ದೇಶಾದ್ಯಂತ ವ್ಯಾಪಕ ಚರ್ಚೆಗೀಡಾಗಿರುವ ಚಂಡೀಗಢ ಮೇಯರ್ ಚುನಾವಣೆಯಲ್ಲಿನ ಅಕ್ರಮದ ವಿಚಾರಣೆಯ ವೇಳೆ ಮತಪತ್ರಗಳನ್ನು ತಿರುಚಿರುವುದರ ಬಗ್ಗೆ ಚುನಾವಣಾಧಿಕಾರಿ ಅನಿಲ್ ಮಾಸಿಹ್, ಸುಪ್ರೀಂ ಕೋರ್ಟಿನಲ್ಲಿ ತಪ್ಪೊಪ್ಪಿಕೊಂಡಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಚಂಡೀಗಢ ಮಹಾನಗರ ಪಾಲಿಕೆಯ ಮೇಯರ್ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುವ ರೀತಿಯಲ್ಲಿ ಮತಪತ್ರವನ್ನು ವಿರೂಪಗೊಳಿಸಿದ ಚುನಾವಣಾಧಿಕಾರಿ (ರಿಟರ್ನಿಂಗ್ ಆಫೀಸರ್) ಅನಿಲ್ ಮಾಸಿಹ್ ಅವರನ್ನು ಸೋಮವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು.
ಸುಪ್ರೀಂ ಕೋರ್ಟ್ ಮತ ಎಣಿಸಬೇಕಿದ್ದ ಅಧಿಕಾರಿ ಮತಪತ್ರಗಳಲ್ಲಿ ಟಿಕ್ ಮತ್ತು ಇಂಟೂ ಮಾರ್ಕ್ಗಳನ್ನು ಹಾಕಿದ್ದು ಏಕೆ ಎಂದು ಪ್ರಶ್ನಿಸಿತ್ತು. ಸೋಮವಾರದ ವಿಚಾರಣೆಯ ಬಳಿಕ, ಹೊಸದಾಗಿ ಚುನಾವಣೆಯ ನಡೆಸುವ ಬದಲು, ಮರು ಮತ ಎಣಿಕೆ ಮಾಡುವಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿತ್ತು.
ಈ ಆದೇಶದ ಬೆನ್ನಲ್ಲೇ ಸುಪ್ರೀಂ ಕೋರ್ಟ್ನಲ್ಲಿಂದು ನಡೆದ ವಿಚಾರಣೆಯು ಆನ್ಲೈನ್ನಲ್ಲಿ ಪ್ರಸಾರ ಮಾಡಲಾಗಿತ್ತು. ಚುನಾವಣಾಧಿಕಾರಿ ಅನಿಲ್ ಮಾಸಿಹ್ ಅವರನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ನೇರವಾಗಿ ಪ್ರಶ್ನಿಸಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
🚨🚨FULL VIDEO OF SUPREME COURT TODAY WHEN ANIL MASIH ADMITS THAT HE MADE MARKS ON BALLOT PAPER#ChandigarhMayorElection#SupremeCourt #ChandigarhMayor pic.twitter.com/z9jIeCBpBD
— Newton (@newt0nlaws) February 19, 2024
ಅನಿಲ್ ಮಾಸಿಹ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, “ಮತ ಎಣಿಸಬೇಕಿದ್ದ ನೀವು ಮತಪತ್ರಗಳಲ್ಲಿ ಟಿಕ್ ಮತ್ತು ಇಂಟೂ ಮಾರ್ಕ್ಗಳನ್ನು ಹಾಕಿದ್ದು ಏಕೆ? ಎಂದು ನೇರವಾಗಿ ಪ್ರಶ್ನಿಸಿದರು.
