ಪ್ರಸ್ತುತ ಭಾರತದಲ್ಲಿ ಲೋಕಸಭಾ ಚುನಾವಣೆಗಳು ನಡೆಯುತ್ತಿದ್ದು, ಐದು ಹಂತದಲ್ಲಿ ಮತದಾನ ಪೂರ್ಣಗೊಂಡಿದೆ. ಈ ಸಂದರ್ಭದಲ್ಲಿ ಕೃತಕ ಬುದ್ಧಿಮತ್ತೆ(ಎಐ) ನಿರ್ಮಿತ ವಿಡಿಯೋಗಳು ಕೋಮು ಸಾಮರಸ್ಯ ಹಾಳು ಮಾಡಿ ಅಪಪ್ರಚಾರಗೊಳಿಸುತ್ತಿರುವುದು ಪ್ರಮುಖ ಬೆದರಿಕೆಯಾಗಿ ಹೊರಹೊಮ್ಮಿದೆ.
ವರದಿಗಳ ಪ್ರಕಾರ ಫೇಸ್‌ಬುಕ್, ವಾಟ್ಸಾಪ್, ಇನ್ಸ್‌ಟಾ ಮಾತೃಸಂಸ್ಥೆ ಮೆಟಾ ಸಂಸ್ಥೆಯು ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ದ್ವೇಷವನ್ನು ಹರಡಲು ಕೃತಕ ಬುದ್ಧಿಮತ್ತೆಯ ಮೂಲಕ ತಿರುಚುವ ಹಲವು ರಾಜಕೀಯ ಜಾಹೀರಾತುಗಳಿಗೆ ಅನುಮೋದನೆ ನೀಡಿದೆ.
ಭಾರತದಲ್ಲಿನ ಮುಸ್ಲಿಂ ಸಮುದಾಯವನ್ನು ನಿಂದಿಸುವುದನ್ನು ಒಳಗೊಂಡಿರುವ ಜಾಹೀರಾತುಗಳಿಗೆ ಫೇಸ್‌ಬುಕ್ ಅನುಮೋದನೆ ನೀಡಿದೆ. ‘ಈ ಕ್ರಿಮಿಕೀಟಗಳನ್ನು ಸುಟ್ಟುಬಿಡೋಣ’ ‘ಹಿಂದೂಗಳ ರಕ್ತ ಚೆಲ್ಲುತ್ತದೆ’, ಈ ಆಕ್ರಮಣಕಾರರನ್ನು ಖಂಡಿತಾ ಸುಡಬೇಕು’ ರೀತಿಯ ಒಂದು ಧರ್ಮವನ್ನು ಪ್ರಚೋದಿಸುವ ರಾಜಕೀಯ ನಾಯಕರ ದ್ವೇಷ ಹರಡುವ ಪ್ರಚಾರಗಳನ್ನು ಒಳಗೊಂಡ ಜಾಹೀರಾತುಗಳಿಗೆ ಮೆಟಾ ಅನುಮತಿ ನೀಡಿದೆ.
ವರದಿಯ ಪ್ರಕಾರ ಮುಸ್ಲಿಂ ಸಮುದಾಯವನ್ನು ಕೆರಳಿಸುವ’ ಹಿಂದೂಗಳನ್ನು ಭಾರತದಿಂದ ಅಳಿಸಿ’ ಎಂಬ ಸಾಮರಸ್ಯ ಹದಗೆಡಿಸುವ ಒಂದು ಜಾಹೀರಾತಿಗೂ ಮೆಟಾ ಅನುಮೋದಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕ್ರಿಕೆಟ್ ಆಟ, ಹುಚ್ಚಾಟ, ಜೂಜಾಟ ಮತ್ತು ಧೋನಿಯ ದುಗುಡ
ಕರ್ನಾಟಕ ಬಿಜೆಪಿ ಘಟಕ ಪ್ರಕಟಿಸಿದ್ದ ಕೋಮು ದ್ವೇಷ ಬಿತ್ತುವ ಜಾಹೀರಾತನ್ನು ಅಳಿಸುವಂತೆ ಸಾಮಾಜಿಕ ಮಾಧ್ಯಮ ಎಕ್ಸ್‌ಗೆ ಚುನಾವಣಾ ಆಯೋಗದ ಆದೇಶ ನೀಡಿದ ನಂತರ ಈ ಘಟನೆಗಳು ಬೆಳಕಿಗೆ ಬಂದಿವೆ.
ಹಾನಿಕಾರಕ ರಾಜಕೀಯ ಜಾಹೀರಾತುಗಳನ್ನು ಪತ್ತೆ ಹಚ್ಚಲು ಹಾಗೂ ನಿರ್ಬಂಧಿಸುವುದಕ್ಕೆ ಇಂಡಿಯಾ ಸಿವಿಲ್ ವಾಚ್ ಇಂಟರ್‌ನ್ಯಾಷನಲ್ ಹಾಗೂ ಎಕೊ ಎಂಬ ಕಾರ್ಪೋರೇಟ್ ಹೊಣೆಗಾರಿಗಾ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ.
ಈ ಸಂಸ್ಥೆಗಳು ಇಂಗ್ಲಿಷ್, ಹಿಂದಿ, ಬಂಗಾಳಿ, ಗುಜರಾತಿ ಹಾಗೂ ಕನ್ನಡ ಸೇರಿ 14 ಭಾಷೆಗಳ ದ್ವೇಷ ಬಿತ್ತುವ 22 ಜಾಹೀರಾತುಗಳಿಗೆ ಮೆಟಾ ಒಪ್ಪಿಗೆ ನೀಡಿರುವುದನ್ನು ಪತ್ತೆ ಹಚ್ಚಿವೆ. ಆದಾಗ್ಯೂ ಅನುಮೋದನೆ ಪಡೆದು ಪ್ರಕಟಣೆಗೂ ಮೊದಲೂ ಈ ಸಂಶೋಧನಾ ಸಂಸ್ಥೆಗಳು ತಕ್ಷಣವೇ ಜಾಹೀರಾತನ್ನು ನಿರ್ಬಂಧಿಸಿವೆ.
ಎಐ ಬಳಕೆಯಿಂದ ತಿರುಚಲಾದ ಅನುಮೋದಿತ ಎಲ್ಲ ಜಾಹೀರಾತುಗಳನ್ನು ಪತ್ತೆ ಹಚ್ಚಲು ಮೆಟಾ ಸಂಸ್ಥೆ ವಿಫಲವಾಗಿದೆ ಎಂದು ಸಂಶೋಧನಾ ಸಂಸ್ಥೆಗಳು ಅಭಿಪ್ರಾಯ ಪಟ್ಟಿವೆ.
ಮೆಟಾ ಸಂಸ್ಥೆಯು ದ್ವೇಷ ಹರಡುವ 5 ಜಾಹೀರಾತುಗಳನ್ನು ಮಾತ್ರ ತಿರಸ್ಕರಿಸಿದೆ. ಅವುಗಳಲ್ಲಿ ಮೋದಿ ವಿರುದ್ಧ ಇರುವ ಒಂದು ದ್ವೇಷ ಭಾಷಣ ಕೂಡ ಒಳಗೊಂಡಿದೆ. ಆದರೆ ಮುಸ್ಲಿಮರನ್ನು ದ್ವೇಷಿಸುವ ವಿವಿಧ ವಿಷಯವಿರುವ 14 ಇತರ ಜಾಹೀರಾತುಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಸಂಶೋಧನಾ ಸಂಸ್ಥೆ ತಿಳಿಸಿದೆ.
