ಭಾರತೀಯ ನೌಕಾದಳ ಹಾಗೂ ಗುಜರಾತ್ ಭಯೋತ್ಪಾದಕ ವಿರೋಧಿ ದಳದ ನೆರವಿನೊಂದಿಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರಿ(ಎನ್‌ಸಿಬಿ) ಗುಜರಾತ್‌ನ ಕರಾವಳಿಯಲ್ಲಿ ಶಂಕಿತ ಪಾಕಿಸ್ತಾನಿ ಸಿಬ್ಬಂದಿಯಿಂದ 3300 ಕೆಜಿ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.
ಉಪಖಂಡದಲ್ಲಿ ಎನ್‌ಸಿಬಿಯಿಂದ ವಶಪಡಿಸಿಕೊಳ್ಳಲಾದ ಅತಿ ದೊಡ್ಡ ದಾಳಿ ಇದಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಮಾದಕವಸ್ತುಗಳ ಬೆಲೆ ಅಂದಾಜು 2 ಸಾವಿರ ಕೋಟಿ ರೂ.ಗೂ ಹೆಚ್ಚಿನ ಮೊತ್ತವನ್ನು ಹೊಂದಿದೆ.
3,089 ಕೆಜಿ ಗಾಂಜಾ, 158 ಕೆಜಿ ಮೆಥಾಂಫೆಟಮೈನ್ ಮತ್ತು 25 ಕೆಜಿ ಮಾರ್ಫಿನ್ ಸೇರಿದಂತೆ ವಶಪಡಿಸಿಕೊಳ್ಳಲಾದ ಮಾದಕವಸ್ತುವಿನ ಸಂಗ್ರಹದಲ್ಲಿ ಪಾಕಿಸ್ತಾನದಿಂದ ಉತ್ಪಾದಿಸಲಾಗಿದೆ ಎಂದು ಬರೆಯಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ಪ್ರಸಾದ ಬೇಡ ಬಸ್ ಬೇಕು’ ಎಂದ ಬಾಲಕಿಯ ಮನವಿಯಲ್ಲಿದೆ ಮಹತ್ವದ ಸಂದೇಶ
ಭಾರತೀಯ ಜಲಗಡಿಗೆ ಪ್ರವೇಶಿಸಿ ಎರಡು ದಿನ ಅನುಮಾನಸ್ಪದಕವಾಗಿ ನಿಂತಿದ್ದ ದೋಣಿಯ ಬಗ್ಗೆ ಕಣ್ಗಾವಲು ವಿಮಾನಯಾನ, ಭಾರತೀಯ ನೌಕಾದಳ ನಿಯೋಜಿಸಿದ ಹಡಗು ನೀಡಿದ ಆಧಾರದ ಮೇಲೆ ದಾಳಿ ಮಾಡಲಾಗಿದೆ.
ದೋಣಿಯನ್ನು ತನಿಖೆಗೊಳಪಡಿಸಿದಾಗ ಅಧಿಕಾರಿಗಳು ಬೃಹತ್ ಮೊತ್ತದ ಮಾದಕವಸ್ತುವನ್ನು ವಶಪಡಿಸಿಕೊಂಡು, ಕೆಲವು ಸಿಬ್ಬಂದಿಯನ್ನು ಬಂಧಿಸಿದ್ದಾರೆ. ದೋಣಿಯನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರು ಹಾಗೂ ಮಾದಕ ವಸ್ತುಗಳನ್ನು ಗುಜರಾತ್‌ನ ಪೋರ್‌ಬಂದರ್‌ಗೆ ಸ್ಥಳಾಂತರಿಸಲಾಗಿದೆ.
ಶಂಕಿತ ಪಾಕಿಸ್ತಾನಿ ಸಿಬ್ಬಂದಿಯ ಮೂಲ ಹಾಗೂ ಮಾದಕ ವಸ್ತು ತಲುಪುವ ಸ್ಥಳದ ಬಗ್ಗೆ ಮಾಹಿತಿ ಸಂಗ್ರಹಿಸಲು ತನಿಖೆ ನಡೆಸಲಾಗುತ್ತಿದೆ.
