1 ಗಂಟೆ ಕೈಕೊಟ್ಟ ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್ ಸರ್ವರ್: 3 ಬಿಲಿಯನ್‌ ಡಾಲರ್‌ ಕಳೆದುಕೊಂಡ ಝುಕರ್ ಬರ್ಗ್‌!

Date:

ಮಾ.5ರಂದು ಭಾರತ ಸೇರಿದಂತೆ ಜಗತ್ತಿನಾದ್ಯಂತ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಸರ್ವರ್ ಡೌನ್ ಆಗಿ, ಬಳಕೆದಾರರಿಗೆ ಕೈಕೊಟ್ಟ ಪರಿಣಾಮ ಕೇವಲ ಒಂದು ಗಂಟೆಯಲ್ಲಿ ಮೆಟಾ ಸಂಸ್ಥೆಯ ಮಾಲೀಕ ಮಾರ್ಕ್ ಝುಕರ್‌ಬರ್ಗ್ ಅಂದಾಜು ಸುಮಾರು 3 ಬಿಲಿಯನ್‌ ಡಾಲರ್‌ ಸಂಪತ್ತು ಕಳೆದುಕೊಂಡು, ನಷ್ಟ ಅನುಭವಿಸಿರುವುದಾಗಿ ವರದಿಯಾಗಿದೆ.

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ನಿನ್ನೆಯ ಬೆಳವಣಿಗೆಯಿಂದಾಗಿ ಝುಕರ್‌ಬರ್ಗ್‌ ಮಾಲೀಕತ್ವದ ಸಂಸ್ಥೆಗೆ ತೀವ್ರ ಆರ್ಥಿಕ ಹಿನ್ನಡೆಯಾಗಿದ್ದು, ಕೇವಲ ಒಂದು ದಿನದಲ್ಲಿ ಸುಮಾರು ಮೂರು ಬಿಲಿಯನ್ ಕಳೆದುಕೊಂಡಿದ್ದಾರೆ ಎಂದು ತಿಳಿಸಿದೆ. ಅಲ್ಲದೇ, ಝುಕರ್ ಬರ್ಗ್‌ ಅವರ ಒಟ್ಟು ಸಂಪತ್ತು ಒಂದು ದಿನದಲ್ಲಿ 2.79 ಬಿಲಿಯನ್‌ ಡಾಲರ್‌ ಇಳಿಕೆಯಾಗಿ 176 ಬಿಲಿಯನ್‌ ಡಾಲರ್‌ಗೆ ತಲುಪಿದೆ ಎಂದು ವರದಿ ತಿಳಿಸಿದೆ.

ಮೆಟಾ ಮಾಲೀಕತ್ವದಲ್ಲಿರುವ ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಮೆಸೆಂಜರ್, ಇನ್‌ಸ್ಟಾಗ್ರಾಮ್‌ ಮತ್ತು ಥ್ರೆಡ್‌ ಎಲ್ಲವೂ ಮಂಗಳವಾರ ಏಕಕಾಲದಲ್ಲಿ ನಿಲುಗಡೆಯಾಗಿತ್ತು. ಇದರಿಂದಾಗಿ ಶತಕೋಟಿ ಬಳಕೆದಾರರ ಖಾತೆಗಳು ಲಾಗೌಟ್ ಆಗಿದ್ದವು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಏಕಾಏಕಿ ತನ್ನಷ್ಟಕ್ಕೆ ತಾನೇ ಲಾಗೌಟ್ ಆಗಿದ್ದರಿಂದ ಬಳಕೆದಾರರು ಕಂಗಾಲಾಗಿದ್ದರು. ಸರ್ವರ್ ಡೌನ್ ಆದ ಬಳಿಕ ಎಕ್ಸ್(ಟ್ವಿಟ್ಟರ್‌)ಗೆ ನುಗ್ಗಿದ್ದ ಬಳಕೆದಾರರು, ದೂರು ಸಲ್ಲಿಸಲು ಮೆಟಾವನ್ನು ಟ್ಯಾಗ್ ಮಾಡಿದ್ದರು. ಬಳಿಕ ಒಂದು ಗಂಟೆಗಳ ಬಳಿಕ ಸರಿಪಡಿಸಲಾಗಿತ್ತು.

ಇದನ್ನು ಓದಿದ್ದೀರಾ? ಸರ್ವರ್ ಡೌನ್ | ಏಕಕಾಲದಲ್ಲಿ ಜಗತ್ತಿನಾದ್ಯಂತ ಬಳಕೆದಾರರಿಗೆ ಕೈಕೊಟ್ಟ ಫೇಸ್‌ಬುಕ್, ಇನ್‌ಸ್ಟಾಗ್ರಾಮ್!

