ಲೋಕನೀತಿಯು ಸೆಂಟರ್ ಫಾರ್ ದ ಸ್ಟಡಿ ಆಫ್ ಡೆವೆಲ್ಪಿಂಗ್ ಸೊಸೈಟೀಸ್ (ಸಿಎಸ್‌ಡಿಎಸ್) ಸಂಸ್ಥೆಯ ಯೋಜನೆಯಾಗಿದೆ. ಇದರಡಿಯಲ್ಲಿ ಚುನಾವಣಾ ಪ್ರಕ್ರಿಯೆಗಳನ್ನು ಅರಿಯುವ ವೈಜ್ಞಾನಿಕ ಯತ್ನಗಳನ್ನು ನಡೆಸಲಾಗುತ್ತದೆ. 2024ರ ಲೋಕಸಭಾ ಚುನಾವಣೆಯ ಚುನಾವಣಾ-ಪೂರ್ವ ಸೂಚಕಗಳನ್ನು ಅರಿಯಲು ಮಾರ್ಚ್ 28-ಏಪ್ರಿಲ್ 8ರ ನಡುವೆ ನಡೆಸಿದ ಸಮೀಕ್ಷೆಯ ವರದಿಯನ್ನು ಸಂಸ್ಥೆ ಬಿಡುಗಡೆ ಮಾಡಿದೆ.
ಭಾರತದ 19 ರಾಜ್ಯಗಳಿಗೆ ಸೇರಿದ 100 ಲೋಕಸಭಾ ಕ್ಷೇತ್ರಗಳಲ್ಲಿನ 100 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಬರುವ 400 ಮತದಾನ ಕೇಂದ್ರಗಳಿಗೆ ಸೇರಿದ 10,019 ಮತದಾರರನ್ನು ಈ ಸಮೀಕ್ಷೆ ಒಳಗೊಂಡಿದೆ. ಇದರ ಕುರಿತು ಹೆಚ್ಚಿನ ವಿವರಗಳಿಗೆ ಸಿಎಸ್‌ಡಿಎಸ್ ಸಂಸ್ಥೆಯ ಜಾಲತಾಣಕ್ಕೆ (https://www.csds.in/) ಭೇಟಿ ನೀಡಬಹುದು. ಸದರಿ ವರದಿಯನ್ನು ಆಯ್ದ ಭಾಗಗಳನ್ನು ‘ದ ಹಿಂದೂ’ ಪತ್ರಿಕೆ ಏಪ್ರಿಲ್ 12, 2024ರ ಸಂಚಿಕೆಯಲ್ಲಿ ಪ್ರಕಟಿಸಿದೆ.
ಪ್ರಶ್ನೆ: ನಿಮಗೆ ಈ ಎರಡು ಹೇಳಿಕೆಗಳನ್ನು ಓದಿ ಹೇಳುತ್ತೇನೆ. ನೀವು ಯಾವ ಹೇಳಿಕೆಯನ್ನು ಹೆಚ್ಚು ಒಪ್ಪುತ್ತೀರಿ ದಯಮಾಡಿ ತಿಳಿಸಿ:
ಅ. ಭಾರತವು ಕೇವಲ ಹಿಂದೂಗಳಿಗಷ್ಟೇ ಸೇರದೆ, ಎಲ್ಲ ಧರ್ಮೀಯರಿಗೂ ಸಮಾನವಾಗಿ ಸೇರುತ್ತದೆ.
ಆ. ಭಾರತವು ಕೇವಲ ಹಿಂದೂಗಳಿಗಷ್ಟೇ ಸೇರಿದೆ.
