ಹೊಸ ಫೀಚರ್‌ ‘ಕೀಪ್ ಇನ್ ಚಾಟ್’ ಸೇರಿ ಹಲವು ಆಯ್ಕೆಗಳನ್ನು ಪರಿಚಯಿಸಲಿರುವ ವಾಟ್ಸ್‌ಆ್ಯಪ್‌

Date:

Advertisements
  • ಬಳಕೆದಾರರು ಮರೆಯಾಗುವ ಸಂದೇಶವನ್ನು ಇರಿಸಿಕೊಳ್ಳುವ ಆಯ್ಕೆ
  • ‘ಬುಕ್‌ಮಾರ್ಕ್‌’ ಹಾಗೂ ಕೆಪ್ಟ್ ಮೆಸೇಜ್’ ಫೀಚರ್‌ನಲ್ಲಿ ಲಭ್ಯವಿರುವ ಆಯ್ಕೆ

ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಆಯ್ಕೆಗಳನ್ನು ಆರಂಭಿಸುತ್ತಾ ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಗುತ್ತಿರುವ ವಿಶ್ವದ ಜನಪ್ರಿಯ ಸಾಮಾಜಿಕ ಮಾಧ್ಯಮ ‘ವಾಟ್ಸ್‌ಆ್ಯಪ್‌’ ಈಗ ಹೊಸ ಫೀಚರ್‌ಗಳನ್ನು ಪರಿಚಯಿಸಲು ಮುಂದಾಗಿದೆ.

ಇದೀಗ ಡಿಸಪಿಯರಿಂಗ್ (ಮರೆಯಾಗುವ) ಮೆಸೇಜ್‌ಗಳನ್ನು ಕಳುಹಿಸುವವರಿಗೆ ಅವರು ಕಳುಹಿಸುವ ಸಂದೇಶದ ಕೆಲವು ಸಂದೇಶವನ್ನು ಉಳಿಸಿಕೊಳ್ಳುವ ಫೀಚರ್ ‘ಕೀಪ್ ಇನ್ ಚಾಟ್’ ಅನ್ನು ವಾಟ್ಸಪ್ ಪರಿಚಯಿಸಲಿದೆ. ಸಂಬಂಧಿತ ಬಳಕೆದಾರ ಡಿಸಪಿಯರಿಂಗ್ ಮೆಸೇಜಸ್ ಫೀಚರ್ ಅನ್ನು ಆನ್‌ ಮಾಡಿದರೆ ಈ ಹೊಸ ಫೀಚರ್ ಲಭ್ಯವಾಗಲಿದೆ.

ಒಂದು ಗ್ರೂಪಿನಲ್ಲಿ ಯಾರಾದರೂ ಡಿಸಪಿಯರಿಂಗ್ ಮೆಸೇಜ್ ಅನ್ನು ಇರಿಸಿಕೊಂಡರೆ, ಅದನ್ನು ಕಳುಹಿಸಿದವರಿಗೆ ಸೂಚನೆ ಹೋಗುತ್ತದೆ ಮತ್ತು ಅವರು ಈ ನಿರ್ಧಾರವನ್ನು ವಿರೋಧಿಸಬಹುದಾಗಿದೆ. ಇತರರು ತಾವು ಕಳುಹಿಸಿದ ಡಿಸಪಿಯರಿಂಗ್ ಮೆಸೇಜ್‌ಗಳನ್ನು ಇರಿಸಿಕೊಳ್ಳಬಾರದು ಎಂದು ಕಳುಹಿಸಿದವರು ನಿರ್ಧರಿಸಿದರೆ ಆ ನಿರ್ಧಾರವೇ ಅಂತಿಮವಾಗುತ್ತದೆ.

Advertisements
Whatsapp chat

ಇದರರ್ಥ ಯಾರೂ ಈ ಸಂದೇಶ ಉಳಿಸಿಕೊಳ್ಳುವ ಹಾಗಿಲ್ಲ ಹಾಗೂ ನಿರ್ದಿಷ್ಟ ಅವಧಿಯ ನಂತರ ಆ ಸಂದೇಶ ಮಾಯವಾಗುತ್ತದೆ. ಆದರೆ ನೂತನ ಫೀಚರ್ ‘ಕೀಪ್ ಇನ್ ಚಾಟ್’ ಅನ್ನು ಬಳಕೆದಾರರು ಕಳುಹಿಸುವವರ ಅನುಮತಿಯೊಂದಿಗೆ ಯಾವುದೇ ಸಂದೇಶವನ್ನು ಇರಿಸಿಕೊಂಡರೆ ಅವುಗಳನ್ನು ‘ಬುಕ್‌ ಮಾರ್ಕ್‌’ ಐಕಾನ್‌ನೊಂದಿಗೆ ಲೇಬಲ್ ಮಾಡಲಾಗುವುದು ಹಾಗೂ ‘ಕೆಪ್ಟ್ ಮೆಸೇಜ್’ ಫೀಚರ್‌ನಲ್ಲಿ ಅವುಗಳನ್ನು ಕಾಣಬಹುದು.

