ತುಮಕೂರು | ಸಮೀಕ್ಷೆ ನಡೆಸಿ ಪುನರ್ವಸತಿ ಕಲ್ಪಿಸುವಂತೆ ಸ್ಲಂ ಸಮಿತಿ ಒತ್ತಾಯ

Date:

ಹೊಸದಾಗಿ ಸಮೀಕ್ಷೆ ನಡೆಸಿ ನೖಜ ಫಲಾನುಭವಿಗಳಿಗೆ ಪುನರ್ವಸತಿ ಕಲ್ಪಿಸಲು ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಅಪರ ಜಿಲ್ಲಾಧಿಕಾರಿ ಶಿವಾನಂದ್ ಕರಾಳೆ ಅವರಿಗೆ ಸ್ಲಂ ಸಮಿತಿ ಸಂಚಾಲಕ ಎ ನರಸಿಂಹಮೂರ್ತಿಯವರು ಮನವಿ ಸಲ್ಲಿಸಿ ಚರ್ಚೆ ನಡೆಸಿದರು.

“2017ರಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಡೆದಿರುವ ಸಮೀಕ್ಷೆ ಸಂದರ್ಭದಲ್ಲಿ ಮೂಲ ನಿವಾಸಿಗಳನ್ನು ಕೈಬಿಡಲಾಗಿದೆ. ಈ ಬಗ್ಗೆ ನಾವು ಹಲವಾರು ಬಾರಿ ನಗರಪಾಲಿಕೆಗೆ ಮತ್ತು ಸಮಾಜ ಕಲ್ಯಾಣ ಇಲಾಖೆಗೆ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಕ್ರಮವಾಗಿರಲಿಲ್ಲ. ಆದರೆ ಜಿಲ್ಲಾಧಿಕಾರಿಯವರು ಇತ್ತೀಚೆಗೆ ಇಲ್ಲಿರುವ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ಸಮಾಜ ಕಲ್ಯಾಣ ಇಲಾಖೆಗೆ ಸೂಚಿಸಿದ್ದು‌, ಈಗಾಲೇ ದಾಖಲೆ ಸಂಗ್ರಹಣೆ ಮಾಡಲಾಗಿರುತ್ತದೆ” ಎಂದು ಸ್ಲಂ ಸಮಿತಿ ಸಂಚಾಲಕ ಎ ನರಸಿಂಹಮೂರ್ತಿ ಹೇಳಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಸುಮಾರು 7 ವರ್ಷದ ಹಿಂದಿನ ಸಮೀಕ್ಷೆ ಆಗಿರುವುದರಿಂದ ನೈಜವಾಗಿ ವಾಸಿಸುವವರನ್ನು ಪಟ್ಟಿಯಿಂದ ಕೈಬಿಟ್ಟು ಬೆಂಗಳೂರಿನಲ್ಲಿರುವ ಅಲೆಮಾರಿಗಳನ್ನು ಈ ಸಮೀಕ್ಷಾ ಪಟ್ಟಿಯಲ್ಲಿ ಸೇರಿಸಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಹಾಗಾಗಿ ಹೊಸ ಸಮೀಕ್ಷೆ ಮಾಡಿ ಏಕಕಾಲದಲ್ಲಿ ಪುನರ್ವಸತಿ ಕಲ್ಪಿಸಲು ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು” ಎಂದು ಕೆಂದು ಜಿಲ್ಲಾಧಿಕಾರಿಗಳಿಗೆ ಅಪಾರ

