ಟಿ20 ವಿಶ್ವಕಪ್ | ಐರ್ಲ್ಯಾಂಡ್-ಯುಎಸ್‌ಎ ಪಂದ್ಯ ಮಳೆಗಾಹುತಿ; ಟೂರ್ನಿಯಿಂದಲೇ ಔಟಾದ ಪಾಕಿಸ್ತಾನ!

Date:

ಟಿ20 ವಿಶ್ವಕಪ್ 2024ರ ಲೀಗ್ ಹಂತದಲ್ಲೇ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಝಿಲ್ಯಾಂಡ್ ಹಾಗೂ ವನಿಂದು ಹಸರಂಗ ನೇತೃತ್ವದ ಶ್ರೀಲಂಕಾ ತಂಡ ಹೊರಬಿದ್ದ ಬೆನ್ನಲ್ಲೇ, ಬಾಬರ್ ಆಝಂ ನೇತೃತ್ವದ ಪಾಕಿಸ್ತಾನ ತಂಡ ಕೂಡ ಹೊರಬಿದ್ದಿದೆ.

ಟಿ20 ವಿಶ್ವಕಪ್ 2024ರ ಲೀಗ್ ಹಂತದ 30ನೇ ಪಂದ್ಯ ಜೂನ್ 14(ಇಂದು) ಅಮೆರಿಕ ಮತ್ತು ಐರ್ಲ್ಯಾಂಡ್ ನಡುವೆ ಫ್ಲೋರಿಡಾದ ಲಾಡರ್‌ಹಿಲ್‌ನಲ್ಲಿರುವ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂನಲ್ಲಿ ಎ ಗುಂಪಿನಿಂದ ಪಂದ್ಯ ನಡೆಯಬೇಕಿತ್ತು. ಆದರೆ, ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಪಂದ್ಯ ರದ್ದಾಗಿದೆ.

ಪಂದ್ಯ ರದ್ದಾದ ಹಿನ್ನೆಲೆಯಲ್ಲಿ ಎರಡೂ ತಂಡಗಳಿಗೆ ಒಂದೊಂದು ಅಂಕ ನೀಡಲಾಯಿತು. ತಲಾ ಒಂದು ಅಂಕ ಗಳಿಸಿದ ಅಮೆರಿಕ ತಂಡವು ಸೂಪರ್ 8ರ ಘಟ್ಟಕ್ಕೆ ಪ್ರವೇಶಿಸಿದ್ದು, ಬಾಬರ್ ಆಝಂ ನೇತೃತ್ವದ ಪಾಕಿಸ್ತಾನ ತಂಡವು ಟೂರ್ನಿಯಿಂದಲೇ ಹೊರಬಿದ್ದಿದೆ. ಇಂದಿನ ಪಂದ್ಯಕ್ಕೆ ಮಳೆ ಬಾರದಿರಲಿ, ಅಮೆರಿಕ ಸೋಲಲಿ ಎಂಬ ಪಾಕ್ ಅಭಿಮಾನಿಗಳ ಪ್ರಾರ್ಥನೆ ಕೊನೆಗೂ ಫಲಿಸಲಿಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಯುಎಸ್‌ಎ ಮತ್ತು ಐರ್ಲ್ಯಾಂಡ್ ನಡುವಿನ ಪಂದ್ಯ ಮಳೆಯಿಂದ ರದ್ದಾಗಿರುವುದರಿಂದ ಪಾಕಿಸ್ತಾನದ ಕನಸು ಭಗ್ನವಾಗಿದೆ. ಪ್ರಸ್ತುತ ‘ಎ’ ಗುಂಪಿಯನಲ್ಲಿರುವ ಯುಎಸ್‌ಎ ತಂಡ ಆಡಿರುವ 3 ಪಂದ್ಯಗಳಲ್ಲಿ 2 ಗೆಲುವು , 1 ಸೋಲಿನೊಂದಿಗೆ 4 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿತ್ತು. ಇಂದಿನ ಪಂದ್ಯದಲ್ಲಿ ತಲಾ ಒಂದೊಂದು ಅಂಕ ಗಳಿಸಿದ ಹಿನ್ನೆಲೆಯಲ್ಲಿ 5 ಅಂಕದೊಂದಿಗೆ ಸೂಪರ್ 8ರ ಘಟಕ್ಕೆ ಅವಕಾಶ ಪಡೆಯುವಲ್ಲಿ ಯಶಸ್ವಿಯಾಗಿದೆ.

