ಹೊಸ ಫೀಚರ್‌ ‘ಕೀಪ್ ಇನ್ ಚಾಟ್’ ಸೇರಿ ಹಲವು ಆಯ್ಕೆಗಳನ್ನು ಪರಿಚಯಿಸಲಿರುವ ವಾಟ್ಸ್‌ಆ್ಯಪ್‌

Date:

  • ಬಳಕೆದಾರರು ಮರೆಯಾಗುವ ಸಂದೇಶವನ್ನು ಇರಿಸಿಕೊಳ್ಳುವ ಆಯ್ಕೆ
  • ‘ಬುಕ್‌ಮಾರ್ಕ್‌’ ಹಾಗೂ ‘ಕೆಪ್ಟ್ ಮೆಸೇಜ್’ ಫೀಚರ್‌ನಲ್ಲಿ ಲಭ್ಯವಿರುವ ಆಯ್ಕೆ

ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಆಯ್ಕೆಗಳನ್ನು ಆರಂಭಿಸುತ್ತಾ ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಗುತ್ತಿರುವ ವಿಶ್ವದ ಜನಪ್ರಿಯ ಸಾಮಾಜಿಕ ಮಾಧ್ಯಮ ‘ವಾಟ್ಸ್‌ಆ್ಯಪ್‌’ ಈಗ ಹೊಸ ಫೀಚರ್‌ಗಳನ್ನು ಪರಿಚಯಿಸಲು ಮುಂದಾಗಿದೆ.

- Advertisement -

ಇದೀಗ ಡಿಸಪಿಯರಿಂಗ್ (ಮರೆಯಾಗುವ) ಮೆಸೇಜ್‌ಗಳನ್ನು ಕಳುಹಿಸುವವರಿಗೆ ಅವರು ಕಳುಹಿಸುವ ಸಂದೇಶದ ಕೆಲವು ಸಂದೇಶವನ್ನು ಉಳಿಸಿಕೊಳ್ಳುವ ಫೀಚರ್ ‘ಕೀಪ್ ಇನ್ ಚಾಟ್’ ಅನ್ನು ವಾಟ್ಸಪ್ ಪರಿಚಯಿಸಲಿದೆ. ಸಂಬಂಧಿತ ಬಳಕೆದಾರ ಡಿಸಪಿಯರಿಂಗ್ ಮೆಸೇಜಸ್ ಫೀಚರ್ ಅನ್ನು ಆನ್‌ ಮಾಡಿದರೆ ಈ ಹೊಸ ಫೀಚರ್ ಲಭ್ಯವಾಗಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನುಡಿ ನಮನ | ಕೆವಿಎನ್- ನಿಜ ಅರ್ಥದ ಕನ್ನಡದ...

ಡಾ. ಕೆ.ವಿ. ನಾರಾಯಣ ಅವರು ವಿಮರ್ಶಕರಾಗಿ, ಭಾಷಾವಿಜ್ಞಾನಿಯಾಗಿ, ವಿಚಾರವಾದಿಯಾಗಿ ಕನ್ನಡ ನಾಡಿಗೆ ಪರಿಚಿತರು. ಅವರ ಇತ್ತೀಚಿನ ಪ್ರತಿಯೊಂದು ಮಾತು ಮತ್ತು ಬರಹಗಳಲ್ಲೂ ವೈಚಾರಿಕತೆ ಇದ್ದೆ ಇರುತ್ತಿತ್ತು. ಅವರು ಇಷ್ಟು ಬೇಗ ಅಗಲಿ ಹೋಗುತ್ತಾರೆ...

ಸುಪ್ರೀಂ ಆದೇಶವಿದ್ದರೂ ರಂಗೋಲಿ ಕೆಳಗೆ ತೂರುವ ಪೊಲೀಸರು: ಬಂಧಿತರ...

