ಬೆಂಗಳೂರು: 133 ವರ್ಷಗಳ ದಾಖಲೆ ಮುರಿದ ಒಂದೇ ದಿನದ ಮಳೆ

Date:

ಬೆಂಗಳೂರಿನಲ್ಲಿ ಭಾನುವಾರ (ಜೂನ್ 2) ಒಂದೇ ದಿನದಲ್ಲಿ ಅತಿ ಹೆಚ್ಚು ಮಳೆ ಸುರಿದಿದ್ದು 133 ವರ್ಷಗಳ ದಾಖಲೆಯನ್ನು ಮುರಿದಿದೆ. ಬೆಂಗಳೂರು ಭಾನುವಾರ ದಾಖಲೆಯ ಮಳೆಗೆ ಸಾಕ್ಷಿಯಾಗಿದೆ ಎಂದು ವರದಿಯಾಗಿದೆ.

- Advertisement -

ಜೂನ್ 2ರಂದು ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗಿದೆ. 111.1 ಮಿಮೀ ಮಳೆ ದಾಖಲಾಗಿದೆ. ಜೂನ್ 16, 1891ರಂದು ನಗರವು 101.6 ಮಿಮೀ ಮಳೆಯಾಗಿತ್ತು. ಆ ದಾಖಲೆಯನ್ನು ಭಾನುವಾರದ ಮಳೆ ಮುರಿದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು ರಾಜಕೀಯದ ಭಾಗವೂ ಹೌದು. ಆರಂಭದ ಕಪ್ಪು-ಬಿಳುಪಿನ ನೆರಳುಗಳಿಂದ ಇಂದಿನ ಅಲ್ಟ್ರಾ-ಸ್ಯಾಚುರೇಟೆಡ್ ಪರದೆಯವರೆಗೆ, ಸಿನೆಮಾದ ಸೌಂದರ್ಯ, ತಂತ್ರಜ್ಞಾನ ಮತ್ತು ಅಧಿಕಾರ ರಾಜಕಾರಣವನ್ನು...

‘ಪಿತೃಪ್ರಭುತ್ವವನ್ನು ಧ್ವಂಸ ಮಾಡಿ’: ಮನುವಾದ ಮತ್ತು ಫ್ಯಾಸಿಸಂ ವಿರುದ್ಧ...

ಸ್ವತಂತ್ರ ಭಾರತ 80 ವರ್ಷಗಳನ್ನು ಪೂರೈಸುತ್ತಿರುವಾಗ, ನಾವು ಕೇಳಬೇಕಾಗಿದೆ, ಆ ಮನಸ್ಥಿತಿ ಹೋಗಿದೆಯೇ? ಇಲ್ಲ. ಪುಸ್ತಕವನ್ನು ಸುಡಲಾಗಿರಬಹುದು, ಆದರೆ ಮನುಸ್ಮೃತಿಯ ಮನಸ್ಥಿತಿ, ಮನುವಾದ, ಹೆಚ್ಚು ಅತ್ಯಾಧುನಿಕ ಮತ್ತು ಅದೃಶ್ಯ ರೂಪಗಳಲ್ಲಿ ಅಸ್ತಿತ್ವದಲ್ಲಿದೆ.  ಪುಣೆಯಲ್ಲಿ ನಡೆದ...

ಇದನ್ನು ಓದಿದ್ದೀರಾ?  ಆರಂಭವಾದ ಮಳೆ ಆರ್ಭಟ; ಮತ್ತೆ ಪ್ರವಾಹದ ಹಾದಿ ಹಿಡಿದ ಬೆಂಗಳೂರು

ಇನ್ನು ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಜೂನ್ 3ರಿಂದ 5ರವರೆಗೆ ಮೋಡ ಕವಿದ ವಾತಾವರಣ ಇರುವ, ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ. ಈ ಅವಧಿಯಲ್ಲಿ, ತಾಪಮಾನವು ಗರಿಷ್ಠ 31-32 ಡಿಗ್ರಿ ಸೆಲ್ಸಿಯಸ್‌ನಿಂದ ಕನಿಷ್ಠ 20-21 ಡಿಗ್ರಿ ಸೆಲ್ಸಿಯಸ್‌ವರೆಗೆ ಇರಲಿದೆ.


ಬೆಂಗಳೂರಿನಲ್ಲಿ ಭಾನುವಾರ ಸಂಜೆ 4 ಗಂಟೆ ವೇಳೆಗೆ ಸತತ 1 ಗಂಟೆಗೂ ಅಧಿಕ ಸಮಯ ಮಳೆ ಸುರಿದಿದ್ದು, ಒಟ್ಟು 128 ಮರಗಳು ಧರೆಗುರುಳಿದೆ. ಈ ಪೈಕಿ 118 ಮರಗಳು ಸಂಪೂರ್ಣವಾಗಿ ಬಿದ್ದಿದ್ದರೆ, 128 ಮರಗಳ ಕೊಂಬೆಗಳು ತುಂಡಾಗಿದೆ ಎಂದು ವರದಿಯಾಗಿದೆ.

