ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ಮಹಿಳೆಯರ ತಂಡಗಳ ನಡುವೆ ಭಾನುವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಭರ್ಜರಿ ಶತಕ ಹಾಗೂ ಆಶಾ ಶೋಭಾನ ಅವರ 4 ವಿಕೆಟ್‌ಗಳ ಗೊಂಚಲಿನಿಂದ 143 ರನ್‌ಗಳ ಭರ್ಜರಿ ಜಯ ಗಳಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ್ದ ಹರ್ಮನ್ ಪ್ರೀತ್ ಕೌರ್ ನೇತೃತ್ವದ ವನಿತೆಯರ ಪಡೆಯು ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ ಅವರ ಭರ್ಜರಿ ಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 265 ರನ್ ಕಲೆಹಾಕಿತ್ತು.
ಈ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಆಶಾ ಶೋಭಾನವರವರ ಸ್ಪಿನ್ ದಾಳಿಗೆ ಸಿಲುಕಿ, 37.4 ಓವರ್‌ಗಳಲ್ಲಿ 122 ರನ್ ಗಳಿಸುವಷ್ಟರಲ್ಲಿ ಆಲೌಟಾಯಿತು. ಆ ಮೂಲಕ ಟೀಮ್ ಇಂಡಿಯಾ 143 ರನ್‌ಗಳ ಭರ್ಜರಿ ಜಯ ಗಳಿಸಿತ್ತಲ್ಲದೇ, ಮೂರು ಏಕದಿನ ಪಂದ್ಯದ ಸರಣಿಯಲ್ಲಿ 1-0 ಮುನ್ನಡೆ ಗಳಿಸಿದೆ.
𝙒𝙃𝘼𝙏. 𝘼. 𝙒𝙄𝙉! 🙌 🙌
A dominating show from #TeamIndia to seal a 1⃣4⃣3⃣-run victory in the ODI series opener 👍 👍
Scorecard ▶️ https://t.co/EbYe44lVao #INDvSA | @IDFCFIRSTBank pic.twitter.com/6IjdeP1cvF
— BCCI Women (@BCCIWomen) June 16, 2024
ಸೌತ್ ಆಫ್ರಿಕಾ ತಂಡದ ಪರ ಬ್ಯಾಟಿಂಗ್‌ನಲ್ಲಿ ಸುನೆ ಲೂಸ್ 33 ರನ್, ಸಿನಾಲೊ ಜಾಫ್ತಾ 27 ರನ್ ಹಾಗೂ ಮರಿಝಾನೆ ಕಾಪ್ 24 ರನ್ ಗಳಿಸಿದರು.
ಟೀಮ್ ಇಂಡಿಯಾ ಪರ ಮೊದಲ ಏಕದಿನ ಪಂದ್ಯವನ್ನಾಡುತ್ತಿರುವ ಆಶಾ ಶೋಭಾನ 21ಕ್ಕೆ 4 ವಿಕೆಟ್ ಪಡೆಯುವ ಮೂಲಕ ಪದಾರ್ಪಣೆ ಪಂದ್ಯದಲ್ಲೇ ಬೌಲಿಂಗ್‌ನಲ್ಲಿ ಮಿಂಚಿದರು.