ಬಂಧಿಸಿದ 24 ಗಂಟೆಗಳ ಒಳಗಾಗಿ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವುದು ಸಂವಿಧಾನ ಬದ್ಧ ಹಕ್ಕು. ವಿಳಂಬವಾದರೆ ಬಿಡುಗಡೆ ಕಡ್ಡಾಯವೆಂದು ಸುಪ್ರೀಂ ಕೋರ್ಟ್ ಆದೇಶವಿದೆ. ಆದರೆ ಗಡಿಯಾರ ಟಿಕ್ ಟಿಕ್ ಅನ್ನುತ್ತಿದ್ದರೂ, ದಾಖಲೆಗಳಲ್ಲಿ ಸಮಯವನ್ನು...

ಕೊಪ್ಪಳ | 3 ವರ್ಷದಲ್ಲಿ 35,302 ಜಾನುವಾರುಗಳ ಸಾವು;...

ರೋಗಬಾಧೆ, ಅಪಘಾತ ಹಾಗೂ ವಿವಿಧ ಆಕಸ್ಮಿಕ ಕಾರಣಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ಜಾನುವಾರುಗಳ ಸಾವಿನ ಪ್ರಕರಣಗಳು ಹೆಚ್ಚುತ್ತಿದ್ದು, ಜಾನುವಾರು ಕಳೆದುಕೊಂಡ ರೈತರು ಒಂದೆಡೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೆ, ಮತ್ತೊಂದೆಡೆ ಸರ್ಕಾರದ ಪರಿಹಾರಕ್ಕಾಗಿ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಕೊಪ್ಪಳ...

ಒಂದು ಗ್ರೂಪಿನಲ್ಲಿ ಯಾರಾದರೂ ಡಿಸಪಿಯರಿಂಗ್ ಮೆಸೇಜ್ ಅನ್ನು ಇರಿಸಿಕೊಂಡರೆ, ಅದನ್ನು ಕಳುಹಿಸಿದವರಿಗೆ ಸೂಚನೆ ಹೋಗುತ್ತದೆ ಮತ್ತು ಅವರು ಈ ನಿರ್ಧಾರವನ್ನು ವಿರೋಧಿಸಬಹುದಾಗಿದೆ. ಇತರರು ತಾವು ಕಳುಹಿಸಿದ ಡಿಸಪಿಯರಿಂಗ್ ಮೆಸೇಜ್‌ಗಳನ್ನು ಇರಿಸಿಕೊಳ್ಳಬಾರದು ಎಂದು ಕಳುಹಿಸಿದವರು ನಿರ್ಧರಿಸಿದರೆ ಆ ನಿರ್ಧಾರವೇ ಅಂತಿಮವಾಗುತ್ತದೆ.

Whatsapp chat

ಇದರರ್ಥ ಯಾರೂ ಈ ಸಂದೇಶ ಉಳಿಸಿಕೊಳ್ಳುವ ಹಾಗಿಲ್ಲ ಹಾಗೂ ನಿರ್ದಿಷ್ಟ ಅವಧಿಯ ನಂತರ ಆ ಸಂದೇಶ ಮಾಯವಾಗುತ್ತದೆ. ಆದರೆ ನೂತನ ಫೀಚರ್ ‘ಕೀಪ್ ಇನ್ ಚಾಟ್’ ಅನ್ನು ಬಳಕೆದಾರರು ಕಳುಹಿಸುವವರ ಅನುಮತಿಯೊಂದಿಗೆ ಯಾವುದೇ ಸಂದೇಶವನ್ನು ಇರಿಸಿಕೊಂಡರೆ ಅವುಗಳನ್ನು ‘ಬುಕ್‌ ಮಾರ್ಕ್‌’ ಐಕಾನ್‌ನೊಂದಿಗೆ ಲೇಬಲ್ ಮಾಡಲಾಗುವುದು ಹಾಗೂ ‘ಕೆಪ್ಟ್ ಮೆಸೇಜ್’ ಫೀಚರ್‌ನಲ್ಲಿ ಅವುಗಳನ್ನು ಕಾಣಬಹುದು.