ಕೋಷ್ಟಕ 01
ಭಾರತವು ಕೇವಲ ಹಿಂದೂಗಳಿಗಷ್ಟೇ ಸೇರದೆ, ಎಲ್ಲ ಧರ್ಮೀಯರಿಗೂ ಸಮಾನವಾಗಿ ಸೇರುತ್ತದೆ. |
79% |
ಭಾರತವು ಕೇವಲ ಹಿಂದೂಗಳಿಗಷ್ಟೇ ಸೇರಿದೆ. | 11% |
ಯಾವುದೇ ಅಭಿಪ್ರಾಯವಿಲ್ಲ | 10% |
ಕೋಷ್ಟಕ 02
ಭಾರತವು ಕೇವಲ ಹಿಂದೂಗಳಿಗಷ್ಟೇ ಸೇರದೆ, ಎಲ್ಲ ಧರ್ಮೀಯರಿಗೂ ಸಮಾನವಾಗಿ ಸೇರುತ್ತದೆ. | |
ಎಲ್ಲರೂ | 79 |
ಧರ್ಮಾಧಾರಿತವಾಗಿ | |
ಹಿಂದು | 77 |
ಮುಸ್ಲಿಂ | 87 |
ಇತರೆ ಅಲ್ಪಸಂಖ್ಯಾತರು | 81 |
ವಯಸ್ಸನ್ನು ಆಧರಿಸಿ | |
18-25 ವರ್ಷ | 81 |
56 ವರ್ಷಕ್ಕೂ ಹೆಚ್ಚಿನವರು | 73 |
ಕೋಷ್ಟಕ 03
ಭಾರತವು ಕೇವಲ ಹಿಂದೂಗಳಿಗಷ್ಟೇ ಸೇರದೆ, ಎಲ್ಲ ಧರ್ಮೀಯರಿಗೂ ಸಮಾನವಾಗಿ ಸೇರುತ್ತದೆ. | |
ವಿದ್ಯಾರ್ಹತೆಯ ಮಟ್ಟವನ್ನು ಆಧರಿಸಿ | |
ಶಾಲಾ ಶಿಕ್ಷಣ ಪಡೆಯದವರು | 73 |
ಕಾಲೇಜು ಶಿಕ್ಷಣ ಮತ್ತು ಅದಕ್ಕಿಂತ ಹೆಚ್ಚು | 83 |
ವಾಸ ಸ್ಥಳ ಆಧರಿಸಿ | |
ಹಳ್ಳಿ | 76 |
ಪಟ್ಟಣ | 85 |
ನಗರ | 84 |
ಇದನ್ನು ಓದಿದ್ದೀರಾ?: ಲೋಕನೀತಿ-ಸಿಎಸ್‌ಡಿಎಸ್ ಸಮೀಕ್ಷೆ ವರದಿ: 2024ರ ಲೋಕಸಭಾ ಚುನಾವಣೆಯಲ್ಲಿ ಆರ್ಥಿಕ ವಿಚಾರಗಳು ಮುನ್ನೆಲೆಗೆ
ಪ್ರಶ್ನೆ: ರಾಮ ಮಂದಿರದ ನಿರ್ಮಾಣದ ನಂತರ ಹಿಂದೂ ಅಸ್ಮಿತೆಗೆ ಮತ್ತಷ್ಟು ಬಲ (ಒಗ್ಗಟ್ಟು) ದೊರೆಯುತ್ತದೆ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಮಂದಿರದ ನಿರ್ಮಾಣದಿಂದ ಹಿಂದೂಗಳ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಎನ್ನುತ್ತಾರೆ. ನಿಮ್ಮ ಅಭಿಪ್ರಾಯವೇನು?
ಕೋಷ್ಟಕ 01
ರಾಮ ಮಂದಿರದ ನಿರ್ಮಾಣದಿಂದ | % |
ಹಿಂದೂ ಅಸ್ಮಿತೆಗೆ ಬಲ ದೊರೆಯುತ್ತದೆ | 48 |
ಅಂತಹ ಪರಿಣಾಮವೇನೂ ಆಗುವುದಿಲ್ಲ | 25 |
ಯಾವುದೇ ಅಭಿಪ್ರಾಯವಿಲ್ಲ | 24 |
ಗಮನಿಸಿ: ಉಳಿದವರಿಗೆ ರಾಮ ಮಂದಿರ ಬಗ್ಗೆ ತಿಳುವಳಿಕೆ ಇರಲಿಲ್ಲ |
ಕೋಷ್ಟಕ 02
ರಾಮ ಮಂದಿರದ ನಿರ್ಮಾಣ ಹಿಂದೂ ಅಸ್ಮಿತೆಯನ್ನು ಬಲಪಡಿಸಿದೆ | |
ಎಲ್ಲರೂ | 48 |
ವರ್ಗಾವಾರು ಉತ್ತರ | |
ಬಡವರು | 43 |
ಕೆಳವರ್ಗದವರು | 47 |
ಮಧ್ಯಮ ವರ್ಗದವರು | 49 |
ಮೇಲ್ವರ್ಗದವರು | 58 |
ಜಾತಿ ಆಧಾರಿತ ಗುಂಪು | |
