ಪೇಟಿಎಂ ನಿಷೇಧದ ನಂತರ ಗೂಗಲ್ ಪೇ, ಫೋನ್ ಪೇ ಗ್ರಾಹಕರ ಸಂಖ್ಯೆ ಹೆಚ್ಚಳ

Date:

ಭಾರತೀಯ ರಿಸರ್ವ್ ಬ್ಯಾಂಕ್ ಅಕ್ರಮ ಹಣ ವರ್ಗಾವಣೆ ಸೇರಿದಂತೆ ಹಲವು ನಿಬಂಧನೆಗಳನ್ನು ನಿಯಮಗಳನ್ನು ಉಲ್ಲಂಘಿಸಿದ ನಂತರ ಆನ್‌ಲೈನ್‌ ಪಾವತಿ ತಾಣ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಗೆ ನಿಷೇಧವೇರಿದೆ. ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ಮಾರ್ಚ್‌ 15ರ ನಂತರ ಸಂಪೂರ್ಣವಾಗಿ ಸ್ತಬ್ಧಗೊಳ್ಳಲಿದೆ.

- Advertisement -

ಆರ್‌ಬಿಐನಿಂದ ನಿಷೇಧಗೊಂಡ ಪೇಟಿಎಂ ಸಂಸ್ಥೆ ಆರ್ಥಿಕ ವ್ಯವಹಾರ ಮಾತ್ರವಲ್ಲ ಗ್ರಾಹಕರ ಚಂದಾದಾರಿಕೆಯಿಂದಲೂ ನಷ್ಟ ಉಂಟಾಗಿದೆ. ಭಾರತದ ಪ್ರಮುಖ ಆನ್‌ಲೈನ್‌ ತಾಣಗಳಾದ ಗೂಗಲ್‌ ಪೇ ಹಾಗೂ ಫೋನ್‌ ಪೇ ಸಂಸ್ಥೆಗಳು ತ್ವರಿತವಾಗಿ ಗ್ರಾಹಕರ ಹಣಕಾಸು ವಹಿವಾಟಿನಲ್ಲಿ ಹೆಚ್ಚಳ ಕಂಡಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಕಳೆದ ಜನವರಿಯಿಂದ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ಹಣಕಾಸಿನ ವಹಿವಾಟು ಶೇ.14 ರಷ್ಟು ಕುಸಿತ ಕಂಡಿದ್ದು, 13 ಸಾವಿರ ಕೋಟಿ ರೂ.ಗೂ ಹೆಚ್ಚು ನಷ್ಟವುಂಟಾಗಿದೆ. ಭಾರತದ ರಾಷ್ಟ್ರೀಯ ಪಾವತಿಗಳ ಮಂಡಳಿ (ಎನ್‌ಸಿಪಿಐ) ವೆಬ್‌ಸೈಟ್‌ನಿಂದ ಈ ಮಾಹಿತಿ ಹೊರ ಬಿದ್ದಿದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ವಿದೇಶಿ ಪ್ರವಾಸಿ ಮೇಲೆ ಅತ್ಯಾಚಾರ; ʼಅತಿಥಿ ದೇವೋಭವʼ ಎಂದ ದೇಶದಲ್ಲಿ ಇದೆಂಥಾ ಕ್ರೌರ್ಯ!

ವಾಲ್‌ಮಾರ್ಟ್‌ ಮಾಲೀಕತ್ವದ ಫೋನ್‌ಪೇ ಹಾಗೂ ಗೂಗಲ್‌ ಮಾಲಿಕತ್ವದ ಜಿಪೇ ಎರಡು ಕಂಪನಿಗಳು ತಮ್ಮ ಪಾವತಿ ಮೌಲ್ಯಗಳಲ್ಲಿ ಹೆಚ್ಚಳ ಕಂಡಿದ್ದು, ಪೇಟಿಎಂ ಮೂರನೇ ಸ್ಥಾನಕ್ಕೆ ಜಿಗಿದಿದೆ.

ಆರ್‌ಬಿಐ ವಿಧಿಸಿದ ನಿರ್ಬಂಧದಿಂದಾಗಿ ಆನ್‌ಲೈನ್‌ ಪಾವತಿಗಾಗಿ ಪೇಟಿಎಂ ಬಳಸಲು ಗ್ರಾಹಕರು  ನಿರಾಕರಿಸುತ್ತಿದ್ದಾರೆ.

