“ನಮ್ಮಲ್ಲಿ ಮಾತನಾಡೋಕೆ ಪ್ರತಾಪ್ ಸಿಂಹನಂತವರು ಇದ್ದಾರೆ ನಾನೇಕೆ ಮಾತನಾಡಲಿ” : ಬಿ ಎಲ್ ಸಂತೋಷ್

Date:

  • ಮೈಸೂರಿನಲ್ಲಿ ಅಹಂಕಾರದ ಹೇಳಿಕೆ ಕೊಟ್ಟ ಬಿ ಎಲ್ ಸಂತೋಷ್
  • ಮಾತನಾಡಿ ಪ್ರತಿಸ್ಪರ್ಧಿಯಾಗಲಾರೆ ಎಂದ ಆರ್‌ಎಸ್‌ಎಸ್‌ ನಾಯಕ

ನಮ್ಮ ಪಕ್ಷದಲ್ಲಿ ಮಾತನಾಡುವುದಕ್ಕಾಗಿಯೇ ಪ್ರತಾಪ್ ಸಿಂಹನಂತಹ ನಾಯಕರುಗಳಿದ್ದಾರೆ. ಹಾಗಾಗಿ ನಾನೇನೂ ಮಾತನಾಡುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಹೇಳಿದರು.

ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಪಕ್ಷದ ಡಿಜಿಟಲ್ ಮಾಧ್ಯಮ ಪ್ರಕೋಷ್ಠ ಆಯೋಜಿಸಿದ್ದ ‘ಡಿಜಿಟಲ್ ಕಾರ್ಯಕರ್ತರ ಸಮ್ಮೇಳನʼದಲ್ಲಿ ಮಾತನಾಡಿದ ಸಂತೋಷ್ “ನಮ್ಮಲ್ಲಿ ಸಿಕ್ಕಾಪಟ್ಟೆ ಲೀಡರ್ ಗಳಿದ್ದಾರೆ, ಹಾಗಾಗಿ ನಾನು ಯಾರಿಗೂ ಪ್ರತಿಸ್ಪರ್ಧಿ ಆಗಲು ಬಯಸುವುದಿಲ್ಲ” ಎಂದರು.

“ಮಾಧ್ಯಮದವರು ನನ್ನನ್ನು 100 ಬಾರಿ ಮಾತಾಡಿಸಲು ಯತ್ನಿಸಿದ್ದಾರೆ. ನಾನು ಮಾತಾಡಿಲ್ಲ. ನಮ್ಮಲ್ಲಿ ಮಾತಾಡಲು ಪ್ರತಾಪ್ ಸಿಂಹನಂತಹವರು ಇದ್ದಾರೆ. ಅವರೆ ಮಾತಾಡಲಿ. ನಾನು ಮಾತನಾಡಿ ಯಾರಿಗೆ ಯಾಕೆ ಪ್ರತಿಸ್ಪರ್ಧಿಯಾಗಲಿ” ಎಂದು ಹೇಳಿದರು.

ಇದೇ ವೇಳೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಸಂತೋಷ್ ಕಾಂಗ್ರೆಸ್ ನವರು ಅಧಿಕಾರಕ್ಕೆ ಬಂದರೆ ಬಿಜೆಪಿ ಮೀಸಲಾತಿ ಕಿತ್ತು ಹಾಕುತ್ತೇವೆ ಎಂದಿದ್ದಾರೆ. ಆಗ ಅವರು ಯಾರ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ಕೊಡುತ್ತಾರೆ ಎನ್ನುವುದನ್ನು ಸ್ಪಷ್ಟಪಡಿಸಲಿʼ ಎಂದರು.

ಮೀಸಲಾತಿಯ ಚಕ್ರವನ್ನು ನಾವು ಮುಂದಕ್ಕೆ ತೆಗೆದುಕೊಂಡು ಹೋಗಿದ್ದೇವೆ. ʼನಾವು ಮುಸ್ಲಿಮರಿಗಿದ್ದ ಶೇ 4ರಷ್ಟು ಮೀಸಲಾತಿಯನ್ನು ತೆಗೆದು ಒಕ್ಕಲಿಗರು ಮತ್ತು ಲಿಂಗಾಯತರಿಗೆ ಹಂಚಿದ್ದೇವೆ. ಪರಿಶಿಷ್ಟರಿಗೂ ಮೀಸಲಾತಿ ಹೆಚ್ಚಿಸಿದ್ದೇವೆ ಎಂದು ಹೇಳಿದರು.

