ಮೋದಿ ವೈಫಲ್ಯ-2 | ವರ್ಷಕ್ಕೆ 2 ಕೋಟಿ ಉದ್ಯೋಗ ಎಲ್ಲಿ? ಸುಳ್ಳಿನ ಸುಳಿಗೆ ನಿರುದ್ಯೋಗಿ ಯುವಜನರು ಬಲಿ!

Date:

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ – ಅರ್ಥಾತ್ ಎನ್‌ಡಿಎ ಸರ್ಕಾರ 10 ವರ್ಷಗಳ ಆಡಳಿತ ಪೂರೈಸಿದೆ. 2014ರ ಲೋಕಸಭಾ ಚುನಾವಣೆಯ ವೇಳೆ ಮೋದಿ ಅವರು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಅಬ್ಬರದ ಭಾಷಣ ಮಾಡಿದ್ದರು. ಅವರ ಭಾಷಣಕ್ಕೂ ಈಗ 10 ವರ್ಷಗಳು ಕಳೆದಿವೆ. ಆದರೆ, ನಿರುದ್ಯೋಗಿ ಯುವಜನರು ನಿರುದ್ಯೋಗಿಗಳೇ ಆಗಿದ್ದಾರೆ. ನಿರುದ್ಯೋಗದ ಗುಂಪು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವಿಸ್ತರಿಸಿದೆ. ಅಂದರೆ, ಮೋದಿ ಭರವಸೆಯ ವರ್ಷಕ್ಕೆ 2 ಕೋಟಿ ಉದ್ಯೋಗಗಳು ಎಲ್ಲಿ ಹೋದವು?

ಇತ್ತೀಚೆಗೆ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಉದ್ಯೋಗ ಸಚಿವ ಭೂಪೇಂದ್ರ ಯಾದವ್, “ಮೋದಿ ಸರ್ಕಾರದ ಒಂಬತ್ತು ವರ್ಷಗಳ ಆಡಳಿತದಲ್ಲಿ ಐಟಿ, ಉತ್ಪಾದನೆ, ವ್ಯಾಪಾರ ಮತ್ತು ಸಾರಿಗೆ ಸೇರಿದಂತೆ ಒಂಬತ್ತು ಸಂಘಟಿತ ವಲಯಗಳಲ್ಲಿ 1.5 ಕೋಟಿಗೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲಾಗಿದೆ” ಎಂದು ಹೇಳಿದ್ದಾರೆ. ಇದು ಮೋದಿ ಘೋಷಣೆಯ ಪ್ರಕಾರ, ಬಿಜೆಪಿ ಆಡಳಿತದ 9 ತಿಂಗಳಲ್ಲಿ ಸೃಷ್ಟಿಯಾಗಬೇಕಿದ್ದ ಉದ್ಯೋಗಗಳು. ಆದರೆ, 9 ವರ್ಷದಲ್ಲಿ ಇಷ್ಟು ಉದ್ಯೋಗ ಸೃಷ್ಟಿಯಾಗಿದ್ದು, ಭಾರತೀಯ ಯುವಜನರ ಸೌಭಾಗ್ಯವೇ ಸರಿ.

ಇನ್ನು, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜೀತೇಂದ್ರ ಸಿಂಗ್ ಅವರು ಮೋದಿ ಸರ್ಕಾರವು 9 ಲಕ್ಷ ಸರ್ಕಾರಿ ಉದ್ಯೋಗಗಳನ್ನು ಸೃಷ್ಟಿಸಿದೆ ಮತ್ತು ಭರ್ತಿ ಮಾಡಿದೆ ಎಂದು ಹೇಳಿಕೊಂಡಿದ್ದಾರೆ. ಅಂದಹಾಗೆ, ಇತ್ತೀಚಿನ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಕೇಂದ್ರ ಸರ್ಕಾರದ ಅಡಿಯಲ್ಲಿ 30 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸಾಮಾಜಿಕ ಭದ್ರತಾ ಸಂಸ್ಥೆಯಾಗಿರುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಅಂಕಿಅಂಶಗಳ ಪ್ರಕಾರ, ಭವಿಷ್ಯ ನಿಧಿ ಅಡಿಯಲ್ಲಿ ನೊಂದಣಿ ಮಾಡಿಕೊಂಡಿರುವ ಸಂಘಟಿತ ವಲಯದ ಉದ್ಯೋಗಿಗಳ ಸಂಖ್ಯೆ 2023ರಲ್ಲಿ 18.88 ಲಕ್ಷಕ್ಕೆ ಏರಿಕೆಯಾಗಿದೆ. ಇವರಲ್ಲಿ, 8 ಲಕ್ಷ ಮಂದಿ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಈ ಹೊಸಬರಲ್ಲಿ 58.9% ಮಂದಿ 18-25 ವರ್ಷ ವಯಸ್ಸಿನವರು ಎಂದು ಡೇಟಾ ತೋರಿಸುತ್ತದೆ.

