ದಕ್ಷಿಣ ಆಫ್ರಿಕಾ ಅಧ್ಯಕ್ಷ ರಮಾಫೋಸ ಎರಡನೇ ಅವಧಿಗೆ ಪುನರಾಯ್ಕೆ

Date:

ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಮಾಫೋಸ ಅವರು ಮತದಾನಕ್ಕೆ ಕೆಲವೇ ಗಂಟೆಗಳ ಮೊದಲು ತನ್ನ ದೀರ್ಘಾವಧಿಯ ರಾಜಕೀಯ ವಿರೋಧಿ ಪಕ್ಷದ ಜೊತೆ ಸಮ್ಮಿಶ್ರ ಒಪ್ಪಂದವನ್ನು ಮಾಡಿಕೊಂಡ ನಂತರ, ಜೂನ್ 14ರಂದು ಎರಡನೇ ಅವಧಿಗೆ ದಕ್ಷಿಣ ಆಫ್ರಿಕಾ ಅಧ್ಯಕ್ಷರಾಗಿ ಪುನರಾಯ್ಕೆಗೊಂಡಿದ್ದಾರೆ.

ತೀವ್ರ ಎಡಪಂಥೀಯ ಆರ್ಥಿಕ ಸ್ವಾತಂತ್ರ್ಯ ಹೋರಾಟಗಾರರ ಜೂಲಿಯಸ್ ಮಲೆಮಾ ವಿರುದ್ಧ ಸ್ಪರ್ಧಿಸಲಿದ್ದ ಆಫ್ರಿಕನ್ ನ್ಯಾಶನಲ್ ಕಾಂಗ್ರೆಸ್‌ನ (ಎಎನ್‌ಸಿ) ನಾಯಕ 71 ವರ್ಷದ ರಾಮಫೋಸ ಸಮ್ಮಿಶ್ರ ಒಪ್ಪಂದದ ಮೂಲಕ ತನ್ನ ಅಧ್ಯಕ್ಷ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಇದನ್ನು ಓದಿದ್ದೀರಾ? ದಕ್ಷಿಣ ಆಫ್ರಿಕಾ | ಸೇತುವೆಯಿಂದ ಕಂದಕಕ್ಕೆ ಬಸ್‌ ಬಿದ್ದು 45 ಮಂದಿ ಸಾವು; ಬದುಕುಳಿದ ಏಕೈಕ ಮಗು!

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ದಕ್ಷಿಣ ಆಫ್ರಿಕಾದ ಎರಡನೇ ಅತಿದೊಡ್ಡ ಪಕ್ಷವಾದ ಡೆಮಾಕ್ರಟಿಕ್ ಅಲೈಯನ್ಸ್ (ಡಿಎ) ಮತ್ತು ಕೆಲವು ಸಣ್ಣ ಪಕ್ಷಗಳ ಶಾಸಕರ ಸಹಾಯವನ್ನು ಪಡೆದುಕೊಂಡ ರಾಮಫೋಸ 400 ಸದಸ್ಯ ಬಲದ ಸದನದಲ್ಲಿ 283 ಮತಗಳನ್ನು ಪಡೆದರೆ, ಮಲೆಮಾ ಅವರ 44 ಮತಗಳನ್ನು ಪಡೆದರು.

ಎರಡು ವಾರಗಳ ಹಿಂದೆ ನಡೆದ ಮಹತ್ವದ ಚುನಾವಣೆಯಲ್ಲಿ ಎಎನ್‌ಸಿ ಬಹುಮತವನ್ನು ಕಳೆದುಕೊಂಡಿದ್ದು, ಸಂಸತ್ತಿನಲ್ಲಿ ಬೆಂಬಲ ಬಲ 159 ಸ್ಥಾನಗಳಿಗೆ ಇಳಿದಿತ್ತು. ಮ್ಯಾರಥಾನ್ ಪಾರ್ಲಿಮೆಂಟರಿ ಅಧಿವೇಶನದಲ್ಲಿ ವಿರಾಮದ ಸಮಯದಲ್ಲಿ ಎಎನ್‌ಸಿ ತನ್ನ ವಿಪಕ್ಷ ಡಿಎ ಜೊತೆ ಕೊನೆಯ ನಿಮಿಷದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದು, ಬಳಿಕ ಬೆಂಬಲ ಬಲ ಹೆಚ್ಚಾಗಿ ರಮಾಫೋಸ ಎರಡನೇ ಅವಧಿಗೆ ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನೇಪಾಳದಲ್ಲಿ ಭೂಕುಸಿತದಿಂದ ನದಿಗೆ ಉರುಳಿದ ಬಸ್: 65 ಮಂದಿ ನಾಪತ್ತೆ, 7 ಭಾರತೀಯರು ಸಾವು

ನೇಪಾಳ ದಲ್ಲಿ ಇಂದು ಭೂಕುಸಿತವುಂಟಾಗಿ ಎರಡು ಬಸ್ಸುಗಳು ನದಿಗೆ ಉರುಳಿದ ಪರಿಣಾಮ...

ಪ್ರಧಾನಿ ಮೋದಿ ರಷ್ಯಾ ಭೇಟಿ: ನ್ಯಾಟೋ ಶೃಂಗಸಭೆಯಲ್ಲಿ ಅಮೆರಿಕ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಮಾಸ್ಕೋ ಭೇಟಿಯ ಸಮಯದಲ್ಲಿ ಉಭಯ...

ಪ್ರಧಾನಿಗೆ ರಷ್ಯಾದ ಪ್ರತಿಷ್ಠಿತ ಪ್ರಶಸ್ತಿ: ಮೋದಿ ಮಾಡಿದ ಘನಕಾರ್ಯವಾದರೂ ಏನು?

ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ಅವರಿಗೆ...