ಮೀಸಲಾತಿ ಕಿತ್ತುಕೊಡುವುದಾಗಿ ಹೇಳುವ ಕಾಂಗ್ರೆಸ್‌ಗೆ ಅದು ಸಾಧ್ಯವಾಗುವುದಿಲ್ಲ ಏಕೆಂದರೆ, ಅವರು ಅಧಿಕಾರಕ್ಕೆ ಬರುವುದಿಲ್ಲ ಎಂದು ಲೇವಡಿ ಮಾಡಿದರು.ಸಂತೋಷ್‌

ಕಾಂಗ್ರೆಸ್‌ನವರು ಅಭಿವೃದ್ಧಿಯ ಚಕ್ರಕ್ಕೂ ಕಲ್ಲು ಹಾಕುತ್ತಿದ್ದಾರೆ. ಕರ್ನಾಟಕವನ್ನು ಎಟಿಎಂ ಮಾಡಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ ಎಂದು ಟೀಕಿಸಿದರು.

ಮುಂದಿನ ಚುನಾವಣೆಯಲ್ಲಿ ಬಿಜೆಪಿಯೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸಾರ್ಹ ಸಮೀಕ್ಷೆಗಳು ಹೇಳಿವೆ. ಆದರೆ ಹೆಸರೇ ಗೊತ್ತಿಲ್ಲದ ಕಂಪನಿಗಳ ಸರ್ವೇಗಳನ್ನು ಕಾಂಗ್ರೆಸ್‌ನವರು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಈ ಸುದ್ದಿ ಓದಿದ್ದೀರಾ?:ವರುಣದಲ್ಲಿ ಕಣಕ್ಕಿಳಿದ ಬಿಎಸ್‌ಪಿ : ಸಿದ್ದರಾಮಯ್ಯ ಎದುರು ದಲಿತ ದಾಳ ಉರುಳಿಸಿತೇ ಬಿಜೆಪಿ?

ಪಕ್ಷ ಸಂಘಟನೆ ಬಗ್ಗೆ ಮಾತನಾಡಿದ ಸಂತೋಷ್ ನಾವು 40 ಕಾರ್ಯಕರ್ತರಿಗೆ ಟಿಕೆಟ್ ಕೊಟ್ಟಿದ್ದೇವೆ. ವರಿಷ್ಠರು ಮಾಡಿರುವ ಬದಲಾವಣೆಗಳನ್ನು ಕಾರ್ಯಕರ್ತರು ಬೆಂಬಲಿಸಬೇಕು ಎಂದು ತಿಳಿಸಿದರು.

ನಮ್ಮ ಲೀಡರ್ ಇನ್ನೂ ಚುನಾವಣಾ ಅಖಾಡಕ್ಕೆ ಇಳಿದೇ ಇಲ್ಲ. ಬಣ್ಣದ ವೇಷ ಕಾರ್ಯಕ್ರಮ ಏಪ್ರಿಲ್ 29ರಂದು ಆರಂಭವಾಗಲಿದೆ. ನಾವು 133 ಸ್ಥಾನಗಳನ್ನು ಗೆಲ್ಲಲು ಟೊಂಕ ಕಟ್ಟಿ ಹೊರಟಿದ್ದೇವೆ ಎಂದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಲಾರ | ಅನರ್ಹರಿಗೆ ಭೂಮಿ ಮಂಜೂರು ಪ್ರಕರಣ; ಕಾಂಗ್ರೆಸ್‌ ಶಾಸಕನ ವಿರುದ್ಧ ತನಿಖೆಗೆ ಆದೇಶ

ಸರ್ಕಾರಿ ಭೂಮಿಯನ್ನು ಮೃತರೂ ಸೇರಿದಂತೆ ಅನರ್ಹರಿಗೆ ಮಂಜೂರು ಮಾಡಿದ್ದ ಮಾಲೂರು ಕಾಂಗ್ರೆಸ್‌...

ಜೆಡಿಎಸ್-ಬಿಜೆಪಿ ಮೈತ್ರಿ: ಬೇಸರಗೊಂಡ ಹಲವರು ಸಂಪರ್ಕದಲ್ಲಿದ್ದಾರೆ ಎಂದ ಸಚಿವ

ಜೆಡಿಎಸ್‌–ಬಿಜೆಪಿ ಮೈತ್ರಿಯಿಂದಾಗಿ ಎರಡೂ ಪಕ್ಷಗಳಲ್ಲಿ ಹಲವರು ಅಸಮಾಧಾನ ಹೊಂದಿದ್ದಾರೆ. ಅವರಲ್ಲಿ ಕೆಲವರು...

ಗಂಡುಮಕ್ಕಳಿಗೆ 93 ರೂ., ಹೆಣ್ಣುಮಕ್ಕಳಿಗೆ 135 ರೂ. ‘ಶುಚಿ ಸಂಭ್ರಮ ಕಿಟ್’ ನೀಡಲು ಸಿಎಂ ಒಪ್ಪಿಗೆ

5,48,000 ವಿದ್ಯಾರ್ಥಿಗಳಿಗೆ ಕಿಟ್‌ ಒದಗಿಸಲು ಟೆಂಡರ್‌ ಕರೆಯಲು ಒಪ್ಪಿಗೆ ಮೊರಾರ್ಜಿ ಶಾಲೆಗಳಲ್ಲಿ ಸ್ಥಳೀಯ...