17ನೇ ಆವೃತ್ತಿಯ ಐಪಿಎಲ್ನ ಮೊದಲ ಡಬಲ್ ಹೆಡರ್ ಇಂದು ಆರಂಭಗೊಂಡಿದ್ದು, ಒಂದೇ ದಿನ ಎರಡೆರಡು ಪಂದ್ಯಗಳು ನಡೆಯುತ್ತಿವೆ. ದಿನದ ಮೊದಲ ಪಂದ್ಯದಲ್ಲಿ ಮುಲ್ಲನ್‌ಪುರದ ಮಹಾರಾಜ ಯದ್ವೇಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ನಾಯಕ ಶಿಖರ್ ಧವನ್, ಮೊದಲು ಬೌಲಿಂಗ್ ನಡೆಸಲು ನಿರ್ಧರಿಸಿ, ರಿಷಭ್ ಪಂತ್ ತಂಡವನ್ನು ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರೂ ಕೂಡ ಕೊನೆಯ ಓವರ್ ಎಸೆದ ಹರ್ಷಲ್ ಪಟೇಲ್ ಬೌಲಿಂಗ್‌ನಲ್ಲಿ ‘ಇಂಪ್ಯಾಕ್ಟ್ ಪ್ಲೇಯರ್’ ಅಭಿಷೇಕ್ ಪೊರೆಲ್ ಚಚ್ಚಿದ ಭರ್ಜರಿ 25 ರನ್‌ಗಳ ನೆರವಿನಿಂದ ಸವಾಲಿನ ಮೊತ್ತ ನೀಡುವಲ್ಲಿ ಸಫಲವಾಯಿತು. ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್‌ಗಳಲ್ಲಿ 174 ರನ್ ದಾಖಲಿಸಿತು.
ABHISHEK POREL, THE IMPACT PLAYER…!!!! 🔥
31* (10) – 4,6,4,4,6,1 in the final over against Harshal Patel. What a finish provided by the impact player, he took Delhi Capitals to a great total. 👏 pic.twitter.com/0sb4tuv0ww
— Mufaddal Vohra (@mufaddal_vohra) March 23, 2024
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ಆರಂಭಿಕ ಆಘಾತಕ್ಕೆ ಒಳಗಾಯಿತು. ಪಂಜಾಬ್ ಕಿಂಗ್ಸ್ ವೇಗದ ಬೌಲರ್ ಅರ್ಷದೀಪ್ ಸಿಂಗ್ ಮಿಚೆಲ್ ಮಾರ್ಷ್ ಅವರನ್ನು ಔಟ್ ಮಾಡುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮೊದಲ ಹೊಡೆತ ನೀಡಿದರು. ಮಾರ್ಷ್ ಮತ್ತು ಡೇವಿಡ್ ವಾರ್ನರ್ ಡೆಲ್ಲಿಗೆ ವೇಗದ ಆರಂಭ ನೀಡಿದರು ಮತ್ತು ಮೂರು ಓವರ್‌ಗಳಲ್ಲಿ ಸ್ಕೋರ್ ಅನ್ನು 30 ದಾಟಿಸಿದರು. ಆದರೆ ನಾಲ್ಕನೇ ಓವರ್ ಬೌಲ್ ಮಾಡಲು ಬಂದ ಅರ್ಷದೀಪ್ ಆ ಓವರ್ ನ ಎರಡನೇ ಎಸೆತದಲ್ಲಿಯೇ 12 ಎಸೆತಗಳಲ್ಲಿ 20 ರನ್ ಗಳಿಸಿದ್ದ ಮಾರ್ಷ್ ವಿಕೆಟ್ ಉರುಳಿಸಿದರು.
