ಆಸ್ಟ್ರೇಲಿಯಾದ ಸ್ಪಿನ್ನರ್ ನಾಥನ್ ಲಿಯಾನ್ 500 ಟೆಸ್ಟ್ ವಿಕೆಟ್ ಸಾಧನೆಗೈದವರ ಪಟ್ಟಿಗೆ ಇಂದು ಸೇರ್ಪಡೆಯಾಗುವ ಮೂಲಕ ಐತಿಹಾಸಿಕ ಸಾಧನೆಗೈದಿದ್ದಾರೆ.
ಆಸ್ಟ್ರೇಲಿಯಾದ ಪರ್ತ್‌ನಲ್ಲಿ ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯದ ನಾಲ್ಕನೇ ದಿನದಂದು ಫಹೀಮ್ ಅಶ್ರಫ್ ಅವರನ್ನು ಎಲ್‌ಬಿಡಬ್ಲ್ಯೂ ಬಲೆಗೆ ಬೀಳಿಸಿ, ವಿಕೆಟ್ ಕಬಳಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿರುವ ಆಸ್ಟ್ರೇಲಿಯಾ, 360 ರನ್‌ಗಳ ಭರ್ಜರಿ ಜಯ ಗಳಿಸಿದೆ. ಈ ಪಂದ್ಯದಲ್ಲಿ ನಾಥನ್ ಲಿಯಾನ್ ಮೊದಲ ಹಾಗೂ ಎರಡನೇ ಇನ್ನಿಂಗ್ಸ್ ಸೇರಿ ಒಟ್ಟು 5 ವಿಕೆಟ್ ಪಡೆದಿದ್ದಾರೆ.
FIVE HUNDRED! #AUSvPAK #PlayOfTheDay @nrmainsurance pic.twitter.com/DyDC5hUdTJ
— cricket.com.au (@cricketcomau) December 17, 2023
ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್‌ಗಳ ಗುರಿ ಮುಟ್ಟಿದ ಎಂಟನೇ ಬೌಲರ್ ಆಗಿ ಹಾಗೂ ಮೂರನೇ ಆಸೀಸ್ ಆಟಗಾರ ಎಂಬ ಹೆಗ್ಗಳಿಕೆ ನಾಥನ್ ಲಿಯಾನ್ ಪಾತ್ರರಾಗಿದ್ದಾರೆ. ಆಸ್ಟ್ರೇಲಿಯಾ ಪರ ಈಗಾಗಲೇ ದಿಗ್ಗಜ ದಿವಂಗರ ಶೇನ್ ವಾರ್ನ್ 708 ವಿಕೆಟ್ ಪಡೆದಿದ್ದರೆ ಹಾಗೂ ನಿವೃತ್ತ ಕ್ರಿಕೆಟಿಗ ಗ್ಲೆನ್ ಮೆಕ್‌ಗ್ರಾಥ್ 563 ವಿಕೆಟ್‌ಗಳನ್ನು ಪಡೆದಿದ್ದಾರೆ.
Welcome to the club, Nathan Lyon 🫡 pic.twitter.com/groUwxvC0R
— ESPNcricinfo (@ESPNcricinfo) December 17, 2023
500ಕ್ಕಿಂತಲೂ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಪಟ್ಟಿಯಲ್ಲಿ ಮುತ್ತಯ್ಯ ಮುರಳೀಧರನ್ 800 ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿದ್ದಾರೆ. ಉಳಿದಂತೆ ಕ್ರಮವಾಗಿ ಆಸೀಸ್‌ನ ಶೇನ್ ವಾರ್ನ್( 708), ಇಂಗ್ಲೆಂಡ್‌ನ ಜೇಮ್ಸ್ ಆಂಡರ್‌ಸನ್ 690, ಭಾರತದ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ 619, ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್ 604, ಆಸೀಸ್‌ನ ಗ್ಲೆನ್ ಮೆಕ್‌ಗ್ರಾಥ್ 563, ವೆಸ್ಟ್ ಇಂಡೀಸ್ ಕರ್ಟ್ನಿ ವಾಲ್ಶ್ 519 ವಿಕೆಟ್ ಪಡೆದಿದ್ದು, ಅಗ್ರ 10ರೊಳಗಿನ ಸ್ಥಾನದಲ್ಲಿದ್ದಾರೆ.