ಹಿಂದು ಮೇಲ್ಜಾತಿಯವರು | 59 |
ಹಿಂದೂ ಒಬಿಸಿ | 55 |
ಹಿಂದೂ ಎಸ್‌ಸಿ | 46 |
ಹಿಂದೂ ಎಸ್‌ಟಿ | 47 |
ಕೋಷ್ಟಕ 03
ರಾಮ ಮಂದಿರದ ಕುರಿತು ಧರ್ಮಾವಾರು ಭಿನ್ನತೆ
ರಾಮ ಮಂದಿರದ ನಿರ್ಮಾಣ | |||
ಹಿಂದೂ ಅಸ್ಮಿತೆಯನ್ನು ಬಲಪಡಿಸುತ್ತದೆ | ಹಿಂದೂಗಳ ಮೇಲೆ ಪ್ರಭಾವ ಬೀರುವುದಿಲ್ಲ | ಯಾವುದೇ ಅಭಿಪ್ರಾಯವಿಲ್ಲ | |
ಹಿಂದು | 54 | 25 | 18 |
ಮುಸ್ಲಿಂ | 24 | 21 | 50 |
ಇತರೆ ಅಲ್ಪಸಂಖ್ಯಾತರು | 22 | 36 | 30 |
ಕೋಷ್ಟಕ 04
ರಾಮ ಮಂದಿರದ ಕುರಿತು ಭಾರತದ ವಿವಿಧ ಭಾಗಗಳ ಪ್ರತಿಕ್ರಿಯೆ
ರಾಮ ಮಂದಿರದ ನಿರ್ಮಾಣ | |||
ಹಿಂದೂ ಅಸ್ಮಿತೆಯನ್ನು ಬಲಪಡಿಸುತ್ತದೆ | ಹಿಂದೂಗಳ ಮೇಲೆ ಪ್ರಭಾವ ಬೀರುವುದಿಲ್ಲ | ಯಾವುದೇ ಅಭಿಪ್ರಾಯವಿಲ್ಲ | |
ಉತ್ತರ ಮತ್ತು ಪಶ್ಚಿಮ ಭಾರತ | 51 | 24 | 23 |
ದಕ್ಷಿಣ ಭಾರತ | 43 | 28 | 23 |
ಪೂರ್ವ ಮತ್ತು ಈಶಾನ್ಯ ಭಾರತ | 45 | 25 | 26 |
ಗಮನಿಸಿ: ಉಳಿದವರಿಗೆ ರಾಮ ಮಂದಿರದ ಕುರಿತು ತಿಳಿವಳಿಕೆ ಇರಲಿಲ್ಲ |
ಪ್ರಶ್ನೆ: ಅಯೋಧ್ಯಾದಲ್ಲಿ ರಾಮ ಮಂದಿರ ನಿರ್ಮಾಣವಾಗಿರುವ ಕುರಿತು ಜನರಲ್ಲಿ ಭಿನ್ನವಾದ ಅಭಿಪ್ರಾಯಗಳಿವೆ. ಕೆಲವರ ಪ್ರಕಾರ ಮಂದಿರ ನಿರ್ಮಾಣ ಹಿಂದು ಮತ್ತು ಮುಸ್ಲಿಮರ ನಡುವೆ ಸಾಮರಸ್ಯ ಮೂಡಿಸುತ್ತದೆ. ಇನ್ನೂ ಕೆಲವರ ಪ್ರಕಾರ ಈ ಸಮುದಾಯಗಳ ನಡುವೆ ಮತ್ತಷ್ಟು ಘಷರ್ಣೆಯನ್ನು ಹೆಚ್ಚಿಸುತ್ತದೆ. ಈ ಕುರಿತು ನಿಮ್ಮ ಅಭಿಪ್ರಾಯವೇನು?
ಕೋಷ್ಟಕ 05
ರಾಮ ಮಂದಿರದ ನಿರ್ಮಾಣವು ಕೋಮುವಾರು ಸಂಘರ್ಷವನ್ನು ಹೆಚ್ಚಿಸುತ್ತದೆಯೇ?
ರಾಮ ಮಂದಿರದ ನಿರ್ಮಾಣವು | ||||
ಹಿಂದು-ಮುಸ್ಲಿಮರ ನಡುವೆ ಸಾಮರಸ್ಯವನ್ನು ಮೂಡಿಸುತ್ತದೆ | ಎರಡು ಕೋಮುಗಳ ನಡುವಿನ ಸಂಘರ್ಷವನ್ನು ಹೆಚ್ಚಿಸುತ್ತದೆ | ಯಾವುದೇ ವ್ಯತ್ಯಾಸ ತರುವುದಿಲ್ಲ | ಯಾವುದೇ ಅಭಿಪ್ರಾಯವಿಲ್ಲ | |
ಎಲ್ಲರೂ | 27 | 24 | 26 | 20 |
ಹಿಂದು | 31 | 22 | 27 | 18 |
ಮುಸ್ಲಿಂ | 13 | 32 | 24 | 26 |
ಇತರೆ ಅಲ್ಪ ಸಂಖ್ಯಾತರು | 14 | 29 | 24 | 23 |
ಗಮನಿಸಿ: ಉಳಿದವರಿಗೆ ರಾಮ ಮಂದಿರದ ಕುರಿತು ತಿಳಿವಳಿಕೆ ಇರಲಿಲ್ಲ |