ನಿನ್ನೆ(ಮಾ.24) ನಡೆದ ಐಪಿಎಲ್ 2024 ಐಪಿಎಲ್ ಟೂರ್ನಿಯ ಕೆಕೆಆರ್ ಹಾಗೂ ಎಸ್‌ಆರ್‌ಎಚ್ ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಹೈದರಾಬಾದ್ ವಿರುದ್ಧ 4 ರನ್‌ಗಳ ರೋಚಕ ಗೆಲುವು ಸಾಧಿಸಿತು. ಇದೇ ಸಂದರ್ಭದಲ್ಲಿ ಕ್ರೀಡಾಂಗಣದಲ್ಲಿ ಸಿಗರೇಟ್ ಸೇದಿದ ಕೆಕೆಆರ್ ತಂಡದ ಮಾಲೀಕ ಶಾರೂಖ್ ಖಾನ್ ವಿಡಿಯೋ ವೈರಲ್ ಆಗಿದ್ದು, ವಿವಾದಕ್ಕೆ ಮಾರ್ಪಟ್ಟಿದೆ.
ಕ್ರೀಡಾಂಗಣದ ವಿಐಪಿ ಬಾಕ್ಸ್‌ನಲ್ಲಿ ಕುಳಿತ್ತಿದ್ದ ಬಾಲಿವುಡ್ ನಟ ಹಾಗೂ ಕೆಕೆಆರ್ ತಂಡದ ಮಾಲೀಕ ಶಾರೂಖ್ ಖಾನ್ ಸಿಗರೇಟ್ ಸೇವನೆ ಮಾಡಿದ್ದಾರೆ.
ಶಾರೂಖ್ ಖಾನ್ ಸೇವನೆಯ ದೃಶ್ಯಗಳು ಹಾಗೂ ವಿಡಿಯೋಗಳು ಸಾಮಾಜಿಕ ಮಾಧ್ಯಗಳಲ್ಲಿ ವೈರಲ್ ಆಗಿದ್ದು ಪಂದ್ಯ ನಡೆಯುತ್ತಿರುವ ಸಂದರ್ಭದಲ್ಲಿ ನಟನ ನಡೆತೆಯ ಬಗ್ಗೆ ಹಲವರು ಟೀಕಿಸಿದ್ದಾರೆ. ಸಾರ್ವಜನಿಕರಿಗೆ ಮಾದರಿಯಾಗಬೇಕಿದ್ದ ಜವಾಬ್ದಾರಿಯುತ ವ್ಯಕ್ತಿಯೊಬ್ಬರು ಎಲ್ಲರೆದುರು ಸಿಗರೇಟ್ ಸೇವನೆ ಮಾಡಿದ್ದು ಆಕ್ರೋಶಕ್ಕೆ ಕಾರಣವಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಚುನಾವಣೆ – ಐಪಿಎಲ್ ಕ್ರಿಕೆಟ್‌ನಲ್ಲಿ ಅಪ್ಪ-ಮಗನ ಆಟ
ಸಿಗರೇಟ್ ಸೇವನೆಯ ದೃಶ್ಯ ಪಾಕಿಸ್ತಾನ ಸೂಪರ್ ಲೀಗ್ ಫೈನಲ್ ಪಂದ್ಯದಲ್ಲೂ ಸಂಂಭವಿಸಿದ್ದು, ಪಾಕ್‌ನ ಆಟಗಾರ ಇಮಾದ್ ವಾಸೀಮ್ ಡ್ರಸಿಂಗ್ ರೂಮ್‌ನಲ್ಲಿ ಕುಳಿತು ಸಿಗರೇಟ್ ಸೇವನೆ ಮಾಡಿದ್ದರು.
ಕೊಲ್ಕತ್ತದ ಈಡನ್ ಗರ್ಡನ್ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಆಂಡ್ರೆ ರಸ್ಸೆಲ್ ಅವರ ಸ್ಫೋಟಕ ಅರ್ಧ ಶತಕದ(64) ನೆರವಿನಿಂದ ಕೆಕೆಆರ್ ತಂಡ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ನಾಲ್ಕು ರನ್ನುಗಳಿಂದ ರೋಚಕವಾಗಿ ಮಣಿಸಿತ್ತು.
ಎದುರಾಳಿ ತಂಡ ಹೈದರಾಬಾದ್ ಪರ ಮಧ್ಯಮ ಕ್ರಮಾಂಕದ ಆಟಗಾರ ಹೇನ್‌ರಿಚ್ ಕ್ಲಾಸೆನ್ ಅವರು 29 ಚೆಂಡುಗಳಲ್ಲಿ 8 ಸಿಕ್ಸರ್‌ಗಳೊಂದಿಗೆ 63 ಬಾರಿಸಿ ಪಂದ್ಯವನ್ನು ಗೆಲುವಿನ ಸಮೀಪ ತೆಗೆದುಕೊಂಡು ಹೋಗಿದ್ದರು. ಆದರೆ ಹರ್ಷಿತ್ ರಾಣಾ ಅವರ ಕೊನೆಯ ಓವರ್ ಪಂದ್ಯದ ಗತಿಯನ್ನು ಬದಲಾಯಿಸಿತು.
ಕೊಲ್ಕತ್ತ ನೈಟ್ ರೈಡರ್ಸ್ ಗಳಿಸಿದ 209 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಸನ್ ರೈಸರ್ಸ್ ಹೈದಾರಾಬಾದ್ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 204 ರನ್ ಮಾತ್ರ ಗಳಿಸಲು ಸಾಧ್ಯವಾಯಿತು.
ಇಂದು(ಮಾ.24) ಜೈಪುರದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ಮತ್ತು ಅಹಮದಾಬಾದ್‌ನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಲಯನ್ಸ್ ತಂಡಗಳ ನಡುವೆ ಪಂದ್ಯಗಳು ನಡೆಯಲಿವೆ.
#ShahRukhKhan is smoking in the stadium and Hakla is an inspiration (Irony) 🤮 pic.twitter.com/MqukSRF9AY
— Prince (@purohit_pr78001) March 23, 2024
