1 ಗಂಟೆ ಕೈಕೊಟ್ಟ ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್ ಸರ್ವರ್: 3 ಬಿಲಿಯನ್‌ ಡಾಲರ್‌ ಕಳೆದುಕೊಂಡ ಝುಕರ್ ಬರ್ಗ್‌!

Date:

Advertisements

ಮಾ.5ರಂದು ಭಾರತ ಸೇರಿದಂತೆ ಜಗತ್ತಿನಾದ್ಯಂತ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಸರ್ವರ್ ಡೌನ್ ಆಗಿ, ಬಳಕೆದಾರರಿಗೆ ಕೈಕೊಟ್ಟ ಪರಿಣಾಮ ಕೇವಲ ಒಂದು ಗಂಟೆಯಲ್ಲಿ ಮೆಟಾ ಸಂಸ್ಥೆಯ ಮಾಲೀಕ ಮಾರ್ಕ್ ಝುಕರ್‌ಬರ್ಗ್ ಅಂದಾಜು ಸುಮಾರು 3 ಬಿಲಿಯನ್‌ ಡಾಲರ್‌ ಸಂಪತ್ತು ಕಳೆದುಕೊಂಡು, ನಷ್ಟ ಅನುಭವಿಸಿರುವುದಾಗಿ ವರದಿಯಾಗಿದೆ.

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ನಿನ್ನೆಯ ಬೆಳವಣಿಗೆಯಿಂದಾಗಿ ಝುಕರ್‌ಬರ್ಗ್‌ ಮಾಲೀಕತ್ವದ ಸಂಸ್ಥೆಗೆ ತೀವ್ರ ಆರ್ಥಿಕ ಹಿನ್ನಡೆಯಾಗಿದ್ದು, ಕೇವಲ ಒಂದು ದಿನದಲ್ಲಿ ಸುಮಾರು ಮೂರು ಬಿಲಿಯನ್ ಕಳೆದುಕೊಂಡಿದ್ದಾರೆ ಎಂದು ತಿಳಿಸಿದೆ. ಅಲ್ಲದೇ, ಝುಕರ್ ಬರ್ಗ್‌ ಅವರ ಒಟ್ಟು ಸಂಪತ್ತು ಒಂದು ದಿನದಲ್ಲಿ 2.79 ಬಿಲಿಯನ್‌ ಡಾಲರ್‌ ಇಳಿಕೆಯಾಗಿ 176 ಬಿಲಿಯನ್‌ ಡಾಲರ್‌ಗೆ ತಲುಪಿದೆ ಎಂದು ವರದಿ ತಿಳಿಸಿದೆ.

ಮೆಟಾ ಮಾಲೀಕತ್ವದಲ್ಲಿರುವ ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಮೆಸೆಂಜರ್, ಇನ್‌ಸ್ಟಾಗ್ರಾಮ್‌ ಮತ್ತು ಥ್ರೆಡ್‌ ಎಲ್ಲವೂ ಮಂಗಳವಾರ ಏಕಕಾಲದಲ್ಲಿ ನಿಲುಗಡೆಯಾಗಿತ್ತು. ಇದರಿಂದಾಗಿ ಶತಕೋಟಿ ಬಳಕೆದಾರರ ಖಾತೆಗಳು ಲಾಗೌಟ್ ಆಗಿದ್ದವು.

Advertisements

ಏಕಾಏಕಿ ತನ್ನಷ್ಟಕ್ಕೆ ತಾನೇ ಲಾಗೌಟ್ ಆಗಿದ್ದರಿಂದ ಬಳಕೆದಾರರು ಕಂಗಾಲಾಗಿದ್ದರು. ಸರ್ವರ್ ಡೌನ್ ಆದ ಬಳಿಕ ಎಕ್ಸ್(ಟ್ವಿಟ್ಟರ್‌)ಗೆ ನುಗ್ಗಿದ್ದ ಬಳಕೆದಾರರು, ದೂರು ಸಲ್ಲಿಸಲು ಮೆಟಾವನ್ನು ಟ್ಯಾಗ್ ಮಾಡಿದ್ದರು. ಬಳಿಕ ಒಂದು ಗಂಟೆಗಳ ಬಳಿಕ ಸರಿಪಡಿಸಲಾಗಿತ್ತು.