“ತುಮಕೂರು ನಗರದ 18ನೇ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಬನಶಂಕರಿ ಇಸ್ಮಾಯಿಲ್ ನಗರ ಸ್ಲಂನಲ್ಲಿ ಸುಮಾರು 40 ವರ್ಷಗಳಿಂದ ಅರೆ ಅಲೆಮಾರಿ ಹಂದಿಜೋಗಿ/ಲಂಬಾಣಿ ಸಮುದಾಯದ ಕುಟುಂಬಗಳು ನೆಲೆಸಿದ್ದು, ಇತ್ತೀಚೆಗೆ ತುಮಕೂರು ಸ್ಲಂ ಸಮಿತಿಯು 2023ರ ಜುಲೈ 25ರಂದು ಗೃಹಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ ಪರಮೇಶ್ವರ್ ಅವರಿಗೆ ಪುನರ್ವಸತಿ ಕಲ್ಪಿಸಲು ಮನವಿ ಸಲ್ಲಿಸಲಾಗಿತ್ತು. ಅದರಂತೆ ನಗರ ಮಿತಿಯಲ್ಲಿ 4 ಎಕರೆ ಭೂಮಿಯನ್ನು ಗುರುತಿಸಿ ಪುನರ್ವಸತಿ ಕಲ್ಪಿಸಲು ಜಿಲ್ಲಾಧಿಕಾರಿಗೆ ಸೂಚಿಸಿದ್ದರು. ಮುಂದುವರೆದು ಜಿಲ್ಲಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ಈಗಾಗಲೇ ಅಣ್ಣೇನಹಳ್ಳಿ ಸರ್ವೇ ನಂ.74ರಲ್ಲಿ 4 ಎಕರೆ 44 ಕುಂಟೆ ಜಮೀನನ್ನು ಗುರುತಿಸಿ ಪುನರ್ವಸತಿ ಕಲ್ಪಿಸಲು ಜಿಲ್ಲಾಡಳಿತ ಮುಂದಾಗಿದೆ” ಎಂದು ತುಮಕೂರು ಸ್ಲಂ ಸಮಿತಿಯಿಂದ ಅಭಿನಂದನೆ ಸಲ್ಲಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಮನವಿ ಸ್ವೀಕರಿಸಿ ಮಾತನಾಡಿ, “ಕೈಬಿಟ್ಟಿರುವ ಅಲೆಮಾರಿ ಕುಟುಂಬಗಳನ್ನು ಸಮೀಕ್ಷೆ ಮಾಡಿ ಗುರುತಿಸಲಾಗುವುದು. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಮತ್ತು ತುಮಕೂರು ಮಹಾನಗರ ಪಾಲಿಕೆಗೆ ಸೂಚನೆ ನೀಡಲಾಗುವುದು. ಇಲ್ಲಿನ ನಿವಾಸಿಗಳನ್ನು ಹೊರತುಪಡಿಸಿ ಅನಧಿಕೃತವಾಗಿ ವಾಸಿಸುವವರ ಬಗ್ಗೆ ಪರೀಶೀಲನೆ ನಡೆಸಲಾಗುವುದು” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಗ್ರಾಮಾಂತರ ಭಾಗದ ಹಳ್ಳಿಗಳು ಮೂಲ ಸೌಕರ್ಯದಿಂದ ವಂಚಿತ

ಈ ಸಂದರ್ಭದಲ್ಲಿ ತುಮಕೂರು ಸ್ಲಂ ಸಮಿತಿಯ ಅರುಣ್, ಇಸ್ಮಾಯಿಲ್ ನಗರ ಸ್ಲಂ ಶಾಖೆಯ ಪದಾಧಿಕಾರಿಗಳಾದ ಚಿಕ್ಕಗಂಗಮ್ಮ, ಮಂಜಮ್ಮ, ರಾಮಕ್ಕ, ವೆಂಕಟೇಶ್, ಗೋಪಾಲಯ್ಯ, ಗಂಗಮ್ಮ, ವೆಂಕಟೇಶ್, ಯುವ ಪದಾಧಿಕಾರಿಗಳು ಇದ್ದರು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೈಡನ್ ಅವರನ್ನು ಬೇಕಾದರೆ ಭೇಟಿ ಮಾಡಬಹುದು, ಆದರೆ ತೇಜಸ್ವಿಸೂರ್ಯ ಭೇಟಿಗೆ ಸಿಗ್ತಾ ಇಲ್ಲ!

ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ನಲ್ಲಿ ಹಣವಿಟ್ಟು ವಂಚನೆಗೊಳಗಾದ ಸಾವಿರಾರು ಜನರು ಸಂಸದ...

ಶಿವಮೊಗ್ಗ | ಹಣ, ಧರ್ಮದ ಹೆಸರಿನಲ್ಲಿ ನ್ಯಾಯವನ್ನು ಸೋಲಿಸಲು ಬಿಜೆಪಿ ಹೊರಟಿದೆ: ಸಚಿವ ಮಧುಬಂಗಾರಪ್ಪ

ರಾಜ್ಯದಲ್ಲಿ ಬಿಜೆಪಿ ಪಕ್ಷದವರು ಹಣ ಹಾಗೂ ಧರ್ಮದ ಹೆಸರಿನಲ್ಲಿ ನ್ಯಾಯವನ್ನು ಸೋಲಿಸಲು...

‘ಇಂದ್ರಾಣಿ ಮುಖರ್ಜಿ’ ವೆಬ್‌ ಸೀರೀಸ್ ವೀಕ್ಷಿಸಿದ ಬಾಂಬೆ ಹೈಕೋರ್ಟ್: ಸಿಬಿಐ ಅರ್ಜಿ ತಿರಸ್ಕೃತ

ಶೀನಾ ಬೋರಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ ಕುರಿತ...

ಚಕ್ರವರ್ತಿ ಸೂಲಿಬೆಲೆ ಕಲಬುರಗಿ ಪ್ರವೇಶಕ್ಕೆ ತಡೆಯಾಜ್ಞೆ ವಿಧಿಸಿದ್ದ ಜಿಲ್ಲಾಡಳಿತ: ತೆರವುಗೊಳಿಸಿದ ಹೈಕೋರ್ಟ್‌

ಸಂಘಪರಿವಾರದ ಮುಖಂಡ, ಯುವ ಬ್ರಿಗೇಡ್‌ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆಗೆ ಕಲಬುರಗಿ ಪ್ರವೇಶಕ್ಕೆ...