ಅದೇನೇ ಇರಲಿ ಇದೆಲ್ಲವನ್ನೂ ಅಳೆದು ತೂಗಿದರೂ, ಮೋದಿ ಅವರ ಘೋಷಣೆಯಲ್ಲಿ 10 ವರ್ಷದಲ್ಲಿ ಸೃಷ್ಟಿಯಾಗಬೇಕಿದ್ದ 20 ಕೋಟಿ ಉದ್ಯೋಗದ ಎದುರು ಏನೇನು ಅಲ್ಲ. ಮುಖ್ಯ ವಿಷಯವೆಂದರೆ, 2022ರಲ್ಲಿ ದೇಶಾದ್ಯಂತ ಒಟ್ಟು 15,783 ಯುವಜನರು ನಿರುದ್ಯೋಗದ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2018ರಿಂದ 2022ರ ನಡುವೆ 28,464 ಯುವಜನರು ನಿರುದ್ಯೋಗದಿಂದ ಬೇಸತ್ತು ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ.

ಅಂದಹಾಗೆ, ನಿರುದ್ಯೋಗ ದರವು 2012ರಲ್ಲಿ (ಮೋದಿ ಅಧಿಕಾರಕ್ಕೆ ಬರುವ ಹಿಂದಿನ ವರ್ಷ) 2.1% ಇತ್ತು. ಇದು ಈಗ 6.1%ಗೆ ಏರಿಕೆಯಾಗಿದೆ. ಗಮನಾರ್ಹವಾಗಿ, 2018ರ ನಂತರದಲ್ಲಿ ನಿರುದ್ಯೋಗ ದರವು ಕಳೆದ 45 ವರ್ಷಗಳಲ್ಲಿಯೇ ಅತ್ಯಂತ ಕೆಟ್ಟ ಪರಿಸ್ಥಿತಿಗೆ ತಲುಪಿತ್ತು.

INC Andhra Pradesh on X: "Unemployment rate at 45-year high in India #IndiasJobCrisis https://t.co/1mzWMETkW6" / X

ಅದರಲ್ಲೂ, ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ತೀವ್ರವಾಗಿ ಹದಗೆಟ್ಟಿತು. ಪದವೀಧರರಲ್ಲಿ ನಿರುದ್ಯೋಗ ದರವು 19.2% ರಿಂದ 35.8%ಕ್ಕೆ ಏರಿದರೆ, ಸ್ನಾತಕೋತ್ತರ ಪದವಿ ಪಡೆದವರಲ್ಲಿ ಈ ನಿರುದ್ಯೋಗ ದರವು 36.2%ಗೆ ದಾಖಲಾಗಿದೆ. ಇನ್ನು, ಪ್ರಧಾನಿ ಮೋದಿ ಅವರು ಪಕೋಡಾ ಮಾರುವುದು ಕೂಡ ಉದ್ಯೋಗವೇ ಎಂದು 2018ರ ಜನವರಿಯಲ್ಲಿ ಸಂದರ್ಶನವೊಂದರಲ್ಲಿ ಹೇಳಿದ್ದರು.

