ಏಪ್ರಿಲ್ 19ರಂದು ನಡೆಯಲಿರುವ ಮೊದಲ ಹಂತದ ಲೋಕಸಭೆ ಚುನಾವಣೆಗೆ ಬಿಜೆಪಿ ಮೂರನೇ ಪಟ್ಟಿ ಬಿಡುಗಡೆ ಮಾಡಿದೆ. ಬಿಡುಗಡೆಗೊಂಡಿರುವ 9 ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ ತಮಿಳುನಾಡನ್ನು ಮಾತ್ರ ಒಳಗೊಂಡಿದೆ.
ಟಿಕೆಟ್ ಪಡೆದವರಲ್ಲಿ ತೆಲಂಗಾಣದ ಮಾಜಿ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಹಾಗೂ ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ ಸೇರಿದ್ದಾರೆ.
ಅಣ್ಣಾಮಲೈ ಕೊಯಂಬತ್ತೂರಿನಿಂದ ಸ್ಪರ್ಧಿಸಿದರೆ, ತಮಿಳಿಸೈ ಸೌಂದರರಾಜನ್ ದಕ್ಷಿಣ ಚೆನ್ನೈನಿಂದ ಸ್ಪರ್ಧಿಸಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಎಲ್ಲೆಲ್ಲೂ ಪುರುಷರದೇ ಪಾರುಪತ್ಯ; ಮಹಿಳಾ ಪ್ರಾತಿನಿಧ್ಯ ಕನ್ನಡಿಯೊಳಗಿನ ಗಂಟು
ಬಿಜೆಪಿಯು ತಮಿಳುನಾಡಿನ 39 ಕ್ಷೇತ್ರಗಳಲ್ಲಿ 20ರಲ್ಲಿ ಸ್ಪರ್ಧಿಸಲು ಉದ್ದೇಶಿಸಿದ್ದು, ಸದ್ಯ 9 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.
ಮೊದಲ ಹಂತದ ಚುನಾವಣೆ ಏ.19ರಂದು ನಡೆಯಲಿದ್ದು, ತಮಿಳುನಾಡಿನ ಎಲ್ಲ 39 ಸ್ಥಾನಗಳಿಗೂ ಅಂದೇ ಚುನಾವಣೆ ನಡೆಯಲಿದೆ.
The Central Election Committee of the Bharatiya Janata Party has decided the following names for the ensuing General Elections to the Lok Sabha. Here is the third list. pic.twitter.com/5beaatODJh
— BJP (@BJP4India) March 21, 2024