ಇದನ್ನು ಓದಿದ್ದೀರಾ? ಸರ್ವರ್ ಡೌನ್ | ಏಕಕಾಲದಲ್ಲಿ ಜಗತ್ತಿನಾದ್ಯಂತ ಬಳಕೆದಾರರಿಗೆ ಕೈಕೊಟ್ಟ ಫೇಸ್‌ಬುಕ್, ಇನ್‌ಸ್ಟಾಗ್ರಾಮ್!

ಗಣನೀಯ 3 ಬಿಲಿಯನ್ ಆರ್ಥಿಕ ಕುಸಿತದ ಹೊರತಾಗಿಯೂ, ಝುಕರ್‌ಬರ್ಗ್ ಇನ್ನೂ ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿ ತಮ್ಮ ಸ್ಥಾನವನ್ನು ಹಿಡಿದಿಟ್ಟುಕೊಂಡಿರುವುದಾಗಿ ವರದಿ ತಿಳಿಸಿದೆ. ಮಂಗಳವಾರದ ಟ್ರೇಡಿಂಗ್‌ ಅವಧಿ ವಾಲ್‌ಸ್ಟ್ರೀಟ್‌ನಲ್ಲಿ ಅಂತ್ಯವಾಗುವ ವೇಳೆ ಮೆಟಾ ಷೇರು ಬೆಲೆ 490.22 ಆಗಿತ್ತು.

ಸರ್ವರ್ ಡೌನ್‌ ಆಗಲು ಕಾರಣ ಏನು?
ವಾಟ್ಸಪ್ ಬುಸ್ಯಿನೆಸ್‌ ಅಪ್ಲಿಕೇಶನ್‌ನ ಡ್ಯಾಶ್‌ಬೋರ್ಡ್ ಅನ್ನು ಅಭಿವೃದ್ದಿ ಪಡಿಸುವ ಉದ್ದೇಶದಿಂದ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ (API)ನಿಂದಾಗಿ ಈ ಸಮಸ್ಯೆ ಉಂಟಾಗಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತೀಯ ಮೂಲದ ಸಬೀಹ್ ಖಾನ್ ಆ್ಯಪಲ್ ಕಂಪನಿಯ ಸಿಒಒ ಆಗಿ ನೇಮಕ

ದುಬಾರಿ ಬೆಲೆಯ ಮೊಬೈಲ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದ ಆ್ಯಪಲ್ ಕಂಪನಿಯು ತನ್ನ...

ಸ್ಪೇಸ್‌ ಎಕ್ಸ್‌ ಡ್ರ್ಯಾಗನ್‌ ನೌಕೆ ಡಾಕಿಂಗ್‌ ಯಶಸ್ವಿ: ಬಾಹ್ಯಾಕಾಶ ನಿಲ್ದಾಣ ತಲುಪಿದ ಗಗನಯಾತ್ರಿಗಳು

ಆಕ್ಸಿಯಮ್-4 ಕಾರ್ಯಾಚರಣೆಯ ಭಾಗವಾಗಿರುವ ಭಾರತದ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳಿದ್ದ...

ಸೊಳ್ಳೆ ಗಾತ್ರದ ಮೈಕ್ರೋ ಡ್ರೋನ್‌ಗಳನ್ನು ತಯಾರಿಸಿದ ಚೀನಾ

ಸೊಳ್ಳೆ ಗಾತ್ರದ ಮೈಕ್ರೋ ಡ್ರೋನ್‌ʼಗಳನ್ನು ಚೀನಾದ ವಿಜ್ಞಾನಿಗಳು ತಯಾರಿಸಿದ್ದಾರೆ. ಸೊಳ್ಳೆ ಗಾತ್ರದ...

ಬೆಂಗಳೂರು | ಡಿಜಿಟಲ್ ಅರೆಸ್ಟ್ ಮೂಲಕ ವೃದ್ಧ ದಂಪತಿಗೆ 4.79 ಕೋಟಿ ರೂ. ವಂಚನೆ

ವೃದ್ಧ ದಂಪತಿಗೆ ಡಿಜಿಟಲ್ ಅರೆಸ್ಟ್ ಮೂಲಕ ಸುಮಾರು 4.79 ಕೋಟಿ ರೂಪಾಯಿ...

Download Eedina App Android / iOS

X