ಇದನ್ನು ಓದಿದ್ದೀರಾ?  ಮುಂದಿನ ಏಳು ದಿನ ರಾಜ್ಯದ ಹಲವೆಡೆ ಭಾರೀ ಮಳೆ ಸಾಧ್ಯತೆ; ಹವಾಮಾನ ಇಲಾಖೆ

ಇನ್ನು 20ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಿಎಂಟಿಸಿ ಬಸ್‌ ಜಲಾವೃತಗೊಂಡ ಶಿವಾನಂದ ವೃತ್ತದ ಕೆಳಸೇತುವೆಯಲ್ಲಿ ಸಿಲುಕಿಕೊಂಡ ಘಟನೆಯೂ ನಡೆದಿದೆ. ಪ್ರಯಾಣಿಕರು, ಚಾಲಕ ಮತ್ತು ಕಂಡಕ್ಟರ್ ಸುರಕ್ಷಿತವಾಗಿ ಬಸ್‌ನಿಂದ ಹೊರಬಂದಿದ್ದಾರೆ.

ಸಾರ್ವಜನಿಕರು ಚರಂಡಿಗೆ ಅಡ್ಡಿಯಾಗಿದ್ದ ಮರದ ಕೊಂಬೆಗಳು, ಪ್ಲಾಸ್ಟಿಕ್ ಕವರ್‌ಗಳನ್ನು ತೆರವುಗೊಳಿಸಿದ್ದು, ಅದಾದ ಬಳಿಕ ಬಸ್ ಅಂಡರ್‌ಪಾಸ್‌ನಿಂದ ಹೊರಕ್ಕೆ ತಳ್ಳಿದ್ದಾರೆ.

ಇನ್ನು ಮಳೆಯಿಂದಾಗಿ ಸಿಲಿಕಾನ್ ಸಿಟಿಯಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿದೆ. ಇದಕ್ಕಾಗಿ ಸಹಾಯವಾಣಿಗಳನ್ನು ತೆರೆಯಲಾಗಿದೆ. ಬಿಬಿಎಂಪಿ ವನ್ಯಜೀವಿ ಸಹಾಯವಾಣಿ 1533, ಕರ್ನಾಟಕ ಅರಣ್ಯ ಇಲಾಖೆ ಸಹಾಯವಾಣಿ 1926, ಬಿಬಿಎಂಪಿ ವನ್ಯ ಜೀವಿ ಸಂರಕ್ಷಣಾ ಸಹಾಯವಾಣಿ 9902794711 ತೆರೆಯಲಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏಕಪಕ್ಷೀಯ ನಿರ್ಧಾರ; ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಬಿ ಕೆ ಹರಿಪ್ರಸಾದ್ ಆಗ್ರಹ: ನಾಳೆ ಪ್ರತಿಭಟನೆ

ಕೇಂದ್ರ ಚುನಾವಣಾ ಆಯೋಗದ ಆಯುಕ್ತರಾದ ಗ್ಯಾನೇಶ್ ಕುಮಾರ್ ಕಳೆದ 10 ತಿಂಗಳಲ್ಲಿ...

ಲಗ್ಗೆರೆ | ಜೆಡಿಎಸ್ ನಾಯಕ ಅಂದಾನಪ್ಪ ನಿವಾಸದಲ್ಲಿ ವಾಚ್‌ಮ್ಯಾನ್ ಆತ್ಮಹತ್ಯೆ

ಜೆಡಿಎಸ್ ಮುಖಂಡ ಅಂದಾನಪ್ಪ ಅವರ ಬೆಂಗಳೂರಿನ ಲಗ್ಗೆರೆ ನಿವಾಸದಲ್ಲಿ ವಾಚ್‌ಮ್ಯಾನ್ ಆಗಿ...

ಬೈಕ್ ಟ್ಯಾಕ್ಸಿಗೆ ಹೈಕೋರ್ಟ್ ಹಸಿರು ನಿಶಾನೆ; ಚಾಲಕರ ಸಂಘದಿಂದ ಸುಪ್ರೀಂಗೆ ಮೇಲ್ಮನವಿ

ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗೆ ಹಸಿರು ನಿಶಾನೆ ತೋರಿಸಿದ್ದ ಹೈಕೋರ್ಟ್ ತೀರ್ಪು...

ಸೋಮನಹಳ್ಳಿಯ ಸುಷ್ಮಗೆ ಸಂದ ಡಾಕ್ಟರೇಟ್ ಗೌರವ

ಬೆಂಗಳೂರು ವಿಶ್ವವಿದ್ಯಾಲಯದ ಗ್ರಾಮೀಣ ಅಭಿವೃದ್ಧಿ ಅಧ್ಯಯನ ಕೇಂದ್ರದ ಸಂಶೋಧನಾ ವಿದ್ಯಾರ್ಥಿನಿ ಶ್ರೀಮತಿ...