ಮುಸ್ಲಿಂ ದ್ವೇಷಕ್ಕೆ ಅನುಮತಿ ಹಾಗೂ ಮೋದಿ ನಿಂದಿಸುವ ಜಾಹೀರಾತುಗಳಿಗೆ ತಡೆ ನೀಡಿದ ಮೆಟಾ

Date:

ಪ್ರಸ್ತುತ ಭಾರತದಲ್ಲಿ ಲೋಕಸಭಾ ಚುನಾವಣೆಗಳು ನಡೆಯುತ್ತಿದ್ದು, ಐದು ಹಂತದಲ್ಲಿ ಮತದಾನ ಪೂರ್ಣಗೊಂಡಿದೆ. ಈ ಸಂದರ್ಭದಲ್ಲಿ ಕೃತಕ ಬುದ್ಧಿಮತ್ತೆ(ಎಐ) ನಿರ್ಮಿತ ವಿಡಿಯೋಗಳು ಕೋಮು ಸಾಮರಸ್ಯ ಹಾಳು ಮಾಡಿ ಅಪಪ್ರಚಾರಗೊಳಿಸುತ್ತಿರುವುದು ಪ್ರಮುಖ ಬೆದರಿಕೆಯಾಗಿ ಹೊರಹೊಮ್ಮಿದೆ.

- Advertisement -

ವರದಿಗಳ ಪ್ರಕಾರ ಫೇಸ್‌ಬುಕ್‌, ವಾಟ್ಸಾಪ್‌, ಇನ್ಸ್‌ಟಾ ಮಾತೃಸಂಸ್ಥೆ ಮೆಟಾ ಸಂಸ್ಥೆಯು ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ದ್ವೇಷವನ್ನು ಹರಡಲು ಕೃತಕ ಬುದ್ಧಿಮತ್ತೆಯ ಮೂಲಕ ತಿರುಚುವ ಹಲವು ರಾಜಕೀಯ ಜಾಹೀರಾತುಗಳಿಗೆ ಅನುಮೋದನೆ ನೀಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು ರಾಜಕೀಯದ ಭಾಗವೂ ಹೌದು. ಆರಂಭದ ಕಪ್ಪು-ಬಿಳುಪಿನ ನೆರಳುಗಳಿಂದ ಇಂದಿನ ಅಲ್ಟ್ರಾ-ಸ್ಯಾಚುರೇಟೆಡ್ ಪರದೆಯವರೆಗೆ, ಸಿನೆಮಾದ ಸೌಂದರ್ಯ, ತಂತ್ರಜ್ಞಾನ ಮತ್ತು ಅಧಿಕಾರ ರಾಜಕಾರಣವನ್ನು...

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಭಾರತದಲ್ಲಿನ ಮುಸ್ಲಿಂ ಸಮುದಾಯವನ್ನು ನಿಂದಿಸುವುದನ್ನು ಒಳಗೊಂಡಿರುವ ಜಾಹೀರಾತುಗಳಿಗೆ ಫೇಸ್‌ಬುಕ್‌ ಅನುಮೋದನೆ ನೀಡಿದೆ. ‘ಈ ಕ್ರಿಮಿಕೀಟಗಳನ್ನು ಸುಟ್ಟುಬಿಡೋಣ’ ‘ಹಿಂದೂಗಳ ರಕ್ತ ಚೆಲ್ಲುತ್ತದೆ’,  ಈ ಆಕ್ರಮಣಕಾರರನ್ನು ಖಂಡಿತಾ ಸುಡಬೇಕು’ ರೀತಿಯ ಒಂದು ಧರ್ಮವನ್ನು ಪ್ರಚೋದಿಸುವ ರಾಜಕೀಯ ನಾಯಕರ ದ್ವೇಷ ಹರಡುವ ಪ್ರಚಾರಗಳನ್ನು ಒಳಗೊಂಡ ಜಾಹೀರಾತುಗಳಿಗೆ ಮೆಟಾ ಅನುಮತಿ ನೀಡಿದೆ.

ವರದಿಯ ಪ್ರಕಾರ ಮುಸ್ಲಿಂ ಸಮುದಾಯವನ್ನು ಕೆರಳಿಸುವ’ ಹಿಂದೂಗಳನ್ನು ಭಾರತದಿಂದ ಅಳಿಸಿ’ ಎಂಬ ಸಾಮರಸ್ಯ ಹದಗೆಡಿಸುವ ಒಂದು ಜಾಹೀರಾತಿಗೂ ಮೆಟಾ ಅನುಮೋದಿಸಿದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕ್ರಿಕೆಟ್ ಆಟ, ಹುಚ್ಚಾಟ, ಜೂಜಾಟ ಮತ್ತು ಧೋನಿಯ ದುಗುಡ

ಕರ್ನಾಟಕ ಬಿಜೆಪಿ ಘಟಕ ಪ್ರಕಟಿಸಿದ್ದ ಕೋಮು ದ್ವೇಷ ಬಿತ್ತುವ ಜಾಹೀರಾತನ್ನು ಅಳಿಸುವಂತೆ ಸಾಮಾಜಿಕ ಮಾಧ್ಯಮ ಎಕ್ಸ್‌ಗೆ ಚುನಾವಣಾ ಆಯೋಗದ ಆದೇಶ ನೀಡಿದ ನಂತರ ಈ ಘಟನೆಗಳು ಬೆಳಕಿಗೆ ಬಂದಿವೆ.