ಸ್ಟಾರ್ಟ್‌ಅಪ್‌ಗಳು ಮತ್ತು ನಿರುದ್ಯೋಗ ದರ

2013 ರಲ್ಲಿ ಕೇವಲ 7,700 ಸ್ಟಾರ್ಟ್‌ಅಪ್‌ಗಳು ಇದ್ದವು. ನಾವೀನ್ಯತೆ ಮತ್ತು ಉದ್ಯಮಶೀಲತೆಯ ಮೇಲೆ ಪ್ರಧಾನಿ ಮೋದಿ ಭಾರೀ ಗಮನ ಹರಿಸಿ ಪರಿಣಾಮ ಕಳೆದ 9 ವರ್ಷಗಳಲ್ಲಿ ಭಾರತವು 98,000 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಮತ್ತು 111 ಯುನಿಕಾರ್ನ್‌ಗಳನ್ನು ಹೊಂದಿದೆ ಎಂದು ಬಿಜೆಪಿ ಹೇಳಿಕೊಳ್ಳುತ್ತಿದೆ. ಆದರೆ, ಉದ್ಯೋಗ ಸೃಷ್ಟಿಯಲ್ಲಾದ ಬದಲಾವಣೆಗಳೇನು?

2022-2023ರಲ್ಲಿ ರಾಷ್ಟ್ರೀಯ ಸ್ಯಾಂಪಲ್ ಸರ್ವೆ ಕಚೇರಿ (ಎನ್‌ಎಸ್‌ಎಸ್‌ಒ) ನಡೆಸಿದ ಆವರ್ತಕ ಕಾರ್ಮಿಕ ಬಲ ಸಮೀಕ್ಷೆ (ಪಿಎಲ್‌ಎಫ್‌ಎಸ್‌) ವಾರ್ಷಿಕ ವರದಿ ಪ್ರಕಾರ, 2022ರ ಜುಲೈನಿಂದ 2023ರ ಜೂನ್‌ವರೆಗೆ ನಿರುದ್ಯೋಗ ದವರು 3.2% ಇತ್ತು. ಅದರೆ, ಇತ್ತೀಚೆಗೆ, ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, 2024ರ ಜನವರಿಯಲ್ಲಿ ನಿರುದ್ಯೋಗ ದರವು 6.8% ಇದೆ. ಅಲ್ಲದೆ, 20ರಿಂದ 24 ವಯಸ್ಸಿನ ಯುವಜನರ ನಿರುದ್ಯೋಗ ಪ್ರಮಾಣವು ಬರೋಬ್ಬರಿ 44.49%ಗೆ ಏರಿಕೆಯಾಗಿದೆ. ಅಂತೆಯೇ, 25 ಮತ್ತು 29ರ ನಡುವಿನ ಯುವಜನರಲ್ಲಿ ನಿರುದ್ಯೋಗವು 14.33% ಇದೆ.

ಕಳೆದ ಹತ್ತು ವರ್ಷಗಳಲ್ಲಿ ದುಡಿಯುವ ವರ್ಗದ ನಿರುದ್ಯೋಗ ದರವು ಏರಿಳಿತ ಕಂಡಿದೆ. 2024ರಲ್ಲಿ 6.8% ಇರುವ ನಿರುದ್ಯೋಗ ದರವು 2023ರಲ್ಲಿ 8.03%, 2021ರಲ್ಲಿ 5.98%, 2020ರಲ್ಲಿ 8.0% 2019ರಲ್ಲಿ 5.27%, 2018ರಲ್ಲಿ 5.33%, 2017 ರಲ್ಲಿ 5.36%, 2016 ರಲ್ಲಿ 5.42%, 2015 ರಲ್ಲಿ 5.44, 2014ರಲ್ಲಿ 5.44% ಇತ್ತು.