ಗಣನೀಯ 3 ಬಿಲಿಯನ್ ಆರ್ಥಿಕ ಕುಸಿತದ ಹೊರತಾಗಿಯೂ, ಝುಕರ್‌ಬರ್ಗ್ ಇನ್ನೂ ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿ ತಮ್ಮ ಸ್ಥಾನವನ್ನು ಹಿಡಿದಿಟ್ಟುಕೊಂಡಿರುವುದಾಗಿ ವರದಿ ತಿಳಿಸಿದೆ. ಮಂಗಳವಾರದ ಟ್ರೇಡಿಂಗ್‌ ಅವಧಿ ವಾಲ್‌ಸ್ಟ್ರೀಟ್‌ನಲ್ಲಿ ಅಂತ್ಯವಾಗುವ ವೇಳೆ ಮೆಟಾ ಷೇರು ಬೆಲೆ 490.22 ಆಗಿತ್ತು.

ಸರ್ವರ್ ಡೌನ್‌ ಆಗಲು ಕಾರಣ ಏನು?
ವಾಟ್ಸಪ್ ಬುಸ್ಯಿನೆಸ್‌ ಅಪ್ಲಿಕೇಶನ್‌ನ ಡ್ಯಾಶ್‌ಬೋರ್ಡ್ ಅನ್ನು ಅಭಿವೃದ್ದಿ ಪಡಿಸುವ ಉದ್ದೇಶದಿಂದ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ (API)ನಿಂದಾಗಿ ಈ ಸಮಸ್ಯೆ ಉಂಟಾಗಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪೇಟಿಎಂ ನಿಷೇಧದ ನಂತರ ಗೂಗಲ್ ಪೇ, ಫೋನ್ ಪೇ ಗ್ರಾಹಕರ ಸಂಖ್ಯೆ ಹೆಚ್ಚಳ

ಭಾರತೀಯ ರಿಸರ್ವ್ ಬ್ಯಾಂಕ್ ಅಕ್ರಮ ಹಣ ವರ್ಗಾವಣೆ ಸೇರಿದಂತೆ ಹಲವು ನಿಬಂಧನೆಗಳನ್ನು...

ಸರ್ವರ್ ಡೌನ್ | ಏಕಕಾಲದಲ್ಲಿ ಜಗತ್ತಿನಾದ್ಯಂತ ಬಳಕೆದಾರರಿಗೆ ಕೈಕೊಟ್ಟ ಫೇಸ್‌ಬುಕ್, ಇನ್‌ಸ್ಟಾಗ್ರಾಮ್!

ಜಗತಿನಾದ್ಯಂತ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಸರ್ವರ್ ಡೌನ್ ಆಗಿದ್ದು, ಲಾಗಿನ್ ಮಾಡಲಾಗದೇ ಬಳಕೆದಾರರು...

ಶುಲ್ಕ ಪಾವತಿಸಿಲ್ಲವೆಂದು ಪ್ಲೇ ಸ್ಟೋರ್‌ನಿಂದ ವೈವಾಹಿಕ ಆಪ್‌ಗಳನ್ನು ರದ್ದುಗೊಳಿಸಿದ ಗೂಗಲ್

ಸೇವಾ ಶುಲ್ಕ ಪಾವತಿ ವಿವಾದಗಳ ಹಿನ್ನೆಲೆಯಲ್ಲಿ ಜನಪ್ರಿಯ ಆನ್‌ಲೈನ್‌ ವೈವಾಹಿಕ ಆಪ್...

ಮಧ್ಯಪ್ರದೇಶ: ಫೇಸ್‌ಬುಕ್‌ನಲ್ಲಿ ಹೋಮ್ ಡೆಲಿವರಿಯೊಂದಿಗೆ ಗನ್ ಮಾರಾಟ ಜಾಹಿರಾತು

ಕಂಟ್ರಿಮೇಡ್ ಪಿಸ್ತೂಲ್‌ಗಳನ್ನು ಫೇಸ್‌ಬುಕ್‌ ಪುಟದಲ್ಲಿ ಚಿತ್ರಸಹಿತ ಜಾಹಿರಾತು ನೀಡಿದ್ದ ಆರೋಪಕ್ಕಾಗಿ ಮಧ್ಯಪ್ರದೇಶದ...