ಹಾನಿಕಾರಕ ರಾಜಕೀಯ ಜಾಹೀರಾತುಗಳನ್ನು ಪತ್ತೆ ಹಚ್ಚಲು ಹಾಗೂ ನಿರ್ಬಂಧಿಸುವುದಕ್ಕೆ ಇಂಡಿಯಾ ಸಿವಿಲ್ ವಾಚ್‌ ಇಂಟರ್‌ನ್ಯಾಷನಲ್‌ ಹಾಗೂ ಎಕೊ ಎಂಬ ಕಾರ್ಪೋರೇಟ್ ಹೊಣೆಗಾರಿಗಾ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ.

ಈ ಸಂಸ್ಥೆಗಳು ಇಂಗ್ಲಿಷ್, ಹಿಂದಿ, ಬಂಗಾಳಿ, ಗುಜರಾತಿ ಹಾಗೂ ಕನ್ನಡ ಸೇರಿ 14 ಭಾಷೆಗಳ ದ್ವೇಷ ಬಿತ್ತುವ 22 ಜಾಹೀರಾತುಗಳಿಗೆ ಮೆಟಾ ಒಪ್ಪಿಗೆ ನೀಡಿರುವುದನ್ನು ಪತ್ತೆ ಹಚ್ಚಿವೆ. ಆದಾಗ್ಯೂ ಅನುಮೋದನೆ ಪಡೆದು ಪ್ರಕಟಣೆಗೂ ಮೊದಲೂ ಈ ಸಂಶೋಧನಾ ಸಂಸ್ಥೆಗಳು ತಕ್ಷಣವೇ ಜಾಹೀರಾತನ್ನು ನಿರ್ಬಂಧಿಸಿವೆ.

ಎಐ ಬಳಕೆಯಿಂದ ತಿರುಚಲಾದ ಅನುಮೋದಿತ ಎಲ್ಲ ಜಾಹೀರಾತುಗಳನ್ನು ಪತ್ತೆ ಹಚ್ಚಲು ಮೆಟಾ ಸಂಸ್ಥೆ ವಿಫಲವಾಗಿದೆ ಎಂದು ಸಂಶೋಧನಾ ಸಂಸ್ಥೆಗಳು ಅಭಿಪ್ರಾಯ ಪಟ್ಟಿವೆ.

ಮೆಟಾ ಸಂಸ್ಥೆಯು ದ್ವೇಷ ಹರಡುವ 5 ಜಾಹೀರಾತುಗಳನ್ನು ಮಾತ್ರ ತಿರಸ್ಕರಿಸಿದೆ. ಅವುಗಳಲ್ಲಿ ಮೋದಿ ವಿರುದ್ಧ ಇರುವ ಒಂದು ದ್ವೇಷ ಭಾಷಣ ಕೂಡ ಒಳಗೊಂಡಿದೆ. ಆದರೆ ಮುಸ್ಲಿಮರನ್ನು ದ್ವೇಷಿಸುವ ವಿವಿಧ ವಿಷಯವಿರುವ 14 ಇತರ ಜಾಹೀರಾತುಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಸಂಶೋಧನಾ ಸಂಸ್ಥೆ ತಿಳಿಸಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಚೋದನಕಾರಿ ಭಾಷಣದಿಂದ ಹಲ್ಲೆಯವರೆಗೆ: ಪರ್ವೇಶ್ ವರ್ಮಾ ಎಂಬ ಪರಮ ದುರಹಂಕಾರಿಯ ಕತೆ

ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳು ಜನರಿಗೆ ಉತ್ತರದಾಯಿಗಳಾಗಿರಬೇಕು. ಆದರೆ, ದೆಹಲಿಯ ಲೋಕೋಪಯೋಗಿ ಸಚಿವ ಪರ್ವೇಶ್...

ದೆಹಲಿಯಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಪ್ರಾಧಿಕಾರಗಳ ನಿರ್ಲಕ್ಷ್ಯ: ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ

ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ವಲಯದಲ್ಲಿ (NCR) ಅಪ್ರಾಪ್ತರು ಹಾಗೂ ಮಹಿಳೆಯರ...

ಜನಸಂಖ್ಯಾ ಸಮಿತಿಯ ‘ಧರ್ಮ ಆಧಾರಿತ’ ಪ್ರಶ್ನೆಗಳಿಗೆ ಉತ್ತರಿಸಲಾಗದೆ ರಾಜ್ಯ ಸರ್ಕಾರಗಳ ಪರದಾಟ

ಜನಸಂಖ್ಯಾ ಬದಲಾವಣೆಗಳ ಕುರಿತು ಅಧ್ಯಯನ ನಡೆಸುತ್ತಿರುವ ಉನ್ನತ ಮಟ್ಟದ ಸಮಿತಿಯು (HLCDC)...