ಸೌದಿ ಅರೇಬಿಯಾದಲ್ಲಿ ಸೋಮವಾರ ಸಂಜೆ ಶವ್ವಾಲ್ ತಿಂಗಳ ಚಂದ್ರದರ್ಶನವಾಗದ ಹಿನ್ನೆಲೆಯಲ್ಲಿ ಮಂಗಳವಾರವೂ(ಏಪ್ರಿಲ್ 9) ರಮಝಾನ್ ತಿಂಗಳ 30ನೇ ಉಪವಾಸವಾಗಲಿದೆ. ಏಪ್ರಿಲ್ 10 ಈದುಲ್ ಫಿತ್ರ್ ಹಬ್ಬ ಎಂದು ಮೆಕ್ಕಾದ ‘Inside the Haramain‘ ಅಧಿಕೃತ ಹ್ಯಾಂಡಲ್ ಪ್ರಕಟಣೆ ಹೊರಡಿಸಿದೆ.
BREAKING NEWS: Eid Al Fitr 1445/2024 is on Wednesday, 10 April 2024.
The Crescent was NOT SEEN in the Kingdom today pic.twitter.com/6L455GysPh
— Inside the Haramain (@insharifain) April 8, 2024
ಸೌದಿ ಅರೇಬಿಯಾದ ಸುದೈರ್‌ನಲ್ಲಿ ಮುಖ್ಯ ಖಗೋಳಶಾಸ್ತ್ರಜ್ಞ ಅಬ್ದುಲ್ಲಾ ಅಲ್-ಖುದೈರಿ ಅವರು ಸೌದಿಯ ರಾಯಭಾರಿಯೊಂದಿಗೆ ದೃಢೀಕರಿಸಿದ ಬಳಿಕ ಈ ಘೋಷಣೆ ಹೊರಬಿದ್ದಿದೆ. ಅಲ್ಲದೇ, ಆ ಬಳಿಕ ಈ ಮಾಹಿತಿಯನ್ನು ತನ್ನ ಸೋಷಿಯಲ್ ಮೀಡಿಯಾ ಪುಟದಲ್ಲೂ ಕೂಡ ಪ್ರಕಟಿಸಿದೆ.
ಮುಸ್ಲಿಮರ ಪವಿತ್ರ ರಮಝಾನ್ ತಿಂಗಳ ಉಪವಾಸವು 11 ಮಾರ್ಚ್ 2024ರಂದು ಸೌದಿ ಅರೇಬಿಯಾದಲ್ಲಿ ಪ್ರಾರಂಭವಾಗಿತ್ತು. ಭಾರತದಲ್ಲಿ ಮಾರ್ಚ್ 12ರಂದು ಮೊದಲ ಉಪವಾಸವಾಗಿತ್ತು.
