ಮೋದಿಯವರ ಬಹುತ್ವವಾದ ಭಾರತದ ಆತ್ಮ ನಾಶಪಡಿಸುವ ವಿಷ, ಕ್ಯಾನ್ಸರ್: ರಾಮಚಂದ್ರ ಗುಹಾ

Date:

ಪ್ರಧಾನಿ ನರೇಂದ್ರ ಮೋದಿಯವರ ಬಹುತ್ವವಾದ ಭಾರತದ ಆತ್ಮ ನಾಶಪಡಿಸುವ ವಿಷ, ಕ್ಯಾನ್ಸರ್ ಎಂದು ಭಾರತೀಯ ಇತಿಹಾಸಕಾರ, ಚಿಂತಕ ರಾಮಚಂದ್ರ ಗುಹಾ ಅವರು ಹೇಳಿದ್ದಾರೆ. ಹಾಗೆಯೇ ಪ್ರಧಾನಿ ಅವರನ್ನು ‘ಸರ್ವಾಧಿಕಾರಿ ಪ್ರವೃತ್ತಿ’ ಹೊಂದಿರುವ ಫ್ಯೂಜಿಟಿವ್ ಸರ್ವಾಧಿಕಾರಿ ಎಂದಿದ್ದಾರೆ.

ದಿ ವೈರ್‌ನಲ್ಲಿ ಕರಣ್ ಥಾಪರ್‌ ಅವರು ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಗುಹಾ ಅವರು, “ಮೋದಿಯವರ ಬಹುಸಂಖ್ಯಾತ ಅಜೆಂಡಾವು ಭಾರತದ ಸಾಮಾಜಿಕ ರಚನೆಯನ್ನು ನಾಶಪಡಿಸುತ್ತದೆ” ಎಂದು ಹೇಳಿದರು.

“ಮೋದಿಯವರ ಬಹುತ್ವವಾದವು ಮನಸ್ಸು ಮತ್ತು ಹೃದಯವನ್ನು ವಿಷಪೂರಿತಗೊಳಿಸುತ್ತದೆ. ಅದು ಹುಟ್ಟುಹಾಕುವ ದ್ವೇಷ ಮತ್ತು ಧರ್ಮಾಂಧತೆ ದೇಶದಲ್ಲಿ ರಾಜಕೀಯದ ಮೂಲಕ ಕ್ಯಾನ್ಸರ್‌ನಂತೆ ಹರಡುತ್ತದೆ. ಜನರು ಮತ್ತು ಸಮಾಜವನ್ನು ನಾಗರಿಕತೆ, ಸಭ್ಯತೆ, ಸಹಾನುಭೂತಿ ಮತ್ತು ಮಾನವೀಯತೆಯನ್ನೇ ಕಸಿದುಕೊಳ್ಳುತ್ತದೆ” ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದನ್ನು ಓದಿದ್ದೀರಾ?  ಸರ್ವಾಧಿಕಾರಿ ಮೋದಿ ಸರ್ಕಾರ ರೈತರ ಧ್ವನಿ ಹತ್ತಿಕ್ಕಲು ಯತ್ನಿಸುತ್ತಿದೆ: ಖರ್ಗೆ

“ಇಂದಿರಾಗಾಂಧಿಯವರ ತುರ್ತುಪರಿಸ್ಥಿತಿಯಲ್ಲಿ ನಿರಂಕುಶಾಧಿಕಾರವನ್ನು ಕೌಟುಂಬಿಕ ಆಡಳಿತದೊಂದಿಗೆ ಸಂಯೋಜನೆ ಹೊಂದಿತ್ತು. ಮೋದಿಯವರು ಇಂದು ಸರ್ವಾಧಿಕಾರವನ್ನು ಹಿಂದೂ ಬಹುಮತವಾದದೊಂದಿಗೆ ಸಂಯೋಜನೆ ಹೊಂದಿದೆ. ಎಲ್ಲಾ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವುದು ಮೋದಿ ಮತ್ತು ಅಮಿತ್ ಶಾ ಅವರ ಉದ್ದೇಶವಾಗಿದೆ” ಎಂದು ಗುಹಾ ಅಭಿಪ್ರಾಯಿಸಿದ್ದಾರೆ.

