ಮೋದಿ ವೈಫಲ್ಯ-3 | 100 ಸ್ಮಾರ್ಟ್‌ ಸಿಟಿಗಳು ಎಲ್ಲಿವೆ? ಇದು ಮೋದಿಯ ‘ಸ್ಮಾರ್ಟ್‌’ ಸುಳ್ಳು!

Date:

Advertisements

2023ರ ಡಿಸೆಂಬರ್ ವೇಳೆಗೆ 100 ನಗರಗಳನ್ನು ‘ಸ್ಮಾರ್ಟ್‌ ಸಿಟಿ’ಗಳನ್ನಾಗಿ ನಿರ್ಮಾಣ ಮಾಡುವುದಾಗಿ ಮೋದಿ ಸರ್ಕಾರ ಅರ್ಥಾತ್ ಕೇಂದ್ರ ಸರ್ಕಾರ 2015ರಲ್ಲೇ ಹೇಳಿತ್ತು. ಮೋದಿ ಅವರು ಸ್ಮಾರ್ಟ್‌ ಸಿಟಿ ಯೋಜನೆಯನ್ನು ಘೋಷಿಸಿದಾಗ ಬಿಜೆಪಿ ನಾಯಕರು ಮತ್ತು ಬೆಂಬಲಿಗರು ಮೋದಿ ಅವರನ್ನು ಕೊಂಡಾಡಿದ್ದರು. ಮಾಧ್ಯಮಗಳು ಪ್ರಚಾರ ನೀಡಿ, ಹಾಡಿ ಹೊಗಳಿದ್ದವು. ಆದರೆ, ಯೋಜನೆ ಘೋಷಣೆಯಾಗಿ ಬರೋಬ್ಬರಿ 9 ವರ್ಷಗಳಾಗಿವೆ. 22,814 ಕೋಟಿ ರೂ. ಮೌಲ್ಯದ ಈ ‘ಸ್ಮಾರ್ಟ್‌ ಸಿಟಿ’ ಯೋಜನೆ ತೆವಳುವುದಿರಲಿ, ತೆವಳಲು ಆರಂಭಿಸಿದಂತೆಯೂ ಕಾಣುತ್ತಿಲ್ಲ.

ಕಳೆದ ತಿಂಗಳು (ಫೆಬ್ರವರಿ) ನಡೆದ ಸಂಸತ್ ಅಧಿವೇಶನದಲ್ಲಿ ಸ್ಮಾರ್ಟ್‌ ಸಿಟಿ ಬಗ್ಗೆ ವರದಿ ಮಂಡಿಸಿದ ನಗರಾಭಿವೃದ್ಧಿ ಸಚಿವಾಲಯ, ‘ಉದ್ದೇಶಿತ ನಗರಗಳ ಜನರಿಗೆ ಪುನರ್ವಸತಿ ಒದಗಿಸುವುದು ಮತ್ತು ಭೂ ಸ್ವಾಧೀನ ಪ್ರಕ್ರಿಯೆಯಲ್ಲಿನ ಕಾನೂನು ಸಮಸ್ಯೆಯಿಂದಾಗಿ ವಿಳಂಬವಾಗಿದೆ’ ಎಂದು ಹೇಳಿಕೊಂಡಿದೆ. ಮಾತ್ರವಲ್ಲದೆ, ಸ್ಮಾರ್ಟ್‌ ಸಿಟಿ ಯೋಜನೆಯ ಸಿಇಒಗಳ ವರ್ಗಾವಣೆಗಳೂ ಪ್ರಮುಖ ಕಾರಣವೆಂದು ಉಲ್ಲೇಖಿಸಿದೆ. ಹಾಗಾಗಿ ಸ್ಮಾರ್ಟ್‌ ಸಿಟಿ ಯೋಜನೆ ಪ್ರಚಾರದ ಸರಕಾಗಿಯೇ ಉಳಿದು ಹೋಗಿದೆ.