ಇನ್ನು, ಕಾರ್ಮಿಕ ಬಲದ ಭಾಗವಹಿಸುವಿಕೆ ದರ (ಎಲ್‌ಎಫ್‌ಪಿಆರ್‌) 2017-18ರಲ್ಲಿ 49.8% ಇತ್ತು. ಅಂದರೆ, ದೇಶದಲ್ಲಿರುವ ದುಡಿಯುವ ವಯಸ್ಸಿನ – 15 ವರ್ಷಕ್ಕಿಂತ ಮೇಲ್ಪಟ್ಟ ಮತ್ತು 65 ವರ್ಷಕ್ಕಿಂತ ಕಡಿಮೆ ವಯಸ್ಸಿನ – ಒಟ್ಟು ಜನಸಂಖ್ಯೆಯಲ್ಲಿ ಅರ್ಧಕ್ಕಿಂತ ಕಡಿಮೆ ಜನರು ನಾನಾ ರೀತಿಯಲ್ಲಿ ಉದ್ಯೋಗವನ್ನು ಹೊಂದಿದ್ದರು. ಅರ್ಧಕ್ಕಿಂತ ಹೆಚ್ಚಿನ ಜನರು ಯಾವುದೇ ಉದ್ಯೋಗಗಳನ್ನು ಮಾಡುತ್ತಿರಲಿಲ್ಲ. ಎಲ್‌ಎಫ್‌ಪಿಆರ್‌ ಪ್ರಮಾಣವು 2022-23ರಲ್ಲಿ 57.9%ಗೆ ಏರಿಕೆಯಾಗಿ, ಸುಧಾರಣೆ ಕಂಡಿದೆ. ಇದರಲ್ಲೂ ನಗರ ಮತ್ತು ಗ್ರಾಮೀಣ ಭಾಗದಲ್ಲಿ ವ್ಯತ್ಯಾಸಗಳಿವೆ. ನಗರ ಪ್ರದೇಶದಲ್ಲಿ 50.4% ಮಾತ್ರವೇ ಇದೆ.

ಕೃಷಿಯೇತರ ವಲಯದಲ್ಲಿನ ಹಿಮ್ಮುಖ ಚಲನೆ ಮತ್ತು ಸ್ಕಿಲ್‌ ಇಂಡಿಯಾ

ಭಾರತ ಕೌಶಲ್ಯಗಳ ವರದಿ 2021ರ ಪ್ರಕಾರ, ಭಾರತದ ಪದವೀಧರರಲ್ಲಿ ಅರ್ಧದಷ್ಟು ಜನರು ನಿರುದ್ಯೋಗಿಗಳಾಗಿದ್ದಾರೆ. ಅಂದರೆ ನಮ್ಮ ಕಾಲೇಜುಗಳು/ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣದ ಗುಣಮಟ್ಟವು ತೀವ್ರವಾಗಿ ಹದಗೆಟ್ಟಿದೆ. ಅದರಲ್ಲೂ, ಎನ್‌ಇಪಿ-2019 ಜಾರಿಯಾದ ಬಳಿಕ ಗಮನಾರ್ಹವಾಗಿ ಹದಗೆಟ್ಟಿದೆ. ಶಿಕ್ಷಣ ಕ್ಷೇತ್ರದ ಗುಣಮಟ್ಟ ಕುಸಿತವೂ, ಕೃಷಿಯೇತರ ಉದ್ಯೋಗಗಳ ವಲಯದಲ್ಲಿ ನಕಾರಾತ್ಮಕ ಪರಿಣಾಮ ಬೀದಿದೆ.

2015ರಲ್ಲಿ ಜಾರಿಗೆ ಬಂದ ಸ್ಕಿಲ್‌ ಇಂಡಿಯಾ ಯೋಜನೆಯು 2022ರ ವೇಳೆಗೆ 40 ಕೋಟಿ ಕಾರ್ಮಿಕರನ್ನು ಕೌಶಲ್ಯಗೊಳಿಸುವ ಗುರಿಯನ್ನು ಹೊಂದಿತ್ತು. ಆದರೆ, ಅದರ ಫಲಿತಾಂಶವೇನು? ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ (ಪಿಎಂಕೆವಿವೈ) ಅಂಶಅಂಶಗಳ ಪ್ರಕಾರ, ಮೂರು ಆವೃತ್ತಿಗಳಲ್ಲಿ ಕ್ರಮವಾಗಿ 18 ಲಕ್ಷ, 4.5 ಲಕ್ಷ ಹಾಗೂ 4 ಲಕ್ಷ ಮಂದಿ ಕೌಶಲ್ಯ ತರಬೇತಿ ಪಡೆದಿದ್ದಾರೆ. ಅವರಲ್ಲಿ, ಅನುಕ್ರಮವಾಗಿ 14%, 43% ಮತ್ತು 7% ಮಂದಿ ಮಾತ್ರವೇ ಉದ್ಯೋಗಗಳನ್ನು ಪಡೆದಿದ್ದಾರೆ. ಉಳಿದವರೆಲ್ಲರೂ ಮತ್ತೆ ನಿರುದ್ಯೋಗಿಗಳ ಗುಂಪಿಗೆ ಸೇರಿದ್ದಾರೆ.

ಇದರಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರ, ಕೌಶಲ್ಯ ತರಬೇತಿ ಅರಂಭವಾದ ಮೊದಲ ಆವೃತ್ತಿಯಲ್ಲಿ ಮಾತ್ರವೇ ಹೆಚ್ಚಿನ ಜನರು ತರಬೇತಿ ಪಡೆದಿದ್ದಾರೆ. ನಂತರ ಎರಡು ಆವೃತ್ತಿಗಳಲ್ಲಿ ತರಬೇತಿ ಪಡೆದವರ ಸಂಖ್ಯೆ ತೀವ್ರ ಕುಸಿತ ಕಂಡಿದೆ.

How Modi's Flagship Skill India Project Stumbled Hard in Its First Year

ಕೃಷಿಯೇತರ ಉದ್ಯೋಗ ವಲಯದಲ್ಲಿ ಮೂರು ಗುಂಪುಗಳಿವೆ. ಈ ವಲಯದಲ್ಲಿ ನಿರುದ್ಯೋಗಿಗಳ ಸಂಖ್ಯೆ ನಿರಂತರವಾಗಿ ಬೆಳೆಯುತ್ತಲೇ ಇದೆ.ಮೊದಲನೆ ಗುಂಪಿನಲ್ಲಿ, 2023ರ ಅಕ್ಟೋಬರ್‌ನಲ್ಲಿ ನಿರುದ್ಯೋಗಿಗಳ ಸಂಖ್ಯೆ 42 ಲಕ್ಷ ಆಗಿದೆ. ಇವರು ಕೆಲಸ ಹುಡುಕಿ, ಉದ್ಯೋಗ ದೊರೆಯದೆ, ಉದ್ಯೋಗ ಹುಡುಕುವುದನ್ನೇ ನಿಲ್ಲಿಸಿದ್ದಾರೆ. ಎರಡನೇ ಗುಂಪಿನಲ್ಲಿ, ಕೆಲಸ ಹುಡುಕುತ್ತಿರುವ ಯುವಜನರು (15 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟವರು) ಕನಿಷ್ಠ 80 ಲಕ್ಷ ಮಂದಿ ಇದ್ದಾರೆ. ಇವರ ಸಂಖ್ಯೆ ಪ್ರತಿ ವರ್ಷ ಹೆಚ್ಚಾಗುತ್ತಿದೆ. ಇನ್ನು ಮೂರನೇ ಗುಂಪಿನಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಈ ಗುಂಪಿನಲ್ಲಿರುವವರು ಕೃಷಿ ಕಾರ್ಮಿಕರಾಗಿ, ಕೃಷಿ ಸಹಾಯಕರಾಗಿ ದುಡಿಯುತ್ತಿದ್ದಾರೆ.

ದುರಂತವೆಂಬಂತೆ, 2020ರ ಏಪ್ರಿಲ್‌ನಲ್ಲಿ ಹಠಾತ್ತನೆ ಜಾರಿಗೊಳಿಸಿದ ಲಾಕ್‌ಡೌನ್‌ ಲಕ್ಷಾಂತರ ಜನರು ತಮ್ಮೂರುಗಳಿಗೆ ಹಿಮ್ಮುಖ ವಲಸೆ ಆರಂಭಿಸುವಂತೆ ಮಾಡಿತು. ಪರಿಣಾಮವಾಗಿ 6 ಕೋಟಿ ಜನರು ಮರಳಿ ಕೃಷಿಯಲ್ಲಿ ತೊಡಗಿದ್ದಾರೆ.

