ರಾಜ್ಯ ವಿಧಾನಸಭಾ ಚುನಾವಣೆಗೆ ಸಲ್ಲಿಕೆಯಾಗಿರುವ ನಾಮಪತ್ರಗಳನ್ನು ಚುನಾವಣಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. 224 ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳ ನಾಮಪತ್ರಗಳ ಪರಿಶೀಲನೆ ಬಾಕಿ ಉಳಿದಿದೆ.
ಏಪ್ರಿಲ್ 20ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿತ್ತು. ರಾಜ್ಯಾದ್ಯಂತ 5,102 ನಾಮಪತ್ರ ಸಲ್ಲಿಕೆಯಾಗಿವೆ. ನಾಮಪತ್ರಗಳ ಪರಿಶೀಲನೆ ಕಾರ್ಯವು ಭರದಿಂದ ಸಾಗಿದೆ.
224 ಕ್ಷೇತ್ರಗಳಲ್ಲಿ ಸಲ್ಲಿಕೆಯಾಗಿದ್ದ ಒಟ್ಟು 5,102 ನಾಮಪತ್ರ ಗಳ ಪೈಕಿ ಒಟ್ಟು 4989 ನಾಮಪತ್ರಗಳು ಅಂಗೀಕಾರವಾಗಿವೆ. ಉಳಿದಂತೆ ನಾಲ್ಕು ಕ್ಷೇತ್ರಗಳ ನಾಮಪತ್ರ ಪರಿಶೀಲನೆ ಬಾಕಿ ಉಳಿದಿದೆ.
ಈ ಸುದ್ದಿ ಓದಿದ್ದೀರಾ? “ನಮ್ಮಲ್ಲಿ ಮಾತನಾಡೋಕೆ ಪ್ರತಾಪ್ ಸಿಂಹನಂತವರು ಇದ್ದಾರೆ ನಾನೇಕೆ ಮಾತನಾಡಲಿ” : ಬಿ ಎಲ್ ಸಂತೋಷ್
ಅಂಗೀಕಾರವಾಗಿರುವ ನಾಮಪತ್ರಗಳು ಪಕ್ಷವಾರು
ಬಿಜೆಪಿಯಿಂದ 219 ನಾಮಪತ್ರ ಅಂಗೀಕಾರವಾಗಿದ್ದರೆ, ಕಾಂಗ್ರೆಸ್ನಿಂದ 218, ಜೆಡಿಎಸ್ 207, ಆಮ್ ಆದ್ಮಿ ಪಕ್ಷ 207, ಬಿಎಸ್ಪಿ 135, ಸಿಪಿಎಂ 4, ಪಕ್ಷೇತರರು 1,334, ನೋಂದಾಯಿತ ಮಾನ್ಯತೆ ರಹಿತ ಪಕ್ಷಗಳ 720 ನಾಮಪತ್ರ ಅಂಗೀಕಾರವಾಗಿವೆ.
ಕಣದಲ್ಲಿ 3,044 ಅಭ್ಯರ್ಥಿಗಳಿದ್ದು, ಸವದತ್ತಿ, ಔರಾದ್, ಹಾವೇರಿ(ಎಸ್ಸಿ),ರಾಯಚೂರು ಹಾಗೂ ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳ ನಾಮಪತ್ರ ಪರಿಶೀಲನೆ ಬಾಕಿ ಇದೆ