ವಿಳಂಬ-ವೈಫಲ್ಯವನ್ನೂ ಸಮರ್ಥಿಸಿಕೊಂಡಿರುವ ಸರ್ಕಾರ, ”ಸ್ಮಾರ್ಟ್‌ ಸಿಟಿ ಯೋಜನೆಗೆ ಅಧಿಕೃತ ವ್ಯಾಖ್ಯಾನವಿಲ್ಲ. ಅದು ವಿಭಿನ್ನ ಸ್ವರೂಪದಲ್ಲಿದೆ. ನಗರದಿಂದ ನಗರಕ್ಕೆ, ದೇಶದಿಂದ ದೇಶಕ್ಕೆ ಬೇರೆಯದ್ದೇ ರೀತಿಯಲ್ಲಿರುತ್ತದೆ. ಅದು ಅಭಿವೃದ್ಧಿಯ ಮಟ್ಟ, ಬದಲಾವಣೆ ಮತ್ತು ಸುಧಾರಣೆಯ ಇಚ್ಛೆ ಹಾಗೂ ನಗರದ ನಿವಾಸಿಗಳ ಆಕಾಂಕ್ಷೆಗಳ ಮೇಲೆ ಅವಲಂಬಿತವಾಗಿರುತ್ತದೆ” ಎಂದು ಹೇಳಿಕೊಂಡಿದೆ.

Advertisements

ಸದ್ಯಕ್ಕೆ, ”ನಗರಗಳಲ್ಲಿ ಪ್ರಮುಖ ಮೂಲಸೌಕರ್ಯಗಳನ್ನು ಒದಗಿಸುವುದು, ನಾಗರಿಕರಿಗೆ ಗುಣಮಟ್ಟದ ಜೀವನ ನೀಡುವುದು, ಸ್ವಚ್ಛ ಮತ್ತು ಉತ್ತಮ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದೇ ಸ್ಮಾರ್ಟ್‌ ಸಿಟಿ” ಎಂದು ಸರ್ಕಾರ ವಾದಿಸುತ್ತಿದೆ. ಇದೇ ಮಾನದಂಡದ ಮೇಲೆ ನೋಡಿದರು, ಉದ್ದೇಶಿತ 57 ನಗರಗಳಲ್ಲಿ ಕಾಮಗಾರಿ ಪ್ರಗತಿಯು 80%ರಷ್ಟಿದೆ. ಅಲ್ಲದೆ, 14 ನಗರಗಳಲ್ಲಿ 50%ಕ್ಕಿಂತ ಕಡಿಮೆ ಪ್ರಗತಿ ಇದೆ ಎಂದೂ ಸರ್ಕಾರವೇ ಹೇಳುತ್ತಿದೆ.

India's Smart Cities: Progress and Challenges After 8 Years

ಅಂದಹಾಗೆ, ಕೆಲ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸುವುದೇ ‘ಸ್ಮಾರ್ಟ್‌ ಸಿಟಿ’ ಯೋಜನೆಯ ಉದ್ದೇಶವಾಗಿತ್ತಾ ಅಂತ ಸ್ವಲ್ಪ ಹಿಂದೆ ಹೋಗಿ ನೋಡಿದರೆ, ಅಸಲಿಯತ್ತು ಬೇರೆಯೇ ಇದೆ.

ಅಂದಹಾಗೆ ಸ್ಮಾರ್ಟ್‌ ಸಿಟಿ ಎಂದರೇನು?
2015ರಲ್ಲಿ ಸ್ಮಾರ್ಟ್‌ ಸಿಟಿ ಯೋಜನೆ ಘೋಷಿಸಿದ್ದ ಪ್ರಧಾನಿ ಮೋದಿ, ಆ ನಗರಗಳಿಗೆ ಬರೋಬ್ಬರಿ 400 ರೀತಿಯ ಯೋಜನೆಗಳನ್ನು ಒದಗಿಸುವುದಾಗಿ ಘೋಷಿಸಿದ್ದರು.

ನಗರದಲ್ಲಿ ಸಂಪನ್ಮೂಲವು ತಟಸ್ಥವಾಗಿರಬೇಕು ಅಥವಾ ಧನಾತ್ಮಕವಾಗಿರಬೇಕು. ನಗರವು ಪ್ರಕೃತಿಯಿಂದ ಎಷ್ಟು ಸಂಪತ್ತನ್ನು ತೆಗೆದುಕೊಳ್ಳುತ್ತದೆಯೋ, ಅದಕ್ಕಿಂತ ಹೆಚ್ಚಿನಷ್ಟು ಮರಳಿ ಕೊಡಬೇಕು. (ಉದಾ: ಮರ ಕಡಿದರೆ, ಹೆಚ್ಚು ಸಸಿಗಳನ್ನು ನೆಡಬೇಕು.) ವಿದ್ಯುತ್‌ ವ್ಯವಸ್ಥೆಯನ್ನು ಸಂಪೂರ್ಣ ನವೀಕರಿಸಬೇಕು. ಸೌರಶಕ್ತಿ ಬಳಕೆ (ಸೋಲಾರ್ ವ್ಯವಸ್ಥೆ) ಹೆಚ್ಚಿಸಬೇಕು. ಜಲಮೂಲಗಳನ್ನು ಪೋಷಿಸಬೇಕು. ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಮಾಡಬೇಕು.

ಸ್ಮಾರ್ಟ್ ಸಿಟಿಯು ಖಾಸಗಿ ಜಾಗಗಳಿಗಿಂತ ಸಾರ್ವಜನಿಕ ಸ್ಥಳಗಳಿಗೆ ಆದ್ಯತೆ ನೀಡಬೇಕು. ವೈಯಕ್ತಿಕ ಕಾರುಗಳಿಗಿಂತ ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ನಗರದಲ್ಲಿ ಪ್ರಯಾಣದ ಆದ್ಯತೆಯಾಗಬೇಕು. ಸಾರ್ವಜನಿಕ ಗ್ರಂಥಾಲಯಗಳು ಮತ್ತು ಸಾರ್ವಜನಿಕ ಈಜುಕೊಳಗಳಿರಬೇಕು.

ಎಲ್ಲಕ್ಕಿಂತ ಮುಖ್ಯವಾಗಿ, ಅಲ್ಲಿನ ನಿವಾಸಿಗಳು ನಗರದ ಪ್ರಸ್ತುತ ಮತ್ತು ಭವಿಷ್ಯದ ಹಾದಿಯ ಬಗ್ಗೆ ಗ್ರಹಿಸಲು ಸಾಧ್ಯವಾಗದಿದ್ದರೆ, ಆ ನಗರವು ಸ್ಮಾರ್ಟ್‌ ಆಗಲು ಸಾಧ್ಯವಿಲ್ಲ ಎಂಬ ಅಂಶಗಳು ಸೇರಿದಂತೆ ಹಲವಾರು ಗುರಿಗಳು ಯೋಜನೆಯಲ್ಲಿವೆ.

Opinion: Why Smart Cities will evolve into hyper-connected cities, ET Government

ಆದರೆ, ನಿಜಕ್ಕೂ ಇದೆಲ್ಲವೂ ಸಾಧ್ಯವಾಗಿದೆಯೇ. ಸ್ಮಾರ್ಟ್‌ ಸಿಟಿಗೆ ಗುರುತಿಸಲಾಗಿದ್ದ ಆಗ್ರಾ, ವಾರಣಾಸಿ, ಪುಣೆ, ಅಹಮದಾಬಾದ್, ಭುವನೇಶ್ವರ, ಕೊಯಮತ್ತೂರು, ಇಂದೋರ್, ಜೈಪುರ, ಚೆನ್ನೈ, ಕೊಚ್ಚಿ, ಭೋಪಾಲ್, ಬೆಂಗಳೂರು, ಬೆಳಗಾವಿ, ದಾವಣಗೆರೆ, ಹೈದರಾಬಾದ್ ಸೇರಿದಂತೆ 100 ನಗರಗಳು ಈ ಎಲ್ಲ ಮಾನದಂಡಗಳನ್ನು ಪೂರೈಸಿವೆಯೇ? ಖಂಡಿತಾ ಇಲ್ಲ.

ಅಂದಹಾಗೆ, ಕಳೆದ ವರ್ಷ ವಾರಣಾಸಿಗೆ ‘ಬೆಸ್ಟ್‌ ಸ್ಮಾರ್ಟಿ ಸಿಟಿ’ ಎಂಬ ಪ್ರಶಸ್ತಿಯನ್ನೂ ನೀಡಲಾಗಿದೆ. ವಾರಣಾಸಿ ಮೂಲಕವೇ ಹರಿಯುತ್ತಿರುವ ಗಂಗಾ ನದಿಯನ್ನು ನೋಡಿದರೆ, ಆ ನಗರ ಯಾವ ಮಟ್ಟಿಗೆ ಸ್ಮಾರ್ಟ್‌ ಆಗಿದೆ ಎಂಬುದು ನಮ್ಮ ಅರಿವಿಗೆ ಬರುತ್ತದೆ.