12 years. 500 Test wickets. One 🐐 pic.twitter.com/g8Os8cqnV5
— ESPNcricinfo (@ESPNcricinfo) December 17, 2023
ಈಗ 500 ವಿಕೆಟ್ ಪಡೆದ 36 ವರ್ಷದ ಆಫ್ ಸ್ಪಿನ್ನರ್ ನಾಥನ್ ಲಿಯಾನ್ ಎಂಟನೇ ಸ್ಥಾನದಲ್ಲಿದ್ದರೆ, ಟೀಮ್ ಇಂಡಿಯಾದ ಸ್ಪಿನ್ನರ್ ಆರ್. ಅಶ್ವಿನ್ 489 ವಿಕೆಟ್ ಪಡೆದು 9ನೇ ಸ್ಥಾನದಲ್ಲಿದ್ದಾರೆ. ಅಶ್ವಿನ್ ಈ ಸಾಧನೆಗೈಯ್ಯಲು ಇನ್ನೂ 11 ವಿಕೆಟ್‌ಗಳು ಬೇಕಾಗಿದೆ.
Nathan Lyon becomes only the 8th player to 500 Test wickets 👏 🇦🇺 pic.twitter.com/BN8qeOLbiY
— ESPNcricinfo (@ESPNcricinfo) December 17, 2023
ಲಿಯಾನ್ 500 ವಿಕೆಟ್ ಕ್ಲಬ್‌ನಲ್ಲಿ ಮುತ್ತಯ್ಯ ಮುರಳೀಧರನ್, ಶೇನ್ ವಾರ್ನ್ ಮತ್ತು ಅನಿಲ್ ಕುಂಬ್ಳೆ ಬಳಿಕ ಪಟ್ಟಿಯಲ್ಲಿ ನಾಲ್ಕನೇ ಸ್ಪಿನ್ನರ್ ಆಗಿದ್ದಾರೆ.
2010 – part of groundstaff.
2023 – picking 500 Test wickets.
– Inspirational stuff from Nathan Lyon…!!! pic.twitter.com/ZjQjVPO3jU
— Mufaddal Vohra (@mufaddal_vohra) December 17, 2023
ನಾಥನ್ ಲಿಯಾನ್ ತನ್ನ ಚೊಚ್ಚಲ ಟೆಸ್ಟ್ ಪಂದ್ಯವನ್ನು ಶ್ರೀಲಂಕಾ ವಿರುದ್ಧ 2011ರಲ್ಲಿ ಗಾಲೆಯಲ್ಲಿ ಆಡಿದ್ದರು. ತಾನು ಎಸೆದ ಮೊದಲ ಎಸೆತದಲ್ಲೇ ಕುಮಾರ್ ಸಂಗಕ್ಕಾರ ಅವರ ವಿಕೆಟ್ ಪಡೆಯುವ ಮೂಲಕ ಸಾಧನೆಗೈದಿದ್ದರು. ಲಿಯಾನ್ ಎಸೆದಿದ್ದ ಮೊದಲ ಎಸೆತವನ್ನು ಎದುರಿಸಿದ್ದ ಕುಮಾರ್ ಸಂಗಕ್ಕಾರ, ಸ್ಲಿಪ್‌ನಲ್ಲಿದ್ದ ಮೈಕೆಲ್ ಕ್ಲಾರ್ಕ್ ಹಿಡಿದ ಅದ್ಬುತ್ ಕ್ಯಾಚ್‌ಗೆ ಬಲಿಯಾಗಿದ್ದರು. ಮೊದಲ ಟೆಸ್ಟ್ ಪಂದ್ಯದಲ್ಲಿ 34ಕ್ಕೆ 5 ವಿಕೆಟ್ ಗಳಿಸುವ ಮೂಲಕ ಮಿಂಚಿದ್ದರು. ಆಸೀಸ್ ತಂಡಕ್ಕೆ ಆಯ್ಕೆಯಾಗುವುದಕ್ಕೂ ಮುನ್ನ, 2010ರಲ್ಲಿ ನಾಥನ್ ಲಿಯಾನ್ ಗ್ರೌಂಡ್ ಸ್ಟಾಫ್ ಆಗಿ, ಕಾಯಕದಲ್ಲಿದ್ದರು.