ODI debut ✅
Making a mark on ODI debut ✅
Contributing towards #TeamIndia‘s win ✅Well done, Asha Sobhana 👏 👏
Scorecard ▶️ https://t.co/EbYe44lVao#INDvSA | @IDFCFIRSTBank pic.twitter.com/ThjxORCNG6
— BCCI Women (@BCCIWomen) June 16, 2024
ದೀಪ್ತಿ ಶರ್ಮಾ 2 ವಿಕೆಟ್ ಪಡೆದುಕೊಂಡರು. ಉಳಿದಂತೆ ರೇಣುಕಾ ಸಿಂಗ್, ಪೂಜಾ ವಸ್ತ್ರಕರ್ ಹಾಗೂ ರಾಧಾ ಯಾದವ್ ತಲಾ ಒಂದೊಂದು ವಿಕೆಟ್ ಪಡೆಯುವಲ್ಲಿ ಸಫಲರಾದರು.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸ್ಮೃತಿ ಮಂಧಾನ ಅವರ 6ನೇ ಶತಕ
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಸ್ಕೋರ್ 15 ರನ್ ಆಗುವಷ್ಟರಲ್ಲಿ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ 7 ರನ್ಗಳಿಗೆ ವಿಕೆಟ್ ಒಪ್ಪಿಸಿದರೆ, ನಂತರ ಬಂದ ದಯಾಳನ್ ಹೇಮಲತಾ ಕೂಡ 12 ರನ್ಗಳಿಗೆ ಪೆವಿಲಿಯನ್ ಸೇರಿಕೊಂಡರು. ನಾಯಕಿ ಹರ್ಮನ್ಪ್ರೀತ್ ಕೌರ್ ಕೂಡ 10 ರನ್ಗಳಿಗೆ ಸುಸ್ತಾದರು. ಹೀಗಾಗಿ ತಂಡ ಕೇವಲ 53 ರನ್ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
A 143 RUNS VICTORY FOR TEAM INDIA AT THE CHINNASWAMY STADIUM. 🇮🇳 pic.twitter.com/YoEql6DApL
— Mufaddal Vohra (@mufaddal_vohra) June 16, 2024
ಆ ಬಳಿಕ ಕ್ರೀಸ್‌ನಲ್ಲಿದ್ದ ಸ್ಮೃತಿಗೆ ಜೊತೆಯಾದ ಜೆಮಿಮಾ ರಾಡ್ರಿಗಸ್ 17 ರನ್‌ಗಳ ಕಾಣಿಕೆ ನೀಡಿದ್ದಲ್ಲದೆ ತಂಡದ ಮೊತ್ತವನ್ನು 90 ರನ್‌ಗಳ ಗಡಿ ದಾಟಿಸಿದರು. ಈ ವೇಳೆ ಸಿಕ್ಸರ್ ಸಿಡಿಸುವ ಯತ್ನದಲ್ಲಿ ಜೆಮಿಮಾ ಕ್ಯಾಚಿತ್ತು ಔಟಾದರು. ನಂತರ ಬಂದ ರಿಚಾ ಘೋಷ್ 3 ರನ್ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು. ಹೀಗಾಗಿ ಮತ್ತೊಮ್ಮೆ ತಂಡ ಸಂಕಷ್ಟಕ್ಕೆ ಸಿಲುಕಿತು. ಆದರೆ 7ನೇ ಕ್ರಮಾಂಕದಲ್ಲಿ ಬಂದ ದೀಪ್ತಿ ಶರ್ಮಾ ಜೊತೆಗೆ, ಜೊತೆಯಾಟ ನೀಡಿದರು.
ಸಂಕಷ್ಟದ ಸಮಯದಲ್ಲಿ ತಂಡದ ಇನ್ನಿಂಗ್ಸ್ ಜವಾಬ್ದಾರಿ ಹೊತ್ತಿದ್ದ ಸ್ಮೃತಿ ಮಂದಾನ 116 ಎಸೆತಗಳಲ್ಲಿ 10 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಶತಕ ಪೂರೈಸಿದರು. ಇದು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮಂಧಾನ ಅವರ 6ನೇ ಶತಕವಾಗಿದೆ. ಈ ಶತಕದ ಇನ್ನಿಂಗ್ಸ್ ಜೊತೆಗೆ ಸ್ಮೃತಿ, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 7000 ರನ್ ಪೂರೈಸಿದ ದಾಖಲೆಯನ್ನು ನಿರ್ಮಿಸಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ಭಾರತ ವನಿತಾ ತಂಡದ ಎರಡನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
