ತುಮಕೂರು | ರಾಜ್ಯಕ್ಕೆ ಕೇಂದ್ರದಿಂದ ಭಾರೀ ಅನ್ಯಾಯ; ಪರಮೇಶ್ವರ್ ಆರೋಪ

Date:

ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಯನ್ನು ಹಾಳುಮಾಡುತ್ತಿದೆ. ಪ್ರಜಾಪ್ರಭುತ್ವದ ಉಳಿವಿಗಾಗಿ ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಬೇಕಿದೆ ಎಂದು ಗೃಹ ಸಚಿವ ಡಾ ಜಿ.ಪರಮೇಶ್ವರ್ ಕರೆ ನೀಡಿದರು.

ತುಮಕೂರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, “ವಿಪಕ್ಷಗಳ ಕತ್ತು ಹಿಚುಕುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಅಲ್ಲದೆ ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನದಲ್ಲಿದ್ದು, ಪ್ರತಿ ವರ್ಷ ₹4.50 ಲಕ್ಷ ಕೋಟಿ ಹಣವನ್ನು ಕೇಂದ್ರಕ್ಕೆ ಕಳುಹಿಸುತ್ತಿದೆ. ಆದರೆ ನಮಗೆ ನ್ಯಾಯಯುತವಾಗಿ ಬರಬೇಕಾದ ಪಾಲನ್ನು ಕೇಂದ್ರ ಸರ್ಕಾರ ನೀಡುತ್ತಿಲ್ಲ. ನಮ್ಮ ರಾಜ್ಯ ಬಿಜೆಪಿಯ 26 ಮಂದಿ ಸಂಸದರು ಈ ಬಗ್ಗೆ ಚಕಾರ ಎತ್ತುತ್ತಿಲ್ಲ” ಎಂದು ಕಿಡಿ ಕಾರಿದರು.

“ಕರ್ನಾಟಕಕ್ಕೆ ವಿಶೇಷ ಅನುದಾನದಲ್ಲಿ ₹5,000 ಕೋಟಿ ನೀಡಬಹುದೆಂದು ಪ್ಲಾನಿಂಗ್ ಕಮಿಷನ್(ನೀತಿ ಆಯೋಗ) ವರದಿ ನೀಡಿದ್ದರೂ ಕೇಂದ್ರ ಸರ್ಕಾರ ಪರಿಗಣಿಸಿಲ್ಲ. ಬರಗಾಲದಿಂದ ₹36,000 ಕೋಟಿ ನಷ್ಟವಾಗಿದೆ. ನಾವು ₹18,000 ಕೋಟಿಗಷ್ಟೇ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಈ ಕುರಿತು ಸಚಿವರು ಹಾಗೂ ಮುಖ್ಯಂಮತ್ರಿಗಳು ಪ್ರಧಾನಿ ಮತ್ತು ಗೃಹ ಸಚಿವರನ್ನು ಭೇಟಿ ಮಾಡಲು ಏಳು ಬಾರಿ ಪ್ರಯತ್ನಿಸಿದರೂ ಅವಕಾಶ ನೀಡಲಿಲ್ಲ. ಎಂಟನೇ ಬಾರಿಗೆ ಅವಕಾಶ ನೀಡಿದಾಗ ಮಾತುಕತೆ ನಡೆಸಲಾಯಿತು. ಆದರೆ ಎನ್‌ಡಿಆರ್‌ಎಫ್ ಹಣವನ್ನು ಮಾತ್ರ ಬಿಡುಗಡೆ ಮಾಡಿಲ್ಲ. ಈ ಬಗ್ಗೆ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರವನ್ನೂ ಬರೆಯಲಾಗಿದೆ. ಆದರೆ, ವಿತ್ತ ಸಚಿವರು, ʼಕರ್ನಾಟಕಕ್ಕೆ ನೀಡಬೇಕಾದ ಎಲ್ಲ ಅನುದಾನವನ್ನೂ ನೀಡಿದ್ದೇವೆʼ ಎಂದು ಹೇಳುವ ಮೂಲಕ ಅತಿದೊಡ್ಡ ಸುಳ್ಳನ್ನು ಹೇಳುತ್ತಿದ್ದಾರೆ. ಈ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡಲಾಗುತ್ತಿದೆ” ಎಂದು ಆರೋಪಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ದೇಶದಲ್ಲಿ ಇಂಡಿಯಾ ಮೈತ್ರಿ ಕೂಟ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವಿದೆ. ನಾವು ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ, ರೈತರ ಹಿತ ರಕ್ಷಣೆಗೆ ನೂತನ ಕಾಯ್ದೆ ಜಾರಿ, ಜಿಎಸ್‌ಟಿ ಮುಕ್ತ ಕೃಷಿ ಕ್ಷೇತ್ರ, ಯುವಕರಿಗೆ ಅಪ್ರೆಂಟಿಸ್ ಟ್ರೈನಿಂಗ್ ನೀಡುವುದರ ಜತೆಗೆ ₹1ಲಕ್ಷ ನೀಡುತ್ತೇವೆ. ಹಾಗೆಯೇ ಪ್ರತಿ ಮಹಿಳೆಗೆ ವಾರ್ಷಿಕವಾಗಿ ₹1ಲಕ್ಷವನ್ನು ಖಾತೆಗೆ ನೇರ ಜಮಾಮಾಡಿಲಿದ್ದೇವೆ. ಅಲ್ಲದೆ ರಾಜ್ಯದಲ್ಲಿ ಮೇಕೆದಾಟು ಯೋಜನೆಯನ್ನು ಮಾಡಿಯೇ ತೀರುತ್ತೇವೆ” ಎಂದು ಭರವಸೆ ನೀಡಿದರು.

