ಬೆಂಗಳೂರು | ‘ಡಿಹೈಡ್ರೇಶನ್’ ಪ್ರಕರಣಗಳಲ್ಲಿ ಹೆಚ್ಚಳ; ಓಆರ್‌ಎಸ್‌ ಮಾರಾಟದಲ್ಲಿ ಶೇ.60 ಏರಿಕೆ

Date:

ರಾಜ್ಯ ರಾಜಧಾನಿ ಬೆಂಗಳೂರು ತನ್ನದೇ ಆದ ವಾತಾವರಣಕ್ಕೆ ಹೆಸರುವಾಸಿಯಾಗಿದೆ. ಈ ನಗರದಲ್ಲಿ ಮೂಲ ಬೆಂಗಳೂರಿಗರಿಗಿಂತ ವಲಸೆ ಬಂದು ನೆಲೆಸಿದವರನ್ನೆ ಹೆಚ್ಚಾಗಿ ಕಾಣಬಹುದು. ಏಕೆಂದರೆ, ಬೆಂಗಳೂರಿನ ವಾತಾವರಣ ಎಲ್ಲರನ್ನು ಸೆಳೆಯುತ್ತದೆ. ಆದರೆ, ಈಗ ನಗರವು ಗರಿಷ್ಠ 37.2 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ದಾಖಲಿಸಿದೆ. ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಲೇ ಇದ್ದು, ಜನರು ಬಿಸಿಲ ಝಳಕ್ಕೆ ಕಂಗಾಲಾಗಿದ್ದಾರೆ. ಈ ನಡುವೆ ನೀರಿನ ಸಮಸ್ಯೆ ಕೂಡ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಜನರು ಅನಾರೋಗ್ಯಕ್ಕೀಡಾಗುತ್ತಿದ್ದಾರೆ.

- Advertisement -

ತಾಪಮಾನ ಏರಿಕೆಯಾಗುತ್ತಿದ್ದಂತೆಯೇ ಸಾಕಷ್ಟು ಜನರು ನಿರ್ಜಲೀಕರಣ (ಡಿಹೈಡ್ರೇಶನ್) ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ನಗರದ ಹಲವು ಆಸ್ಪತ್ರೆಗಳಿಗೆ ವಾಂತಿ ಮತ್ತು ಅತಿಸಾರ ರೋಗ ಲಕ್ಷಣಗಳೊಂದಿಗೆ ಹಲವು ಜನರು ದಾಖಲಾಗುತ್ತಿದ್ದಾರೆ. ಈ ನಡುವೆ ಒಆರ್‌ಎಸ್‌ (ORS)ಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಜನರು ಔಷಧಾಲಯಗಳಿಂದಷ್ಟೇ ಅಲ್ಲದೆ, ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕವೂ ಒಆರ್‌ಎಸ್‌ಗಳನ್ನು ಖರೀದಿ ಮಾಡುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಧಿಕೃತ ಕೆಲಸಕ್ಕೆ WHATSAPP ವೆಬ್ ಅಪಾಯಕಾರಿ ಏಕೆ? ಗೃಹ...

ಕಚೇರಿ, ಸಾರ್ವಜನಿಕ ಅಥವಾ ಹಲವರು ಹಂಚಿಕೊಂಡು ಬಳಸುವ ಕಂಪ್ಯೂಟರ್‌ಗಳಲ್ಲಿ WHATSAPP ವೆಬ್ ಬಳಸುವವರಿಗೆ ಕೇಂದ್ರ ಗೃಹ ಸಚಿವಾಲಯ ಮಹತ್ವದ ಭದ್ರತಾ ಎಚ್ಚರಿಕೆ ನೀಡಿದೆ. ಸಚಿವಾಲಯದ ಅಧೀನದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ...

ಆನೆ ಓಡಿಸಲು ಜೇನುನೊಣ ಸಾಕು! ಏನಿದು ತಂತ್ರ?

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೃಷಿಕರು ಆನೆ ಹಾವಳಿ ತಡೆಗೆ ಸರಳ ಮತ್ತು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಆನೆ ಬರುವ ದಾರಿಯಲ್ಲಿ ಜೇನು ಪೆಟ್ಟಿಗೆಗಳನ್ನಿಟ್ಟು ಗಜಪಡೆಯನ್ನು ಹಿಮ್ಮೆಟ್ಟಿಸುವ ಮಾರ್ಗವಿದು. ಆನೆಗಳ ಸೊಂಡಿಲಿನ ಒಳಭಾಗ...