ಉತ್ಪಾದನಾ ಕ್ಷೇತ್ರದಲ್ಲಿ ಉದ್ಯೋಗ ಕುಸಿತ

ಉತ್ಪಾದನಾ ವಲಯದಲ್ಲಿ ಉದ್ಯೋಗದ ಪ್ರಮಾಣವು 2012ರಲ್ಲಿ 12.8% ಇತ್ತು. ಅದು 2018ರ ವೇಳೆಗೆ 11.5%ಗೆ ಕುಸಿಯಿತು. ಈ ಪ್ರಮಾಣವು ನೆರೆಯ ರಾಷ್ಟ್ರ ಬಾಂಗ್ಲಾದೇಶಕ್ಕಿಂತ ಕಡಿಮೆ ಇದೆ. ಆ ದೇಶದಲ್ಲಿ ಉತ್ಪಾದನಾ ವಲಯದ ಉದ್ಯೋಗ ಪ್ರಮಾಣವು 16% ಇದೆ.

ಇನ್ನೊಂದು ಅಂಶವೆಂದರೆ, ಈ ಕ್ಷೇತ್ರದಲ್ಲಿನ ಆರ್ಥಿಕ ಬೆಳವಣಿಗೆಯು 2014ರಲ್ಲಿ 8% ಇತ್ತು. ಕಳೆದ 9 ವರ್ಷಗಳಲ್ಲಿ ಇದು 5.7%ಗೆ ಕುಸಿದಿದೆ. ಇದರಲ್ಲಿ, 2004ರಿಂದ 2012ರವರೆಗಿನ ಯುಪಿಎ ಅವಧಿಯಲ್ಲಿ ಉದ್ಯೋಗದ ಬೆಳವಣಿಗೆಯು ವರ್ಷಕ್ಕೆ 75 ಲಕ್ಷ ಇತ್ತು. ಇದು, 2013ರಿಂದ 2019ರವರೆಗೆ ವರ್ಷಕ್ಕೆ 29 ಲಕ್ಷಕ್ಕೆ ಇಳಿದಿದೆ. ಐಎಂಎಫ್‌ ಪ್ರಕಾರ, ಜಿಡಿಪಿ ಉತ್ತಮವಾಗಿ ಅಭಿವೃದ್ಧಿ ಹೊಂದಲು ಪ್ರತಿ ವರ್ಷ ಕನಿಷ್ಠ 1 ಕೋಟಿ ಕೃಷಿಯೇತರ ಹೊಸ ಉದ್ಯೋಗಗಳು ಸೃಷ್ಟಿಯಾಗಬೇಕಾಗುತ್ತದೆ.

ಈ ವರದಿ ಓದಿದ್ದೀರಾ?: ಮೋದಿ ವೈಫಲ್ಯ-1 | ಕೊರೋನಗೆ ದೇಶ ತತ್ತರ; 20 ಲಕ್ಷ ಕೋಟಿ ಏನಾಯ್ತು? ಪಿಎಂ-ಕೇರ್ಸ್‌ ಎಲ್ಲೋಯ್ತು?

ಸಿಎಂಐಇ ದತ್ತಾಂಶಗಳ ಪ್ರಕಾರ, 2023ರ ಅಕ್ಟೋಬರ್‌ನಲ್ಲಿ ಇರುದ್ಯೋಗ ದರವು 10% ಆಗಿದೆ. ಆಧರೆ, ಪಿಎಲ್‌ಎಫ್‌ಎಸ್‌ ಡಾಟಾದಲ್ಲಿ 5.3% ಎಂದು ಹೇಳುತ್ತಿದೆ. ಈ ಸಿಎಂಐಇ ಡಾಟಾ ಅಂತಾರಾಷ್ಟ್ರೀಯವಾಗಿ ವ್ಯಾಖ್ಯಾನಿಸಲಾಗುತ್ತಿದೆ. ಇದನ್ನು ಪಿಎಲ್‌ಎಫ್‌ಎ ಮಾಡುವುದಿಲ್ಲ. ಸಿಎಂಐಎ ಅಂಕಿಅಂಶವು ಸಂಘಟಿತ ಮತ್ತು ಅಸಂಘಟಿತ ವಲಯಗಳನ್ನು ಹಗೂ ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡನ್ನೂ ಒಳಗೊಳ್ಳುತ್ತದೆ.

