ಬೀದರ್‌ | 371(ಜೆ) ಕಲಂ ವಿರೋಧಿಸುವರಿಗೆ ತಕ್ಕ ಉತ್ತರ ನೀಡಲು ಸಿದ್ಧರಾಗಿ

Date:

Advertisements

ಸಾಂವಿಧಾನಿಕ 371 (ಜೆ) ಕಲಂ ಜಾರಿಯಾಗಿರುವುದರಿಂದ ಕಲ್ಯಾಣ ಕರ್ನಾಟಕದವರಿಗೆ ಮಾತ್ರ ಸರ್ಕಾರಿ ಹುದ್ದೆ, ಶೈಕ್ಷಣಿಕ ಸೌಲಭ್ಯಗಳು ಹೆಚ್ಚಾಗಿ ಸಿಗುತ್ತಿವೆ. ಇದರಿಂದ ರಾಜ್ಯದ ಉಳಿದ 24 ಜಿಲ್ಲೆಗಳಿಗೆ ಅನ್ಯಾಯವಾಗುತ್ತಿದೆ ಎಂದು ಆಧಾರ ರಹಿತ ಸುಳ್ಳು ಸುದ್ದಿಯನ್ನು ಹಬ್ಬಿಸುವ ಮುಖಾಂತರ 371(ಜೆ) ವಿರುದ್ಧ ಹೋರಾಟ ನಡೆಸುವವರಿಗೆ ತಕ್ಕ ಉತ್ತರ ನೀಡಲು ಉಗ್ರ ಹೋರಾಟ ರೂಪಿಸುವುದು ಅನಿವಾರ್ಯವಾಗಿದೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ಹೇಳಿದರು.

ಬೀದರ್‌ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ಸುಮಾರು ಮೂರು ದಶಕಗಳ  ಹೋರಾಟದ ಫಲವಾಗಿ 371 (ಜೆ) ವಿಶೇಷ ಸ್ಥಾನಮಾನ ದೊರಕಿದೆ, ಈಗ ಒಂದು ದಶಕ ತುಂಬಿದೆ. ಈಗಷ್ಟೇ ಈ ಭಾಗದ ಜನರಿಗೆ ಕೆಲವು ಸೌಲಭ್ಯ ಸಿಗುತ್ತಿದೆ. ಈ ಸಂದರ್ಭದಲ್ಲಿಯೇ  ಬೆಂಗಳೂರಿನ ಕೆಲ ಪಟ್ಟಭದ್ರ ಹಿತಾಸಕ್ತಿ ಜನರು 371ನೇ (ಜೆ) ಕಲಂ ವಿರುದ್ಧ ಅಪಸ್ವರ ಎತ್ತಿ ರಾಜ್ಯ ಒಡೆಯುವಂತಹ ಕೃತ್ಯ ನಡೆಸುತ್ತಿರುವುದು  ಸಂವಿಧಾನ ವಿರೋಧಿಯಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಹೈದ್ರಾಬಾದ ರಾಜ್ಯಕ್ಕೆ 1956 ರಲ್ಲಿಯೇ ಸಂವಿಧಾನದ 371ನೇ(ಜೆ) ಕಲಂ ಕೊಡಬೇಕೆಂಬ ನಿರ್ಣಯವಾದರೂ ಸಹ ನಾವು ಆ ಅವಕಾಶವನ್ನು ತಿರಸ್ಕರಿಸಿ ಕನ್ನಡಿಗರೆಲ್ಲಾ ಒಂದೇ ರಾಜ್ಯದಲ್ಲಿರಬೇಕೆಂಬ ಸ್ವಾಭಿಮಾನದಿಂದ ವಿಶಾಲ ಮೈಸೂರು ರಾಜ್ಯದಲ್ಲಿ ಸೇರಿದ್ದೇವು. ನಮ್ಮ ತ್ಯಾಗ ಬಲಿದಾನ ಅರ್ಥ ಮಾಡಿಕೊಳ್ಳದ ಕಲ್ಯಾಣ ವಿರೋಧಿಗಳು ನಮ್ಮ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ. ಈ ಕುತಂತ್ರದ ಹೋರಾಟಕ್ಕೆ ಈಗಾಗಲೇ ಕಲಬುರಗಿ ಮತ್ತು ಸಿಂಧನೂರಿನಲ್ಲಿ ಬೃಹತ್ ಪ್ರತಿಭಟನೆ ಮೂಲಕ ಎಚ್ಚರಿಸಿದ್ದೇವೆ. ಶೀಘ್ರದಲ್ಲೇ ಬೀದರ, ಯಾದಗಿರ ಹಾಗೂ ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದ್ದು, ಬೀದರ್ ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಸಂಘ ಸಂಸ್ಥೆಗಳಿಗೆ ಜನಪರ ಸಂಘಟನೆಗಳು ಕೈಜೋಡಿಸಬೇಕು” ಎಂದರು.