“ಒಂದು ವೇಳೆ ನೀವು(ಅನಿಲ್ ಮಾಸಿಹ್) ನ್ಯಾಯಾಲಯಕ್ಕೆ ಸುಳ್ಳು ಹೇಳಲು ಯತ್ನಿಸಿದರೆ ಕ್ರಮ ಕೈಗೊಳ್ಳುತ್ತೇವೆ. ಮತ ಎಣಿಕೆ ವೇಳೆ ನೀವು ನಡೆದುಕೊಂಡ ರೀತಿಯ ಸಿಸಿಟಿವಿ ಕ್ಯಾಮೆರಾದ ದೃಶ್ಯವನ್ನು ನಾವು ಕಳೆದ ವಿಚಾರಣೆಯಲ್ಲಿ ನೋಡಿದ್ದೇವೆ. ಹಾಗಾಗಿ, ಸತ್ಯ ಹೇಳಬೇಕು. ಇದು ಬಹಳ ಗಂಭೀರ ವಿಷಯ. ಸುಳ್ಳು ಹೇಳಿದರೆ ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ನೀವು ಕ್ಯಾಮೆರಾವನ್ನು ನೋಡುತ್ತಾ ಮತಪತ್ರಗಳಲ್ಲಿ ಏಕೆ ಗುರುತು ಹಾಕುತ್ತಿದ್ದದ್ದು ಯಾಕೆ?” ಎಂದು ಸಿಜೆಐ ಚಂದ್ರಚೂಡ್ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಲು ಯತ್ನಿಸಿದ ಅನಿಲ್ ಮಾಸಿಹ್, “ವಿರೂಪಗೊಂಡ ಮತಪತ್ರಗಳನ್ನು ಗುರುತು ಮಾಡುತ್ತಿದ್ದೆ. ಈ ವೇಳೆ ಕೆಲವು ಕೌನ್ಸಿಲರ್ಗಳು ಕ್ಯಾಮರಾ, ಕ್ಯಾಮರಾ ಎಂದು ಗಲಾಟೆ ಮಾಡುತ್ತಿದ್ದರು. ಹಾಗಾಗಿ, ಸಿಸಿಟಿವಿ ಕ್ಯಾಮೆರಾವನ್ನು ನಾನು ನೋಡಿದೆ” ಎಂದು ಸಮಜಾಯಿಷಿ ನೀಡಲು ಯತ್ನಿಸಿದರು.
🚨 This is full length video of Chandigarh returning officer Anil Masih confessing his offense of making marks on ballots.
This will go down as one of the most shameful act by someone sitting on constitutional post. pic.twitter.com/Ler4wwcRYQ
— Amock (@Politics_2022_) February 19, 2024
ಇದರಿಂದ ಕುಪಿತಗೊಂಡ ಸಿಜೆಐ ಚಂದ್ರಚೂಡ್, “ನೀವು ಮತಪತ್ರಗಳಿಗೆ ಸಹಿ ಹಾಕಬಹುದು. ಆ ಮತಪತ್ರಗಳಲ್ಲಿ X ಗುರುತನ್ನು ಹಾಕುತ್ತಿದ್ದದ್ದು ಏಕೆ? ಆ ಮತಪತ್ರಗಳಲ್ಲಿ ನೀವು ಟಿಕ್ ಅಥವಾ X ಅನ್ನು ಹಾಕಬಹುದು ಎಂದು ಯಾವ ನಿಯಮ ಹೇಳುತ್ತದೆ? ನಿಮ್ಮನ್ನು(ಮಾಸಿಹ್) ವಿಚಾರಣೆಗೆ ಒಳಪಡಿಸಬೇಕು. ಚುನಾವಣಾ ಪ್ರಜಾಪ್ರಭುತ್ವದಲ್ಲಿ ಇದನ್ನು ಅನುಮತಿಸಲಾಗುವುದಿಲ್ಲ” ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಬಳಿಕ ಎಷ್ಟು ಬ್ಯಾಲೆಟ್ ಪೇಪರ್ಗಳ ಮೇಲೆ ಮಾರ್ಕ್ ಮಾಡಿದ್ದೀರಿ ಎಂದು ಕೇಳಿದ ಸಿಜೆಐ, “ಕೆಲವೊಂದು ಅಸಿಂಧು ಮತಗಳಿತ್ತು. ಹಾಗಾಗಿ, ಬೇರ್ಪಡಿಸಲೆಂದಷ್ಟೇ ಎಂಟು ಬ್ಯಾಲೆಟ್ ಪೇಪರ್ಗಳ ಮೇಲೆ ಮಾರ್ಕ್ ಮಾಡಿದ್ದೇನೆ” ಎಂದು ತಿಳಿಸಿದರು. ಚುನಾವಣಾಧಿಕಾರಿ ವಿವರಣೆಯಿಂದ ಸಿಜೆಐ ತೃಪ್ತರಾಗಲಿಲ್ಲ.
