ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮೋದಿ ಸರ್ಕಾರದ ಅವಧಿಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಕುರಿತು ಭಾನುವಾರ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಇದು ‘ಅಭಿವೃದ್ಧಿ ಹೊಂದಿದ ಭಾರತ’ವೇ ಎಂದು ಪ್ರಶ್ನಿಸಿದ್ದಾರೆ.
ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಹಣದುಬ್ಬರವನ್ನು ಬೊಟ್ಟು ಮಾಡಿ ತೋರಿಸಲು ಹಾಲು, ಈರುಳ್ಳಿ, ಟೊಮ್ಯಾಟೊ ಮತ್ತು ಸಕ್ಕರೆಯಂತಹ ಅಗತ್ಯ ವಸ್ತುಗಳ 2014 ರ ಬೆಲೆಗಳನ್ನು ಅವುಗಳ ಪ್ರಸ್ತುತ ಬೆಲೆಗಳೊಂದಿಗೆ ಹೋಲಿಸುವ ವಿಡಿಯೋ ದೃಶ್ಯವನ್ನು ಮಲ್ಲಿಕಾರ್ಜುನ ಖರ್ಗೆ ಹಂಚಿಕೊಂಡಿದ್ದಾರೆ.
“ಹಣದುಬ್ಬರ-ನಾಮಕವಸ್ತೆ ಅರ್ಥಶಾಸ್ತ್ರ. ಇದು ಯಾವ ರೀತಿಯ ‘ಅಭಿವೃದ್ಧಿ ಹೊಂದಿದ ಭಾರತ’? ಬಿಜೆಪಿಗೆ ಇದು ಲೂಟಿ ಮಾಡುವಲ್ಲಿ ಪರಿಣತಿ ಹೊಂದಿದ ಅರ್ಥಶಾಸ್ತ್ರವಾಗಿದೆ. ಸರ್ಕಾರವು ಆರ್ಥಿಕತೆಯ ನಿರ್ವಹಣೆಯ ಮೇಲೆ ದಾಳಿ ಮಾಡುತ್ತಿದೆ. ಇದರಿಂದ ನಿರುದ್ಯೋಗ ಮತ್ತು ಬೆಲೆ ಏರಿಕೆ ಹೆಚ್ಚಾಗುತ್ತಿದೆ”ಎಂದು ತಿಳಿಸಿದ್ದಾರೆ.
ಡಿಸೆಂಬರ್ 21 ರಂದು ಕಾಂಗ್ರೆಸ್ ಕಾರ್ಯಾಕಾರಿಣಿ ಸಭೆ
2024ರ ಸಾರ್ವತ್ರಿಕ ಚುನಾವಣೆಯ ಕಾರ್ಯತಂತ್ರದ ಕುರಿತು ಚರ್ಚಿಸಲು ಮತ್ತು ಬಿಜೆಪಿಯನ್ನು ಎದುರಿಸಲು ತನ್ನ ಚುನಾವಣಾ ಪ್ರಚಾರಕ್ಕೆ ಕಾರ್ಯ ಯೋಜನೆಯನ್ನು ರೂಪಿಸಲು ಕಾಂಗ್ರೆಸ್ ಪಕ್ಷವು ಡಿಸೆಂಬರ್ 21 ರಂದು ಕಾರ್ಯಕಾರಿಣಿಯನ್ನು ಕರೆದಿದೆ ಎಂದು ಮೂಲಗಳು ತಿಳಿಸಿವೆ.
ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಚೇರಿಯಲ್ಲಿ ನಡೆಯಲಿರುವ ಸಭೆಯು ಡಿಸೆಂಬರ್ 19 ರಂದು ಇಂಡಿಯಾ ಒಕ್ಕೂಟದ ಸಭೆ ನಡೆದ ಎರಡು ದಿನಗಳ ನಂತರ ಹಮ್ಮಿಕೊಳ್ಳಲಾಗುತ್ತದೆ. ಸಭೆಯಲ್ಲಿ ಸೀಟು ಹಂಚಿಕೆ ಮತ್ತು ಪ್ರಚಾರವು ಅಜೆಂಡಾದ ಪ್ರಮುಖ ಅಂಶಗಳಾಗಿರಲಿದೆ.
2024ರ ಚುನಾವಣೆಗೂ ಮುನ್ನ ರಾಹುಲ್ ಗಾಂಧಿ ಅವರು ನಿರುದ್ಯೋಗ ಮತ್ತು ಬೆಲೆ ಏರಿಕೆಯ ಪ್ರಮುಖ ಯೋಜನೆಗಳಾಗಿ ಕೈಗೊಳ್ಳಬಹುದಾದ ಯಾತ್ರೆಯ ಬಗ್ಗೆಯೂ ಸಭೆಯಲ್ಲಿ ಚರ್ಚಿಸುವ ಸಾಧ್ಯತೆಯಿದೆ.
ಈ ಸುದ್ದಿ ಓದಿದ್ದೀರಾ? ಈದಿನ ಸಂಪಾದಕೀಯ | ಉತ್ತರದಲ್ಲಿ ನಡೆದ ಅಧಿವೇಶನದಲ್ಲಿ ಸಿಕ್ಕ ಉತ್ತರವೇನು?
महँगाई-nomics
ये कैसा "विकसित भारत"…?
जहाँ भाजपाई लूट को प्राप्त है महारत !! pic.twitter.com/oOAg4yTqoR
— Mallikarjun Kharge (@kharge) December 17, 2023