ಸ್ಮಾರ್ಟ್‌ ಆಗಿಲ್ಲ ಬೃಹತ್ ಬೆಂಗಳೂರು
ಸ್ಮಾರ್ಟ್‌ ಸಿಟಿ ಯೋಜನೆಯಡಿ ಕರ್ನಾಟಕದ ಆರು ನಗರಗಳನ್ನು- ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಶಿವಮೊಗ್ಗ, ತುಮಕೂರು ಆಯ್ಕೆ ಮಾಡಲಾಗಿದೆ. ರಾಜ್ಯ ರಾಜಧಾನಿ ಬೆಂಗಳೂರು ಈ ಪಟ್ಟಿಯಲ್ಲಿ ಇದ್ದದ್ದು ಹಲವರಿಗೆ ಆಶ್ಚರ್ಯವಾದರೆ, ಇನ್ನೂ ಹಲವರಿಗೆ ಹೆಮ್ಮೆಯ ವಿಚಾರವಾಗಿತ್ತು. 456 ಕೋಟಿ ರೂ. ವೆಚ್ಚದಲ್ಲಿ 2023ರ ಅಂತ್ಯದ ವೇಳೆಗೆ ಬೆಂಗಳೂರನ್ನು ‘ಸ್ಮಾರ್ಟ್‌ ಸಿಟಿ’ ಮಾಡುವುದಾಗಿ ಹೇಳಲಾಗಿತ್ತು. ಸದ್ಯ, ಈಗ ನಾವು 2024ರಲ್ಲಿದ್ದೇವೆ.

bangalore1

ಆದರೆ, ಬೆಂಗಳೂರು ಈಗ ಸ್ಮಾರ್ಟ್‌ ಸಿಟಿ ಆಗಿದೆಯೇ ಎಂಬುದು ಮೊದಲ ಪ್ರಶ್ನೆ. ಸದ್ಯಕ್ಕೆ ಅಲ್ಲಲ್ಲಿ ‘I love bengaluru’ ಎಂಬ ಪ್ರತಿಕೃತಿಗಳು ಕಾಣ ಸಿಗುತ್ತವೆ. ಬೇಸರದ ಸಂಗತಿ ಎಂದರೆ, ಅವುಗಳೂ ಧೂಳಿನಿಂದ ಮುಚ್ಚಿಹೋಗುತ್ತಿವೆ. ಅಂದಹಾಗೆ, ಏನೆಲ್ಲ ಸಾಧಿಸಿದರೆ, ಅದು ಸ್ಮಾರ್ಟ್‌ ಸಿಟಿ ಆಗುತ್ತದೆ ಎನ್ನಲಾಗಿತ್ತೋ, ಅದರಲ್ಲಿ ಒಂದೇ ಒಂದು ಮಾನದಂಡವನ್ನೂ ಬೆಂಗಳೂರಿನಲ್ಲಿ ಸ್ಮಾರ್ಟ್‌ ಸಿಟಿ ಯೋಜನೆ ಸಾಧಿಸಲು ಸಾಧ್ಯವೇ ಆಗಿಲ್ಲ.

ಇಂದಿಗೂ ರಸ್ತೆಗಳು ಗುಂಡಿಗಳಿಂದ ತುಂಬಿವೆ. ಹಲವಾರು ಜನರು ರಸ್ತೆ ಗುಂಡಿಗಳ ಕಾರಣದಿಂದ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ. ಇದೀಗ, ಬೇಸಿಗೆ ಬೇಗೆಯಲ್ಲಿ ನೀರಿಗೂ ಜನರು ಪರದಾಡುತ್ತಿದ್ದಾರೆ. ರಸ್ತೆಗಳು ಸಂಚಾರ ದಟ್ಟಣೆಯಿಂದ ಕಿಕ್ಕಿರಿದಿವೆ. ಕಸದ ಸಮಸ್ಯೆ ಈಗಲೂ ಜನರನ್ನು ಕಾಡುತ್ತಿದೆ. ರಸ್ತೆಗಳಲ್ಲಿ ಸಾರ್ವಜನಿಕ ಸಾರಿಗೆಗಳಿಗಿಂತ ವೈಯಕ್ತಿಕ ವಾಹನಗಳ ಬಳಕೆಯೇ ಹೆಚ್ಚಾಗಿದೆ. ಮೇಲಾಗಿ, ನಗರದ ಕೊಳಗೇರಿಗಳಲ್ಲಿ ವಾಸಿಸುವ ಜನರ ಬದುಕು ಈಗ ಮತ್ತಷ್ಟು ಹದಗೆಟ್ಟಿದೆ. ಹಲವಾರು ಕೊಳಗೇರಿಗಳ ಜನರು ಈಗಲೂ ತಾಟು, ತಗಡಿನಲ್ಲಿ ಮನೆ ನಿರ್ಮಿಸಿಕೊಂಡು ಬದುಕುತ್ತಿದ್ದಾರೆ. ಅವರಿಗೆ ಪುನರ್ವಸತಿ, ಮೂಲ ಸೌಕರ್ಯಗಳನ್ನು ಒದಗಿಸುವ ಕೆಲಸಗಳೇ ಆಗಿಲ್ಲ.