ಈ ವೇಳೆ ಮಧ್ಯ ಪ್ರವೇಶಿಸಿದ ಚಂಡೀಗಢ ಆಡಳಿತದ ಪರವಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸಾಧ್ಯವಾದರೆ ಹಿಂದಿಯಲ್ಲಿ ಮಾತನಾಡಿ ಎಂದು ಸೂಚಿಸಿದರು. ಬಳಿಕ ಮತದಾನ ಪ್ರಕ್ರಿಯೆ ವೇಳೆ ನಡೆದ ಘಟನೆಯನ್ನು ಚುನಾವಣಾಧಿಕಾರಿ ಅನಿಲ್ ಮಾಸಿಹ್ ವಿವರಿಸಿದರು.
“ನಿಮ್ಮ ಕೆಲಸವೇನು? ಕೇವಲ ಸಹಿ ಹಾಕಿ, ಲೆಕ್ಕ ಹಾಕುವುದು ಮಾತ್ರವಲ್ಲವೇ? ನಾವು ಎಲ್ಲ ವಿಡಿಯೋವನ್ನು ಕೂಲಂಕುಷವಾಗಿ ನೋಡಿದ್ದೇವೆ. ಅವರು ಮಾರ್ಕ್ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಸರ್ಕಾರದ ಪರ ವಾದಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೇಳುತ್ತಿರುವ ಸುಮಾರು 4 ನಿಮಿಷದ ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.
Before Rigging, Anil Masih checked every Ballot Paper. In this count, it’s clearly visible that vote casted on top has 20 votes.
No Ballot Papers are Torn or Marked.
If BJP has mischievously torn or marked them after the election, it should be disregarded.@kapsology @Arun2981 pic.twitter.com/HG9ceXQhgg
— Dr Ranjan (@AAPforNewIndia) February 19, 2024
ಚಂಡೀಗಢ ಮಹಾನಗರ ಪಾಲಿಕೆಯ ಮೇಯರ್ ಆಗಿ ಬಿಜೆಪಿ ಅಭ್ಯರ್ಥಿಯನ್ನು ಘೋಷಿಸಿದ ಚುನಾವಣಾ ಫಲಿತಾಂಶಕ್ಕೆ ತಕ್ಷಣ ತಡೆ ನೀಡಲು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನಿರಾಕರಿಸಿದ್ದನ್ನು ಪ್ರಶ್ನಿಸಿ ಆಮ್ ಆದ್ಮಿ ಪಕ್ಷದ ಪಾಲಿಕೆ ಸದಸ್ಯ ಕುಲದೀಪ್ ಕುಮಾರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಅರ್ಜಿಯನ್ನು ಸಿಜೆಐ ಡಿವೈ ಚಂದ್ರಚೂಡ್ ಅವರಲ್ಲದೆ ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಕೂಡ ವಿಚಾರಣೆ ನಡೆಸುತ್ತಿದೆ.
ಮರು ಮತ ಎಣಿಕೆ ಮಾಡುವಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ
ಚುನಾವಣಾಧಿಕಾರಿ ಅನಿಲ್ ಮಾಸಿಹ್ ತಪ್ಪೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ, ಹೊಸದಾಗಿ ಚುನಾವಣೆಯ ನಡೆಸುವ ಬದಲು, ಮರು ಮತಎಣಿಕೆ ಮಾಡುವಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.
ಇದನ್ನು ಓದಿದ್ದೀರಾ? ಚಂಡೀಗಢ ಮೇಯರ್ ಚುನಾವಣೆ: ಮರು ಮತ ಎಣಿಕೆ ಮಾಡುವಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ
ಚಂಡೀಗಢ ಮೇಯರ್ ಚುನಾವಣೆಯ ಫಲಿತಾಂಶದ ಬಗ್ಗೆ ಹೊಸದಾಗಿ ಚುನಾವಣೆಗೆ ಆದೇಶಿಸುವ ಬದಲು ಪ್ರಸ್ತುತ ಬ್ಯಾಲೆಟ್ ಪೇಪರ್ಗಳ ಆಧಾರದ ಮೇಲೆ ಘೋಷಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಸೋಮವಾರ ತಿಳಿಸಿದ್ದು, ಮತ ಪತ್ರಗಳನ್ನು ನಾಳೆ ಬೆಳಗ್ಗೆ 10.30ಕ್ಕೆ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ ಎಂದು ‘ಲೈವ್ ಲಾ’ ವರದಿ ಮಾಡಿದೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅನಿಲ್ ಮಾಸಿಹ್ ಅವರಿಗೆ ಚಂಡೀಗಢದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಕೊಟ್ಟರೂ ಕೊಡಬಹುದು !?