ಎನ್‌ಸಿಪಿಐ ಅಂಕಿಅಂಶಗಳ ಪ್ರಕಾರ ಫೋನ್‌ಪೇ ಶೇ.7ರಷ್ಟು ಹಾಗೂ ಜಿಪೇ ಶೇ.6ರಷ್ಟು ವಹಿವಾಟುಗಳು ಏರಿಕೆಯಾಗಿವೆ. ಆದರೆ ಈಗಲೂ ಸಹ ತನ್ನ ಪಾವತಿಗಳ ಕುಸಿತದ ಬಗ್ಗೆ ಪೇಟಿಎಂ ಸಂಸ್ಥೆ ನಿರಾಕರಿಸುತ್ತಿದೆ.

ಆರ್‌ಬಿಐ ಜನವರಿ 31ರಂದು ಪೇಟಿಎಂ ಪೇಮೆಂಟ್‌ ಬ್ಯಾಂಕ್‌ ಮೇಲೆ ಕ್ರಮ ಕೈಗೊಂಡ ನಂತರ ಶೇರುಗಳು ಸಹ ಶೇ.50 ರಷ್ಟು ಕುಸಿದಿವೆ. ಘಟನೆಯ ಹೊಣೆ ಹೊತ್ತು ಪೇಟಿಂಎಂನ ಮಾತೃ ಸಂಸ್ಥೆ ಒನ್‌ ಇಂಡಿಯಾ97 ಕಮ್ಯೂನಿಕೇಷನ್ಸ್‌ ಲಿಮಿಟೆಡ್‌ನ ಸಂಸ್ಥಾಪಕ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒರಾಕಲ್‌ಗೆ ಎಐ ಹೊಡೆತ: ಕೆಲಸ‌ ಕಳೆದುಕೊಂಡ ಸಾವಿರಾರು ಉದ್ಯೋಗಿಗಳು

ಜಾಗತಿಕ ತಂತ್ರಜ್ಞಾನ ಮತ್ತು ಸಾಫ್ಟ್‌ವೇರ್ ದೈತ್ಯ 'ಒರಾಕಲ್' ಸಂಸ್ಥೆಯು ತನ್ನ ಜಾಗತಿಕ...

ಎಐ ಸ್ಮಾರ್ಟ್ ಗ್ಲಾಸ್‌ಗಳ ರಹಸ್ಯ ಚಿತ್ರೀಕರಣಕ್ಕೆ ತಡೆ: ಡಿಜಿಟಲ್ ಲೋಕದಲ್ಲಿ ಸದ್ದು ಮಾಡುತ್ತಿದೆ ಹೊಸ ಆ್ಯಪ್

ತಂತ್ರಜ್ಞಾನ ಬೆಳೆದಂತೆ ಖಾಸಗಿತನಕ್ಕೆ ಧಕ್ಕೆಯಾಗುತ್ತಿರುವ ಆತಂಕದ ನಡುವೆಯೇ, ರಹಸ್ಯವಾಗಿ ವಿಡಿಯೊ ಅಥವಾ...

ಎಐ ವೇಗಕ್ಕೆ ತಡೆ ನೀಡಲು ಜಾಗತಿಕ ಕೂಗು: ಭುಗಿಲೆದ್ದ ಅಮೆರಿಕ–ಚೀನಾ ತಾಂತ್ರಿಕ ಜಟಾಪಟಿ

ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಅತಿವೇಗದ ಓಟಕ್ಕೆ ಕಡಿವಾಣ ಹಾಕಿ, ಸುರಕ್ಷತೆಗೆ...

ಐಫೋನ್ 18 ಪ್ರೊ ಸರಣಿ ಬಿಡುಗಡೆ: ಭಾರತದಲ್ಲಿ ಹಳೆಯ ಐಫೋನ್ ಮಾದರಿಗಳ ಬೆಲೆ ಭಾರಿ ಏರಿಕೆ

ಆ್ಯಪಲ್ ಕಂಪನಿಯು ತನ್ನ ನೂತನ 'ಐಫೋನ್ 18 ಪ್ರೊ' ಸರಣಿಯನ್ನು ಮಾರುಕಟ್ಟೆಗೆ...