Advertisements

“ಪ್ರಸ್ತುತ ವರ್ಷದಲ್ಲಿಯೂ ಸಹ ಕಲ್ಯಾಣ ಕರ್ನಾಟಕ ಪ್ರದೇಶ ನೀರಾವರಿ, ಕೈಗಾರಿಕೆ, ರಸ್ತೆ, ಸಾರಿಗೆ, ಶಿಕ್ಷಣ, ಉದ್ಯೋಗ, ವಾಣಿಜ್ಯ, ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿಯೂ ನಮ್ಮ ಅತ್ಯಂತ ಕೊನೆಯ ಸ್ಥಾನದಲ್ಲಿ ಇರುವ ಬಗ್ಗೆ ಸರಕಾರದ ಅಧಿಕೃತ ಅಂಕಿ ಅಂಶಗಳೇ ಹೇಳುತ್ತವೆ. ರಾಜ್ಯದಲ್ಲಿ ಶೇ.19% ರಷ್ಟು ಜನಸಂಖ್ಯೆ ಹೊಂದಿರುವ ಈ ಭಾಗಕ್ಕೆ ಸರಕಾರಿ ಹುದ್ದೆಗಳಲ್ಲಿ ಕೇವಲ ಶೇ. 9% ರಷ್ಟು ಮಾತ್ರ ಇದೆ. ಶೈಕ್ಷಣಿಕ ಕ್ಷೇತ್ರದಲ್ಲಿಯೂ ಸಹ ಬೇರೆ ಭಾಗಕ್ಕೆ ಹೋಲಿಸಿದರೆ, ನಾವು ಅತ್ಯಂತ ಕೊನೆಯ ಸ್ಥಾನದಲ್ಲಿದ್ದೇವೆ” ಎಂದು ಕಳವಳ ವ್ಯಕ್ತಪಡಿಸಿದರು.

ಹಿರಿಯ ಚಿಂತಕ ಆರ್.ಕೆ.ಹುಡುಗಿ ಮಾತನಾಡಿ, “371ನೇ(ಜೆ) ಕಲಂ ಜಾರಿಯಾಗಿ ಇನ್ನೂ ಶಿಶು ಅವಸ್ಥೆಯಲ್ಲಿ ಇರುವಾಗಲೇ ಇದರ ವಿರುದ್ಧ 24 ಜಿಲ್ಲೆಗಳಲ್ಲಿ ಅಪಪ್ರಚಾರ ಮಾಡುತ್ತಾ ಸಂವಿಧಾನ ವಿರೋಧಿ ಹೋರಾಟ ಮಾಡುತ್ತಿರುವ ಹಸಿರು ಪ್ರತಿಷ್ಠಾನ ಎಂಬ ಸಂಘಟನೆಗೆ ರಾಜ್ಯ ಸರಕಾರ ತಕ್ಷಣ ನಿಷೇಧಿಸಬೇಕು. ಈ ಪ್ರತಿಷ್ಠಾನದ ಹಿಂದೆ ಸಕ್ರಿಯ ಜನಪ್ರತಿನಿಧಿಗಳು, ಶಾಸಕರು ಇರುವುದು ಕಂಡು ಬರುತ್ತಿದೆ. ಇದಕ್ಕೆ ಪ್ರತಿರೋಧಿಸಿ ಈಗಲೇ ಚಿವುಟದಿದ್ದರೆ ಅವರು ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಜನಾಭಿಪ್ರಾಯ ರೂಪಿಸಿ ಕಲ್ಯಾಣ ಕರ್ನಾಟಕದ ಪಾಲು ಕಸಿದುಕೊಳ್ಳಲು ಷಡ್ಯಂತ್ರ ಹೆಣೆಯುತ್ತಾರೆ” ಎಂದು ತಿಳಿಸಿದರು.

“ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಸಚಿವರು, ಸಂಸದರು, ಶಾಸಕರು ಇದನ್ನು ಗಂಭೀರವಾಗಿ ಪರಿಗಣಿಸಿ ನಮ್ಮ ಅಸ್ತಿತ್ವ ಮತ್ತು 371ನೇ(ಜೆ) ಕಲಂ ರಕ್ಷಣೆಗೆ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿ ನಮ್ಮ ಹೋರಾಟಕ್ಕೆ ಬೆಂಬಲಿಸಬೇಕು” ಎಂದು ಕೋರಿದರು.

