರತೀಯರ ಪ್ರವಾಸಿ ವೀಸಾ ರದ್ದುಪಡಿಸುತ್ತಿರುವ ದುಬೈ

Date:

ಹೊಸ ನಿಯಮದ ಕಾರಣದಿಂದಾಗಿ ಭಾರತೀಯರಿಗೆ ದುಬೈನ ಪ್ರವಾಸಿ ವೀಸಾ ಪಡೆಯುವುದು ಸವಾಲಾಗಿದೆ. ಪ್ರವಾಸಿ ವೀಸಾಗಳಿಗೆ ಸಂಬಂಧಿಸಿದಂತೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಜಾರಿಗೊಳಿಸಿದ ಕಟ್ಟುನಿಟ್ಟಾದ ನಿಯಮಗಳಿಂದಾಗಿ ಈಗ ಭಾರತೀಯರು ದುಬೈ ಪ್ರವಾಸಿ ವೀಸಾ ಪಡೆಯುವುದು ಕಷ್ಟವಾಗಿದೆ.

- Advertisement -

ಮಾಹಿತಿ ಪ್ರಕಾರ ಈ ಹಿಂದೆ ಪ್ರವಾಸಿ ವೀಸಾಕ್ಕೆ ಸಲ್ಲಿಸಲಾದ ಅರ್ಜಿಯಲ್ಲಿ ಸುಮಾರು ಶೇಕಡ 99ರಷ್ಟು ಅರ್ಜಿಗಳನ್ನು ಅನುಮೋದಿಸಲಾಗುತ್ತಿತ್ತು. ಆದರೆ ಈಗ ಹೊಸ ಮಾನದಂಡಗಳನ್ನು ಜಾರಿಗೊಳಿಸಿದ ಬಳಿಕ ವೀಸಾ ನಿರಾಕರಣೆ ಪ್ರಮಾಣ ದಾಖಲೆ ಮಟ್ಟದಲ್ಲಿ ಹೆಚ್ಚಾಗಿದೆ, ವೀಸಾ ಅನುಮೋದನೆ ಪ್ರಮಾಣ ಕಡಿಮೆಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಇದನ್ನು ಓದಿದ್ದೀರಾ?ದುಬೈ | ಬ್ಯಾರೀಸ್ ಚೇಂಬರ್ ಯುಎಇ ವತಿಯಿಂದ ಫೆಬ್ರವರಿ 9ರಂದು ಅದ್ದೂರಿಯ ಬ್ಯಾರಿ ಮೇಳ

ಯುನೈಟೆಡ್ ಅರಬ್ ಎಮಿರೇಟ್ಸ್ ಪ್ರಸ್ತುತ ವೀಸಾ ನೀಡಲು ಹೆಚ್ಚಿನ ದಾಖಲೆ, ಪುರಾವೆಗಳನ್ನು ನೀಡುತ್ತದೆ. ಖಾತರಿಯಾದ ರಿಟರ್ನ್ ಟಿಕೆಟ್‌, ತಂಗುವ ಹೊಟೇಲ್‌ನ ಪುರಾವೆ, ತಮ್ಮನ್ನು ಕರೆಸಿಕೊಳ್ಳುವವರ ಮನೆಯ/ಆಸ್ತಿಯ ಬಾಡಿಗೆ ಒಪ್ಪಂದ, ಎಮಿರೇಟ್ಸ್ ಐಡಿ ಮತ್ತು ಕುಟುಂಬದೊಂದಿಗೆ ಇದ್ದರೆ ರೆಸಿಡೆಂಟ್ ವೀಸಾದಂತಹ ಪೇಪರ್‌ಗಳನ್ನು ನೀಡಬೇಕಾಗುತ್ತದೆ. ಹೋಟೆಲ್‌ನಲ್ಲಿ ತಂಗಿದ್ದರೆ ಪ್ರವಾಸಿಗರು ತಮ್ಮ ಪ್ಯಾನ್ ಕಾರ್ಡ್ ಮತ್ತು ಕಳೆದ ಮೂರು ತಿಂಗಳುಗಳ ಬ್ಯಾಂಕ್ ವಹಿವಾಟಿನ ಪ್ರತಿ, ಬ್ಯಾಂಕ್‌ನಲ್ಲಿ ಕನಿಷ್ಠ 50 ಸಾವಿರ ರೂಪಾಯಿ ಇರುವ ದಾಖಲೆ ನೀಡಬೇಕಾಗುತ್ತದೆ.