ಈಗಾಗಲೇ ಎ ಗ್ರೂಪ್‌ನಿಂದ ಟೀಮ್ ಇಂಡಿಯಾ ಮೂರು ಗೆಲವಿನೊಂದಿಗೆ ಸೂಪರ್ ಎಂಟರ ಘಟಕ್ಕೆ ಪ್ರವೇಶಿಸಿದೆ. ಒಂದು ಸ್ಥಾನಕ್ಕಾಗಿ ಪಾಕ್ ಹಾಗೂ ಯುಎಸ್‌ಎ ನಡುವೆ ತೀವ್ರ ಪೈಪೋಟಿ ಇತ್ತು.

ಪಾಕಿಸ್ತಾನ ತಂಡವು ಇದುವರೆಗೆ 3 ಪಂದ್ಯಗಳನ್ನಾಡಿದ್ದು, 2 ಸೋಲು ಹಾಗೂ 1ರಲ್ಲಿ ಗೆದ್ದಿದೆ. ಸದ್ಯ ಪಾಕಿಸ್ತಾನ 2 ಅಂಕ ಹೊಂದಿದೆ. ಪಾಕಿಸ್ತಾನ ತನ್ನ ಕೊನೆಯ ಪಂದ್ಯವನ್ನು ಐರ್ಲೆಂಡ್ ವಿರುದ್ಧ ಆಡಲಿದೆ. ಒಂದು ವೇಳೆ ಪಾಕಿಸ್ತಾನ ಗೆದ್ದರೆ ಒಟ್ಟು 4 ಅಂಕಗಳನ್ನಷ್ಟೇ ಗಳಿಸಲಿದೆ.

2026ರ ವಿಶ್ವಕಪ್‌ಗೆ ಅರ್ಹತೆ ಪಡೆದ ಅಮೆರಿಕ

ಟಿ20 ವಿಶ್ವಕಪ್‌ನಲ್ಲಿ ಸೂಪರ್ 8ರ ಘಟಕ್ಕೆ ಪ್ರವೇಶಿಸಿದ್ದಲ್ಲದೇ, ಅಮೆರಿಕ ತಂಡವು 2026ರಲ್ಲಿ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೂ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಇದು ಅಮೆರಿಕ ತಂಡದ ಆಟಗಾರರಲ್ಲಿ ಹಾಗೂ ಅಭಿಮಾನಿಗಳಿಗೆ ಸಂತಸ ಮೂಡಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯೂರೋ ಕಪ್ | ನೆದರ್‌ಲೆಂಡ್ಸ್ ಮಣಿಸಿ ಇಂಗ್ಲೆಂಡ್ ಫೈನಲ್‌ಗೆ; ಸ್ಪೇನ್ ವಿರುದ್ಧ ಪೈಪೋಟಿ

ನೆದರ್​ಲೆಂಡ್ಸ್ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ಹೆಚ್ಚುವರಿ 91ನೇ ನಿಮಿಷದಲ್ಲಿ ಬದಲಿ ಆಟಗಾರ...

ಕೆಲವೇ ತಿಂಗಳ ಅಂತರದಲ್ಲಿ ಏಳು-ಬೀಳು ಎದುರಿಸಿ ಗೆದ್ದು ಬಂದ ಹಾರ್ದಿಕ್ ಪಾಂಡ್ಯ!

ಅಂದು ಡಿಸೆಂಬರ್ 19, 2023. ಐಪಿಎಲ್ 2024ರ ಪಂದ್ಯಾವಳಿಯ ಹರಾಜಿನ ಸಮಯ....

ಚಾಂಪಿಯನ್ಸ್ ಟ್ರೋಫಿಯ ಪಾಕ್ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಯಾಣ ಅಸಂಭವ; ಹೈಬ್ರಿಡ್ ಮಾದರಿ ಸರಣಿ ಸಾಧ್ಯತೆ

ಮುಂದಿನ ವರ್ಷ 2025ರ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯಲಿರುವ ಐಸಿಸಿ ಏಕದಿನ ಚಾಂಪಿಯನ್ಸ್‌ ಟ್ರೋಫಿ...

ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಗೆಲುವು: 2-1 ಮುನ್ನಡೆ ಪಡೆದ ಟೀಂ ಇಂಡಿಯಾ

ಟೀಂ ಇಂಡಿಯಾ ತಂಡ ಜಿಂಬಾಬ್ವೆ ವಿರುದ್ಧ 23 ರನ್‌ಗಳ ಗೆಲುವು ಸಾಧಿಸಿದ್ದು,...