ಈ ನಡುವೆ, ವಾಟ್ಸಪ್ ಡಿಸಪಿಯರಿಂಗ್ ಸಂದೇಶಗಳ ವಿಭಾಗಕ್ಕೆ ಕೆಲವು ದಿನಗಳಲ್ಲಿ ಹೆಚ್ಚಿನ ಫೀಚರ್‌ಗಳನ್ನು ಸೇರಿಸಲಿದೆ. ಪ್ರಸ್ತುತ ಬಳಕೆದಾರರು ಡಿಸಪಿಯರಿಂಗ್ ಆಯ್ಕೆಯಲ್ಲಿ 24 ಗಂಟೆ, 7 ದಿನ ಹಾಗೂ 90 ದಿನಗಳವರೆಗೆ ಮಾತ್ರ ಹೊಂದಿಸಿಕೊಳ್ಳಬಹುದು. ಮುಂದಿನ ದಿನಗಳಲ್ಲಿ 15 ಹೊಸ ಆಯ್ಕೆಗಳು ಲಭ್ಯವಿದ್ದು, 1 ವರ್ಷ, 180 ದಿನ, 60 ದಿನ, 30 ದಿನ, 21 ದಿನ, 14 ದಿನ, 6 ದಿನ, 5 ದಿನ, 4 ದಿನ, 3 ದಿನ, 2 ದಿನ, 12 ಗಂಟೆ, 6 ಗಂಟೆ, 3 ಗಂಟೆ ಹಾಗೂ 1 ಗಂಟೆಯ ಅವಧಿಯನ್ನು ಹೊಂದಿಸಿಕೊಳ್ಳಬಹುದು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

WhatsApp ‘ಎಐ’ ಗುಟ್ಟು ರಟ್ಟು: ಬಳಕೆದಾರರಿಂದ ಬಚ್ಚಿಡಲಾಗಿದ್ದ ರಹಸ್ಯ ಸೂಚನೆಗಳು ಬಯಲು

WhatsApp ತನ್ನ ಎಐ (AI) ಚಾಟ್‌ಬಾಟ್‌ಗೆ ನೀಡಿದ್ದ ರಹಸ್ಯ ಸೂಚನೆಗಳು ಆಕಸ್ಮಿಕವಾಗಿ...

ಮಧುಮೇಹಿಗಳಿಗೆ ಸಿಹಿಸುದ್ದಿ: ಇನ್ಸುಲಿನ್, ಮಾತ್ರೆಗಳ ಹಂಗಿಲ್ಲದೆ ‘ಶುಗರ್’ ನಿಯಂತ್ರಿಸುವ ಹೊಸ ಸಾಧನ!

ಇನ್ಸುಲಿನ್ ಮತ್ತು ನಿರಂತರ ಮಾತ್ರೆಗಳ ಹಂಗಿಲ್ಲದೆ ಮಧುಮೇಹವನ್ನು (ಸಕ್ಕರೆ ಕಾಯಿಲೆ) ಪರಿಣಾಮಕಾರಿಯಾಗಿ...

ಕೈಲೊಂದು ಕ್ಯಾಮೆರಾ, ಜೀವಂತ ಬದುಕಿಗೆ ಮುಖಾಮುಖಿ

ಸಿನೆಮಾದ ಶಕ್ತಿ ಅದರ ಹಿಂದೆ ನಿಂತಿರುವ ತಂತ್ರಜ್ಞರ ಸಂಖ್ಯೆಯಲ್ಲಾಗಲಿ, ದುಬಾರಿ ಉಪಕರಣಗಳಲ್ಲಾಗಲಿ...

ಅಮೆರಿಕದ ಸರ್ಕಾರಿ ಐಟಿ ವ್ಯವಸ್ಥೆಗಳಲ್ಲಿ ಚೀನಾದ ಎಐ ‘ಡೀಪ್‌ಸೀಕ್’ ಬಳಕೆಗೆ ನಿಷೇಧ

ಅಮೆರಿಕದ ನಾಗರಿಕ ಸರ್ಕಾರಿ ಏಜೆನ್ಸಿಗಳ ಐಟಿ ವ್ಯವಸ್ಥೆಗಳಿಂದ ಚೀನಾ ಮೂಲದ ಕೃತಕ...