ಟೀಂ ಇಂಡಿಯಾ ಪುರುಷರ ತಂಡದ ಮುಖ್ಯ ಕೋಚ್ ಆಗಿ ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅವರನ್ನು ಬಿಸಿಸಿಐ ಇಂದು ನೇಮಕ ಮಾಡಿದೆ.
ಟಿ20 ವಿಶ್ವಕಪ್ ನಂತರ ರಾಹುಲ್ ದ್ರಾವಿಡ್ ಅವರ ಕೋಚ್ ಅವಧಿ ಮುಕ್ತಾಯಗೊಂಡಿತ್ತು. ಗಂಭೀರ್ ಕೋಚ್ ಆಗುವುದು ಬಹುತೇಕ ಖಚಿತವಾಗಿದ್ದರೂ ಅಧಿಕೃತ ಆದೇಶ ಮಾತ್ರ ಬಾಕಿಯುಳಿದಿತ್ತು.
ಈ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಗೌತಮ್ ಗಂಭೀರ್ ಅವರನ್ನು ಭಾರತ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡುವುದಕ್ಕೆ ಅಪಾರ ಸಂತಸವಾಗುತ್ತಿದೆ. ಆಧುನಿಕ ಕ್ರಿಕೆಟ್ ತ್ವರಿತವಾಗಿ ವಿಕಸಿತವಾಗುತ್ತಿದ್ದು, ಗೌತಮ್ ಅವರು ಇದನ್ನು ಉನ್ನತ ಹಂತದಲ್ಲಿ ಬದಲಿಸುವಲ್ಲಿ ಪ್ರಮುಖ ಕಾರಣಕರ್ತರಾಗಿದ್ದಾರೆ. ಅವರು ತಮ್ಮ ವೃತ್ತಿಯುದ್ದಕ್ಕೂ ಹೋರಾಟದ ಹಾದಿಯೊಂದಿಗೆ ಹಲವು ಮೈಲಿಗಲ್ಲು ಸಾಧಿಸಿದ್ದಾರೆ. ಭಾರತ ಕ್ರಿಕೆಟ್ ತಂಡ ಬೆಳವಣಿಗೆ ಸಾಧಿಸಲು ಗೌತಮ್ ಒಬ್ಬ ಆದರ್ಶ ವ್ಯಕ್ತಿಯಾಗುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೇರಳ ಕ್ರಿಕೆಟ್ ಸಂಸ್ಥೆಯ ಕೋಚ್‌ನಿಂದ ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ
ಇವರ ಸ್ಪಷ್ಟ ಉದ್ದೇಶ ಟೀಂ ಇಂಡಿಯಾವನ್ನು ತಮ್ಮ ಅದ್ಭುತ ಅನುಭವದೊಂದಿಗೆ ಉನ್ನತ ಹಂತಕ್ಕೆ ಕೊಂಡೊಯ್ಯುವುದು. ಬಿಸಿಸಿಐ ಇವರ ನೂತನ ಹಾದಿಗೆ ಸಂಪೂರ್ಣ ಸಹಕಾರ ನೀಡುತ್ತದೆ ಎಂದು ಜಯ್ ಶಾ ಹೇಳಿದ್ದಾರೆ.
ಗೌತಮ್ ಗಂಭೀರ್ 240ಕ್ಕೂ ಹೆಚ್ಚು ಟೆಸ್ಟ್, ಏಕದಿನ, ಟಿ20 ಪಂದ್ಯಗಳನ್ನು ಆಡಿದ್ದು 10 ಸಾವಿರಕ್ಕೂ ಹೆಚ್ಚು ರನ್ ಪೇರಿಸಿದ್ದಾರೆ. ಗಂಭೀರ್ 2011ರ ಏಕದಿನ ವಿಶ್ವಕಪ್ ವಿಜೇತ ಟೀಂ ಇಂಡಿಯಾದ ಸದಸ್ಯರಾಗಿದ್ದರು. ಕೆಕೆಆರ್ ಸಾರಥ್ಯ ವಹಿಸಿದ್ದ ಗಂಭೀರ್ ಎರಡು ಬಾರಿ ಕಪ್ ಜಯಿಸಲು ಕಾರಣವಾಗಿದ್ದರು.
It is with immense pleasure that I welcome Mr @GautamGambhir as the new Head Coach of the Indian Cricket Team. Modern-day cricket has evolved rapidly, and Gautam has witnessed this changing landscape up close. Having endured the grind and excelled in various roles throughout his… pic.twitter.com/bvXyP47kqJ
— Jay Shah (@JayShah) July 9, 2024