ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ಇಂದು ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಫೋಟಕ ಬ್ಯಾಟರ್ ಆಂಡ್ಯ್ರೂ ರಸ್ಸೆಲ್ ಅವರ ಭರ್ಜರಿ ಆಟದ ನೆರವಿನಿಂದ 208 ರನ್ಗಳ ಬೃಹತ್ ರನ್ ದಾಖಲಿಸಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಶ್ರೇಯಸ್ ಅಯ್ಯರ್ ನೇತೃತ್ವದ ಕೆಕೆಆರ್, ಆರಂಭಿಕ ಆಘಾತಕ್ಕೊಳಗಾಯಿತಾದರೂ, ಫಿಲ್ ಸಾಲ್ಟ್ ಅವರ ಅರ್ಧಶತಕ(54 ರನ್, 40 ಎಸೆತ, 3 ಬೌಂಡರಿ ಹಾಗೂ 3 ಸಿಕ್ಸರ್) ಹಾಗೂ ಮಧ್ಯಮ ಕ್ರಮಾಂಕ ಬ್ಯಾಟರ್ ಆಂಡ್ಯ್ರೂ ರಸ್ಸೆಲ್ ಅವರ ಸ್ಫೋಟಕ ಆಟದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 208 ರನ್ ದಾಖಲಿಸಿತು.
Batting carnage to start the campaign! 🔥
Onto the defence now! 👊 pic.twitter.com/qli7ymX20K
— KolkataKnightRiders (@KKRiders) March 23, 2024
ಕೇವಲ 25 ಎಸೆತಗಳನ್ನು ಎದುರಿಸಿದ ವೆಸ್ಟ್ಇಂಡೀಸ್ನ ದೈತ್ಯ ಬ್ಯಾಟರ್ ರಸ್ಸೆಲ್, ಭರ್ಜರಿ 7 ಸಿಕ್ಸರ್ ಹಾಗೂ ಮೂರು ಬೌಂಡರಿಯ ನೆರವಿನಿಂದ 64 ರನ್ಗಳನ್ನು ಬಾರಿಸಿದರು.
Russell’s Muscles 💪
Andre Russell is hitting it out of park with ease 😮
Watch the match LIVE on @JioCinema and @StarSportsIndia 💻📱
Match Updates ▶️ https://t.co/xjNjyPa8V4 #TATAIPL | #KKRvSRH | @KKRiders pic.twitter.com/Od84aM2rMr
— IndianPremierLeague (@IPL) March 23, 2024
ಬ್ಯಾಟಿಂಗ್ ಆರಂಭಿಸಿದ ಕೆಕೆಆರ್ ಕೇವಲ 51 ರನ್ ಗಳಿಸುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡಿತ್ತು. ಆ ಬಳಿಕ ಸಾವಧಾನ ಆಟವಾಡಿದ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು, ಬೃಹತ್ ಗುರಿಯನ್ನು ನೀಡುವಲ್ಲಿ ಸಫಲರಾದರು.
2️⃣0️⃣9️⃣ to chase for the win in our first #IPL2024 outing 👊#PlayWithFire #KKRvSRH pic.twitter.com/dM2DZclUG0
— SunRisers Hyderabad (@SunRisers) March 23, 2024
ಕೆಕೆಆರ್ ಪರ ನಾಯಕ ಶ್ರೇಯಸ್ ಅಯ್ಯರ್ ಶೂನ್ಯ ಸುತ್ತುವ ಮೂಲಕ ಮೊದಲ ಪಂದ್ಯದಲ್ಲೇ ರನ್ ಗಳಿಸಲು ವಿಫಲರಾದರು. ಉಳಿದಂತೆ ಸುನಿಲ್ ನರೇನ್ 2 ರನ್, ವೆಂಕಟೇಶ್ ಅಯ್ಯರ್ 7, ನಿತೀಶ್ ರಾಣಾ 9 ರನ್ ಗಳಿಸಿ, ವಿಕೆಟ್ ಒಪ್ಪಿಸುವ ಮೂಲಕ ಎರಡಂಕೆ ದಾಟಲು ವಿಫಲವಾದರು.
ರಮಣ್ದೀಪ್ ಸಿಂಗ್ 35 ರನ್ ಹಾಗೂ ರಿಂಕು ಸಿಂಗ್ 23 ರನ್ ಗಳಿಸುವ ಮೂಲಕ ಸ್ಕೋರ್ ಬೋರ್ಡ್ಗೆ ತಮ್ಮದೇ ಆದ ಕೊಡುಗೆ ನೀಡಿದರು.
ಸನ್ರೈಸರ್ಸ್ ಹೈದರಾಬಾದ್ ತಂಡದ ಪರ ಬೌಲಿಂಗ್ನಲ್ಲಿ ನಟರಾಜನ್ 3 ವಿಕೆಟ್ ಪಡೆಯುವಲ್ಲಿ ಸಫಲರಾದರೆ, ಮಯಾಂಕ್ ಮಾರ್ಕಂಡೆ 2 ವಿಕೆಟ್ ಗಳಿಸಿದರು. ನಾಯಕ ಪ್ಯಾಟ್ ಕಮ್ಮಿನ್ಸ್ 1 ವಿಕೆಟ್ ಗಳಿಸಿದರು.