𝐓𝐡𝐞 𝐈𝐦𝐩𝐚𝐜𝐭 👊
Abhishek Porel delivered and provided the late flourish for @DelhiCapitals 👏 👏
Watch the match LIVE on @JioCinema and @StarSportsIndia 💻📱#TATAIPL | #PBKSvDC pic.twitter.com/8awvqO712N
— IndianPremierLeague (@IPL) March 23, 2024
ವಾರ್ನರ್ ಕೂಡ 29 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು. ವಾರ್ನರ್ ಔಟಾದ ಬಳಿಕ ನಾಯಕ ರಿಷಭ್ ಪಂತ್, 15 ತಿಂಗಳ ನಂತರ ಮೈದಾನಕ್ಕೆ ಮರಳಿದರು. ಹೊಡಿಬಡಿ ಆಟದಲ್ಲಿ ಗುರುತಿಸಿಕೊಂಡಿರುವ ಪಂತ್, ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ನಾಯಕ ರಿಷಭ್ ಪಂತ್ 13 ಎಸೆತಗಳಲ್ಲಿ ಎರಡು ಬೌಂಡರಿಗಳ ನೆರವಿನಿಂದ 18 ರನ್ ಗಳಿಸಿ ಔಟಾದರು.
ಹೋಪ್ 25 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳ ನೆರವಿನಿಂದ 33 ರನ್ ಗಳಿಸಿ ಔಟಾದರೆ, ರಿಕಿ ಭುಯಿ ಮೂರು ರನ್ ಗಳಿಸಿ ಔಟಾದರು. ಟ್ರಿಸ್ಟ್ ಸ್ಟಬ್ಸ್ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. 13 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 21 ರನ್ ಬಾರಿಸಿದ್ದ ಅಕ್ಷರ್ ಪಟೇಲ್ ರನೌಟ್ಗೆ ಬಲಿಯಾದರು.
Half-way done! ✅
Onto our batters to take us over the line! 💪🦁#SaddaPunjab #PunjabKings #JazbaHaiPunjabi #TATAIPL2024 #PBKSvDC pic.twitter.com/bgZ21MVjpM
— Punjab Kings (@PunjabKingsIPL) March 23, 2024
ಪಂಜಾಬ್ ಪರ ಕೊನೆಯ ಓವರ್ ಎಸೆದ ಹರ್ಷಲ್ ಪಟೇಲ್ ಬೌಲಿಂಗ್‌ನಲ್ಲಿ ‘ಇಂಪ್ಯಾಕ್ಟ್ ಪ್ಲೇಯರ್’ ಅಭಿಷೇಕ್ ಪೊರೆಲ್ ಚಚ್ಚಿದ 25 ರನ್‌ಗಳ ನೆರವಿನಿಂದ ಸವಾಲಿನ ಮೊತ್ತ ನೀಡುವಲ್ಲಿ ಸಫಲವಾಯಿತು. ಪೊರೆಲ್ 10 ಎಸೆತಗಳಲ್ಲಿ 2 ಸಿಕ್ಸ್, 4 ಬೌಂಡರಿ ಇರುವ 32 ರನ್ ದಾಖಲಿಸಿದ ಪರಿಣಾಮ, ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 174 ರನ್ ದಾಖಲಿಸುವಲ್ಲಿ ಸಫಲವಾಯಿತು.
ಇದನ್ನು ಓದಿದ್ದೀರಾ? ಬಿಜೆಪಿಯವರನ್ನು ದ್ವೇಷಿಸಬೇಡಿ; ಅವರು ನಮ್ಮ ಸಹೋದರರು: ಜೈಲಿನಿಂದ ಕೇಜ್ರಿವಾಲ್ ಸಂದೇಶ
ಪಂಜಾಬ್ ಪರ ಬೌಲಿಂಗ್‌ನಲ್ಲಿ ಅರ್ಷದೀಪ್ ಸಿಂಗ್ ಹಾಗೂ ಹರ್ಷಲ್ ಪಟೇಲ್ 2 ವಿಕೆಟ್ ಪಡೆಯುವಲ್ಲಿ ಸಫಲರಾದರೆ, ರಬಾಡಾ, ಚಾಹರ್ ಹಾಗೂ ಬ್ರಾರ್ ತಲಾ ಒಂದು ವಿಕೆಟ್ ಗಳಿಸಿದರು. ಹರ್ಷಲ್ ಪಟೇಲ್ 2 ವಿಕೆಟ್ ಪಡೆಯುವಲ್ಲಿ ಸಫಲರಾದರೂ ಕೂಡ 47 ರನ್ ನೀಡಿ, ದುಬಾರಿ ಎನಿಸಿಕೊಂಡರು.