ಈ ಸುದ್ದಿ ಓದಿದ್ದೀರಾ? ಧಾರವಾಡ | ಬರಗಾಲ ನಿರ್ವಹಣೆಗೆ ಅಧಿಕಾರಿಗಳು, ಸಿಬ್ಬಂದಿ ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸಿ: ಜಿಲ್ಲಾಧಿಕಾರಿ ಸೂಚನೆ

“ಬರಗಾಲ ನಿರ್ವಹಣೆಗೆ ರಾಜ್ಯ ಸರ್ಕಾರವೇ ಹಣ ಹಾಕಿ, ಕುಡಿಯುವ ನೀರು, ಮೇವು ಒದಗಿಸುತ್ತಾ ಬಂದಿದೆ. ಇದರ ನಡುವೆ ಗ್ಯಾರಂಟಿ ಕಾರ್ಯಕ್ರಮಗಳನ್ನು ನೀಡಿದ್ದೇವೆ. ಅಭಿವೃದ್ಧಿ ಕಾಮಗಾರಿಗಳನ್ನು ಸ್ಥಗಿತಗೊಳಿಸಿಲ್ಲ. ನಮ್ಮದು ಸ್ಥಿರವಾದ ಸರ್ಕಾರ. ಸಿದ್ದರಾಮಯ್ಯನವರ ನೇತೃತ್ವದಲ್ಲಿ ಬಡತನ ನಿರ್ಮೂಲನೆ, ಯುವಕರಿಗೆ ಉದ್ಯೋಗ, ರೈತರಿಗೆ ಸಹಕಾರ, ಮಹಿಳಾ ಸಬಲೀಕರಣದ ಉದ್ದೇಶವಿಟ್ಟುಕೊಂಡು ಬಜೆಟ್ ನೀಡಿದ್ದೇವೆ” ಎಂದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೃಹಜ್ಯೋತಿ | ಉಚಿತ ವಿದ್ಯುತ್ ಬಿಲ್​ನಿಂದ ಆಧಾರ್ ಡೀಲಿಂಕ್ ಮಾಡುವುದು ಹೇಗೆ?

ರಾಜ್ಯದ ಜನರಿಗೆ ವಿಧಾನಸಭಾ ಚುನಾವಣೆ ಪೂರ್ವ ನೀಡಿದ ಗ್ಯಾರಂಟಿಗಳನ್ನು ಅಸ್ತಿತ್ವಕ್ಕೆ ತರುವಲ್ಲಿ...

ಉತ್ತಮ ನಡೆ | ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲಿಷ್ ತರಗತಿ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು (ಡಿಎಸ್‌ಇಎಲ್) 2024-25ರ ಶೈಕ್ಷಣಿಕ ವರ್ಷದಿಂದ...

ಬೆಂಗಳೂರು | ಜೂನ್ 1ರಿಂದ ಬಿಎಂಟಿಸಿ ವಿದ್ಯಾರ್ಥಿ ಬಸ್ ಪಾಸ್ ವಿತರಣೆ

ಸರ್ಕಾರದ ನಿರ್ದೇಶನದಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಉಚಿತ ಮತ್ತು...

ಚಾಮರಾಜನಗರ | ಆಶ್ರಯ ಮನೆ ಕೊಡಿಸುತ್ತೇನೆಂದು ಗ್ರಾ.ಪಂ ಅಧ್ಯಕ್ಷೆ ಪುತ್ರನಿಂದ ಮಹಿಳೆ ಮೇಲೆ ನಿರಂತರ ಅತ್ಯಾಚಾರ

ಗ್ರಾಮ ಪಂಚಾಯತಿಯಿಂದ ಆಶ್ರಯ ಮನೆ ಕೊಡಿಸುವುದಾಗಿ ನಂಬಿಸಿ ಮಹಿಳೆ ಮೇಲೆ ಪಂಚಾಯತಿ...