ವೈದ್ಯರಿಲ್ಲ, ಔಷಧವೂ ಇಲ್ಲ! ದಶಕ ಕಳೆದರೂ ಚೇತರಿಸದ ಗಜೇಂದ್ರಗಡ...

ಗಜೇಂದ್ರಗಡ ತಾಲೂಕು ಘೋಷಣೆಯಾಗಿ ದಶಕ ಕಳೆದರೂ ಇಂದಿಗೂ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿಲ್ಲ. ವೈದ್ಯರ ಕೊರತೆ, ಅಗತ್ಯ ಔಷಧಿಗಳ ಕೊರತೆ, ಸಿಬ್ಬಂದಿಗಳ ಕೊರತೆ ಇರುವುದರಿಂದ, ಇಲ್ಲಿಗೆ ಬರುವ ರೋಗಿಗಳಿಗೆ ಸರಿಯಾದ ಚಿಕತ್ಸೆ,...

ಮಕ್ಕಳ ತಜ್ಞ ಮತ್ತು ಆತ್ರೇಯಾ ಆಸ್ಪತ್ರೆಯ ಸಂಸ್ಥಾಪಕ ಡಾ.ನಾರಾಯಣಸ್ವಾಮಿ ಮಾತನಾಡಿ, “ಕಳೆದ ಕೆಲವು ವಾರಗಳಿಂದ ಸಾಕಷ್ಟು ಜನರು ನಿರ್ಜಲೀಕರಣದಿಂದಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. 23 ಮಕ್ಕಳು ಮತ್ತು 20 ವಯಸ್ಕರು ದಾಖಲಾಗಿದ್ದಾರೆ. ಈ ಸಮಸ್ಯೆಯು ಎಲ್ಲ ವಯೋಮಾನದವರಿಗೂ ಸಮಾನ್ಯವಾಗಿ ಪರಿಣಾಮ ಬೀರುತ್ತದೆ. ಆದರೆ, ಚಿಕ್ಕಮಕ್ಕಳು, ದೀರ್ಘಕಾಲಿಕ ರೋಗಳಿಂದ ಬಳಲುತ್ತಿರುವವರು ಹಾಗೂ ವಯಸ್ಸಾದವರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ” ಎಂದಿದ್ದಾರೆ.

“ತಾಪಮಾನ ಹೆಚ್ಚಾದಂತೆ ಬೆವರುವಿಕೆ ಹೆಚ್ಚಾಗುತ್ತಿದೆ. ಇದರಿಂದ ನಿರ್ಜಲೀಕರಣ ಸಮಸ್ಯೆ ಎದುರಾಗುತ್ತದೆ. ಈ ಸಮಸ್ಯೆಯಿಂದ ದೂರ ಉಳಿಯಲು ಜನರು ಹೆಚ್ಚೆಚ್ಚು ನೀರು ಹಾಗೂ ದ್ರವ ಪದಾರ್ಥಗಳನ್ನು ಸೇವನೆ ಮಾಡುವುದು ಮುಖ್ಯ” ಎಂದು ತಿಳಿಸಿದ್ದಾರೆ.

ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್‌ನ ಸಲಹೆಗಾರ ಡಾ.ನಿಧಿನ್ ಮೋಹನ್, “ವಯಸ್ಸಾದ ವ್ಯಕ್ತಿಗಳು, ವಿಶೇಷವಾಗಿ ಬೆವರು ಸ್ರವಿಸುವಿಕೆಯನ್ನು ಕಡಿಮೆ ಮಾಡುವ ಔಷಧಿಗಳನ್ನು ಸೇವಿಸುವವರು ಹಾಗೂ ಆಗಾಗ್ಗೆ ಆಲ್ಕೊಹಾಲ್ ಸೇವಿಸುವವರು ಶಾಖದ ಹೊಡೆತಕ್ಕೆ ಹೆಚ್ಚು ಒಳಗಾಗುತ್ತಾರೆ” ಎಂದು ಹೇಳಿದ್ದಾರೆ.