“ಮೋದಿ ಸರ್ಕಾರಕ್ಕೆ ಮೂರನೇ ಅವಧಿಯು ಪೂರ್ಣ ಪ್ರಮಾಣದ ಚಿಂತನೆ-ನಿಯಂತ್ರಣದ ಆಡಳಿತಕ್ಕೆ ಪರವಾನಗಿ ನೀಡುತ್ತದೆ” ಎಂದರು.

“ಆದರೆ, ಮೋದಿ ಭರ್ಜರಿ ಗೆಲುವು ಸಾಧಿಸಿ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದರೂ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಕರ್ನಾಟಕ, ತೆಲಂಗಾಣ ಮತ್ತು ಪಂಜಾಬ್‌ನಂತಹ ದೊಡ್ಡ ರಾಜ್ಯಗಳು ಅವರ ಪಾಲಾಗುವುದಿಲ್ಲ. ಆದ್ದರಿಂದಾಗಿ ‘ತುರ್ತು ಪರಿಸ್ಥಿತಿಯ ಸರ್ವಾಧಿಕಾರ’ ಮರಳುವ ಸಾಧ್ಯತೆಯಿಲ್ಲ. ಜನರ ಮೇಲೆ ಪ್ರಾಬಲ್ಯ ಸಾಧಿಸುವ ಅವರ ಪ್ರಯತ್ನವನ್ನು ಈ ರಾಜ್ಯಗಳು ರಾಜಕೀಯವಾಗಿ ವಿರೋಧಿಸುತ್ತವೆ” ಎಂದು ಹೇಳಿದರು.

ಹಾಗೆಯೇ ರಾಮಚಂದ್ರಾ ಗುಹಾ ಅವರು, ದೇಶದ ಸಾಮಾಜಿಕ ರಚನೆ ಮತ್ತು ಅದರ ಜನರ ಆಲೋಚನೆ ಮತ್ತು ನಡವಳಿಕೆಯ ಮೇಲೆ ಮೋದಿಯವರ ಬಹುಮತದ ಪ್ರಭಾವದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರ ಪ್ರದೇಶದಲ್ಲಿ ಅಪಘಾತ: 11 ಮಂದಿ ಸಾವು, 10 ಜನರಿಗೆ ಗಾಯ

ಉತ್ತರ ಪ್ರದೇಶ ಶಹಜಹಾನ್‌ಪುರದಲ್ಲಿ ಬಸ್‌ ಹಾಗೂ ಟ್ರಕ್ ನಡುವೆ  ಸಂಭವಿಸಿದ ಭೀಕರ...

ಬಾಂಗ್ಲಾದೇಶ ಸಂಸದನ ಹತ್ಯೆ ಪ್ರಕರಣ: ತನಿಖೆಗಾಗಿ ಢಾಕಾ ಪೊಲೀಸರ ತಂಡ ಕೋಲ್ಕತ್ತಾಗೆ ಭೇಟಿ

ಕೋಲ್ಕತ್ತಾದಲ್ಲಿ ಈ ವಾರದ ಆರಂಭದಲ್ಲಿ ನಡೆದ ಬಾಂಗ್ಲಾದೇಶದ ಸಂಸದ ಅನ್ವರುಲ್ ಅಜೀಮ್...

ಧ್ವನಿ ಬದಲಾಯಿಸುವ ಆ್ಯಪ್ ಬಳಸಿ 7 ಆದಿವಾಸಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ

30 ವರ್ಷದ ವ್ಯಕ್ತಿಯೊಬ್ಬ ಧ್ವನಿ ಬದಲಾವಣೆ ಮಾಡುವ ಆ್ಯಪ್ ಬಳಸಿ, ಶಿಕ್ಷಕಿಯಾಗಿ...

ಮೊದಲ ಬಾರಿಗೆ ಮತ ಚಲಾಯಿಸಿದ ಹಣಕಾಸು ಆಯೋಗದ ಮುಖ್ಯಸ್ಥ ಅರವಿಂದ್ ಪನಗಾರಿಯಾ

ಹದಿನಾರನೇ ಹಣಕಾಸು ಆಯೋಗದ ಅಧ್ಯಕ್ಷ, 71 ವರ್ಷ ವಯಸ್ಸಿನ ಅರವಿಂದ್ ಪನಗಾರಿಯಾ...