ಕೊಳೆಗೇರಿ ನಿವಾಸಿಗಳಿಗೆ ವಾಸದ ಜಾಗ ಮಾಲೀಕತ್ವ

ಇದೆಲ್ಲದರ ನಡುವೆ, ಅಲ್ಲಲ್ಲಿ ಕೆಲವು ಕಾಮಗಾರಿಗಳು ನಡೆಯುತ್ತಿವೆ. ಆದರೆ, ಅವುಗಳೂ ಕಳಪೆಯಾಗಿವೆ ಎಂಬ ಆರೋಪಗಳು ಕೇಳಿಬರುತ್ತಿವೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ರಸ್ತೆಗಳು, ಫುಟ್‌ಪಾತ್‌ಗಳೂ ಕೂಡ ಸ್ಮಾರ್ಟ್‌ ಆಗಿರಬೇಕು. ಆದರೆ, ಬೆಂಗಳೂರಿನ ಬಹುತೇಕ ರಸ್ತೆಗಳ ಬದಿಯ ಫುಟ್‌ಪಾತ್‌ಗಳು ನಡೆಯಲಾಗದ ಪರಿಸ್ಥಿತಿಯಲ್ಲಿವೆ. ಕೆಲವೆಡೆ, ಒಳಚರಂಡಿ ಮೇಲೆ ಹಾಕಲಾಗಿರುವ ಫುಟ್‌ ಪಾತ್‌ಗೆ ಕಲ್ಲುಗಳು ಒಡೆದು ಹಾಳಾಗಿವೆ. ಇನ್ನು ಕೆಲವೆಡೆ ಗುಂಡಿಬಿದ್ದಿವೆ.

ಮಳೆ ಬಂದರಂತೂ, ರಸ್ತೆಗಳ ಮೇಲೆ ನಾಲೆಯಂತೆ ನೀರು ಹರಿಯುತ್ತದೆ. ಇಡೀ ನಗರವೇ ಕೆರೆಯಂತಾಗುತ್ತದೆ. ಹಲವಾರು ಭಾಗಗಳಲ್ಲಿ ಮನೆಗಳಿಗೆ ನೀರು ನುಗ್ಗುವುದು ಪ್ರತಿ ಮಳೆಗಾಲದಲ್ಲೂ ಕಟ್ಟಿಟ್ಟ ಬುತ್ತಿ ಎಂಬಂತಾಗಿದೆ. ಮರಗಳು, ಕಟ್ಟಡಗಳ ಮೇಲೆ ನಾನಾ ರೀತಿಯ ಕೇಬಲ್ ವೈಯರ್‌ಗಳು ನೇತಾಡುತ್ತಿವೆ.

ಜಲಮಂಡಳಿ, ಬೆಸ್ಕಾಂ, ಒಎಫ್‌ಸಿ ಕೇಬಲ್‌ಗಳಿಗಾಗಿ ರಸ್ತೆ ಅಥವಾ ಪಾದಚಾರಿ ಮಾರ್ಗ ಮಾಡುವ ಮೊದಲೇ ಪೈಪ್‌ಗಳನ್ನು ಅಳವಡಿಸಬೇಕು. ಆ ಮೂಲಕ ರಸ್ತೆ ಅಗೆದು ಕೇಬಲ್‌ ಹಾಕುವುದನ್ನು ತಪ್ಪಿಸಬೇಕು ಎಂದು ಹೇಳಲಾಗಿದೆ. ಆದರೆ, ಆ ಯಾವ ಕೆಲಸಗಳೂ ಆಗಿಲ್ಲ. ಒಂದು ಇಲಾಖೆ ರಸ್ತೆ ಹಾಕಿದರೆ, ಮತ್ತೊಂದು ಇಲಾಖೆ ಅದನ್ನು ಕಿತ್ತುಕೊಂಡು ಬರುತ್ತದೆ. ಬಿಬಿಎಂಪಿ, ಜಲಮಂಡಳಿ, ಸ್ಮಾರ್ಟ್‌ ಸಿಟಿ ಪ್ರಾಧಿಕಾರ, ಬೆಸ್ಕಾಂಗಳ ನಡುವೆ ಸಮನ್ವಯತೆ ಕೊರತೆ ಎದ್ದು ಕಾಣುತ್ತಿದೆ.

