ಚೆನ್ನೈಯ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ಇಂದು ನಡೆದ ಐಪಿಎಲ್ 2024ರ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ ತಂಡ ಆರು ವಿಕೆಟ್ಗಳ ಭರ್ಜರಿ ಗೆಲುವಿನೊಂದಿಗೆ ಶುಭಾರಂಭಗೈದಿದೆ.
The Chepauk record: CSK 8 – 1 RCB 💪
Ruturaj Gaikwad begins his captaincy with a W in the #IPL2024 season opener ✨ https://t.co/pzTG8Pgj3j #CSKvRCB pic.twitter.com/OsuOaZHCm3
— ESPNcricinfo (@ESPNcricinfo) March 22, 2024
ಉದ್ಘಾಟನಾ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಆರ್ಸಿಬಿ, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಮಧ್ಯಮ ಕ್ರಮಾಂಕದಲ್ಲಿ ಕುಸಿತ ಕಂಡರೂ ಅನುಜ್ ರಾವತ್-ದಿನೇಶ್ ಕಾರ್ತಿಕ್ ಜೋಡಿ ಉತ್ತಮ ಜೊತೆಯಾಟದ ಪರಿಣಾಮ 174 ರನ್ಗಳ ಸವಾಲಿನ ಗುರಿ ನೀಡಿತ್ತು.
ಈ ಗುರಿಯನ್ನು ಬೆನ್ನತ್ತಿದ ನೂತನ ನಾಯಕ ರುತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ ತಂಡ, 18.4 ಓವರ್ನಲ್ಲಿ 4 ವಿಕೆಟ್ ಕಳೆದುಕೊಂಡು ಗುರಿಯನ್ನು ಮುಟ್ಟುವಲ್ಲಿ ಸಫಲವಾಯಿತು.
Talk about living upto the Impact Player tag! 👏 👏
That was one fine knock from Shivam Dube in the chase! 👌 👌
Scorecard ▶️ https://t.co/4j6FaLF15Y#TATAIPL | #CSKvRCB | @IamShivamDube | @ChennaiIPL pic.twitter.com/207zz2Jz8l
— IndianPremierLeague (@IPL) March 22, 2024
ಚೆನ್ನೈ ಪರ ಬ್ಯಾಟಿಂಗ್ನಲ್ಲಿ ರುತುರಾಜ್ ಗಾಯಕ್ವಾಡ್ 15 ರನ್ (15 ಎಸೆತ, 3 ಬೌಂಡರಿ), ರಚಿನ್ ರವೀಂದ್ರ 37(15 ಎಸೆತ, 3 ಬೌಂಡರಿ, 3 ಸಿಕ್ಸ್), ಅಜಿಂಕ್ಯ ರಹಾನೆ 27 ರನ್(19 ಎಸೆತ, 2 ಬೌಂಡರಿ) ಹಾಗೂ ಡ್ಯಾರೆಲ್ ಮಿಚೆಲ್ 22 ರನ್ ಗಳಿಸಿ ಔಟಾದರು. ಉಳಿದಂತೆ ಶಿವಂ ದುಬೆ 34 (28 ಎಸೆತ, 4 ಬೌಂಡರಿ, 1 ಸಿಕ್ಸ್) ಹಾಗೂ ರವೀಂದ್ರ ಜಡೇಜಾ 25 ರನ್ ಗಳಿಸಿ (17 ಎಸೆತ, 1 ಸಿಕ್ಸ್) ಔಟಾಗದೆ ಉಳಿದರು. 18.4 ಓವರ್ಗಳಲ್ಲಿ ನಿಗದಿತ ಗುರಿ ಮುಟ್ಟುವಲ್ಲಿ ಸಫಲರಾದರು.
ಇದನ್ನು ಓದಿದ್ದೀರಾ? T20 ಕ್ರಿಕೆಟ್ | 12 ಸಾವಿರ ರನ್ ಪೂರೈಸಿದ ವಿರಾಟ್ ಕೊಹ್ಲಿ; ಮೊದಲ ಭಾರತೀಯ ಎಂಬ ಹೆಗ್ಗಳಿಕೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಬೌಲಿಂಗ್ನಲ್ಲಿ ಕ್ಯಾಮರೂನ್ ಗ್ರೀನ್ 2 ವಿಕೆಟ್ ಗಳಿಸಿದರೆ, ಯಶ್ ದಯಾಳ್ ಹಾಗೂ ಕರಣ್ ಶರ್ಮಾ ತಲಾ 1 ವಿಕೆಟ್ ಹಂಚಿಕೊಂಡರು.