ಈ ನಡುವೆ, ವಾಟ್ಸಪ್ ಡಿಸಪಿಯರಿಂಗ್ ಸಂದೇಶಗಳ ವಿಭಾಗಕ್ಕೆ ಕೆಲವು ದಿನಗಳಲ್ಲಿ ಹೆಚ್ಚಿನ ಫೀಚರ್‌ಗಳನ್ನು ಸೇರಿಸಲಿದೆ. ಪ್ರಸ್ತುತ ಬಳಕೆದಾರರು ಡಿಸಪಿಯರಿಂಗ್ ಆಯ್ಕೆಯಲ್ಲಿ 24 ಗಂಟೆ, 7 ದಿನ ಹಾಗೂ 90 ದಿನಗಳವರೆಗೆ ಮಾತ್ರ ಹೊಂದಿಸಿಕೊಳ್ಳಬಹುದು. ಮುಂದಿನ ದಿನಗಳಲ್ಲಿ 15 ಹೊಸ ಆಯ್ಕೆಗಳು ಲಭ್ಯವಿದ್ದು, 1 ವರ್ಷ, 180 ದಿನ, 60 ದಿನ, 30 ದಿನ, 21 ದಿನ, 14 ದಿನ, 6 ದಿನ, 5 ದಿನ, 4 ದಿನ, 3 ದಿನ, 2 ದಿನ, 12 ಗಂಟೆ, 6 ಗಂಟೆ, 3 ಗಂಟೆ ಹಾಗೂ 1 ಗಂಟೆಯ ಅವಧಿಯನ್ನು ಹೊಂದಿಸಿಕೊಳ್ಳಬಹುದು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತೀಯ ಮೂಲದ ಸಬೀಹ್ ಖಾನ್ ಆ್ಯಪಲ್ ಕಂಪನಿಯ ಸಿಒಒ ಆಗಿ ನೇಮಕ

ದುಬಾರಿ ಬೆಲೆಯ ಮೊಬೈಲ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದ ಆ್ಯಪಲ್ ಕಂಪನಿಯು ತನ್ನ...

ಸ್ಪೇಸ್‌ ಎಕ್ಸ್‌ ಡ್ರ್ಯಾಗನ್‌ ನೌಕೆ ಡಾಕಿಂಗ್‌ ಯಶಸ್ವಿ: ಬಾಹ್ಯಾಕಾಶ ನಿಲ್ದಾಣ ತಲುಪಿದ ಗಗನಯಾತ್ರಿಗಳು

ಆಕ್ಸಿಯಮ್-4 ಕಾರ್ಯಾಚರಣೆಯ ಭಾಗವಾಗಿರುವ ಭಾರತದ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳಿದ್ದ...

ಸೊಳ್ಳೆ ಗಾತ್ರದ ಮೈಕ್ರೋ ಡ್ರೋನ್‌ಗಳನ್ನು ತಯಾರಿಸಿದ ಚೀನಾ

ಸೊಳ್ಳೆ ಗಾತ್ರದ ಮೈಕ್ರೋ ಡ್ರೋನ್‌ʼಗಳನ್ನು ಚೀನಾದ ವಿಜ್ಞಾನಿಗಳು ತಯಾರಿಸಿದ್ದಾರೆ. ಸೊಳ್ಳೆ ಗಾತ್ರದ...

ಬೆಂಗಳೂರು | ಡಿಜಿಟಲ್ ಅರೆಸ್ಟ್ ಮೂಲಕ ವೃದ್ಧ ದಂಪತಿಗೆ 4.79 ಕೋಟಿ ರೂ. ವಂಚನೆ

ವೃದ್ಧ ದಂಪತಿಗೆ ಡಿಜಿಟಲ್ ಅರೆಸ್ಟ್ ಮೂಲಕ ಸುಮಾರು 4.79 ಕೋಟಿ ರೂಪಾಯಿ...

Download Eedina App Android / iOS

X