ಧಾರವಾಡ | ಬಾಬು ಜಗಜೀವನ್‌ ರಾಂ ಅವರ 117ನೇ ಜನ್ಮದಿನಾಚರಣೆ

Date:

Advertisements

ಪ್ರಸ್ತುತ ಯುವಜನಾಂಗವು ಬಾಬು ಜಗಜೀವನ್‌ ರಾಂ ಅವರ ಸಿದ್ಧಾಂತಗಳನ್ನು ಅನುಸರಿಸಿ ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕಿದೆ ಎಂದು ಮಾದಿಗ ದಂಡೋರ ಎಂಆರ್‌ಪಿಎಸ್‌ ಉತ್ತರ ಕರ್ನಾಟಕದ ಅಧ್ಯಕ್ಷ ಮಂಜುನಾಥ ಕೊಂಡಪಲ್ಲಿ ಹೇಳಿದರು.

ಧಾರವಾಡ ಜಿಲ್ಲೆಯ ಹುಬ್ಬಳ್ಳಿ ನಗರದಲ್ಲಿರುವ ಇಂದಿರಾ ಗಾಜಿನಮನೆಯ ಆವರಣದಲ್ಲಿ ಧಾರವಾಡ ಜಿಲ್ಲಾ ಮಾದಿಗ ದಂಡೋರ ಎಂಆರ್‌ಪಿಎಸ್‌ ಪದಾಧಿಕಾರಿಗಳು ಹಮ್ಮಿಕೊಂಡಿದ್ದ ಹಸಿರುಕ್ರಾಂತಿಯ ಹರಿಕಾರ, ಕಾರ್ಮಿಕ ಕಾಯ್ದೆಗಳ ಶಿಲ್ಪಿ, ಭಾರತ ಕಂಡ ಅಪ್ರತಿಮ ರಾಜಕಾರಣಿಗಳಲ್ಲಿ ಅಗ್ರಗಣ್ಯ ಮಾಜಿ ಉಪಪ್ರಧಾನಿ ಬಾಬು ಜಗಜೀವನ್ ರಾಂ ಅವರ 117ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

“ರಕ್ಷಣೆ, ಕಾನೂನು, ಕಾರ್ಮಿಕ, ಸಂಚಾರ ಮತ್ತು ಸಂಪರ್ಕ ಇತ್ಯಾದಿ ಖಾತೆಗಳ ಸಚಿವರಾಗಿ ಬಾಬು ಜಗಜೀವನ್ ರಾಂ ಅವರು ನಮ್ಮ ದೇಶಕ್ಕೆ ನೀಡಿದ ಕೊಡುಗೆಗಳು ಅಪಾರ. ಪರಕೀಯರ ದಾಳಿಯನ್ನು ಸದೆಬಡಿದು, ಶತ್ರು ಸೈನ್ಯ ಶರಣಾಗುವಂತೆ ಮಾಡಿದ ಸ್ವತಂತ್ರ ಭಾರತದ ಪ್ರಪ್ರಥಮ ರಕ್ಷಣಾ ಮಂತ್ರಿ. ಅಲ್ಲದೆ ರಕ್ಷಣಾ ಇಲಾಖೆಯಲ್ಲಿ ಜಾತಿ ಆಧಾರಿತ ತುಕಡಿಗಳಲ್ಲಿ ಬೇರೆ ಜಾತಿಯವರನ್ನು ಸೇರಿಸುವಂತೆ ಮಾಡಿ ಸೈನ್ಯವು ಜಾತ್ಯತೀತ ಭಾವನೆಯುಳ್ಳದ್ದಾಗಿರಬೇಕೆಂದು ಯೋಚಿಸಿದ ದೂರದರ್ಶಿ ಬಾಬೂಜಿಯವರು” ಎಂದು ಸ್ಮರಿಸಿದರು.

Advertisements

“ಕೇಂದ್ರ ಸರ್ಕಾರದ ಕಾರ್ಮಿಕ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ “ಕನಿಷ್ಟ ಕೂಲಿ ಗೊತ್ತುವಳಿ ಶಾಸನ”ವನ್ನು ಜಾರಿಗೆ ತಂದರು. ಹರಿಜನರೇ ಹೆಚ್ಚಾಗಿರುವ ಕೃಷಿ ಕಾರ್ಮಿಕರಿಗೂ ಅಸಂಘಟಿತ ಕೂಲಿಕಾರರಿಗೂ ಇದು ಹೆಚ್ಚಿನ ಅನುಕೂಲ ಮಾಡಿತು. ಕಾರ್ಮಿಕರ ಭವಿಷ್ಯ ನಿಧಿ (ಪ್ರಾವಿಡೆಂಟ್ ಫಂಡ್) ಇಎಸ್‌ಐ ಮತ್ತು ಇತರೆ ಕಾರ್ಮಿಕರ ಕಲ್ಯಾಣ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದರು. ಆಹಾರ ಕ್ಷಾಮದಿಂದ ದೇಶ ಕಂಗೆಟ್ಟ ಸಂದರ್ಭದಲ್ಲಿ ರೈತರಿಗೆ ರಿಯಾಯತಿ ದರದಲ್ಲಿ ಬೀಜ, ಗೊಬ್ಬರ, ಕೃಷಿ ಯಂತ್ರೋಪಕರಣಗಳು ದೊರೆಯುವಂತಹ ನೀತಿಗಳನ್ನು ಜಾರಿಗೆ ತಂದು ಹಸಿರುಕ್ರಾಂತಿಯ ಹರಿಕಾರರೆಂದು ಹೆಸರುವಾಸಿಯಾದರು” ಎಂದು ತಿಳಿಸಿದರು.