ಮೋದಿಗೆ ಪ್ರಚಾರ ಕೊಡದ ಪಿಎಂಇಜಿಪಿ ಮತ್ತು ಸಿಜಿಟಿಎಂಎಸ್‌ಇ

ಇನ್ನು, 2008ರಲ್ಲಿಯೇ ಆರಂಭವಾಗಿದ್ದ ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮದ (ಪಿಎಂಇಜಿಪಿ) ಅಡಿಯಲ್ಲಿ ಹೊಸ ಉದ್ಯಮ ಆರಂಭಿಸಲು ಗರಿಷ್ಠ ಯೋಜನಾ ವೆಚ್ಚವನ್ನು ಉತ್ಪಾದನಾ ವಲಯಕ್ಕೆ 25-50 ಲಕ್ಷ ರೂ. ಮತ್ತು ಸೇವಾ ವಲಯಕ್ಕೆ 10-20 ಲಕ್ಷ ರೂ.ಗೆ ಏರಿಸಲಾಗಿದೆ. ಈ ಯೋಜನೆ ಅಡಿಯಲ್ಲಿ ಈವರೆಗೆ, ಸುಮಾರು 8.34 ಲಕ್ಷಕ್ಕೂ ಹೆಚ್ಚು ಉದ್ಯಮಗಳನ್ನು ಸ್ಥಾಪಿಸಲಾಗಿದೆ. ಆ ಮೂಲಕ, ಬರೋಬ್ಬರಿ 68 ಲಕ್ಷ ಉದ್ಯೋಗ ಸೃಷ್ಟಿಸಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.

ರಾಯಚೂರು: ಪಿಎಂಇಜಿಪಿ ಯೋಜನೆ: ಸುಳ್ಳು ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬೇಡಿ - The Hindustan Gazette Kannada

ಕ್ರೆಡಿಟ್ ಗ್ಯಾರಂಟಿ ಸ್ಕೀಮ್ ಫಾರ್‌ ಮೈಕ್ರೋ ಅಂಡ್ ಸ್ಮಾಲ್ ಎಂಟರ್‌ಪ್ರೈಸಸ್ (ಸಿಜಿಟಿಎಂಎಸ್‌ಇ) ಅಡಿಯಲ್ಲಿ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ (ಎಂಎಸ್‌ಇ) 2 ಕೋಟಿ ರೂ.ಗಳವರೆಗೆ ಮೇಲಾಧಾರರಹಿತ ಸಾಲವನ್ನು ನೀಡಲಾಗುತ್ತದೆ,. 2023ರ ಆರ್ಥಿಕ ವರ್ಷದಲ್ಲಿ 60,376 ಕೋಟಿ ರೂ.ಗಳಷ್ಟು ಸಾಲ ನೀಡಲಾಗಿದೆ ಎಂದು ಸರ್ಕಾರ ಹೇಳಿದೆ. ಆದರೆ, ಈ ಯೋಜನೆಗಳ ಅಡಿಯಲ್ಲಿ ಉದ್ಯೋಗ ಸೃಷ್ಟಿಯಲ್ಲಿ ದೊಡ್ಡ ವೇಗವೇನೂ ಕಾಣಲಿಲ್ಲ. ಈ ಯೋಜನೆಗಳ ಮೂಲಕ ಮೋದಿ ಅವರು ಅಪಾರ ಜನಪ್ರಿಯತೆಯನ್ನೂ ಗಳಿಸಲು ಸಾಧ್ಯವಾಗಿಲ್ಲ.

ಇತ್ತೀಚೆಗೆ ಇಂಡಿಯಾ ಟುಡೆ ಮಾಧ್ಯಮ ಸಂಸ್ಥೆಯು ‘ಮೂಡ್ ಆಫ್‌ ದಿ ನೇಷನ್’ (ಎಂಒಟಿಎನ್) ಎಂಬ ಸಮೀಕ್ಷೆ ನಡೆಸಿದೆ. ಸಮೀಕ್ಷೆಯಲ್ಲಿ ಕನಿಷ್ಠ 54% ಜನರು ನಿರುದ್ಯೋಗ ಪರಿಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಹೇಳಿದ್ದಾರೆ. 17% ಜನರು ಪರಿಸ್ಥಿತಿಯು ಕೊಂಚ ಗಂಭೀರವಾಗಿದೆ ಎಂದಿದ್ದಾರೆ. ಮತ್ತೊಂದೆಡೆ, ನಿರುದ್ಯೋಗ ಪರಿಸ್ಥಿತಿಯು ಗಂಭೀರವಾಗಿಲ್ಲ ಎಂದೂ 4% ಜನರು ಹೇಳಿದ್ದಾರೆ.