ಟ್ರಾವೆಲ್ ಏಜೆಂಟ್‌ಗಳ ಪ್ರಕಾರ ಭಾರತೀಯ ಪ್ರವಾಸಿ ವೀಸಾ ಅರ್ಜಿಗಳ ನಿರಾಕರಣೆ ದರವು ಪ್ರತಿದಿನ ಶೇಕಡ 1-2ರಿಂದ ಶೇಕಡ 5-6ಕ್ಕೆ ಏರಿದೆ. ಇನ್ನು ಅಗತ್ಯವಿರುವ ಎಲ್ಲ ದಾಖಲೆಗಳಿದ್ದರೂ ಕೂಡಾ ಕೆಲವು ಅರ್ಜಿಗಳು ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಇದರಿಂದಾಗಿ ಪ್ರವಾಸಿಗರಿಗೆ ಭಾರೀ ಪ್ರಮಾಣದಲ್ಲಿ ಹಣಕಾಸು ನಷ್ಟ ಉಂಟಾಗಿದೆ. ವಿಮಾನ ಟಿಕೆಟ್ ಮೊತ್ತ, ವೀಸಾಕ್ಕಾಗಿ ಅರ್ಜಿ ಸಲ್ಲಿಸಿದ ಶುಲ್ಕ ನಷ್ಟವಾಗುತ್ತಿದೆ ಎಂದು ಹೇಳಲಾಗಿದೆ.

ವಸತಿ ಮೊದಲಾದ ವಸತಿ ಸೌಕರ್ಯಗಳ ದಾಖಲೆ ನೀಡಬೇಕಾದ ಕಾರಣ ಮೊದಲೇ ಹೊಟೇಲ್‌ಗಳನ್ನು ಬುಕ್ ಮಾಡಬೇಕಾಗುತ್ತದೆ. ಆದರೆ ವೀಸಾ ರದ್ದಾದ ಕಾರಣ ಮುಂಗಡ ಪಾವತಿ ಮೊತ್ತ ವಾಪಸ್ ಸಿಗುವುದಿಲ್ಲ. ಇದು ಪ್ರವಾಸಿಗರಿಗೆ ಆರ್ಥಿಕ ನಷ್ಟ ಉಂಟು ಮಾಡುತ್ತದೆ ಎಂಬ ಆರೋಪಗಳಿವೆ. ಜೊತೆಗೆ ದುಬೈ ಪ್ರವಾಸಕ್ಕೆ ಹೊರಟ ಭಾರತೀಯರ ಆರ್ಥಿಕ ಹೊರೆ ಹೆಚ್ಚಾಗಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಾಜಾದಲ್ಲಿ ಮೃತರ ಸಂಖ್ಯೆ 74,000 ದಾಟಿದೆ: ಆರೋಗ್ಯ ಸಚಿವಾಲಯ

ಇಸ್ರೇಲ್ ನಡೆಸುತ್ತಿರುವ ದೀರ್ಘಕಾಲದ ಕ್ರೌರ್ಯದಿಂದಾಗಿ ಗಾಜಾ ಪಟ್ಟಿಯಲ್ಲಿ ಮೃತರ ಸಂಖ್ಯೆ 74,000...

ದಕ್ಷಿಣ ಆಫ್ರಿಕಾದ ಹಲವೆಡೆ ಸಾಮೂಹಿಕ ಗುಂಡಿನ ದಾಳಿ; 27 ಮಂದಿ ಭೀಕರ ಸಾವು

ದಕ್ಷಿಣ ಆಫ್ರಿಕಾದ ವಿವಿಧ ಪಟ್ಟಣಗಳಲ್ಲಿ ಭೀಕರ ಸಾಮೂಹಿಕ ಗುಂಡಿನ ದಾಳಿಗಳು ನಡೆದಿದ್ದು,...

ಪಾಕಿಸ್ತಾನದಲ್ಲಿ ಆತ್ಮಾಹುತಿ ದಾಳಿ: 11 ಮಂದಿ ಬಲಿ, 30 ಜನರಿಗೆ ಗಾಯ

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಶನಿವಾರ ನಡೆದ ಭೀಕರ ಆತ್ಮಾಹುತಿ ದಾಳಿಯಲ್ಲಿ...

ಯುದ್ಧದಾಹಿ ಅಮೆರಿಕ: ಇರಾನ್‌ನ 7 ದಿನಗಳ ಕದನ ವಿರಾಮ ಪ್ರಸ್ತಾವಕ್ಕೆ ಟ್ರಂಪ್ ತಿರಸ್ಕಾರ

ಇರಾನ್‌ ಕದನ ವಿರಾಮಕ್ಕೆ ಮುಂದಿಟ್ಟಿರುವ 7 ದಿನಗಳ ಶಾಂತಿ ಪ್ರಸ್ತಾವವನ್ನು ಅಮೆರಿಕ...