“ಬಾಬು ಜಗಜೀವನ್ ರಾಂ ಅವರ ಜೀವನವನ್ನು ಅಧ್ಯಯನ ಮಾಡಿ ಅವರ ಸಿದ್ಧಾಂತಗಳನ್ನು ತಿಳಿದು ಅನುಸರಿಸಿ ಇಂದಿನ ಯುವಜನಾಂಗವು ತಮ್ಮಲ್ಲಿ ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದರ ಮೂಲಕ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುವಂತಾಗಬೇಕು” ಎಂದು ಕರೆ ನೀಡಿದರು.

ಈ ಸುದ್ದಿ ಓದಿದ್ದೀರಾ? ಬೀದರ್‌ | ಕುಸ್ತಿ ಪಂದ್ಯವಳಿ; ಬಾಲಕನನ್ನು ಸೋಲಿಸಿದ ಬಾಲಕಿ

ಧಾರವಾಡ ಜಿಲ್ಲಾ ಅಧ್ಯಕ್ಷ ಸತ್ಯನಾರಾಯಣ ಎಂ, ಕಾರ್ಯಾಧ್ಯಕ್ಷ ಗೋವಿಂದ ಬೆಲ್ಡೋಣಿ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಪ್ರಕಾಶ ಕನಮಕ್ಕಲ, ಹಿರಿಯ ಮುಖಂಡ ರಂಗನಾಯಕ ತಪೇಲ, ಯುವಘಟಕದ ಅಧ್ಯಕ್ಷರುಗಳಾದ ಸತ್ಯನಾರಾಯಣ ಸಾಕೆ, ಹರೀಶ ಅನಂತಪುರ, ಹಿರಿಯ ಸಮಾಜಸೇವಕರುಗಳಾದ ಸು ಕೃಷ್ಣಮೂರ್ತಿ, ಅಣ್ಣಪ್ಪ ಬಾಗಲಕೋಟ, ಪ್ರಕಾಶ ಗುಡಿಹಾಳ, ಅರುಣ ಹೊಸಮನಿ, ಪ್ರಸಾದ ಸೌದುಲ, ವೆಂಕಟೇಶ ಕೊಂಡಪಲ್ಲಿ ಸೇರಿದಂತೆ ಇತರರು ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಸೆ. 6ಕ್ಕೆ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ

ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ಉತ್ಸವದಲ್ಲಿ ಈ ಬಾರಿ ಏನೆಲ್ಲಾ...

ಬೆಳಗಾವಿ : ಗಾಂಜಾ ಮಾರಾಟ ಮಾಫಿಯಾ 9 ಮಂದಿ ಅರೆಸ್ಟ್ : ರೂ 30 ಲಕ್ಷ ಮೌಲ್ಯದ ಗಾಂಜಾ ವಶ

ಬೆಳಗಾವಿ ನಗರದಲ್ಲಿ ಗಾಂಜಾ ಮಾರಾಟ ಜಾಲ ಬಯಲಾಗಿದ್ದು, ಬೆಳಗಾವಿ ಪೊಲೀಸರು ದೊಡ್ಡ...

ಬಾಗಲಕೋಟೆ | ಬಿಜೆಪಿ ಮತಗಳ್ಳತನ ವಿರುದ್ಧ ವ್ಯಾಪಕ ಹೋರಾಟ: ಮಾಜಿ ಸಚಿವ ವಿನಿಯಕುಮಾರ್

ಬಿಜೆಪಿ ಮತಗಳ್ಳತನ ನಡೆಸಿ ಚುನಾವಣೆ ಅಕ್ರಮ ಎಸಗಿರುವ ಬಗ್ಗೆ ವ್ಯಾಪಕವಾಗಿ ಹೋರಾಟ...

ಶಿವಮೊಗ್ಗ | KSRTC ನಗರ ಸಾರಿಗೆ ಬಸ್ ಮಲವಗೊಪ್ಪದ, ಚೆನ್ನಬಸವೇಶ್ವರ ದೇವಸ್ಥಾನ ಬಳಿ ಕಡ್ಡಾಯ ನಿಲುಗಡೆಗೆ ಆದೇಶ

ಶಿವಮೊಗ್ಗ, ಸಾರ್ವಜಕನಿಕ ಪ್ರಯಾಣಿಕರು/ಶಾಲಾ-ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಿವಮೊಗ್ಗ-ಭದ್ರಾವತಿ ಮಾರ್ಗದಲ್ಲಿ ಕಾರ್ಯಾಚರಣೆಯಾಗುವ ನಗರ...

Download Eedina App Android / iOS

X