“371ನೇ (ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಮತ್ತು ಕಲ್ಯಾಣ ಕರ್ನಾಟಕದ ವಿಶೇಷ ಪ್ರಗತಿಗೆ ಪ್ರತ್ಯೇಕ ಸಚಿವಾಲಯ ರಚನೆ ಮಾಡಬೇಕು. ನೇಮಕಾತಿಗಳಲ್ಲಿ ಕೃಪಾಂಕ ನೀಡಬೇಕು. ವಯೋಮಾನದಲ್ಲಿ ವಿನಾಯಿತಿ ನೀಡಬೇಕು. ವ್ಯಾಜ್ಯಗಳ ನಿವಾರಣೆಗೆ ನಿಯಮದಂತೆ ವಿಭಾಗೀಯ ಕೇಂದ್ರ ಕಲಬುರಗಿಯಲ್ಲಿ ಪ್ರತ್ಯೇಕ ಟ್ರಿಬ್ಯುನಲ್ ರಚನೆ ಮಾಡಬೇಕು. ಕಲ್ಯಾಣ ಕರ್ನಾಟಕದ ಮತ್ತು ರಾಜ್ಯದ ಇತರೆ ಭಾಗದ ನೂರಾರು ಅರ್ಹ ಅಭ್ಯರ್ಥಿಗಳು ಆಯಾ ಇಲಾಖೆಗಳಲ್ಲಿ ಆಯ್ಕೆಯಾಗಿದ್ದಾರೆ. ಅವರಿಗೆ ಆದೇಶ ಪತ್ರ ನೀಡದೆ ವಿನಾಕಾರಣ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಹೀಗಾಗಿ, ಕೂಡಲೇ ಸಂಬಂಧಿಸಿದ ಅಭ್ಯರ್ಥಿಗಳಿಗೆ ತಕ್ಷಣ ಸೇವಾ ಆದೇಶ ಪತ್ರ ನೀಡಬೇಕು” ಎಂದು ಆಗ್ರಹಿಸಿದರು.

ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಕಾಲಮಿತಿಯಲ್ಲಿ ಭರ್ತಿ ಮಾಡಬೇಕು. 1956ರಿಂದ ಇಲ್ಲಿಯವರೆಗೆ ನೇಮಕಾತಿಗಳಲ್ಲಿ ಕಲ್ಯಾಣ ಕರ್ನಾಟಕಕ್ಕೆ ಆಗಿರುವ ಅನ್ಯಾಯ ಸರಿಪಡಿಸಲು ಮತ್ತುಕಲ್ಯಾಣ ಕರ್ನಾಟಕಕ್ಕೆ ನ್ಯಾಯ ಒದಗಿಸಲು ಎಲ್ಲ ಇಲಾಖೆಗಳ ಬ್ಯಾಕ್‍ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು ಸೇರಿದಂತೆ ಎಂಟು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಎಸ್‌ವೈ ಪೋಕ್ಸೊ ಪ್ರಕರಣ; ತನಿಖೆಯೇ ನಡೆಯದೇ ಬಿಜೆಪಿ ನಾಯಕರು ʼಬಿʼ ರಿಪೋರ್ಟ್‌ ಬಯಸಿದ್ದು ಸರಿಯೇ?

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಡಾ. ಅಶೋಕ ನಾಗೂರೆ, ಡಾ. ಸಿ.ಆನಂದರಾವ್, ಚಂದ್ರಶೇಖರ ಪಾಟೀಲ, ಅಸ್ಲಂ ಚೌಂಗೆ, ವಿನಯ ಕುಮಾರ ಮಾಳಗೆ, ಅನಂತರೆಡ್ಡಿ, ರೋಹನಕುಮಾರ, ಬಕ್ಕಪ್ಪ ಗೊಂಡ ಸೇರಿದಂತೆ ಇತರರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ಚಳ್ಳಕೆರೆ ನಗರದಲ್ಲಿ ರಸ್ತೆ ಗುಂಡಿಗಳ ಪೂಜೆ; ಕರ್ನಾಟಕ ರಾಷ್ಟ್ರ ಸಮಿತಿಯಿಂದ ವಿನೂತನ ಪ್ರತಿಭಟನೆ

ಚಳ್ಳಕೆರೆ ನಗರದ ಬಹುತೇಕ ವಾರ್ಡುಗಳಲ್ಲಿ ಹಾಗೂ ಮುಖ್ಯ ರಸ್ತೆಗಳಲ್ಲಿ, ಅಲ್ಲದೆ ತಾಲೂಕಿನ...

ವಿಧಾನಸಭೆಯ ಮುಂಗಾರು ಅಧಿವೇಶನ ಮುಕ್ತಾಯ: ಒಟ್ಟು 39 ವಿಧೇಯಕ ಅಂಗೀಕಾರ

ಕಳೆದ ಆಗಸ್ಟ್ 11ರಿಂದ ಆರಂಭಗೊಂಡಿದ್ದ 16ನೇ ವಿಧಾನಸಭೆಯ ಮುಂಗಾರು ಅಧಿವೇಶನವು ಇಂದು(ಆ.22)...

ಶಿವಮೊಗ್ಗ | 15 ವರ್ಷದ ಬಳಿಕ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಆರ್. ಮಾರುತಿ ವರ್ಗಾವಣೆ!

ಶಿವಮೊಗ್ಗ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಕಳೆದ 15...

ಸಿಂಧನೂರು | ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ – ವಿದ್ಯಾರ್ಥಿನಿಯರ ಪ್ರತಿಭಟನೆ

ಸಿಂಧನೂರಿನ ಕುಷ್ಟಗಿ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆಯಿಂದಾಗಿ...

Download Eedina App Android / iOS

X