ಬೆಂಗಳೂರಿನಲ್ಲಿ ಭಾನುವಾರ (ಜೂನ್ 2) ಒಂದೇ ದಿನದಲ್ಲಿ ಅತಿ ಹೆಚ್ಚು ಮಳೆ ಸುರಿದಿದ್ದು 133 ವರ್ಷಗಳ ದಾಖಲೆಯನ್ನು ಮುರಿದಿದೆ. ಬೆಂಗಳೂರು ಭಾನುವಾರ ದಾಖಲೆಯ ಮಳೆಗೆ ಸಾಕ್ಷಿಯಾಗಿದೆ ಎಂದು ವರದಿಯಾಗಿದೆ.
ಜೂನ್ 2ರಂದು ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗಿದೆ. 111.1 ಮಿಮೀ ಮಳೆ ದಾಖಲಾಗಿದೆ. ಜೂನ್ 16, 1891ರಂದು ನಗರವು 101.6 ಮಿಮೀ ಮಳೆಯಾಗಿತ್ತು. ಆ ದಾಖಲೆಯನ್ನು ಭಾನುವಾರದ ಮಳೆ ಮುರಿದಿದೆ.
ಇದನ್ನು ಓದಿದ್ದೀರಾ? ಆರಂಭವಾದ ಮಳೆ ಆರ್ಭಟ; ಮತ್ತೆ ಪ್ರವಾಹದ ಹಾದಿ ಹಿಡಿದ ಬೆಂಗಳೂರು
ಇನ್ನು ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಜೂನ್ 3ರಿಂದ 5ರವರೆಗೆ ಮೋಡ ಕವಿದ ವಾತಾವರಣ ಇರುವ, ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ. ಈ ಅವಧಿಯಲ್ಲಿ, ತಾಪಮಾನವು ಗರಿಷ್ಠ 31-32 ಡಿಗ್ರಿ ಸೆಲ್ಸಿಯಸ್‌ನಿಂದ ಕನಿಷ್ಠ 20-21 ಡಿಗ್ರಿ ಸೆಲ್ಸಿಯಸ್‌ವರೆಗೆ ಇರಲಿದೆ.
#Bengaluru city #IMD observatory sees the wettest June day in recorded history by recording a rainfall of 111 mm till 11:30 pm today. The previous record of 101.6 mm was recorded 133 years ago on 16-06-1891! #Bengalururains #Karnataka #weather
— Bengaluru Weather (@BngWeather) June 2, 2024
ಬೆಂಗಳೂರಿನಲ್ಲಿ ಭಾನುವಾರ ಸಂಜೆ 4 ಗಂಟೆ ವೇಳೆಗೆ ಸತತ 1 ಗಂಟೆಗೂ ಅಧಿಕ ಸಮಯ ಮಳೆ ಸುರಿದಿದ್ದು, ಒಟ್ಟು 128 ಮರಗಳು ಧರೆಗುರುಳಿದೆ. ಈ ಪೈಕಿ 118 ಮರಗಳು ಸಂಪೂರ್ಣವಾಗಿ ಬಿದ್ದಿದ್ದರೆ, 128 ಮರಗಳ ಕೊಂಬೆಗಳು ತುಂಡಾಗಿದೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಮುಂದಿನ ಏಳು ದಿನ ರಾಜ್ಯದ ಹಲವೆಡೆ ಭಾರೀ ಮಳೆ ಸಾಧ್ಯತೆ; ಹವಾಮಾನ ಇಲಾಖೆ
ಇನ್ನು 20ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಿಎಂಟಿಸಿ ಬಸ್ ಜಲಾವೃತಗೊಂಡ ಶಿವಾನಂದ ವೃತ್ತದ ಕೆಳಸೇತುವೆಯಲ್ಲಿ ಸಿಲುಕಿಕೊಂಡ ಘಟನೆಯೂ ನಡೆದಿದೆ. ಪ್ರಯಾಣಿಕರು, ಚಾಲಕ ಮತ್ತು ಕಂಡಕ್ಟರ್ ಸುರಕ್ಷಿತವಾಗಿ ಬಸ್‌ನಿಂದ ಹೊರಬಂದಿದ್ದಾರೆ.
ಸಾರ್ವಜನಿಕರು ಚರಂಡಿಗೆ ಅಡ್ಡಿಯಾಗಿದ್ದ ಮರದ ಕೊಂಬೆಗಳು, ಪ್ಲಾಸ್ಟಿಕ್ ಕವರ್‌ಗಳನ್ನು ತೆರವುಗೊಳಿಸಿದ್ದು, ಅದಾದ ಬಳಿಕ ಬಸ್ ಅಂಡರ್‌ಪಾಸ್‌ನಿಂದ ಹೊರಕ್ಕೆ ತಳ್ಳಿದ್ದಾರೆ.
ಇನ್ನು ಮಳೆಯಿಂದಾಗಿ ಸಿಲಿಕಾನ್ ಸಿಟಿಯಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿದೆ. ಇದಕ್ಕಾಗಿ ಸಹಾಯವಾಣಿಗಳನ್ನು ತೆರೆಯಲಾಗಿದೆ. ಬಿಬಿಎಂಪಿ ವನ್ಯಜೀವಿ ಸಹಾಯವಾಣಿ 1533, ಕರ್ನಾಟಕ ಅರಣ್ಯ ಇಲಾಖೆ ಸಹಾಯವಾಣಿ 1926, ಬಿಬಿಎಂಪಿ ವನ್ಯ ಜೀವಿ ಸಂರಕ್ಷಣಾ ಸಹಾಯವಾಣಿ 9902794711 ತೆರೆಯಲಾಗಿದೆ.