ರಾಜಸ್ಥಾನ | ನಿರಂತರ ದ್ವೇಷ ಹರಡುವ ‘ಜೈಪುರ್ ಡೈಲಾಗ್ಸ್‌’ನ ನಿರ್ದೇಶಕನಿಗೆ ಕಾಂಗ್ರೆಸ್ ಟಿಕೆಟ್!

Date:

ಸೋಷಿಯಲ್ ಮೀಡಿಯಾಗಳಲ್ಲಿ ವ್ಯಾಪಕವಾಗಿ ದ್ವೇಷ ಹರಡುವುದರಲ್ಲೇ ಕುಖ್ಯಾತಿ ಪಡೆದಿರುವ ರಾಜಸ್ಥಾನದ ‘ಜೈಪುರ್ ಡೈಲಾಗ್ಸ್‌’ನ ನಿರ್ದೇಶಕನಿಗೆ ಕಾಂಗ್ರೆಸ್ ಲೋಕಸಭಾ ಟಿಕೆಟ್ ನೀಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

- Advertisement -

ಕಾಂಗ್ರೆಸ್ ಸೇರಿದಂತೆ ಧರ್ಮಾಧಾರಿತ ದ್ವೇಷ ಹರಡುವ ಕೆಲಸ ಮಾಡುತ್ತಿರುವ thejaipurdialogues.comನ ಪಾಲುದಾರ ಹಾಗೂ ನಿರ್ದೇಶಕನೂ ಆಗಿರುವ ಸುನಿಲ್ ಶರ್ಮಾಗೆ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಸುನಿಲ್ ಶರ್ಮಾ ಅವರು ಜೈಪುರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಇದು ಈಗ ವಿವಾದಕ್ಕೆ ಕಾರಣವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಈ ಬಗ್ಗೆ ಟ್ವೀಟ್ ಮೂಲಕ ಗಮನ ಸೆಳೆದಿರುವ ಆಲ್ಟ್ ನ್ಯೂಸ್ ಸಹಸಂಸ್ಥಾಪಕ, ದ್ವೇಷ ಹರಡುವವರ ವಿರುದ್ಧ ನಿರಂತರ ಬೇಟೆಯಾಡುತ್ತಿರುವ ಮುಹಮ್ಮದ್ ಝುಬೈರ್, “ಜೈಪುರ್ ಡೈಲಾಗ್ಸ್‌ನ ಪಾಲುದಾರ ಹಾಗೂ ನಿರ್ದೇಶಕ ಸುನೀಲ್ ಶರ್ಮಾ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಆಹಾ. ಇದು ಅದ್ಭುತವೇ ಸರಿ” ಎನ್ನುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರನ್ನು ಟ್ಯಾಗ್ ಮಾಡಿದ್ದಾರೆ.

ಝುಬೈರ್ ಅವರು ಹಂಚಿಕೊಂಡಿರುವ ವೀಡಿಯೋದಲ್ಲಿ ರಾಜಸ್ಥಾನ್ ಚೌಕ್ ಎಂಬ ಡಿಜಿಟಲ್ ಮೀಡಿಯಾದ ವರದಿಗಾರರೊಬ್ಬರು ಸುನಿಲ್ ಶರ್ಮಾ ಅವರನ್ನು ಜೈಪುರ್ ಡೈಲಾಗ್ಸ್ ಬಗ್ಗೆ ಪ್ರಶ್ನಿಸಿದ್ದಕ್ಕೆ, ಸುನಿಲ್ ಶರ್ಮಾ ಕ್ಯಾಮೆರಾದಿಂದ ತಪ್ಪಿಸಿಕೊಂಡು ಹೋಗುವುದು ದೃಶ್ಯಗಳಲ್ಲಿ ಸೆರೆಯಾಗಿದೆ.

ಅಲ್ಲದೇ, ಈ ಹಿಂದೆ ದೇಶದ ಖ್ಯಾತ ಪತ್ರಕರ್ತ ರವೀಶ್ ಕುಮಾರ್, ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ವಕ್ತಾರೆ ಲಾವಣ್ಯ ಬಲ್ಲಾಳ್ ಜೈನ್ ಸೇರಿದಂತೆ ಹಲವರ ವಿರುದ್ಧ ಮಾಡಿರುವ ದ್ವೇಷದ ಪೋಸ್ಟ್‌ಗಳನ್ನು ಕೂಡ ಝುಬೈರ್ ಹಂಚಿಕೊಂಡಿದ್ದಾರೆ.

‘ಜೈಪುರ್ ಡೈಲಾಗ್ಸ್‌’ ಬಲಪಂಥೀಯ ವಿಚಾರಧಾರೆ, ದ್ವೇಷವನ್ನು ವೆಬ್‌ಸೈಟ್‌ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಹಂಚುವಲ್ಲಿ ಕುಖ್ಯಾತಿ ಪಡೆದಿದೆ. ಇವರ ಯೂಟ್ಯೂಬ್ ಚಾನೆಲ್ ಸುಮಾರು 14 ಲಕ್ಷ Subcribers ಅನ್ನು ಕೂಡ ಹೊಂದಿದೆ. ಇದಕ್ಕೆ ಐವರು ನಿರ್ದೇಶಕರಿದ್ದು, ಅದರಲ್ಲಿ ಸುನಿಲ್ ಶರ್ಮಾ ಕೂಡ ಒಬ್ಬರು.

ರಾಜಸ್ಥಾನದಲ್ಲಿ ‘ಜೈಪುರ್ ಡೈಲಾಗ್ಸ್‌’ನಂತೆಯೇ ಕರ್ನಾಟಕದಲ್ಲಿಯೂ ಕೂಡ ಸಂವಾದ, ಟಿವಿ ವಿಕ್ರಮ ಹೆಸರಿನ ಯೂಟ್ಯೂಬ್‌ ಚಾನೆಲ್ ಇದೇ ರೀತಿ ದ್ವೇಷ ಹರಡವುದರಲ್ಲಿ ನಿರತವಾಗಿದೆ.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೋಕಸಭೆ ಸ್ಪೀಕರ್ ಚುನಾವಣೆ| ಟಿಡಿಪಿ ಸ್ಪರ್ಧಿಸಿದರೆ ‘ಇಂಡಿಯಾ’ ಒಕ್ಕೂಟ ಬೆಂಬಲಿಸುತ್ತೆ: ಸಂಜಯ್ ರಾವತ್

ಲೋಕಸಭೆ ಸ್ಪೀಕರ್ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ಆಡಳಿತಾರೂಢ ಮಿತ್ರ ಪಕ್ಷವಾದ ತೆಲುಗು...

140ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಚಲಾವಣೆಯಾದ ಮತಕ್ಕಿಂತ ಎಣಿಕೆಯಾದ ಮತಗಳ ಸಂಖ್ಯೆ ಹೆಚ್ಚು: ಏನು ಈ ವ್ಯತ್ಯಾಸ?

2024ರ ಲೋಕಸಭೆ ಚುನಾವಣೆಯ ಫಲಿತಾಂಶಗಳು ಹೊರಬಿದ್ದಿವೆ. ಮೂರನೇ ಬಾರಿಗೆ ಮೋದಿ ನೇತೃತ್ವದಲ್ಲಿ...