31.4 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನ ಕೆ.ಆರ್ ಮಾರುಕಟ್ಟೆಯನ್ನು ಸ್ಮಾರ್ಟ್‌ ಮಾಡುವ ಕಾಮಗಾರಿ ನಡೆಸಲು ಉದ್ದೇಶಿಸಲಾಗಿತ್ತು. 2017ರಲ್ಲಿ ಕಾಮಗಾರಿಯನ್ನೂ ಆರಂಭಿಸಲಾಗಿತ್ತು. ಕೆಲಸ ಆರಂಭವಾಗಿ 6 ವರ್ಷಗಳ ಬಳಿಕವೂ ಕೆ.ಆರ್‌ ಮಾರುಕಟ್ಟೆ ಪರಿಸ್ಥಿತಿ ಹೇಗಿದೆ ಎಂಬುದು ನಮ್ಮ ಕಣ್ಣೆದುರೇ ಇದೆ.

ಬೆಂಗಳೂರು: ಗಬ್ಬೆದ್ದು ನಾರುತ್ತಿರುವ ಕೆ.ಆರ್‌.ಮಾರ್ಕೆಟ್‌, ವ್ಯಾಪಾರಿಗಳು, ಗ್ರಾಹಕರ ಆಕ್ರೋಶ..!

ಇಂತಹದ್ಧೇ ಪರಿಸ್ಥಿತಿ ರಾಜ್ಯದ ಇತರ ಐದು ಸ್ಮಾರ್ಟ್‌ ಸಿಟಿಗಳಲ್ಲೂ ಕಾಣಸಿಗುತ್ತದೆ. ಅಂದಹಾಗೆ, ನಾಲ್ಕೈದು ವರ್ಷಗಳ ಹಿಂದೆ, ದೇಶದಲ್ಲೇ ಸ್ವಚ್ಛ ನಗರಿ ಎಂಬ ಖ್ಯಾತಿ ಗಳಿಸಿದ್ದ ಮೈಸೂರು, ಈ ವರ್ಷ ಬರೋಬ್ಬರಿ 27ನೇ ಸ್ಥಾನಕ್ಕೆ ಕುಸಿದಿದೆ. ಟಾಪ್‌ 10ರಲ್ಲೂ ಸ್ಥಾನ ಪಡೆದಿಲ್ಲ. ಅಂದರೆ, ಮೈಸೂರು ಎಷ್ಟು ಸ್ಮಾರ್ಟ್‌ ಆಗಿದೆ ಎಂಬುದು ಸ್ಪಷ್ಟವಾಗುತ್ತದೆ.

ಮತ್ತೊಂದು ಉದಾ: ಸ್ಮಾರ್ಟ್‌ ಆಗಲೇ ಇಲ್ಲ ಡೆಹ್ರಾಡೂನ್
ಸ್ಮಾರ್ಟ್‌ ಸಿಟಿ ಯೋಜನೆಯಡಿ ಉತ್ತರಾಖಂಡ್‌ನ ರಾಜಧಾನಿ ‘ಡೆಹ್ರಾಡೂನ್ ಸ್ಮಾರ್ಟ್ ಸಿಟಿ ಮಿಷನ್’ ಕೂಡ ಒಂದು. 2015 ಮತ್ತು 2022ರ ನಡುವೆ 1,400 ಕೋಟಿ ರೂ. ಅನುದಾನದಲ್ಲಿ ನಗರವನ್ನು ‘ಸ್ಮಾರ್ಟ್‌’ ಮಾಡಲು ಉದ್ದೇಶಿಸಲಾಗಿತ್ತು. ಆದರೆ, ಈವರೆಗೂ ಆ ನಗರ ‘ಸ್ಮಾರ್ಟ್‌’ ಆಗಲೇ ಇಲ್ಲ.

