ಸರಿಸುಮಾರು ಮುನ್ನೂರು ಕೋಟಿಗೂ ಸಕ್ರಿಯ ಬಳಕೆದಾರರನ್ನು ಹೊಂದಿರುವ ಪ್ರಬಲ ಸಾಮಾಜಿಕ ಮಾಧ್ಯಮ ವಾಟ್ಸಾಪ್ ಹೊಸ ಫೀಚರ್ ಪರಿಚಯಿಸಲು ಮುಂದಾಗಿದೆ.
ನೂತನ ಫೀಚರ್ ಇಂಟರ್‌ನೆಟ್ ಇಲ್ಲದೆ ಫೈಲ್‌ಗಳು ಹಾಗೂ ಇಮೇಜ್‌ಗಳನ್ನು ಪಡೆಯುವುದಾಗಿದೆ. ಈ ನೂತನ ಫೀಚರ್‌ನಲ್ಲಿ ಫೈಲ್‌ಗಳು ಅಥವಾ ಮಲ್ಟಿಮೀಡಿಯಾ ಕಂಟೆಂಟ್‌ಗಳನ್ನು ಇಂಟರ್‌ನೆಟ್ ಸಂಪರ್ಕವಿಲ್ಲದೆ ಹತ್ತಿರದಲ್ಲಿರುವ ಬಳಕೆದಾರರಿಗೆ ಶೇರ್ ಮಾಡಬಹುದಾಗಿದೆ.
ಹೊಸದಾದ ಫೀಚರ್ ಹೆಸರು ‘ಪೀಪಲ್ ನಿಯರ್‌ಬೈ’. ಈ ಪೀಚರ್‌ನಿಂದ ಯಾವುದೇ ರೀತಿಯ ವೈರಸ್ ದಾಳಿಯ ಭಯವಿಲ್ಲದೆ ಸುರಕ್ಷಿತವಾಗಿ ಒಬ್ಬ ಬಳಕೆದಾರರು ಮತ್ತೊಬ್ಬ ಬಳಕೆದಾರರಿಗೆ ಫೈಲ್‌ಗಳನ್ನು ಕಳಿಸಬಹುದಾಗಿದೆ.
ಈ ಸುದ್ದಿ ಓದಿದ್ದೀರಾ? ಟ್ವಿಟರ್ ಹೊಸ ಸಿಇಒ ಲಿಂಡಾ ಹೆಸರು ಪ್ರಕಟಿಸಿದ ಎಲಾನ್ ಮಸ್ಕ್
ನೂತನ ಫೀಚರ್ ಸೇರ್ಪಡೆಯ ಬಗ್ಗೆ ವಾಟ್ಸಾಪ್ ಯಾವುದೇ ಆಧಿಕೃತ ಆದೇಶ ಹೊರಡಿಸಿಲ್ಲ. ಸದ್ಯ ಪ್ರಯೋಗ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಅಧಿಕೃತವಾಗಿ ಪ್ರಕಟಿಸಲಾಗುತ್ತದೆ. ಈ ಫೀಚರ್‌ನ ಮತ್ತೊಂದು ವಿಷಯವೆಂದರೆ ಪ್ರಯೋಗ ಹಂತದಲ್ಲಿ ಈ ಫೀಚರ್‌ನಲ್ಲಿ ವೈರಸ್ ಅಥವಾ ಬಗ್ಸ್ ಕಂಡುಬಂದರೆ ಫೀಚರ್ ಪರಿಚಯಿಸದೆ ಇರುವ ಸಾಧ್ಯತೆ ಇರಬಹುದು.
ಇತ್ತೀಚಿಗಷ್ಟೆ ವಾಟ್ಸಾಪ್ ಚಾಟ್ ಫಿಲ್ಟರ್, ಸರ್ಚ್ ಬೈ ಡೇಟ್ ಆಪ್ಷನ್, ಟಿಕ್ಸ್ಟ್ ಫಾರ್ಮಾಟಿಂಗ್ ಫೀಚರ್ ಸೇರಿ ಹಲವು ಆಯ್ಕೆಗಳನ್ನು ಪರಿಚಯಿಸಿತ್ತು.