“ದೇಹದ ಉಷ್ಣತೆಯ ಹೆಚ್ಚಳ, ಹೆಚ್ಚಿದ ನಾಡಿ ಬಡಿತ ಮತ್ತು ಮಾನಸಿಕ ಗೊಂದಲದಂತಹ ರೋಗಲಕ್ಷಣಗಳನ್ನು ಇರುವ ರೋಗಿಗಳಿಗೆ ಕನಿಷ್ಠ 48 ಗಂಟೆಗಳ ಕಾಲ ಆಸ್ಪತ್ರೆಗೆ ದಾಖಲಾಗಬೇಕು. ಅವರು ತೀವ್ರ ನಿಗಾದಲ್ಲಿರುವ ಅಗತ್ಯವಿರುತ್ತದೆ. ಏಕೆಂದರೆ, ತೀವ್ರ ಶಾಖದ ಹೊಡೆತವು ಮೂತ್ರಪಿಂಡಗಳಿಗೆ ಹಾನಿ ಮತ್ತು ಇತರ ಪ್ರಮುಖ ಅಂಗಗಳಿಗೆ ಹಾನಿಗೆ ಕಾರಣವಾಗಬಹುದು” ಎಂದು ಡಾ. ಮೋಹನ್ ವಿವರಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮೆಡಿಕಲ್‌ ಕಾಲೇಜಿನ 47 ವಿದ್ಯಾರ್ಥಿನಿಯರು ಅಸ್ವಸ್ಥ : ಹಾಸ್ಟೆಲ್​​ನಲ್ಲಿ ಕನಿಷ್ಠ ಸ್ವಚ್ಛತೆಯ ಕೊರತೆ ಆರೋಪ

ಓಆರ್‌ಎಸ್‌ನ ಮಾರಾಟವು ನಗರದಲ್ಲಿ ಶೇ.60 ರಷ್ಟು ಏರಿಕೆಯಾಗಿದೆ. ಪ್ರತಿ ದಿನ ಕನಿಷ್ಠ ನಾಲ್ಕು ಸ್ಟಾಕ್‌ಗಳ ಪೈಕಿ 2 ಸ್ಟಾಕ್‌ಗಳು ಸಂಪೂರ್ಣವಾಗಿ ಮಾರಾಟವಾಗುತ್ತಿದೆ. ಇದಲ್ಲದೆ, ನಗರದಲ್ಲಿನ ಔಷಧಾಲಯಗಳು ಓಆರ್‌ಎಸ್‌ಮಾರಾಟದಲ್ಲಿ ಹೆಚ್ಚಳವನ್ನು ಕಂಡಿವೆ ಎಂದು ಆನ್‌ಲೈನ್ ವಿತರಣಾ ವೇದಿಕೆಗೆ ಸಂಬಂಧಿಸಿದ ಮಾರಾಟ ಕಾರ್ಯನಿರ್ವಾಹಕರು ತಿಳಿಸಿದ್ದಾರೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಾರ್ಕಳ ಪ್ರಜಾಸೇವಾ ಆಂದೋಲನ ಸಭೆಯಲ್ಲಿ 116ಕ್ಕೂ ಅಧಿಕ ಅರ್ಜಿ ಸ್ವೀಕಾರ

ಜನಸಾಮಾನ್ಯರ ಸಮಸ್ಯೆಗಳನ್ನು ಅವರ ಮನೆ ಬಾಗಿಲಿನಲ್ಲಿಯೇ ಆಲಿಸಿ, ನಿಗದಿತ ಕಾಲಮಿತಿಯೊಳಗೆ ತ್ವರಿತವಾಗಿ...

ಗದಗ | ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ಜಿಲ್ಲಾ ಪ್ರವಾಸ

ರಾಜ್ಯದ ಉನ್ನತ ಶಿಕ್ಷಣ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರು ...

ಉಡುಪಿ | ಬಿಜೆಪಿಯವರಿಂದಲೇ ಪರಶುರಾಮ ಥೀಮ್ ಪಾರ್ಕ್ ಕಾಮಗಾರಿ ಅಪೂರ್ಣ: ರಿಝ್ವಾನ್ ಅರ್ಷದ್

ಕಾರ್ಕಳ ಬೈಲೂರಿನಲ್ಲಿ ಪರಶುರಾಮ ಥೀಮ್ ಪಾರ್ಕ್ ನಿರ್ಮಾಣಕ್ಕೆ ಮುಂದಾಗಿದ್ದು ಬಿಜೆಪಿಯವರೇ. ಅವರ...