ನಗರದ ಪರಿಸರವಾದಿಗಳು, ತಜ್ಞರು ಮತ್ತು ಇತಿಹಾಸಕಾರರು ಹೇಳುವಂತೆ, ನಗರದಲ್ಲಿನ ತ್ಯಾಜ್ಯ, ವೇಗವಾಗಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಕೊಳಗೇರಿಗಳ ನಿರ್ವಹಣೆ, ಮಾಲಿನ್ಯ ನಿಯಂತ್ರಣ ಹಾಗೂ ಜೀವವೈವಿಧ್ಯತೆಯ ರಕ್ಷಣೆಯಲ್ಲಿ ‘ಸ್ಮಾರ್ಟ್‌ ಸಿಟಿ ಮಿಷನ್’ ಅಷ್ಟೇನೂ ಕೆಲಸ ಮಾಡಿಲ್ಲ.

ಈ ವರದಿ ಓದಿದ್ದೀರಾ?: ಮೋದಿ ವೈಫಲ್ಯ-1 | ಕೊರೊನಾಗೆ ದೇಶ ತತ್ತರ; 20 ಲಕ್ಷ ಕೋಟಿ ಏನಾಯ್ತು? ಪಿಎಂ-ಕೇರ್ಸ್‌ ಎಲ್ಲೋಯ್ತು?

ಆದರೆ, ಬದಲಾಗಿ, ನಗರದ ಹೊರವಲಯದಲ್ಲಿದ್ದ ಪ್ರಸಿದ್ಧ ಬಾಸ್ಮತಿ ಭತ್ತದ ಕೃಷಿಗೆ ಮೂಲವಾಗಿದ್ದ ಸಿಹಿನೀರಿನ ತೊರೆಗಳು, ಕೆರೆಗಳು ಕಣ್ಮರೆಯಾಗಿವೆ. ನಗರಕ್ಕೆ ಉತ್ತಮವಾದ ಕ್ರಿಯಾಶೀಲ ‘ಮಾಸ್ಟರ್ ಪ್ಲಾನ್’ ಇಲ್ಲ. ಸ್ಮಾರ್ಟ್‌ ಯೋಜನೆ ಜಾರಿಯಾದಾಗಿನಿಂದ ಈವರೆಗೆ ನಗರದಲ್ಲಿ ಜೀವಂತವಾಗಿರುವ ಏಕೈಕ ಉದ್ಯಮವೆಂದರೆ ರಿಯಲ್ ಎಸ್ಟೇಟ್ ಮಾತ್ರ ಎಂದು ಅವರು ಹೇಳುತ್ತಾರೆ.

ಹಾಗಾದರೆ, ಕಳೆದ ಒಂಬತ್ತು ವರ್ಷಗಳಲ್ಲಿ ಸ್ಮಾರ್ಟ್‌ ಆಗಿದ್ದೇನು? ಸ್ಮಾರ್ಟ್ ಸಿಟಿ ಮಿಷನ್ ಏನು ಮಾಡುತ್ತಿದೆ? ಸ್ಮಾರ್ಟ್‌ ಸಿಟಿಗಳು ಎಲ್ಲಿವೆ? ಮೋದಿ ಅವರ ಹಲವಾರು ಜುಮ್ಲಾಗಳಲ್ಲಿ, ಇದೊಂದು ಸ್ಮಾರ್ಟ್‌ ಜುಮ್ಲಾ ಅಲ್ಲವೇ?

ಈ ವರದಿ ಓದಿದ್ದೀರಾ?: ಮೋದಿ ವೈಫಲ್ಯ-2 | ವರ್ಷಕ್ಕೆ 2 ಕೋಟಿ ಉದ್ಯೋಗ ಎಲ್ಲಿ? ಸುಳ್ಳಿನ ಸುಳಿಗೆ ನಿರುದ್ಯೋಗಿ ಯುವಜನರು ಬಲಿ!

 

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ನಿಜ ,
    ಮೋದಿ ತುಂಬಾ ಸ್ಮಾರ್ಟ್
    ಆಗಿ ಕಾಣಿಸ್ತಿದ್ದಾರೆ !

    ನಿಜ ,
    ಕಾಣಿಸ್ತಾ ಇಲ್ಲ
    ಎಲ್ಲೂ ಸ್ಮಾರ್ಟ್ ಸಿಟಿ !!

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

Download Eedina App Android / iOS

X