ಈ ಎಲ್ಲ ಅಂಕಿಅಂಶಗಳು ಹೇಳುತ್ತಿರುವುದು ಇಷ್ಟೇ… ಪ್ರಧಾನಿ ಮೋದಿ ಅವರು ಯುವಜನರಿಗೆ ಉದ್ಯೋಗ ಕೊಡುವಲ್ಲಿ ವಿಫಲರಾಗಿದ್ದಾರೆ. ಹಿಂದುತ್ವ, ಕೋಮುವಾದದಂತಹ ಭಾವನಾತ್ಮಕ ವಿಷಯಗಳನ್ನು ಯುವಜನರ ತಲೆಗೆ ತುಂಬಿ, ಸಂಘಪರಿವಾರದ ಕಾಲಾಳುಗಳನ್ನಾಗಿ ಬಿಜೆಪಿ ಮಾಡುತ್ತಿದೆ. ನೀವು ಶಿಕ್ಷಣ ಪಡೆದರೂ, ನಿಮ್ಮಲ್ಲಿ ಕೌಶಲ್ಯವಿಲ್ಲ. ಕೌಶಲ್ಯ ಕೊಡುತ್ತೇವೆಂದು ಉನ್ನತ ಶಿಕ್ಷಣ ಪಡೆದಾಗಿಯೂ ಉದ್ಯೋಗಕ್ಕೆ ಯುವಜನರು ಅರ್ಹರಲ್ಲ ಎಂಬಂತಹ ವಾದವನ್ನು ಮುನ್ನೆಲೆಗೆ ತರಲಾಗುತ್ತಿದೆ. ಇದೆಲ್ಲವನ್ನೂ ಮೆಟ್ಟಿ ಯುವಜನರು ಎಚ್ಚೆತ್ತುಕೊಳ್ಳಬೇಕಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲಕ್ನೋ ಕಟ್ಟಡ ಕುಸಿತ | ಮೃತರ ಸಂಖ್ಯೆ 8ಕ್ಕೆ ಏರಿಕೆ, 28 ಮಂದಿಗೆ ಗಾಯ

ಲಕ್ನೋ ಕಟ್ಟಡ ಕುಸಿತ ಪ್ರಕರಣದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಭಾನುವಾರ ಮುಂಜಾನೆ...

ರಾಜಕೀಯ ‘ಕುಸ್ತಿಯಂಗಳ’ಕ್ಕೆ ವಿನೇಶ್‌ ಫೋಗಟ್‌; ಇದೇನಾ ʼಹೋರಾಟ ಮುಂದುವರಿಯಲಿದೆ…ʼಎಂಬ ಮಾತಿನ ಒಳಾರ್ಥ?

ಕುಸ್ತಿ ಅಂಗಳದಲ್ಲಿ ಸತತ ಒಂದೊಂದೇ ಗೆಲುವಿನ ಮೆಟ್ಟಿಲೇರಿದ ಚರ್ಕಿ ದಾದ್ರಿಯ ಛಲಗಾರ್ತಿಗೆ...

ಮಣಿಪುರದ ಮೊದಲ ಸಿಎಂ ಮನೆ ಗುರಿಯಾಗಿಸಿ ರಾಕೆಟ್ ದಾಳಿ; ‘ಸಾರ್ವಜನಿಕ ತುರ್ತು ಪರಿಸ್ಥಿತಿ’ ಘೋಷಣೆ

ಶಂಕಿತ ಬುಡಕಟ್ಟು ಉಗ್ರರು ಶುಕ್ರವಾರ ಮಣಿಪುರದ ಬಿಷ್ಣುಪುರ್ ಜಿಲ್ಲೆಯಲ್ಲಿ ಮಣಿಪುರದ ಮೊದಲ...